ವಂದೇ ಭಾರತ್‌’ ಸಂಚಾರ; ಚೆನ್ನೈ-ಬೆಂಗಳೂರು-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್‌ ರದ್ದುಗೊಳಿಸುವ ಚಿಂತನೆ

ವಂದೇ ಭಾರತ್‌ದಲ್ಲಿ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

Team Udayavani, Dec 1, 2022, 11:40 AM IST

ವಂದೇ ಭಾರತ್‌’ ಸಂಚಾರ; ಚೆನ್ನೈ-ಬೆಂಗಳೂರು-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್‌ ರದ್ದುಗೊಳಿಸುವ ಚಿಂತನೆ

ಬೆಂಗಳೂರು: ಅತಿ ವೇಗದ ರೈಲು “ವಂದೇ ಭಾರತ್‌’ ದಕ್ಷಿಣ ಭಾರತಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಚೆನ್ನೈ-ಬೆಂಗಳೂರು-ಮೈಸೂರು ನಡುವಿನ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ರದ್ದುಗೊಳಿಸುವ ಚಿಂತನೆ ನಡೆದಿದೆ.

ಇದನ್ನೂ ಓದಿ:ಸೈಬರ್ ವಂಚನೆ; ವಿದೇಶಿ ವರನ ಸೋಗಿನಲ್ಲಿ ಯುವತಿಗೆ 2.3 ಲಕ್ಷ ಟೋಪಿ

ವಂದೇ ಭಾರತ್‌ ಮತ್ತು ಶತಾಬ್ದಿ ಎರಡೂ ಎಕ್ಸ್‌ ಪ್ರಸ್‌ ರೈಲುಗಳಾಗಿವೆ. ಒಂದೇ ಮಾರ್ಗದಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಅಷ್ಟೇ ಅಲ್ಲ, ನಿಗದಿತ ದೂರವನ್ನು ಕ್ರಮಿಸುವ ಅಂತರ ಕೂಡ ಕೇವಲ 20-30 ನಿಮಿಷಗಳಾಗಿವೆ. ಹೀಗಿರುವಾಗ ಶತಾಬ್ದಿ ಎಕ್ಸ್‌ಪ್ರೆಸ್‌ ಅಗತ್ಯವಿದೆಯೇ ಎಂಬ ಪ್ರಶ್ನೆ ಹಿನ್ನೆಲೆ ಯಲ್ಲಿ ಮುಂದುವರಿಸುವ ಬಗ್ಗೆ “ಪರಿಶೀಲನೆ’ ನಡೆದಿದೆ ಎಂದು ಮೂಲಗಳು ತಿಳಿಸಿವೆ.

“ಬೆಂಗಳೂರು ಮಾರ್ಗವಾಗಿ ಚೆನ್ನೈ- ಮೈಸೂರು ನಡುವೆ “ವಂದೇ ಭಾರತ್‌’ ಪರಿಚಯಿಸುವುದು ಖಚಿತವಾದಾಗಲೇ ಈಗಾಗಲೇ ಇರುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಅನ್ನು ಹಿಂಪಡೆಯಬ ಹುದು ಎಂಬ ಮಾತು ಕೇಳಿಬಂದಿತ್ತು. ಆದರೆ, ಒಮ್ಮೆಲೆ ಒಂದನ್ನು ರದ್ದುಗೊಳಿಸಿ, ಮತ್ತೂಂದನ್ನು ಪರಿಚಯಿಸುವುದು ಬೇಡ. ಎರಡೂ ರೈಲುಗಳಲ್ಲಿ ಪ್ರಯಾಣಿ ಕರ ಸ್ಪಂದನೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾ ಗಿತ್ತು’ ಎಂದು ಹೆಸರು ಹೇಳಲಿಚ್ಛಿಸದ ನೈಋತ್ಯ ರೈಲ್ವೆ ಹಿರಿಯ ಅಧಿಕಾರಿ ಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಈ ಮಧ್ಯೆ, ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಸದ್ಯಕ್ಕೆ ಶತಾಬ್ದಿಗೆ ತಡೆಯೊಡ್ಡುವ ಸಾಧ್ಯತೆಗಳು ತುಂಬಾ ಕಡಿಮೆ ಇದ್ದು, ನಂತರದಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು ಎನ್ನಲಾಗಿದೆ.

ಶೇ.40ರಷ್ಟು “ವಂದೇ ಭಾರತ್‌’ಗೆ ಶಿಫ್ಟ್: “ವಂದೇ ಭಾರತ್‌’ ಕಾರ್ಯಾರಂಭ ಮಾಡಿದ ನಂತರ ಶತಾಬ್ದಿಯಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಶೇ.40ರಷ್ಟು ಪ್ರಯಾಣಿಕರು ಶತಾಬ್ದಿಯಿಂದ ವಂದೇ ಭಾರತ್‌ಗೆ ವರ್ಗಾವಣೆ ಆಗಿದ್ದಾರೆ. ಇದರಲ್ಲಿ ಎಕ್ಸಿಕ್ಯುಟಿವ್‌ ಚೇರ್‌ ಕಾರ್‌ ಪ್ರಮಾಣ ಹೆಚ್ಚಿದೆ. ಆದರೆ, ಶತಾಬ್ದಿಯಲ್ಲಿ ವಿಮಾನಯಾನದ ಮಾದರಿಯಲ್ಲಿ ಡೈನಾಮಿಕ್‌ ಫೇರ್‌ ಅನ್ವಯಿಸು ತ್ತದೆ. ಅಂದರೆ ಆಸನಗಳ ಲಭ್ಯತೆ ಆಧಾರದಲ್ಲಿ ದರ ನಿಗದಿಯಾಗುತ್ತದೆ.

ವಂದೇ ಭಾರತ್‌ದಲ್ಲಿ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದಾಗ್ಯೂ ಹೊಸ ರೈಲು ಮತ್ತು ಹೈಟೆಕ್‌ ಸೌಲಭ್ಯಗಳು ಇರುವುದರಿಂದ ಪ್ರಯಾಣಿಕರು “ಶಿಫ್ಟ್’ ಆಗಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪೀಕ್‌ ಅವಧಿಯಲ್ಲಿ ಅಂದರೆ ರಜಾ ಮತ್ತು ಹಬ್ಬದ ದಿನಗಳಲ್ಲಿ ಈ ಎರಡೂ ರೈಲುಗಳ ಪ್ರಯಾಣಿಕರ ದಟ್ಟಣೆ ಬಗ್ಗೆಯೂ ಅಧ್ಯಯನ ಮಾಡಬೇಕಿದೆ. ಇದಕ್ಕಾಗಿ ತುಸು ಸಮಯ ಕಾದುನೋಡಲಾಗುತ್ತಿದೆ ಎಂದು ಹೇಳಲಾಗಿದೆ.

“ಚೆನ್ನೈನಿಂದ ಮೈಸೂರು ಕಡೆಗೆ ಹೊರಡುವ ಈ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಸನಗಳ ಭರ್ತಿ ಸಾಮರ್ಥ್ಯ ಎಕ್ಸಿಕ್ಯುಟಿವ್‌ ಚೇರ್‌ ಕಾರ್‌ (ಇಸಿ) ಸರಾಸರಿ ಶೇ. 64ರಷ್ಟಿದ್ದರೆ, ಸಾಮಾನ್ಯ ಚೇರ್‌ ಕಾರ್‌ (ಸಿಸಿ) ಶೇ. 85ರಷ್ಟಿದೆ. ಅದೇ ರೀತಿ, ಮೈಸೂರಿನಿಂದ ವಾಪಸ್‌ ಚೆನ್ನೈ ಕಡೆಗೆ ಹೊರಡುವ ಮಾರ್ಗದಲ್ಲಿ ರೈಲಿನ ಆಸನಗಳು ಕ್ರಮವಾಗಿ ಶೇ. 75 ಹಾಗೂ ಶೇ. 98ರಷ್ಟಿದೆ.

ಇನ್ನು ವಂದೇ ಭಾರತ್‌ ರೈಲಿನ ಆಕ್ಯುಪನ್ಸಿ ಚೆನ್ನೈ- ಮೈಸೂರು ಮಾರ್ಗದಲ್ಲಿ ಇಸಿಯಲ್ಲಿ ಸರಾಸರಿ ಶೇ. 147 ಆಸನಗಳು ಭರ್ತಿ ಆಗಿದ್ದರೆ, ಸಿಸಿಯಲ್ಲಿ ಶೇ. 115 ಇದೆ. ಅದೇ ರೀತಿ, ಮೈಸೂರು-ಚೆನ್ನೈ ಮಾರ್ಗದಲ್ಲಿ ಕ್ರಮವಾಗಿ ಶೇ. 125 ಮತ್ತು ಶೇ. 97ರಷ್ಟಿದೆ. ಇದರಲ್ಲಿ ಚೆನ್ನೈ-ಕಾಟ್ಪಾಡಿ, ಕಾಟಾ³ಡಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಕೆಎಸ್‌ಆರ್‌) ಬೆಂಗಳೂರು ಮತ್ತು ಕೆಎಸ್‌ ಆರ್‌- ಮೈಸೂರು ಸೇರಿದಂತೆ ಮೂರು ಕಡೆಯಿಂದ ಸೀಟುಗಳು ಹಂಚಿಕೆಯಾಗಿರುತ್ತದೆ. ಅದನ್ನು ಆದರಿಸಿ ಆಕ್ಯುಪನ್ಸಿ ಲೆಕ್ಕಹಾಕಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸುತ್ತಾರೆ.

130 ಕಿ.ಮೀ. ವೇಗದ ಗುರಿ?
“ವಂದೇ ಭಾರತ್‌’ ಅತಿ ವೇಗವಾಗಿ ಸಂಚರಿಸುವ ರೈಲು ಆಗಿದ್ದರೂ, ಹಳಿಗಳ ವೇಗಮಿತಿ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಹಳಿಗಳ ಅಪ್‌ಗ್ರೇಡ್‌ ಮಾಡುವ ಮೂಲಕ ಗಂಟೆಗೆ 120-130 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೆಚ್ಚಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಮಾರ್ಗದುದ್ದಕ್ಕೂ ತಿರುವುಗಳು, ಇಳಿಜಾರುಗಳು, ಸೇತುವೆಗಳು, ಲೆವೆಲ್‌ ಕ್ರಾಸಿಂಗ್‌ಗಳು ಇರುವುದರಿಂದ ಈ ಹೊಸ ರೈಲಿನ ಸರಾಸರಿ ವೇಗ 100 ಕಿ.ಮೀ. ದಾಟುತ್ತಿಲ್ಲ. ಇದರ ಅಧ್ಯಯನ ಕೈಗೆತ್ತಿಕೊಂಡು, ತಿರುವುಗಳನ್ನು ಸಾಧ್ಯವಾದಷ್ಟು ಸರಿಪಡಿಸಿ ವೇಗ ಹೆಚ್ಚಿಸುವ ಚಿಂತನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

shreyas iyer ruled out of first test against Australia

ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನಿಂದ ಹೊರಬಿದ್ದ ಸ್ಟಾರ್ ಬ್ಯಾಟರ್: ಸೂರ್ಯಗೆ ಅವಕಾಶ ಸಾಧ್ಯತೆ

4-puttur

ಪುತ್ತೂರು: ಸ್ಕೂಟರ್-ಮಾರುತಿ ವ್ಯಾನ್ ಡಿಕ್ಕಿ; ಸವಾರ ಗಂಭೀರ ಗಾಯ

tejaswi

ಈ ಬಜೆಟ್ ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ : ತೇಜಸ್ವಿ ಸೂರ್ಯ

ಕೇಂದ್ರ ಬಜೆಟ್ 2023:ಸಿಹಿ ಸುದ್ದಿ-ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 79ಸಾವಿರ ಕೋಟಿ ಅನುದಾನ

ಕೇಂದ್ರ ಬಜೆಟ್ 2023:ಸಿಹಿ ಸುದ್ದಿ-ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 79ಸಾವಿರ ಕೋಟಿ ಅನುದಾನ

tdy-14

‘ಹೊಂದಿಸಿ ಬರೆಯಿರಿʼ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

PM Modi

ಅಮೃತ್ ಕಾಲದ ಮೊದಲ ಬಜೆಟ್ ಸಮಾಜದ ಕನಸುಗಳನ್ನು ಈಡೇರಿಸಲಿದೆ: ಪ್ರಧಾನಿ ಮೋದಿ

ಸಿ.ಟಿ ರವಿ

ಮೋದಿ ನೂರು- ಮುನ್ನೂರು ವರ್ಷದ ಬಗ್ಗೆ ಯೋಚಿಸಿ ಬಜೆಟ್ ಮಾಡಿದ್ದಾರೆ: ಸಿ.ಟಿ ರವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿ.ಟಿ ರವಿ

ಮೋದಿ ನೂರು- ಮುನ್ನೂರು ವರ್ಷದ ಬಗ್ಗೆ ಯೋಚಿಸಿ ಬಜೆಟ್ ಮಾಡಿದ್ದಾರೆ: ಸಿ.ಟಿ ರವಿ

v sunil kumar

ಬಜೆಟ್ ನಲ್ಲಿ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಸಮಾನ ಅವಕಾಶ: ಸುನಿಲ್ ಕುಮಾರ್

ಈಶ್ವರಪ್ಪ

ಸಿ.ಡಿ ವಿಚಾರದಲ್ಲಿ ಡಿಕೆಶಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಿದ್ದಾರೆ: ಈಶ್ವರಪ್ಪ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಸ್ವಾಗತಾರ್ಹ: ಸಿಎಂ ಬೊಮ್ಮಾಯಿ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಸ್ವಾಗತಾರ್ಹ: ಸಿಎಂ ಬೊಮ್ಮಾಯಿ

ಧಾರವಾಡದ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ಧಾರವಾಡದ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್

MUST WATCH

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಹೊಸ ಸೇರ್ಪಡೆ

sakuchi press meet.

ಪ್ರೆಸ್ ಮೀಟ್ ನಲ್ಲಿ ಚಿತ್ರ ನಿರ್ದೇಶಕರ ಮೈಮೇಲೆ ಅಗೋಚರ ಶಕ್ತಿ!

shreyas iyer ruled out of first test against Australia

ಆಸೀಸ್ ವಿರುದ್ಧದ ಮೊದಲ ಟೆಸ್ಟ್ ನಿಂದ ಹೊರಬಿದ್ದ ಸ್ಟಾರ್ ಬ್ಯಾಟರ್: ಸೂರ್ಯಗೆ ಅವಕಾಶ ಸಾಧ್ಯತೆ

4-puttur

ಪುತ್ತೂರು: ಸ್ಕೂಟರ್-ಮಾರುತಿ ವ್ಯಾನ್ ಡಿಕ್ಕಿ; ಸವಾರ ಗಂಭೀರ ಗಾಯ

tejaswi

ಈ ಬಜೆಟ್ ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ : ತೇಜಸ್ವಿ ಸೂರ್ಯ

ಕೇಂದ್ರ ಬಜೆಟ್ 2023:ಸಿಹಿ ಸುದ್ದಿ-ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 79ಸಾವಿರ ಕೋಟಿ ಅನುದಾನ

ಕೇಂದ್ರ ಬಜೆಟ್ 2023:ಸಿಹಿ ಸುದ್ದಿ-ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 79ಸಾವಿರ ಕೋಟಿ ಅನುದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.