ಇನ್ನೂ ಮೂರು ದಿನ ಮಳೆ


Team Udayavani, May 22, 2018, 12:09 PM IST

innu3.jpg

ಬೆಂಗಳೂರು: ನಗರದಾದ್ಯಂತ ಸೋಮವಾರ ಮತ್ತೆ ಮಳೆ ಅಬ್ಬರಿಸಿದ್ದು, ಇನ್ನೂ ಎರಡು-ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ. 

ಸಂಜೆ 5ರ ಸುಮಾರಿಗೆ ಶುರುವಾದ ಮಳೆ ಅರ್ಧ ತಾಸು ಧಾರಾಕಾರವಾಗಿ ಸುರಿಯಿತು. ಇದರಿಂದ ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡವು. ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಕಚೇರಿಗಳಿಂದ ಮನೆಗೆ ಹಿಂತಿರುಗುವ ನೌಕರರಿಗೆ ಇದರ ಬಿಸಿ ತುಸು ಜೋರಾಗಿ ತಟ್ಟಿತು. 

ನಗರದಲ್ಲಿ ಸೋಮವಾರ ಗರಿಷ್ಠ 33 ಮಿ.ಮೀ. ಮಳೆಯಾಗಿದೆ. ರಾಜರಾಜೇಶ್ವರಿನಗರದಲ್ಲಿ 26 ಮಿ.ಮೀ., ಬೊಮ್ಮನಹಳ್ಳಿ 23, ಬಸವನಗುಡಿ 17.5, ಕೆಂಗೇರಿ 15, ಕೆ.ಆರ್‌. ಪುರ 15.5, ಎಚ್‌. ಗೊಲ್ಲಹಳ್ಳಿ 12, ಮಂಡೂರು 11, ಶಿಗೇಹಳ್ಳಿ 18, ಕುಮಾರಸ್ವಾಮಿ ಲೇಔಟ್‌ 9, ಕೋರಮಂಗಲ 8, ಲಾಲ್‌ಬಾಗ್‌ 6, ನಾಗರಬಾವಿ 5 ಮಿ.ಮೀ. ಮಳೆಯಾಗಿದೆ. 

ಉತ್ತರದಿಂದ ತಮಿಳುನಾಡು ಮಧ್ಯೆ “ಕಡಿಮೆ ಒತ್ತಡದ ತಗ್ಗು’ (ಟ್ರಫ್) ಉಂಟಾಗಿದ್ದು, ಇದು ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಹಾದುಹೋಗಿದೆ. ಅದೇ ರೀತಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ. ಆದರೆ ರಾಜ್ಯದ ಮೇಲೆ ಇದರ ಯಾವುದೇ ಪ್ರಭಾವ ಇರುವುದಿಲ್ಲ. ಮಲೆನಾಡು, ಕರಾವಳಿಯಲ್ಲಿ ಮಾತ್ರ ಇದು ತುಸು ಮಳೆ ಸುರಿಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. 

ಐದಾರು ಮರ ಧರೆಗೆ: ನಗರದಲ್ಲಿ ಸೋಮವಾರ ಸುರಿದ ಮಳೆಗೆ ಐದಾರು ಮರಗಳು ಧರೆಗುರುಳಿದ್ದು, ಅಂಡರ್‌ ಪಾಸ್‌ಗಳಲ್ಲಿ ಮಳೆನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. 

ಸೋಮವಾರ ಸಂಜೆ ಸುಮಾರಿಗೆ ಸುರಿದ ನಿರಂತರ ಮಳೆಗೆ ಜೆ.ಪಿ.ನಗರದ ಡಾಲರ್ ಕಾಲೋನಿ, ಅಮೊRà ಬಡಾವಣೆ, ಡಬಲ್‌ ರಸ್ತೆ ಸೇರಿದಂತೆ ಹಲವೆಡೆ ಬೃಹತ್‌ ಮರಗಳು ಧರೆಗುರುಳಿದ್ದು, ವೈಯಾಲಿಕಾಲವ್‌, ಮಲ್ಲೇಶ್ವರ, ಬಸವನಗುಡಿ ಸೇರಿದಂತೆ ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ಧರೆಗುರುಳಿವೆ. 

ಇನ್ನು ಒಕಳಿಪುರ ಹಾಗೂ ಸ್ಯಾಂಕಿ ರಸ್ತೆ ಅಂಡರ್‌ ಪಾಸ್‌ಗಳಲ್ಲಿ ಮಳೆನೀರು ನಿಂತ ಪರಿಣಾಮ ವಾಹನ ಸವಾರರು ಅಂಡರ್‌ಪಾಸ್‌ಗಳಲ್ಲಿ ಸಂಚಾರಿಸಲಾಗದೆ ತೊಂದರೆ ಅನುಭವಿಸಿದರು. ಈ ಕುರಿತು ಪಾಲಿಕೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ಟಾಪ್ ನ್ಯೂಸ್

rape

ಚೆಕ್‌ ಬೌನ್ಸ್‌ ವಿಚಾರ: ಮಾಜಿ ಭೂಮಾಲೀಕನಿಂದ ನಿರಂತರ ಅತ್ಯಾಚಾರ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

bjp-tmc

ತ್ರಿಪುರಾ ನಗರ ಪಂಚಾಯತ್ ಚುನಾವಣೆ : ಬಿಜೆಪಿಗೆ ಸಿಹಿ, ಟಿಎಂಸಿಗೆ ಕಹಿ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

ಹೆರಿಗೆ ನೋವಿನ ನಡುವೆಯೂ ಸೈಕಲ್ ನಲ್ಲೇ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ಸಂಸದೆ

1-asasa

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

dks

ಇಸ್ರೋ ಸ್ಥಳಾಂತರ: ಪ್ರಧಾನಿ ಮತ್ತು ಸಿಎಂಗೆ ಡಿಕೆಶಿ ಬರೆದ ಪತ್ರದ ಸಾರಾಂಶ

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ: ಪೋಕ್ಸೋ ಪ್ರಕರಣ ದಾಖಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಂಟು ತಿಂಗಳ ಬಳಿಕ ಕೊಲೆ ಆರೋಪಿಗಳ ಬಂಧನ

ಎಂಟು ತಿಂಗಳ ಬಳಿಕ ಕೊಲೆ ಆರೋಪಿಗಳ ಬಂಧನ

ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಸೆರೆ

ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಸೆರೆ

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

araga

ಐವರು ಬಾಂಗ್ಲಾ ಪ್ರಜೆಗಳ ಬಂಧನ..!

ಆರ್.ಅಶೋಕ್

ಬೆಂಗಳೂರಿನಲ್ಲಿ ಭೂಕಂಪನ ಅನುಭವ: ಯಾರೂ ಭಯಪಡಬೇಡಿ ಎಂದ ಸಚಿವ ಆರ್.ಅಶೋಕ್

MUST WATCH

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

udayavani youtube

ನೀರಿನಿಂದ ಮಲ್ಲಿಗೆ ಗಿಡವನ್ನು ಬೆಳೆಯಬಹುದೇ ?

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

ಹೊಸ ಸೇರ್ಪಡೆ

19school

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ನೀಡಿ

rape

ಚೆಕ್‌ ಬೌನ್ಸ್‌ ವಿಚಾರ: ಮಾಜಿ ಭೂಮಾಲೀಕನಿಂದ ನಿರಂತರ ಅತ್ಯಾಚಾರ

18old

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

17daliths

ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.