ಪಾಟೀಲರ ಪಾತಾಳಗಂಗೆ ಬೇಡವೆಂದ ಉಗ್ರಪ್ಪ!

Team Udayavani, Jun 15, 2017, 11:21 AM IST

ವಿಧಾನಪರಿಷತ್ತು: ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲರ ಉದ್ದೇಶಿತ “ಪಾತಾಳಗಂಗೆ’ ಯೋಜನೆಗೆ ಆಡಳಿತ ಪಕ್ಷದವರೇ ವಿರೋಧ ವ್ಯಕ್ತಪಡಿಸಿದ್ದು, ಪಾತಾಳಗಂಗೆ ಯೋಜನೆಯಿಂದ ಪರಿಸರ ಉಳಿಸಲು ಸಾಧ್ಯವಿಲ್ಲ. ಕರ್ನಾಟಕ ರಾಜಸ್ಥಾನ ಆಗಬಾರದು ಎಂದಾದರೆ ಈ ಯೋಜನೆಯನ್ನು ಕೈಬಿಡಬೇಕು ಎಂದು ಕಾಂಗ್ರೆಸ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಒತ್ತಾಯಿಸಿದ್ದಾರೆ.

ಬರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾತಾಳಗಂಗೆ ಯೋಜನೆ ಜಾರಿಗೆ ಬಂದರೆ
ವಾತಾವರಣದಲ್ಲಿನ ತೇವಾಂಶ ಕಡಿಮೆ ಆಗಿ ಗಿಡ-ಮರ ಬೆಳೆಯುವುದು ಕಷ್ಟವಾಗುತ್ತದೆ. ಬರ ಪರಿಸ್ಥಿತಿ ಎದುರಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ರಾಷ್ಟ್ರೀಯ ಜಲನೀತಿ, ರಾಷ್ಟ್ರೀಯ ವಿಪತ್ತು ನೀತಿ ರೂಪಿಸಬೇಕು. ಗಂಗಾ-ಕಾವೇರಿ ನದಿ ಜೋಡಣೆ ಕಾರ್ಯಕ್ಕೆ ಒತ್ತು ನೀಡಬೇಕು ಹಾಗೂ ಪರಿಸರ ಉಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು
ಕೈಗೊಳ್ಳಬೇಕು. ಸಾಧ್ಯವಾದರೆ ಕೊಳವೆಬಾವಿಗಳನ್ನು ನಿಷೇಧಿಸಬೇಕು ಎಂದು ಉಗ್ರಪ್ಪ ಸಲಹೆ ನೀಡಿದರು.

ಒಂದು ಬಾರಿ ಸಾಲ ಮನ್ನಾ ಮಾಡಿ: ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 139 ಡಾಲರ್‌ ಇದ್ದದ್ದು, ಅದೃಷ್ಟ ಎಂಬಂತೆ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಬ್ಯಾರಲ್‌ಗೆ 40 ಡಾಲರ್‌ಗೆ ಇಳಿದಿದೆ.

ಇದರಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಅಂದಾಜು 2 ಲಕ್ಷ ಕೋಟಿ ರೂ. ಆದಾಯ ಬರುತ್ತಿದೆ. ಈ ಹಣವನ್ನು ಬಳಸಿಕೊಂಡು ಒಂದು ಬಾರಿಗೆ ಎಂಬಂತೆ ರೈತರ ಸಾಲ ಮನ್ನಾ ಮಾಡುವಂತೆ ಉಗ್ರಪ್ಪ ಒತ್ತಾಯಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ