ಪಾರದರ್ಶಕ ಚುನಾವಣೆ: ಶಿವಯೋಗಿ ಕಳಸದ
Team Udayavani, Sep 28, 2018, 12:01 PM IST
ಬೆಂಗಳೂರು: ಬಿಬಿಎಂಪಿಯ 19ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಶುಕ್ರವಾರ (ಸೆ.28) ಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ ಎಂದು ಬೆಂಗಳೂರು ನಗರ ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಈಗಾಗಲೇ ಮೀಸಲಾತಿ ಪ್ರಕಟವಾಗಿದೆ. ಅದರಂತೆ, ಅಭ್ಯರ್ಥಿಗಳು ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ 9.30ರೊಳಗೆ ಹೆಚ್ಚುವರಿ ಆಯುಕ್ತರಿಗೆ (ಆಡಳಿತ) ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಆನಂತರ ಬರುವ ನಾಮಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದರು.
ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಬೆಳಗ್ಗೆ 11.30ಕ್ಕೆ ಚುನಾವಣಾ ಸಭೆ ಆರಂಭವಾಗಲಿದೆ. ಮೊದಲಿಗೆ ಎಲ್ಲ ಮತದಾರರಿಂದ ಹಾಜರಾತಿ ಪಡೆಯಲಾಗುತ್ತದೆ. ಚುನಾವಣಾ ಪ್ರಕ್ರಿಯೆ ಆರಂಭವಾದ ಕೂಡಲೇ ಕೌನ್ಸಿಲ್ ಸಭಾಂಗಣದ ಬಾಗಿಲುಗಳನ್ನು ಮುಚ್ಚಲಾಗುವುದು.
ನಂತರ ಯಾರೇ ಬಂದರೂ ಒಳಗೆ ಬಿಡುವುದಿಲ್ಲ. ಮೇಯರ್ ಹಾಗೂ ಉಪಮೇಯರ್ ಅಭ್ಯರ್ಥಿಗಳ ಪರ ಹಾಗೂ ವಿರುದ್ಧವಾಗಿ ಕೈ ಎತ್ತುವ ಮೂಲಕ ಮತ ಅಂಗೀಕಾರ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.
ಚುನಾವಣೆ ಪ್ರಕ್ರಿಯೆಯಲ್ಲಿ 198 ಪಾಲಿಕೆ ಸದಸ್ಯರು, 09 ರಾಜ್ಯಸಭಾ ಸದಸ್ಯರು, 5 ಮಂದಿ ಲೋಕಸಭಾ ಸದಸ್ಯರು, 19 ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ 28 ವಿಧಾನಸಭಾ ಸದಸ್ಯರಿಗೆ ಮತದಾನ ಮಾಡಲು ಅವಕಾಶವಿದೆ ಎಂದು ಹೇಳಿದರು.
ಚುನಾವಣೆಗಾಗಿ ಈಗಾಗಲೇ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತೆ ದೃಷ್ಟಿಯಿಂದ ಬ್ಯಾರಿಕೇಡಿಂಗ್ ಮಾಡಲಾಗಿದೆ. ಮತದಾರರು, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ಪಾಸ್ ನೀಡಲಾಗಿದ್ದು, ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಮೇಯರ್ ಚುನಾವಣೆ ನೇರ ಪ್ರಸಾರ: ಶುಕ್ರವಾರ ನಡೆಯಲಿರುವ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಪ್ರಕ್ರಿಯೆನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ನೇರಪ್ರಸಾರ ಮಾಡುವ ಚಿಂತನೆಯಿದೆ. ಈ ಸಮಬಂಧ ಈಗಾಗಲೇ ಪಾಲಿಕೆಯ ತಾಂತ್ರಿಕ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಪ್ರಸಾರ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ಪ್ರಾದೇಶಿಕ ಆಯುಕ್ತರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಲವಿವಾದಗಳ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಭೆ ಕರೆದ ಸಚಿವ ರಮೇಶ್ ಜಾರಕಿಹೊಳಿ
ಕೊಲೆ, ದರೋಡೆಗೆ ಜೈಲಲ್ಲೇ ಪ್ಲಾನ್: ಮಂಗಳೂರಿನ ರೌಡಿ ಶೀಟರ್ಗಳ ಕರೆಸಿ ಕೊಲೆಗೆ ಸಂಚು!
ಹೆಚ್ಚುತ್ತಿರುವ ಕೋವಿಡ್ ಪ್ರಕರಣ : ನಗರದ ಕಲ್ಯಾಣ ಮಂಟಪಗಳಿಗೆ ಎಂಟ್ರಿ ಕೊಟ್ಟ ಮಾರ್ಷಲ್ಗಳು
ಅರಣ್ಯ ಪ್ರದೇಶದಲ್ಲಿ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಿ – ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
“ಬಿ’ ಖಾತಾ ಆಸ್ತಿಗಳಿಗೆ “ಎ’ ಖಾತಾ?