Udayavni Special

ಶೌಚಾಲಯ ಆದಾಯವೂ ಖೋತಾ


Team Udayavani, Aug 12, 2018, 12:11 PM IST

shochalaya.jpg

ಬೆಂಗಳೂರು: ರಾಜಧಾನಿಯ ಜನಸಂಖ್ಯೆಗೆ ಅನುಗಣವಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವಲ್ಲಿ ವಿಫ‌ಲವಾಗಿರುವ ಬಿಬಿಎಂಪಿ, ಶೌಚಾಲಯಗಳಿಂದ ಪಾಲಿಕೆಗೆ ಬರಬೇಕಾದ ಕೋಟ್ಯಂತರ ರೂ. ಸಂಗ್ರಹಿಸುವಲ್ಲಿ ವಿಫ‌ಲವಾಗಿರುವುದು ಬಯಲಾಗಿದೆ.
 
ಸಾರ್ವಜನಿಕರ ಬಳಕೆಗಾಗಿ ಪಾಲಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ 587 ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಗುತ್ತಿಗೆ ಅವಧಿ ಮುಗಿದು ಹಲವು ವರ್ಷ ಕಳೆದರೂ ಟೆಂಡರ್‌ ಕರೆಯಲು ಅಧಿಕಾರಿಗಳು ಆಸಕ್ತಿ ತೋರಿಸಿಲ್ಲ. ಪರಿಣಾಮ ಪಾಲಿಕೆಗೆ ಬರಬೇಕಾದ ಕೋಟ್ಯಂತರ ರೂ. ಆದಾಯ ಖಾಸಗಿಯವರ ಪಾಲಾಗುವಂತಾಗಿದೆ.

ನಗರದಲ್ಲಿ ಒಟ್ಟು 780 ಸಾರ್ವಜನಿಕ ಶೌಚಗೃಹಗಳಿವೆ. ಆ ಪೈಕಿ 98 ಸಮುದಾಯ ಶೌಚಾಲಯಗಳು ಹಾಗೂ 73 ಇ-ಟಾಯ್ಲೆಟ್‌ಗಳ ನಿರ್ವಹಣೆ ಮಾಡುತ್ತಿರುವವರ ಮಾಹಿತಿಯಷ್ಟೇ ಪಾಲಿಕೆ ಬಳಿ ಇದೆ. ಆದರೆ, ಉಳಿದ 500ಕ್ಕೂ ಹೆಚ್ಚಿನ ಶೌಚಗೃಹ ನಿರ್ವಹಣೆ ಮಾಡುವವರ ವಿವರ ಹಾಗೂ ಪಾಲಿಕೆಗೆ ಸಂಗ್ರಹಿಸುತ್ತಿರುವ ಆದಾಯದ ಕುರಿತು ಯಾವುದೇ ಮಾಹಿತಿಯಿಲ್ಲ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ಪಾಲಿಕೆ ವತಿಯಿಂದ 400ಕ್ಕೂ ಹೆಚ್ಚಿನ ಶೌಚಗೃಹಗಳನ್ನು ನಿರ್ಮಾಣವಾಗಿವೆ. ಆದರೆ, ಅವುಗಳ ನಿರ್ವಹಣೆಗೆ ಟೆಂಡರ್‌ ಪ್ರಕ್ರಿಯೆ ನಡೆಸಿ ನಿಯಮಾನುಸಾರ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ಕೆಲವೆಡೆ ಶೌಚಾಲಯಗಳು ಪಾಳು ಬಿದ್ದ ಸ್ಥಿತಿಯಲ್ಲಿದ್ದರೆ, ಇನ್ನು ಹಲವು ಕಡೆಗಳಲ್ಲಿ ಖಾಸಗಿಯವರು ಅನಧಿಕೃತವಾಗಿ ಶೌಚಾಲಯಗಳನ್ನು ನಿರ್ವಹಿಸುತ್ತಿರುವುದು ಗೊತ್ತಾಗಿದೆ.

ಅನಧಿಕೃತ ಶೌಚಾಲಯ: ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಚಾಮರಾಜಪೇಟೆ, ನಗರ ರೈಲು ನಿಲ್ದಾಣ, ಚಿಕ್ಕಪೇಟೆ ಸೇರಿದಂತೆ ನಗರದ ಕೇಂದ್ರ ಭಾಗಗಳಿಗೆ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಆದರೆ ಬೆರಳೆಣಿಕೆ ಶೌಚಾಲಯಗಳಿರುವುದರಿಂದ ಕೆಲವೆಡೆ ಪಾಲಿಕೆಯ ಅನುಮತಿಯನ್ನೂ ಪಡೆಯದೆ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಶೌಚಾಲಯ ನಿರ್ಮಿಸಿರುವುದು ಕಂಡುಬಂದಿದೆ. ಕೆಲವೆಡೆ ಶೌಚಾಲಯದ ಕೊಳಚೆ ನೀರನ್ನು ನೇರವಾಗಿ ತೆರೆದ ಚರಂಡಿಗಳಿಗೆ ಹರಿಸಿರುವುದು ನಡೆದಿದೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ನೀಡಿಲ್ಲ.

ಪಾಲಿಕೆಗೆ 25 ಕೋಟಿ ರೂ. ನಷ್ಟ: ಕೇಂದ್ರ ಭಾಗದಲ್ಲಿರುವ ಪ್ರತಿ ಶೌಚಾಲಯಗಳಲ್ಲಿ ಬಳಕೆದಾರರಿಂದ ನಿತ್ಯ 2ರಿಂದ 3 ಸಾವಿರ ರೂ. ಸಂಗ್ರಹವಾಗುತ್ತಿದೆ ಎನ್ನಲಾಗಿದ್ದು, ಅದರಂತೆ ಪಾಲಿಕೆಯ 500ಕ್ಕೂ ಹೆಚ್ಚು ಶೌಚಾಲಯಗಳಿಂದ ವಾರ್ಷಿಕ ಪಾಲಿಕೆಗೆ ಸುಮಾರು 25 ಕೋಟಿ ರೂ. ಆದಾಯ ಬರಲಿದೆ. ಆದರೆ, ಪಾಲಿಕೆಗೆ ಆದಾಯ ತರಲು ಅಧಿಕಾರಿಗಳು ನಿರಾಕಸ್ತಿ ತೋರಿದ್ದು, ಇದೀಗ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಶೌಚಾಲಯಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. 

ಶೌಚಾಲಯಗಳ ಕೊರತೆ: ಸ್ವತ್ಛ ಭಾರತ್‌ ಅಭಿಯಾನದ ಪ್ರಕಾರ ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ 6,595 ಕಮೋಡ್‌ಸಹಿತ ಶೌಚಾಲಯಗಳು ಇರಬೇಕು. ಆದರೆ 2,000 ಕಮೋಡ್‌ ಶೌಚಾಲಯಗಳಷ್ಟೇ ಇವೆ. ಇದರಿಂದಾಗಿ ಬಯಲು ಪ್ರದೇಶದಲ್ಲಿ ಮಲ-ಮೂತ್ರ ವಿಸರ್ಜನೆ ಮುಂದುವರಿದಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನಗರದಾದ್ಯಂತ 2,212 ಕಡೆಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್‌ಶೆಲ್ಟರ್‌ಗಳಲ್ಲಿ ಸೂಕ್ತ ಸ್ಥಳಾವಕಾಶವಿರುವ 300 ಕಡೆ ಶೌಚಗೃಹ ನಿರ್ಮಾಣಕ್ಕೂ ಟೆಂಡರ್‌ ಆಹ್ವಾನಿಸಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

25

ಸೈನಿಕರನ್ನು ಹಿಂದಕ್ಕೆ ಪಡೆಯಲು ಉಭಯ ದೇಶಗಳು ಒಪ್ಪಿವೆ ಎಂದ ಚೀನ

Sannu-01

ಶಾರ್ಜಾ ಮೈದಾನದಲ್ಲಿ ಸ್ಯಾಮ್ಸನ್-ಸ್ಮಿತ್ ಸ್ಪೋಟಕ ಜೊತೆಯಾಟ ; ಚೆನ್ನೈಗೆ 217 ರನ್ ಟಾರ್ಗೆಟ್

IPL

ಕೀಡಾಕ್ಷೇತ್ರದಲ್ಲಿ ದಾಖಲೆ ಬರೆದ ಐಪಿಎಲ್‌ ಉದ್ಘಾಟನಾ ಪಂದ್ಯ; 20 ಕೋಟಿ ವೀಕ್ಷಣೆ !

Gilirama

Viral Video: ದೈತ್ಯ ಗಿಳಿಯ ಫುಟ್ಬಾಲ್ ಮೋಹ ; ಆಟಗಾರ್ತಿಯ ತಲೆಯೇರಿದ್ದೇಕೆ ಗಿಣಿರಾಮ?

paytm

ಗೂಗಲ್‌ ಪ್ಲೇ ಸ್ಟೋರ್‌ V/S ಪೇಟಿಎಂ; ಅಷ್ಟಕ್ಕೂ Paytm ಜೂಜಿನ ಆ್ಯಪ್‌‌ ಆಗಿದ್ದು ಹೇಗೆ?

hunasur

ಹುಣಸೂರು: ಜಮೀನಿನಲ್ಲಿ ಗಾಂಜಾ ಬೆಳೆ; ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

sucide

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಚ್ಚಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ !






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿ.ಜೆ.ಹಳ್ಳಿ ಪ್ರಕರಣ: ಎನ್‌ಐಎ ಪ್ರವೇಶ

ಡಿ.ಜೆ.ಹಳ್ಳಿ ಪ್ರಕರಣ: ಎನ್‌ಐಎ ಪ್ರವೇಶ

bng-tdy-3

ಉಂಗುರ ಖರೀದಿಗೆ ಬಂದು,ಕೆ.ಜಿ.ಗಟ್ಟಲೆ ಚಿನ್ನ ಲೂಟಿ

ಶ್ವಾನಗಳಿಗೆ ರೇಬಿಸ್ ‌ಲಸಿಕೆ ದಾಖಲೆಗೆ ಆ್ಯಪ್‌

ಶ್ವಾನಗಳಿಗೆ ರೇಬಿಸ್ ‌ಲಸಿಕೆ ದಾಖಲೆಗೆ ಆ್ಯಪ್‌

ಬೆಂಗಳೂರು ಸ್ಫೋಟ ಪ್ರಕರಣ: 12 ವರ್ಷದ ಬಳಿಕ ಆರೋಪಿ ಸೆರೆ

ಬೆಂಗಳೂರು ಸ್ಫೋಟ ಪ್ರಕರಣ: 12 ವರ್ಷದ ಬಳಿಕ ಆರೋಪಿ ಸೆರೆ

ಬೆಂಗಳೂರು ರೋಸ್ ಆನಿಯನ್ ರಫ್ತು ನಿರ್ಭಂದ ತೆಗೆಯುವಂತೆ ಕೇಂದ್ರಕ್ಕೆ ಪತ್ರ

ಬೆಂಗಳೂರು ರೋಸ್ ತಳಿಯ ಈರುಳ್ಳಿ ರಫ್ತು ನಿರ್ಭಂದ ತೆಗೆಯುವಂತೆ ಕೇಂದ್ರಕ್ಕೆ ಪತ್ರ

MUST WATCH

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

ಎಬಿಡಿಗೆ “ಕುಡ್ಲ’ ಅಂದರೆ ತುಂಬಾ ಇಷ್ಟ !

ಎಬಿಡಿಗೆ “ಕುಡ್ಲ’ ಅಂದರೆ ತುಂಬಾ ಇಷ್ಟ !

25

ಸೈನಿಕರನ್ನು ಹಿಂದಕ್ಕೆ ಪಡೆಯಲು ಉಭಯ ದೇಶಗಳು ಒಪ್ಪಿವೆ ಎಂದ ಚೀನ

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

Sannu-01

ಶಾರ್ಜಾ ಮೈದಾನದಲ್ಲಿ ಸ್ಯಾಮ್ಸನ್-ಸ್ಮಿತ್ ಸ್ಪೋಟಕ ಜೊತೆಯಾಟ ; ಚೆನ್ನೈಗೆ 217 ರನ್ ಟಾರ್ಗೆಟ್

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.