Udayavni Special

ಸಿಡಿಲು ಬಡಿದು ಮತ್ತೆ ಮೂರು ಮಂದಿ ಸಾವು


Team Udayavani, May 29, 2018, 6:00 AM IST

elated.jpg

ಬೆಂಗಳೂರು/ಮಂಗಳೂರು: ಕರಾವಳಿ, ಮಲೆನಾಡು, ಹಳೇ ಮೈಸೂರು ಸೇರಿ ರಾಜ್ಯದ ಕೆಲವೆಡೆ ಸೋಮವಾರವೂ ಮಳೆಯಾಗಿದ್ದು,ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ. ಈ ಮಧ್ಯೆ, ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸು ಗಳ ಅವಧಿಯಲ್ಲಿ ಸುಳ್ಯದಲ್ಲಿ ರಾಜ್ಯದಲ್ಲೇ ಅಧಿಕ, 8ಸೆಂ.ಮೀ. ಮಳೆ ಸುರಿಯಿತು

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂಡ ಗ್ರಾಮದಲ್ಲಿ ಭಾನುವಾರ ರಾತ್ರಿ ಮಳೆ ಗಾಳಿಯಿಂದ ಮರದ ಕೊಂಬೆಯೊಂದು ಬೈಕ್‌ ಸವಾರನ ಮೇಲೆ ಬಿದ್ದು ಹೇಮಂತ್‌ ಕುಮಾರ್‌ (40) ಎಂಬುವರು ಮೃತಪಟ್ಟಿದ್ದಾರೆ. 

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಸವನಹಳ್ಳಿಯಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ರೈತ ಮಹಿಳೆ ಗಿರಿಜಮ್ಮ(35) ಮೃತಪಟ್ಟಿದ್ದಾರೆ. ಇವರು ಗ್ರಾಮದ ಸಮೀಪ ಇರುವ ತಮ್ಮ ರೇಷ್ಮೆ ತೋಟದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿಯಿತು.

ಇದೇ ವೇಳೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ನೆಲ್ಯಾಡಿ ಗ್ರಾಮದ ಸರೋಳಿಕೆರೆಯಲ್ಲಿ ಸಿಡಿಲು ಬಡಿದು ಮೇಸಿŒ ವೃತ್ತಿಯ ಪ್ರವೀಣ್‌ ಪೀಟರ್‌ ಡಿ’ಸೊಜಾ (38) ಮೃತಪಟ್ಟಿದ್ದಾರೆ. 

ಮನೆಯ ಹಜಾರದ ಕಿಟಕಿ ಸಮೀಪ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ವೇಳೆ ಏಕಾಏಕಿ ಸಿಡಿಲು ಬಡಿಯಿತು. ಅವರ ಪಕ್ಕದ ಮನೆಗೂ ಸಿಡಿಲು ಬಡಿದು ಹಾನಿಯಾಗಿದೆ. 

ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಶೀಲಾ ಎಸ್‌.ನಾಯಕ್‌ ಅವರ ಕುಂಪಲ ಕೃಷ್ಣನಗರದ ಮನೆಗೆ ಸಿಡಿಲು ಬಡಿದಿದ್ದು, ವಿದ್ಯುತ್‌ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಈ ಮನೆಯ ಗೃಹಪ್ರವೇಶವಾಗಿತ್ತು. ಗೋಳಿಪದವಿನಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು ಮೂರು ಮನೆಗಳಿಗೆ ಹಾನಿಯಾಗಿದೆ. 

ಬೆಳ್ಮಣ್‌ ಪರಿಸರದ ನಂದಳಿಕೆ ಗೋಳಿಕಟ್ಟೆ ಆರ್ಯಾಡುವಿನಲ್ಲಿ ವಿದ್ಯುತ್‌ ತಂತಿ ಮೇಲೆ ಮರ ಬಿದ್ದ ಪರಿಣಾಮ ಸುಮಾರು 4 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಸುಳ್ಯ ನಗರದ ಹೊರವಲಯದ ಕೊಡಿಯಾಲಬೈಲಿನಲ್ಲಿ ಮನೆಗೆ ಸಿಡಿಲು ಬಡಿದು ಕೆಂಚ ಮತ್ತು ಅವರ ಪತ್ನಿ ಕಮಲ ಎಂಬುವರು ಗಾಯಗೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಜೋಗಿಕೊಪ್ಪದಲ್ಲಿ ಸಿಡಿಲು ಬಡಿದು ಸೋನಿ ಜಾನು ಪಟಕಾರೆ ಎಂಬ ಮಹಿಳೆ ಗಾಯಗೊಂಡಿದ್ದಾರೆ.  ಇದೇ ವೇಳೆ, ಚಿಕ್ಕಮಗಳೂರು, ಮೈಸೂರು, ಮಂಡ್ಯ ಸೇರಿ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ. ಅಲ್ಲದೆ, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ  ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Anushka-Sharma

ಗಾವಸ್ಕರ್‌ ಹೇಳಿಕೆಗೆ ಅನುಷ್ಕಾ ಕಿಡಿ

ಡ್ರಗ್ಸ್‌ ಚಾಟ್‌ ಗ್ರೂಪ್‌ಗೆ ದೀಪಿಕಾ ಅಡ್ಮಿನ್‌!

ಡ್ರಗ್ಸ್‌ ಚಾಟ್‌ ಗ್ರೂಪ್‌ಗೆ ದೀಪಿಕಾ ಅಡ್ಮಿನ್‌!

Farmer-Protest

ಹೆದ್ದಾರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

Farmer-Protest

ಹೆದ್ದಾರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ  ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಇಬ್ಬರ ಸಾವು, 44 ಹೊಸ ಪ್ರಕರಣ ಪತ್ತೆ

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

ಹಾವೇರಿ ಜಿಲ್ಲೆಯಲ್ಲಿ 148 ಜನರಿಗೆ ಸೋಂಕು; ಓರ್ವ ಸಾವು

MUST WATCH

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ



ಹೊಸ ಸೇರ್ಪಡೆ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Anushka-Sharma

ಗಾವಸ್ಕರ್‌ ಹೇಳಿಕೆಗೆ ಅನುಷ್ಕಾ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.