ತ್ಯಾಜ್ಯ ಸಂಸ್ಕರಣಾ ಘಟಕ ಪರಿಶೀಲನೆ
Team Udayavani, Dec 18, 2019, 3:05 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕನ್ನಹಳ್ಳಿ ಮತ್ತು ಸಿಗೇಹಳ್ಳಿಯಲ್ಲಿನ ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಮೇಯರ್ ಎಂ. ಗೌತಮ್‌ಕುಮಾರ್ ಅವರು ಮಂಗಳ ವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕನ್ನಹಳ್ಳಿ ಮತ್ತು ಸೀಗೆಹಳ್ಳಿ ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಹಾಗೂ ಘಟಕದಲ್ಲಿನ ಲಿಚೇಟ್ ನೀರಿನಿಂದ ಉಂಟಾಗುತ್ತಿರುವ ವಾಸನೆಯನ್ನು ಕಡಿಮೆ ಮಾಡುವ ಬಗ್ಗೆ ಕ್ರಮತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಎರಡು ಘಟಕಗಳಲ್ಲಿನ ಅನುಪಯುಕ್ತ (ಆರ್‌ಡಿಎಫ್) ತ್ಯಾಜ್ಯ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಮಾಡು ವಂತೆ ಘಟಕದ ಸಿಬ್ಬಂದಿಗೆ ಸೂಚನೆ ನೀಡಿದರು.
ಇಂದೋರ್‌ನ ತಜ್ಞರೊಂದಿಗೆ ಘಟಕಗಳಿಗೆ ಭೇಟಿ ನೀಡಿದ್ದು, ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆ ಇದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು.
-ಎಂ.ಗೌತಮ್‌ಕುಮಾರ್, ಮೇಯರ್