ಡಿಕೆಶಿ ಸ್ವಾಗತ: ನಗರದಲ್ಲಿ ಸಂಚಾರ ದಟ್ಟಣೆ


Team Udayavani, Oct 27, 2019, 3:07 AM IST

dkshi-adduri

ದೇವನಹಳ್ಳಿ: ನೆಚ್ಚಿನ ನಾಯಕನ ಕರೆದುಕೊಂಡು ಹೋಗಲು ಸೇಬಿನಿಂದ ಸಿಂಗಾರಗೊಂಡಿರೋ ಕಾರು. ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಡಿಕೆಶಿಯನ್ನ ಕಂಡ ಕಾರ್ಯಕರ್ತರಿಂದ ಸ್ವಾಗ‌ತದ ಕಹಳೆ. ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಎತ್ತಿಕೊಂಡು ಕರೆತರುವ ಅಭಿಮಾನಿಗಳು. ಇವು ವೈಭವದ ಸ್ವಾಗತಕ್ಕೆ ಸಾಕ್ಷಿಯಾದವು.

ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಮಾಡಿದರು. ಇಡಿ ಕುಣಿಕೆಯಲ್ಲಿ ಸಿಲುಕಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ದೆಹಲಿ ಹೈಕೊರ್ಟ್‌ ಬುಧವಾರ ಜಮೀನು ಮಂಜೂರು ಮಾಡಿತ್ತು. ಸುಮಾರು 50ಕ್ಕೂ ಹೆಚ್ಚು ದಿನ ಇಟಿ ವಿಚಾರಣೆಯನ್ನ ಎದುರಿಸಿ ಬಂಧನಕ್ಕೊಳಗಾಗಿ ಜಾಮೀನು ಪಡೆದ ಡಿ.ಕೆ. ಶಿವಕುಮಾರ್‌ ಇಂದು ಬೆಂಗಳೂರಿಗೆ ವಾಪಸ್ಸಾದರು.

ಇನ್ನೂ ಡಿ.ಕೆ. ಶಿವಕುಮಾರ್‌ ಆಗಮನದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಡಿಕೆಶಿ ಪರ ಘೋಷಣೆಯಲ್ಲಿ ತೊಡಗಿದ್ದರು. ಮದ್ಯಾಹ್ನ 2.40 ಕ್ಕೆ ದೆಹಲಿಯಿಂದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಕೆಐಎಎಲ್‌ಗೆ ಬಂದಿಳಿದ ಡಿ.ಕೆ.ಶಿವಕುಮಾರ್‌ ಇನ್ನೂ ವಿಮಾನ ನಿಲ್ದಾಣದ ಒಳಗೆ ಬರುತ್ತಿದ್ದಂತೆ ಬೆಳಗಾವಿಗೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಶಿವಕುಮಾರ್‌ ಬಳಿ ತೆರಳಿ ಗುಡ್‌ಲಕ್‌ ಹೇಳಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ನಂತರ ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಕಾರ್ಯಕರ್ತರ ಘೋಷಣೆಗಳಿಂದ ವಿಮಾನ ನಿಲ್ದಾಣವೇ ಡಿ.ಕೆ. ಹೆಸರಿನಲ್ಲಿ ಮೊಳಗಿತ್ತು. ಅಲ್ಲದೆ ಡಿಕೆಶಿಯನ್ನ ಕರೆದುಕೊಂಡು ಹೋಗಲು ವೊಲ್ವೊ ಕಾರನ್ನ ಸುಮಾರು 200 ಕೆ.ಜಿ. ಸೇಬಿನಿಂದ ಅಲಂಕಾರ ಮಾಡಲಾಗಿತ್ತು.  ಈ ವೇಳೆ ಡಿ.ಕೆ. ಶಿವಕುಮಾರ್‌ ಕಾರು ಬಳಿ ಬರಲು ಸಾಕಷ್ಟು ಹರಸಹಾಸವೇ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ಪೊಲೀಸರಿಗೆ ಡಿಕೆಶಿ ಅಭಿಮಾನಿಗಳನ್ನ ನಿಯಂತ್ರಿಸಲು ದೊಡ್ಡ ಸಾಹಸವನ್ನೇ ಮಾಡಬೇಕಾಯಿತು.

ಅಲ್ಲದೆ ಡಿ.ಕೆ.ಯವರ ಸ್ವಾಗತದ ವೇಳೆ ಹಲವಾರು ಜನ ತಮ್ಮ ಮೊಬೈಲ್‌ಗ‌ಳನ್ನು, ಚಪ್ಪಲಿಗಳನ್ನು ಕಳೆದುಕೊಂಡರು. ಡಿಕೆಶಿಗಾಗಿ ಮನೆಯಲ್ಲಿ ಪ್ರಾರ್ಥನೆಯನ್ನ ಸಲ್ಲಿಸುತ್ತಿದ್ದ ಅಭಿಮಾನಿಯೊಬ್ಬ ಡಿ.ಕೆ. ಶಿವಕುಮಾರ್‌ಗಾಗಿ ತಿರುಪತಿಯಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಿ ಲಾಡುಗಳನ್ನು ತಂದಿದ್ದು ವಿಶೇಷವಾಗಿತ್ತು. ಅಲ್ಲದೆ ಡಿ.ಕೆ.ಯವರನ್ನ ರಾಜಕೀಯ ದುರುದ್ದೇಶದಿಂದ ಬಂಧನ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು.

ಶಾಸಕರಾದ ಕೃಷ್ಣ ಬೈರೇಗೌಡ, ವೆಂಕಟ ರಮಣಯ್ಯ ನಂಜೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್‌, ಮಾಜಿ ಸಂಸದ ಶಿವ ರಾಮೇಗೌಡ, ವಿಧಾನ ಪರಿಷತ್‌ ಸದಸ್ಯರಾದ ಎಸ್‌ ರವಿ, ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರಿದ್ದರು.

ಪ್ರೀತಿಯನ್ನು ಅಳಿಯಲು ಸಾಧ್ಯವಿಲ್ಲ. ನಾನು ಯಾರಿಗೂ ದ್ರೋಹ ಮಾಡಿಲ್ಲ. ನನ್ನ ಜತೆ ಇಡೀ ರಾಜ್ಯದ ಜನರಿದ್ದಾರೆ. ಕಾನೂನಿಗೆ ಗೌರವ ನೀಡಿದ್ದೇನೆ. ಇಷ್ಟು ಜನರು ಬಂದಿರುವುದರಿಂದ ಅಭಿಮಾನಕ್ಕೆ ಚಿರಋಣಿ ಆಗಿರುತ್ತಾನೆ. ಮುಣದಿನ ದಿನಗಳಲ್ಲಿ ರಾಜ್ಯದ ಜನತೆಯ ಮುಂದೆ ಬಿಚ್ಚಿ ಇಡುತ್ತೇನೆ.
-ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ

ಟಾಪ್ ನ್ಯೂಸ್

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ-ದೇವೇಗೌಡರ ಭೇಟಿ

corona-positive

ತುಮಕೂರಿನಲ್ಲಿ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಸಚಿವ ಅಶೋಕ್

ಕೋವಿಡ್ ಹೆಚ್ಚಾದರೆ ಹಿಂದೆ ಇದ್ದ ನಿಯಮಗಳೇ ಜಾರಿ: ಸಚಿವ ಅಶೋಕ್

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾ

ಭಾರತದಲ್ಲಿ ಈವರೆಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ; ಕೇಂದ್ರ ಸಚಿವ ಮಾಂಡವೀಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

highcourt of karnataka

ಜೂಜಾಟ ಆರೋಪ: ಪ್ರಕರಣ ರದ್ದು

finance minister

5 ಲಕ್ಷದವರೆಗಿನ ಠೇವಣಿ ವಿಮೆ ಮರುಪಾವತಿ

education meet

ಅಸ್ಸಾಂ ಸಿಎಂ ಭೇಟಿಯಾದ ಅಶ್ವತ್ಥ ನಾರಾಯಣ

ಕಡಲೆಕಾಯಿ ಪರಿಷೆ

ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ

fake id

ಇನ್ಫೋಸಿಸ್‌ ಕಂಪನಿ ನಕಲಿ ಐಡಿ ಬಳಸಿ ವಂಚನೆ

MUST WATCH

udayavani youtube

ಈ ನೀರು ಕುಡಿದ್ರೆ ಕೊರೋನಾ, ಓಮಿಕ್ರಾನ್ ಅಲ್ಲ ಇನ್ನೂ ಅಪಾಯಕಾರಿ ರೋಗ ಬರಬಹುದು

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಹೊಸ ಸೇರ್ಪಡೆ

ನಮ್ಮ ಮೆಟ್ರೋ

ಮೆಟ್ರೋ ಸೇವೆಯಲ್ಲಿ ವ್ಯತ್ಯಯ

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

say no to lockdown

ಒಮಿಕ್ರಾನ್: “ಬಲಿಷ್ಠರಾಗಿದ್ದೇವೆ, ಲಾಕ್ ಡೌನ್ ಬೇಡ” ಎನ್ನುತ್ತಿರುವ ನೆಟ್ಟಿಗರು

20rajakaluve

ರಾಜಕಾಲುವೆಗೆ ಅತಿಕ್ರಮ ಕಾಂಪೌಂಡ್ ಗೋಡೆ ತೆರವುಗೊಳಿಸಲು ಮನವಿ

19upperhouse

ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ 16 ಸ್ಥಾನ ನಿಶ್ಚಿತ: ಕಾರಜೋಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.