ಬಯಸಿದು 9 ಒಲಿದ್ದದ್ದು 3


Team Udayavani, Jun 7, 2018, 11:18 AM IST

blore-1.jpg

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 27ರಲ್ಲಿ 14 ಸ್ಥಾನ
ಗಳಿಸಿದರೂ ಸಚಿವ ಸ್ಥಾನದ ಅದೃಷ್ಟ ಮಾತ್ರ ಸದ್ಯಕ್ಕೆ ಮೂವರಿಗೆ ಮಾತ್ರ ದೊರೆತಿದೆ. ಕ್ರಿಶ್ಚಿಯನ್‌ ಕೋಟಾದಡಿ
ಕೆ.ಜೆ.ಜಾರ್ಜ್‌, ಮುಸ್ಲಿಂ ಕೋಟಾದಡಿ ಜಮೀರ್‌ ಅಹಮದ್‌, ಒಕ್ಕಲಿಗ ಕೋಟಾದಡಿ ಕೃಷ್ಣ ಬೈರೇಗೌಡ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ರಾಮಲಿಂಗಾ ರೆಡ್ಡಿ, ರೋಷನ್‌ಬೇಗ್‌, ಎಂ.ಕೃಷ್ಣಪ್ಪ, ಎನ್‌.ಆರ್‌.ಹ್ಯಾರೀಸ್‌, ಎಸ್‌.ಟಿ.ಸೋಮಶೇಖರ, ಭೈರತಿ
ಬಸವರಾಜ ಸಚಿವಾಕಾಂಕ್ಷಿಗಳಾಗಿದ್ದರೂ ಅವಕಾಶ ಸಿಕ್ಕಿಲ್ಲ. ಇತ್ತ ಸಚಿವ ಸ್ಥಾನದ ಮೇಲೆ ಒಂದು ಕಣ್ಣಿಟ್ಟಿದ್ದ ಜೆಡಿಎಸ್‌ನಲ್ಲಿ ಗೋಪಾಲಯ್ಯ ಅವರಿಗೂ ಅದೃಷ್ಟ ಕೈಕೊಟ್ಟಿದೆ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನಗರದಲ್ಲಿ ಕಾಂಗ್ರೆಸ್‌ 28 ಸ್ಥಾನಗಳ ಪೈಕಿ 13 ಸ್ಥಾನ ಗಳಿಸಿತ್ತು.
ಕೃಷ½ಬೈರೇಗೌಡ, ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್‌, ರೋಷನ್‌ಬೇಗ್‌, ಎಂ.ಕೃಷ್ಣಪ್ಪ ಸೇರಿ ಐವರು
ಸಚಿವರಾಗಿದ್ದರು. ಈ ಬಾರಿ ಮೊದಲ ಕಂತಿನಲ್ಲಿ ಚಾಮರಾಜಪೇಟೆ, ಸರ್ವಜ್ಞನಗರ, ಬ್ಯಾಟರಾಯನಪುರ
ಕ್ಷೇತ್ರ ಪ್ರತಿನಿಧಿಸುವ ಕಾಂಗ್ರೆಸ್‌ ಶಾಸಕರಿಗೆ ಅದೃಷ್ಟ ಒಲಿದಿದೆ. ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದ ಜಮೀರ್‌
ಅಹಮದ್‌ ಸಚಿವ ಸಂಪುಟ ಸೇರ್ಪಡೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಟ್ಟು ಹಿಡಿದಿದ್ದರು. ಮುಸ್ಲಿಂ ಕೋಟಾದಡಿ ಸಚಿವರಾಗಲು ರೋಷನ್‌ಬೇಗ್‌ ದೆಹಲಿಗೆ ಹೋಗಿ ಹೈಕಮಾಂಡ್‌ ಮಟ್ಟದಲ್ಲಿ ಸಾಕಷ್ಟು ಪ್ರಭಾವ ಬೀರಿ ಒತ್ತಡ ಹಾಕಿದರೂ ಅವರ ಪ್ರಯತ್ನ ಫ‌ಲ ನೀಡಿಲ್ಲ. ದೆಹಲಿಗೆ ಹೋಗದೆಯೇ ಜಮೀರ್‌ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ 68 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ ಜಮೀರ್‌, ಮುಸ್ಲಿಂ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆದಿದ್ದಾರೆ. ಜತೆಗೆ ಹೈಕಮಾಂಡ್‌ ಮಟ್ಟದಲ್ಲೂ ಜಮೀರ್‌ ಪ್ರಭಾವ ಹೊಂದಿರುವ ಕಾರಣಕ್ಕೆ ಸಚಿವ ಪಟ್ಟ ಸುಲಭವಾಗಿ ದಕ್ಕಿದೆ.
ಇನ್ನು ಕೆ.ಜೆ.ಜಾರ್ಜ್‌ ಸಹ ನೇರವಾಗಿ ಸೋನಿಯಾಗಾಂಧಿ-ರಾಹುಲ್‌ಗಾಂಧಿ ಅವರ ಸಂಪರ್ಕ ಇರುವವರು. ಹೀಗಾಗಿ, ಯಾವುದೇ ಅಡೆತಡೆ ಇಲ್ಲದೆ ಸಚಿವಗಿರಿ ಹುಡುಕಿಕೊಂಡು ಬಂದಿದೆ.

ಒಕ್ಕಲಿಗರ ಕೋಟಾದಡಿ ಎಂ.ಕೃಷ್ಣಪ್ಪ ಹಾಗೂ ಎಸ್‌.ಟಿ.ಸೋಮಶೇಖರ್‌ ಸಚಿವರಾಗಲು ಬಯಸಿದ್ದರಾದರೂ ಕಳೆದ ಸರ್ಕಾರದಲ್ಲಿ ಕೃಷಿ ಖಾತೆ ಸಮರ್ಥವಾಗಿ ನಿಭಾಯಿಸಿದ ಹಾಗೂ ಯಾವುದೇ ವಿವಾದ ಹಾಗೂ ಆರೋಪ ಇಲ್ಲದ ಕೃಷ್ಣ ಬೈರೇಗೌಡ ಬಗ್ಗೆ ಹೈಕಮಾಂಡ್‌ ಹಾಗೂ ರಾಜ್ಯ ನಾಯಕರು ಒಲವು ತೋರಿದರು ಎನ್ನಲಾಗಿದೆ.

ರಾಮಲಿಂಗಾರೆಡ್ಡಿ ಅವರು ಹಿರಿಯರ ಕೋಟಾದಡಿ ಸಂಪುಟಕ್ಕೆ ಸೇರುವ ನಿರೀಕ್ಷೆ ಇತ್ತಾದರೂ ಚಿಕ್ಕಬಳ್ಳಾಪುರ ಜಿಲ್ಲೆ
ಗೌರಿಬಿದನೂರಿನ ಶಿವಶಂಕರರೆಡ್ಡಿ ಅವರಿಗೆ ಅವಕಾಶ ಕೊಡಲು ಕೇಂದ್ರದ ಮಾಜಿ ಸಚಿವ ವೀರಪ್ಪಮೊಯಿಲಿ ಸಹಿತ
ರಾಜ್ಯ ನಾಯಕರ ಒತ್ತಡ ಇತ್ತು. ಹೀಗಾಗಿ, ರಾಮಲಿಂಗಾರೆಡ್ಡಿ ಅವರಿಗೆ ಅವಕಾಶ ಕೈ ತಪ್ಪಿದೆ.

ಇನ್ನು, ಕಳೆದ ಸರ್ಕಾರದಲ್ಲಿ ಎರಡೂವರೆ ವರ್ಷ ಸಚಿವರಾಗಿ ಕೆಲಸ ಮಾಡಿ ನಂತರ ಪಕ್ಷ ಸಂಘಟನೆಗೆ ನಿಯೋಜನೆಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಸಚಿವ ಸ್ಥಾನ ನೀಡಲು ಪಕ್ಷದಲ್ಲಿ
ಒಲವು ಇತ್ತಾದರೂ ಬ್ರಾಹ್ಮಣರ ಕೋಟಾ ಮುಗಿದ ಕಾರಣ ಅವಕಾಶ ಸಿಗದಂತಾಯಿತು ಎಂದು ಹೇಳಲಾಗಿದೆ.
ಬ್ರಾಹ್ಮಣ ಸಮುದಾಯದ ರಮೇಶ್‌ಕುಮಾರ್‌ ವಿಧಾನಸಭೆ ಸ್ಪೀಕರ್‌ ಆಗಿದ್ದು, ಆರ್‌.ವಿ.ದೇಶಪಾಂಡೆ ಸಚಿವ
ಸ್ಥಾನ ಪಡೆದಿದ್ದಾರೆ. ಹೀಗಾಗಿ, ದಿನೇಶ್‌ಗುಂಡೂರಾವ್‌ ಅವಕಾಶ ವಂಚಿತರಾಗಬೇಕಾಯಿತು ಎನ್ನಲಾಗಿದೆ.

ಕಾಂಗ್ರೆಸ್‌ ಪಾಲಿನ ಇನ್ನೂ ಆರು ಸಚಿವ ಸ್ಥಾನ ಖಾಲಿ ಇವೆಯಾದರೂ ಆ ಪೈಕಿ ಬೆಂಗಳೂರಿಗೆ ಮತ್ತೂಂದು ಸ್ಥಾನ
ದೊರೆಯಬಹುದು. ಅದು ಯಾರು ಎಂದು ಕಾದು ನೋಡಬೇಕು. ಈ ಮಧ್ಯೆ ನಟಿ ಜಯಮಾಲಾ ಅವರಿಗೆ
ಸಚಿವ ಸ್ಥಾನ ದೊರೆತಿರುವುದು ಬೆಂಗಳೂರು ಕೋಟಾದಡಿಯೇ ಎಂದು ಹೇಳಲಾಗುತ್ತಿದೆ. ಆದರೆ,
ಅವರು ವಿಧಾನ ಪರಿಷತ್‌ನಿಂದ ಸಚಿವ ಸಂಪುಟ ಪ್ರವೇಶಿಸಿದ್ದಾರೆ. ಜತೆಗೆ ಜಯಮಾಲಾ ಅವರು ಕರಾವಳಿ
ಮೂಲದವರಾಗಿರುವ ಕಾರಣ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಆ ಭಾಗದ ಕೋಟಾ ಎಂದು
ಪರಿಗಣಿಸಬಹುದಾಗಿದೆ. ಸಚಿವರ ಕುಟುಂಬ ಸದಸ್ಯರ ಕಲರವ ನೂತನ ಸಚಿವರ ಪ್ರಮಾಣವಚನ ಸ್ವೀಕಾರ
ಸಮಾರಂಭಕ್ಕೆ ಅವರ ಕುಟುಂಬ ಸದಸ್ಯರು, ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪರಸ್ಪರ ಅಭಿನಂದಿಸುತ್ತಾ ರಾಜಭವನದ ಗಾಜಿನ ಮನೆಯಲ್ಲಿ ಖುಷಿ ಅನುಭವಿಸಿದರು. ಎಚ್‌.ಡಿ.ರೇವಣ್ಣ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ತಾಯಿ ಚೆನ್ನಮ್ಮ ಎಚ್‌.ಡಿ.ದೇವೇಗೌಡ, ಪತ್ನಿ ಭವಾನಿ ರೇವಣ್ಣ, ಪುತ್ರ ಪ್ರಜ್ವಲ್‌ ರೇವಣ್ಣ, ಸಹೋದರಿ ಸೇರಿ ಹಲವು ಬಂಧುಗಳು ರಾಜಭವನಕ್ಕೆ ಆಗಮಿಸಿದ್ದರು. 

ಈ ಮಧ್ಯೆ ಜೆಡಿಎಸ್‌ನ ಸಚಿವಾಕಾಂಕ್ಷಿಗಳಾಗಿದ್ದ ಎ.ಟಿ.ರಾಮ ಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ಎಚ್‌.ವಿಶ್ವನಾಥ್‌ ಅವರು ಎರಡನೇ ಸಾಲಿನಲ್ಲಿ ಕುಳಿತಿದ್ದರೆ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಮೊದಲ ಸಾಲಿನಲ್ಲಿ ವಿರಾಜಮಾನರಾಗಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ದಿನೇಶ್‌ ಗುಂಡೂರಾವ್‌ ಜತೆಗೆ ಕುಳಿತು ಮಾತುಕತೆಯಲ್ಲಿ ನಿರತರಾಗಿದ್ದರು.

ರೇಷ್ಮೆ ವಸ್ತ್ರದಲ್ಲಿ ಡಿಕೆಶಿ ಯಾವಾಗಲೂ ಪ್ಯಾಂಟ್‌, ಶರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್‌, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ರೇಷ್ಮೆ ಪಂಚೆ, ಶರ್ಟ್‌ ಧರಿಸಿ, ಅದರ ಮೇಲೆ ರೇಷ್ಮೆ ಶಲ್ಯ ಹಾಕಿಕೊಂಡು ಕಂಗೊಳಿಸಿದರು. ಸಿಎಂ ಕಾಲಿಗೆ ನಮಿಸಿದ ಮಹೇಶ್‌ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ರಾಜ್ಯಪಾಲರಿಂದ ಹೂಗುತ್ಛ ಸ್ವೀಕರಿಸಿದ ಬಳಿಕ ಜೆಡಿಎಸ್‌ನ ಸಾ.ರಾ.ಮಹೇಶ್‌ ಅವರು ವೇದಿಕೆಯಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಾಲುಮುಟ್ಟಿ ನಮಸ್ಕರಿಸಿದರು ಸಂಪುಟ ಸೇರುವ ಆಸೆ ಇರಲಿಲ್ಲ.

ದೇವೇಗೌಡರ ಮೇಲಿನ ನಿಷ್ಠೆಗೆ ನನಗೆ ಸಚಿವ ಸ್ಥಾನ ದೊರೆತಿದೆ. ಅವರೇ ಕರೆದು ಮಂತ್ರಿ ಮಾಡಿದ್ದಾರೆ. ಗೌಡರ ಕುಟುಂಬಕ್ಕೆ ನನ್ನ ಜೀವನ ಅರ್ಪಿಸಿದರೂ ಸಾಲದು. ಈಗ ನನ್ನ ರಾಜಕೀಯ ಜೀವನ ಸಾರ್ಥಕವಾಯಿತು.
ಬಂಡೆಪ್ಪ ಕಾಶಂಪೂರ್‌

ನನ್ನ ಕಾರ್ಯಕರ್ತರ ಶ್ರಮಕ್ಕೆ ದೊರೆತ ಪ್ರತಿಫ‌ಲ ಇದಾಗಿದೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಪಡೆ ಇದ್ದು, ಮತ್ತೆ ಪಕ್ಷವನ್ನು ಬಲವಾಗಿ ಕಟ್ಟುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ದೊರೆತ ಸಚಿವ ಸ್ಥಾನವನ್ನು
ಉತ್ತಮವಾಗಿ ಬಳಸಿಕೊಳ್ಳುತ್ತೇನೆ.
 ಯು.ಟಿ.ಖಾದರ್‌

ಕುಮಾರಸ್ವಾಮಿ ಬಗ್ಗೆ ನನಗೆ ಗೊತ್ತಿರುವಷ್ಟು ಬೇರೆಯವರಿಗೆ ಗೊತ್ತಿಲ್ಲ. ನಾವು ಹಳೆಯದೆಲ್ಲವನ್ನೂ ಮರೆತಿದ್ದೇವೆ. ಐದು ವರ್ಷ ಹೊಂದಾಣಿಕೆಯಿಂದ ಸರ್ಕಾರ ನಡೆಸು ತ್ತೇವೆ. ಯಾವುದೇ ಗೊಂದಲ ಬರುವುದಿಲ್ಲ.
 ಜಮೀರ್‌ ಅಹಮದ್‌

ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಯಾರನ್ನೂ ಓವರ್‌ಟೇಕ್‌ ಮಾಡಿಲ್ಲ. ನನ್ನನ್ನು ಗುರುತಿಸಿ ಪಕ್ಷದ ನಾಯಕರು ಹುದ್ದೆ ನೀಡಿದ್ದಾರೆ. ಇಷ್ಟು ದಿನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೆ. ಇನ್ನು ಮುಂದೆ ರಾಜ್ಯದ
ಅಭಿವೃದ್ಧಿಗೆ ಶ್ರಮಿಸುತ್ತೇನೆ.
 ಶಿವಾನಂದ ಪಾಟೀಲ್‌

ಅವಕಾಶ ಕೊಟ್ಟ ಪಕ್ಷ ,ಪ್ರಮುಖರಿಗೆ ಆಭಾರಿ. ಪಕ್ಷದ ಯಾವುದೇ ಆದೇಶ ಪಾಲನೆಗೂ ನಾನು ಸಿದ್ಧ. ಸಿಕ್ಕಿರುವ ಅವಕಾಶ ಸೀಮಿತ ಅವಧಿಗೆ ಎಂದಿದ್ದಾರೆ. ಚುನಾವಣೆ ನಂತರ ಸಂಪುಟ ಪುನಾರಚನೆಯಾಗಲಿದೆ.
 ಕೃಷ್ಣ ಬೈರೇಗೌಡ

ನನ್ನ ಪಕ್ಷ ನಿಷ್ಠೆಗೆ ಈ ಅವಕಾಶ ಒದಗಿ ಬಂದಿದೆ ಎಂದು ತಿಳಿದುಕೊಂಡಿದ್ದೇನೆ. ನನಗೆ ಅವಕಾಶ ನೀಡಿದ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾವುದೇ ಖಾತೆ ನೀಡಿದರೂ ಯಶಸ್ವಿಯಾಗಿ ನಿರ್ವಹಿಸುತ್ತೇನೆ.
 ಡಾ.ಜಯಮಾಲಾ

ನನ್ನ ಹೋರಾಟದಿಂದ ನನಗೆ ಸಚಿವ ಸ್ಥಾನ ದೊರೆತಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತಹ ಕೆಲಸ ಮಾಡುತ್ತೇನೆ. ಐದು ವರ್ಷ ಸಚಿವನಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಆಮಿಷಗಳಿಗೆ ಒಳಗಾಗುವುದಿಲ್ಲ.
 ಆರ್‌. ಶಂಕರ್‌

ಹಣಕ್ಕಾಗಿ ಅಧಿಕಾರಕ್ಕಾಗಿ ಆಸೆ ಪಡುವ ವ್ಯಕ್ತಿ ನಾನಲ್ಲ. ನ್ಯಾಯವಾಗಿ ನನಗೆ ಸಿಗಬೇಕಾದ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಾಗಿದೆ. ಬಹುಶಃ ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫ‌ಲ ಇದಾಗಿದೆ.
ಬಿ.ಸಿ. ಪಾಟೀಲ್‌

ಸಮ್ಮಿಶ್ರ ಸರ್ಕಾರ ಐದು ವರ್ಷ ಉತ್ತಮ ಆಡಳಿತ ನೀಡುತ್ತದೆ. ತಂದೆಯವರಿಗೆ ಖಾತೆ ವಿಷಯದಲ್ಲಿ ಬೇಸರ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಕುಮಾರಸ್ವಾಮಿ ಮತ್ತು ದೇವೇಗೌಡರು ಎಲ್ಲವನ್ನೂ ಚರ್ಚಿಸಿ
ತೀರ್ಮಾನ ಮಾಡುತ್ತಾರೆ.
 ಪ್ರಜ್ವಲ್‌ ರೇವಣ್ಣ, ಜೆಡಿಎಸ್‌ ಪ್ರ.ಕಾರ್ಯದರ್ಶಿ

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಮದುವೆ ಆಗದೇ ದೈಹಿಕ ಸಂಪರ್ಕ ಬೆಳೆಸಿ ಮಹಿಳಾ ಟೆಕಿಗೆ ವಂಚನೆ

Fraud: ಮದುವೆ ಆಗದೇ ದೈಹಿಕ ಸಂಪರ್ಕ ಬೆಳೆಸಿ ಮಹಿಳಾ ಟೆಕಿಗೆ ವಂಚನೆ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

15

ವೃದ್ಧಾಶ್ರಮ ಸ್ವಚ್ಛತೆ ಬಂದು ಮಾಲೀಕರ ಮನೆಗೇ ಕನ್ನ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.