Udayavni Special

ಮರಗಳಿಗೆ ರಕ್ಷಾ ಬಂಧನದ ಶ್ರೀರಕ್ಷೆ


Team Udayavani, Aug 8, 2017, 11:58 AM IST

mara-rakhshabandhana.jpg

ಬೆಂಗಳೂರು: ಮರಗಳಿಗೂ ರಕ್ಷಾ ಬಂಧನಕ್ಕೂ ಎಲ್ಲಿಯದೆಲ್ಲಿಯ ಸಂಬಂಧ! ಸಂಬಂಧವಿಲ್ಲದಿದ್ದರೂ ನಗರದ ಮಾರತ್ತಹಳ್ಳಿಯಲ್ಲಿನ ಕೆಲ ಮರಗಳಿಗೆ ಪರಿಸರ ಪ್ರೇಮಿಗಳು ರಾಖೀ ಕಟ್ಟುವ ಮೂಲಕ ರಕ್ಷಾಬಂಧನವನ್ನು ವಿಶೇಷವಾಗಿ ಆದವರಿಸಿದರು. ಕೆಲವು ದಿನಗಳ ಹಿಂದೆ ಮಾರತ್‌ಹಳ್ಳಿಯ ರಸ್ತೆ ಬದಿಯಲ್ಲಿ ಭಿತ್ತಿಪತ್ರ ಅಂಟಿಸುವ ವಿಚಾರದಲ್ಲಿ ಸುಮಾರು 17 ಮರಗಳಿಗೆ ಕಿಡಿಗೇಡಿಗಳು ಆ್ಯಸಿಡ್‌ ಎರಚಿದ್ದರು.

ಇದು ಗಮನಕ್ಕೆ ಬರುತ್ತಲೇ ಪರಿಸರ ಪ್ರೇಮಿಗಳು ಮೂರು ಮರಗಳಿಗೆ ಚಿಕಿತ್ಸೆ ನೀಡಿದ್ದರು. ಇದರಿಂದಾಗಿ ಬದುಕುಳಿದ ಆ ಮರಗಳಿಗೆ ಇಂದು ಪರಿಸರ ಪ್ರೇಮಿಗಳು ರಾಖೀ ಕಟ್ಟಿ ಸಂಭ್ರಮಿಸಿದರು. ನಗರದೆಲ್ಲೆಡೆ ಸೋಮವಾರ ಸಂಭ್ರಮಾಚರಣೆಯಿಂದ ರಾಖೀ ಹಬ್ಬ ಆಚರಿಸಲಾಯಿತು. ಸಹೋದರಿಯರು ಮುಂಜಾನೆಯೇ ತಮ್ಮ ಸಹೋದರರಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಪೂಜೆ ಸಲ್ಲಿಸಿ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು. 

ಶಾಲಾ-ಕಾಲೇಜುಗಳಲ್ಲಿ ರಾಖೀ ಹಬ್ಬದ ಸಂಭ್ರಮಾಚರಣೆ ಸ್ವಲ್ಪ ಜೋರಾಗಿಯೇ ಇತ್ತು. ತಮ್ಮ ಸ್ನೇಹಿತರಿಗೆ ಹೆಂಗೆಳೆಯರು ರಂಗುರಂಗಿನ ರಾಖೀ ಕಟ್ಟಿ, ಚಾಕಲೇಟ್‌ ಸೇರಿದಂತೆ ವಿವಿಧ ಉಡುಗೊರೆಯನ್ನು ಪಡೆದರು. ಜತೆಗೆ ಶಿಕ್ಷಕರಿಗೆ, ಉಪನ್ಯಾಸಕರು, ಪ್ರಾಂಶುಪಾಲರಿಗೂ ಕೂಡ ವಿದ್ಯಾರ್ಥಿನಿಯರು ರಾಖೀ ಕಟ್ಟಿ ಆಶೀರ್ವಾದ ಪಡೆದದ್ದು ವಿಶೇಷ.

ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಹಾಗೂ ವಿಧಾನಪರಿಷತ್‌ ಸದಸ್ಯೆ ತಾರಾ ಅವರು ಕೇಂದ್ರ ಸಚಿವ ಅನಂತ್‌ಕುಮಾರ್‌ ಅವರಿಗೆ ರಾಖೀ ಕಟ್ಟಿ ರಕ್ಷಾ ಬಂಧನದ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಅದಮ್ಯ ಚೇತನದ  ತೇಜಸ್ವಿನಿ ಅನಂತಕುಮಾರ್‌ ಇದ್ದರು. 

ರಾಖೀ ಖರೀದಿ: ನಗರದ ವಿವಿಧ ಫ್ಯಾನ್ಸಿ ಸ್ಟೋರ್‌ಗಳಲ್ಲಿ ಬಾಲಕಿಯರು, ಯುವತಿಯರು ರಾಖೀ ಹಬ್ಬದ ದಿನವಾದ ಸೋಮವಾರವೂ ಕೂಡ ರಾಖೀ ಖರೀದಿಯಲ್ಲಿ ತೊಡಗಿದ್ದರು. ಬೆಳಗ್ಗೆಯಿಂದ ಸಂಜೆ ವರೆಗೂ ರಾಖೀ ಮಾರಾಟ ನಡೆದಿತ್ತು, ಜಯನಗರ, ಎಂ.ಜಿ.ರಸ್ತೆ, ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಬಸವನಗುಡಿ, ಮಹಾಲಕ್ಷ್ಮೀಲೇಔಟ್‌ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಸಹೋದರಿಯರೊಂದಿಗೆ ಸಹೋದರರು ಮತ್ತು ಪೋಷಕರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು. 

ಸಹೋದರತ್ವದ ಸಂಕೇತ: ಹಲವು ಉದ್ಯಾನಗಳಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಕೇಸರಿ ಬಣ್ಣದ ರಾಖೀಗಳನ್ನು ಹಿಡಿದು ಬಂದ ಆರ್‌ಎಸ್‌ಎಸ್‌ ಕಾರ್ಯಕರ್ತರು, ಸಿಕ್ಕಸಿಕ್ಕವರಿಗೆಲ್ಲಾ ರಾಖೀ ಕಟ್ಟುತ್ತಿದ್ದ ದೃಶ್ಯ ಕಂಡು ಬಂತು. ಸಹೋದರತ್ವದ ಸಂಕೇತವಾದ ರಾಖೀ, ಸಹೋದರಿಯರು ಮಾತ್ರವಲ್ಲ ಸಹೋದರರು ಕೂಡ ಕಟ್ಟುವ ಮೂಲಕ ಸಹೋದರತ್ವದ ಪಾವಿತ್ರ್ಯತೆಗೆ ಗೌರವ ನೀಡಬೇಕು.

ಪ್ರಾಚೀನ ಭಾರತೀಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಆಚಾರ, ಸಂಪ್ರದಾಯ, ಸಂಸ್ಕೃತಿ ಕಾಪಾಡುವಂತೆ ಸಹೋದರತ್ವದ ಮೂಲಕ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು. ಅಂತೆಯೇ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹೋದರಿಯರು ಕೂಡ ರಾಖೀ ಕಟ್ಟುವ ಮೂಲಕ ಸಂಭ್ರಮಿಸಿದರು.

ಟಾಪ್ ನ್ಯೂಸ್

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

rain

ಉತ್ತರಾಖಂಡದಲ್ಲಿ ಭಾರಿ ಮಳೆ ಎಚ್ಚರಿಕೆ : ತುರ್ತು ಪರಿಸ್ಥಿತಿಗೆ ಅಗತ್ಯ ವ್ಯವಸ್ಥೆ

ಹಣಕಾಸು ಸಚಿವಾಲಯ ಸರ್ಕಾರಿ ಆಸ್ತಿಗಳ ಮೋನಿಟೈಷೇಶನ್ ಗಾಗಿ ಕ್ಯಾಬಿನೆಟ್‌ ಅನುಮೋದನೆ ಪಡೆಯಲಿದೆ

ಸಿಪಿಎಸ್‌ಇ ಒಡೆತನದ ಭೂಮಿ: ಹಣಕಾಸು ಸಚಿವಾಲಯದಿಂದ ಹೊಸ ಚಿಂತನೆ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

hgyuy

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉತ್ತರ ಕರ್ನಾಟಕ ಭಾಗದ ಜನರು ಮುಗ್ದರು: ಡಾ. ಚಂದ್ರಶೇಖರ ಕಂಬಾರ

ಉತ್ತರ ಕರ್ನಾಟಕ ಭಾಗದ ಜನರು ಮುಗ್ದರು: ಡಾ. ಚಂದ್ರಶೇಖರ ಕಂಬಾರ

9

ಮಲೀನ ನೀರು ರಸೆಗೆ ಹರಿಯದಂತೆ ಕ್ರಮವಹಿಸಿ

8

ಗಿರಿಜನರೆಡೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ

ಸತತ ಮಳೆಗೆ ಮನೆ ಕುಸಿಯುವ ಭೀತಿ

ಸತತ ಮಳೆಗೆ ಮನೆ ಕುಸಿಯುವ ಭೀತಿ

4

ಚೈತನ್ಯ ಇನ್ಫಿನಿಟಿ ಲರ್ನ್ ರೋಹಿತ್‌ ಶರ್ಮ ರಾಯಭಾರಿ

MUST WATCH

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

ಹೊಸ ಸೇರ್ಪಡೆ

fdkllkjhgfds

ಮುಂದಿನ ಚುನಾವಣೆಗೆ ಬೊಮ್ಮಾಯಿ ನೇತೃತ್ವ

jjkjhgfdsa

ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ : ಪಾಟೀಲ

gjhgfds

ಗ್ರಾಮಗಳ ಸ್ಥಳಾಂತರವೇ ಪರಿವಾರವಲ್ಲ

gtjhgfdswq

ಕುಮಾರಿಯರಿಗೆ ಉಡಿ ತುಂಬಿದ ನಾಲವಾರ ಶ್ರೀ

hfghftytr

ಗುಳದಾಳಕ್ಕೆ ನಡೆದುಕೊಂಡು ಬಂದ ಜಿಲ್ಲಾಧಿಕಾರಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.