ನಗರದಲ್ಲಿ ಧಾರಾಕಾರ ಮಳೆ: ಮರಗಳು ಧರೆಗೆ

Team Udayavani, Aug 15, 2019, 3:07 AM IST

ಬೆಂಗಳೂರು: ನಗರದ ಹಲವೆಡೆ ಬುಧವಾರ ಧಾರಾಕಾರ ಮಳೆಯಾಗಿದ್ದು ಶ್ರೀನಗರ, ಶ್ರೀನಿವಾಸನಗರ ಮತ್ತು ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ಹಲವು ಮರಗಳು ಧರೆಗುರುಳಿವೆ. ಮಳೆ ಹಾಗೂ ಗಾಳಿಗೆ ನಗರದ ಹಲವೆಡೆ ರಂಬೆ-ಕೊಂಬೆಗಳು ಬಿದ್ದಿವೆ. ಆದರೆ, ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬುಧುವಾರ ಮಧ್ಯಾಹ್ನದಿಂದ ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಬಸವನಗುಡಿ, ಲಾಲ್‌ಬಾಗ್‌, ಆರ್‌.ಆರ್‌.ನಗರ, ಮಲ್ಲೇಶ್ವರ, ವಿಜಯನಗರ,ಯಶವಂತಪುರ, ಕೆ.ಆರ್‌.ಪುರ, ಮಹದೇವಪುರ ಸೇರಿದಂತೆ ಹಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು. ಪ್ರಮುಖ ಜಂಕ್ಷನ್‌ಗಳಲ್ಲಿ ದಟ್ಟಣೆ ಉಂಟಾಗಿತ್ತು.

ಎಲ್ಲೆಲ್ಲಿ ಎಷ್ಟು ಮಳೆ: ಗೋಪಾಲಪುರ 9.5 ಮಿ.ಮೀ ಹುಸ್ಕೂರು 8.5 ಮಿ.ಮೀ, ಮಾಚೋಹಳ್ಳಿ9.5 ಮಿ.ಮೀ, ಮಾದಾವರ25.5 ಮಿ.ಮೀ, ಸೊಂಡೆಕೊಪ್ಪ 9.5 ಮಿ.ಮೀ, ಲಕ್ಷ್ಮೀಪುರ 15.5 ಮಿ.ಮೀ, ಶ್ರೀಕಂಠಪುರ 21 ಮಿ.ಮೀ, ರಾಜಾನುಕುಂಟೆ 12.5 ಮಿ.ಮೀ, ಬಾಗಲೂರು 9ಮಿ.ಮೀ, ಜ್ಞಾನಭಾರತಿ 18 ಮಿ.ಮೀ, ದೊರೆಸಾನಿ ಪಾಳ್ಯ 3 ಮಿ.ಮೀ, ಪಿದ್ಯಾಪೀಠ 11ಮಿ.ಮೀ, ಕೆಂಗೇರಿ 4 ಮಿ.ಮೀ, ವಿದ್ಯಾರಣ್ಯಪುರ 23 ಮಿ.ಮೀ, ಲಕ್ಕಸಂದ್ರ 8.5 ಮಿ.ಮೀ, ರಾಜರಾಜೇಶ್ವರಿ ನಗರ 8.5 ಮಿ.ಮೀ, ಕುಮಾರಸ್ವಾಮಿ ಬಡಾವಣೆ 5.2 ಮಿ.ಮೀ,

ಬಸವನಗುಡಿ 6.5 ಮಿ.ಮೀ, ಅಂಜನಾಪುರ 6.5 ಮಿ.ಮೀ, ಬಿಟಿಎಂ ಬಡಾವಣೆ 8.5 ಮಿ.ಮೀ, ನಂದಿನಿ ಬಡಾವಣೆ 18 ಮಿ.ಮೀ, ಕಾಟನಪೇಟೆ 10 ಮಿ.ಮೀ, ಕೆ.ಆರ್‌ಪುರ ಮತ್ತುಮಹದೇವಪುರ 12.5 ಮಿ.ಮೀ, ಚಾಮರಾಜಪೇಟೆ 12 ಮಿ.ಮೀ, ಅಗ್ರಹಾರ 8ಮಿ.ಮೀ, ದಾಸರಹಳ್ಳಿ 13 ಮಿ.ಮೀ, ಲಕ್ಕಸಂದ್ರ 5.5 ಮಿ.ಮೀ, ಕೋನಪ್ಪನ ಅಗ್ರಹಾರ 6 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 8 ಮಿ.ಮೀ, ನಾಯಂಡಹಳ್ಳಿ 9 ಮಿ.ಮೀ, ಬೆನ್ನಿಗಾನಹಳ್ಳಿ 8 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಕೋವಿಡ್ 19 ವೈರಸ್‌ ಹರಡುವಿಕೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನಗರ ಪೊಲೀಸರು ಕಾನೂನು ಸುವ್ಯವಸ್ಥೆ ಜತೆಗೆ ನಿರಾಶ್ರಿತರ ನೆರವಿಗೆ ಧಾವಿಸುವ...

  • ಬೆಂಗಳೂರು: "ಈ ಮೊದಲು ಟಚ್‌ ಪಾಯಿಂಟ್‌ ಗಳು ದಿನಕ್ಕೆ ಅಬ್ಬಬ್ಟಾ ಎಂದರೆ 35ರಿಂದ 38 ಬರುತ್ತಿದ್ದವು. ಈಗ ಮಧ್ಯಾಹ್ನದ ಹೊತ್ತಿಗಾಗಲೇ 45 ಪಾಯಿಂಟ್‌ಗಳನ್ನು ಪೂರ್ಣಗೊಳಿಸುತ್ತಿದ್ದೇನೆ....

  • ಬೆಂಗಳೂರು: ನಗರವು ಅರ್ಧಕ್ಕರ್ಧ ಖಾಲಿಯಾಗಿದೆ. ವಾಣಿಜ್ಯ ಮಳಿಗೆಗಳಂತೂ ವಾರದಿಂದ ಸಂಪೂರ್ಣ ಸ್ಥಗಿತಗೊಂಡಿವೆ. ಈ ದೃಷ್ಟಿಯಿಂದ ಒಟ್ಟಾರೆ ತ್ಯಾಜ್ಯದ ಪ್ರಮಾಣ ಕಡಿಮೆ...

  • ಬೆಂಗಳೂರು: ಕೋವಿಡ್ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು...

  • ಬೆಂಗಳೂರು: ಪಾಲಿಕೆ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ತರಕಾರಿ ಮಾರಾಟಕ್ಕೆ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಅವಕಾಶ ನೀಡಿದ್ದರಿಂದ ನ್ಯಾಷನಲ್‌...

ಹೊಸ ಸೇರ್ಪಡೆ