ಅಪರಿಚಿತ ಮಹಿಳೆ ಶವ ಪತ್ತೆ: ಅತ್ಯಾಚಾರ-ಕೊಲೆ ಶಂಕೆ
Team Udayavani, Jul 12, 2017, 7:56 AM IST
ಬೆಂಗಳೂರು: ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ನಗರದ ಕುಮಾರಸ್ವಾಮಿ ಲೇಔಟ್ನ ಓಂ ಶಕ್ತಿ ದೇವಾಲಯದ ಬಳಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ಸುಮಾರು 30ರಿಂದ 35 ವರ್ಷದ ಮಹಿಳೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇವೌಟ್ ಪೊಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.