ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಮೂವರ ಬಂಧನ


Team Udayavani, Oct 19, 2018, 1:12 PM IST

pratyeka.png

ಬೆಂಗಳೂರು: ಗಾಂಜಾ, ಮದ್ಯ ಸೇವನೆಗಾಗಿ ರಿಟ್ಜ್ ಕಾರಿನಲ್ಲಿ ಬಂದು ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಯಂಡಹಳ್ಳಿಯ ಅಂಬೇಡ್ಕರ್‌ ನಗರ ನಿವಾಸಿ ಸೂರ್ಯ ಅಲಿಯಾಸ್‌ ತುಡುಕ್‌ ಸೂರ್ಯ (22), ಪ್ರಶಾಂತ್‌ ಅಲಿಯಾಸ್‌ ರೆಡ್ಡಿ (22) ಮತ್ತು ದಶರಥ (25) ಬಂಧಿತರು. ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ 5 ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌, 2 ಪಲ್ಸರ್‌ ಸೇರಿ 9 ದ್ವಿಚಕ್ರ ವಾಹನಗಳು ಹಾಗೂ 6 ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ನಗರದ 6 ಠಾಣೆಗಳ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಮತ್ತು ಒಂದು ಕನ್ನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ಪೈಕಿ ಸೂರ್ಯ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ದಶರಥ ಕಾರು ಚಾಲಕನಾಗಿದ್ದು, ಪ್ರಶಾಂತ್‌ ಕೆ.ಆರ್‌.ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ.

ಮೂವರೂಆರೋಪಿಗಳು ಸ್ನೇಹಿತರಾಗಿದ್ದು, ಗಾಂಜಾ ಮತ್ತು ಮದ್ಯವ್ಯಸನಿಗಳಾಗಿದ್ದಾರೆ. ತಮ್ಮ ದುರಭ್ಯಾಸಗಳಿಗೆ ಹಣ ಹೊಂದಿಸಲು, ಮನೆ ಮಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಧ್ಯವರ್ತಿಗಳ ಮೂಲಕ ತಮಿಳುನಾಡಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ರಿಟ್ಜ್ ಕಾರಿನಲ್ಲಿ ಬರುತ್ತಿದ್ದರು: ಆರೋಪಿಗಳ ಪೈಕಿ ದಶರಥ, ಬೇರೆಯವರ ರಿಟ್ಜ್ ಕಾರು ಓಡಿಸುತ್ತಿದ್ದು, ಕಾರು ಮಾಲೀಕರು ನಿತ್ಯ 600 ರೂ. ಕೂಲಿ ಕೊಡುತ್ತಿದ್ದರು. ಮೂವರು ಆರೋಪಿಗಳು ಇದೇ ರಿಟ್ಜ್ ಕಾರಿನಲ್ಲಿ ರಾತ್ರಿ ಹೊತ್ತು ಕೆಲ ಪ್ರದೇಶಗಳನ್ನು ಸುತ್ತಾಡುತ್ತಿದ್ದರು.

ಬಳಿಕ ಮನೆ ಮುಂದೆ ನಿಲ್ಲಿಸಿದ್ದ ಹೊಸ ಬುಲೆಟ್‌ಗಳು, ಪಲ್ಸರ್‌ಗಳು(ನಂಬರ್‌ ಬರೆಸದಿರುವ) ಹಾಗೂ ಇತರೆ ಮಾದರಿಯ ದ್ವಿಚಕ್ರ ವಾಹನಗಳ ಲಾಕ್‌ ಮುರಿದು ಡೈರೆಕ್ಟ್ ಮಾಡಿಕೊಂಡು ಕದ್ದೊಯ್ಯುತ್ತಿದ್ದರು. ಬಳಿಕ ಕೇವಲ 20-30 ಸಾವಿರ ರೂ.ಗೆ ಮದ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿದ್ದರು.

ಆರೋಪಿಗಳ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಆಧಾರದ ಮೇಲೆ ವಿಶೇಷ ಕಾರ್ಯಚರಣೆ ನಡೆಸಿದಾಗ ರಿಟ್ಜ್ ಕಾರಿನ ನಂಬರ್‌ ಪತ್ತೆಯಾಗಿದ್ದು, ಕಾರಿನ ನಂಬರ್‌ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

1-sffsf

ಸುತ್ತಲೂ ಸ್ಫೂರ್ತಿ ಇದೆ, ನಿಮ್ಮ ಪ್ರೀತಿಗಾಗಿ ಧನ್ಯವಾದಗಳು : ಕೆ.ಎಲ್.ರಾಹುಲ್

ವಿಡಿಯೋ ವೈರಲ್: ಪತ್ನಿಯ ಥಳಿತಕ್ಕೆ ಕಂಗಾಲಾದ ಪ್ರಿನ್ಸಿಪಾಲ್, ಭದ್ರತೆ ಕೊಡಿ ಎಂದ ಕೋರ್ಟ್!

ವಿಡಿಯೋ ವೈರಲ್: ಪತ್ನಿಯ ಥಳಿತಕ್ಕೆ ಕಂಗಾಲಾದ ಪ್ರಿನ್ಸಿಪಾಲ್, ಭದ್ರತೆ ಕೊಡಿ ಎಂದ ಕೋರ್ಟ್!

ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ

ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ

16stealing

ಡ್ರಾಪ್‌ ನೀಡಿದ ವ್ಯಕ್ತಿಯ ಮೊಬೈಲ್‌, ಎಟಿಎಂ ಕಾರ್ಡ್‌ ಕದ್ದ ಆರೋಪಿ

15wonen

ಕೌನ್‌ ಬನೇಗ ಕರೋಡ್‌ ಪತಿಯಲ್ಲಿ 25 ಲಕ್ಷ ರೂ. ಗೆದ್ದಿದ್ದಿರಿ ಎಂದು ಯುವತಿಗೆ ವಂಚನೆ

10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ

10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ

1-ssadsad

8 ವರ್ಷಗಳನ್ನು ಹಿಂದಿನ 3 ದಶಕಗಳೊಂದಿಗೆ ಹೋಲಿಕೆ ಮಾಡಿ: ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

ಬನಶಂಕರಿ: ಸ್ಕೂಲ್ ಬಸ್ ಢಿಕ್ಕಿಯಾಗಿ 16 ವರ್ಷದ ಬಾಲಕಿ ಸ್ಥಳದಲ್ಲೇ ಸಾವು

16stealing

ಡ್ರಾಪ್‌ ನೀಡಿದ ವ್ಯಕ್ತಿಯ ಮೊಬೈಲ್‌, ಎಟಿಎಂ ಕಾರ್ಡ್‌ ಕದ್ದ ಆರೋಪಿ

15wonen

ಕೌನ್‌ ಬನೇಗ ಕರೋಡ್‌ ಪತಿಯಲ್ಲಿ 25 ಲಕ್ಷ ರೂ. ಗೆದ್ದಿದ್ದಿರಿ ಎಂದು ಯುವತಿಗೆ ವಂಚನೆ

14murder

ಹಣಕ್ಕಾಗಿ ಅಂಗಡಿ ಮಾಲೀಕನ ಕೊಂದ ನೌಕರ

13CC-camera

ಕೆರೆಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು: ಕೆರೆ ಪರಿಸರ ಸಂರಕ್ಷಣೆಗೆ 5 ಕೋಟಿ ರೂ ವೆಚ್ಚದ ಯೋಜನೆ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ

ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ

kirloskar

ಕಿರ್ಲೋಸ್ಕರ್‌ ಕಂಪನಿ ಜತೆ ಕುವೆಂಪು ವಿವಿ ಒಪ್ಪಂದ

1-sffsf

ಸುತ್ತಲೂ ಸ್ಫೂರ್ತಿ ಇದೆ, ನಿಮ್ಮ ಪ್ರೀತಿಗಾಗಿ ಧನ್ಯವಾದಗಳು : ಕೆ.ಎಲ್.ರಾಹುಲ್

19

ಬುದ್ದಿ ಶುದ್ಧವಾಗಿದ್ದರೆ ಸುಖ-ಶಾಂತಿ ಪ್ರಾಪ್ತಿ

17aam-admi

ಆಮ್‌ ಆದ್ಮಿಯಿಂದ ಮಾತ್ರ ಸರ್ವ ಕ್ಷೇತ್ರ ಬದಲು: ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.