ಸ್ವೀಟ್‌ 2020ಗೆ ಅದ್ಧೂರಿ ಸ್ವಾಗತ


Team Udayavani, Jan 1, 2020, 3:10 AM IST

street

ಹೊಸ ವರ್ಷಾಚರಣೆ ಅಂಗವಾಗಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ರಾತ್ರಿ 12 ಗಂಟೆಯಾಗುತ್ತಿದ್ದಂತೆ ಯುವಕರು ಹ್ಯಾಪಿ ನ್ಯೂ ಇಯರ್‌ ಎಂದು ಘೋಷಿಸುತ್ತಾ ಹೊಸವರ್ಷವನ್ನು ಬರಮಾಡಿಕೊಂಡರು. ನೆರೆದಿದ್ದ ಜನರು ಹೊಸವರ್ಷದ ಅಭಿನಂದನೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಹೋಟೆಲ್‌ ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪೊಲೀಸರು ಯಾವುದೇ ಅವಘಡ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಿದ್ದರು.

ಬೆಂಗಳೂರು: ಒಂದೆಡೆ ಕೈಯಲ್ಲಿ ಹಿಡಿದಿದ್ದ ಬಲೂನುಗಳನ್ನು ಬಾನಿನತ್ತ ಹಾರಿಬಿಟ್ಟ ಯುವಜನತೆ, ಮತ್ತೂಂದೆಡೆ ಬಾನಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುತ್ತಿರುವ ಪಟಾಕಿಗಳ ಸದ್ದು, ಹಷೋದ್ಗಾರ, ಕುಣಿತ, ಮೋಜು-ಮಸ್ತಿಗಳೊಂದಿಗೆ 2019ಕ್ಕೆ ಬೈ ಬೈ ಹೇಳಿದ ಉದ್ಯಾನನಗರಿ ಜನತೆ 2020ನೇ ವರ್ಷಕ್ಕೆ ಅದ್ಧೂರಿ ಸ್ವಾಗತ ಕೋರಿದರು.

ನಗರದ ಯುವ ಜನತೆಯ ಹೊಸ ವರ್ಷಾಚರಣೆಯ ಕೇಂದ್ರ ಸ್ಥಳವಾದ ಎಂ.ಜಿ ರಸ್ತೆ ಮತ್ತು ಬ್ರಿಗೇಡ್‌ ರಸ್ತೆ ಜಂಕ್ಷನ್‌ನಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಮಧ್ಯರಾತ್ರಿ 11.59 ಹಿಮ್ಮುಖ ಕೌಟ್‌ಡೌನ್‌ ಆರಂಭವಾಯಿತು. ಗಡಿಯಾರದ ಮುಳ್ಳು 12 ಗಂಟೆ ಬಾರಿಸುತ್ತಿದ್ದಂತೆ ಸಂಭ್ರಮದ ಕಟ್ಟೆ ಹೊಡೆದು ನೆರೆದಿದ್ದ ಜನರೆಲ್ಲಾ ಖುಷಿಯ ಅಲೆಯಲ್ಲಿ ಮಿಂದೆದ್ದರು. ಇದೇ ವೇಳೆ ಆಕಾಶಕ್ಕೆ ಸಿಡಿದ ಪಟಾಕಿಗಳು ಚಿತ್ತಾರ ಮೂಡಿಸಿದವು.

ಹಾಡು, ನೃತೃ, ಶಿಳ್ಳೆ ಚಪ್ಪಾಳೆಯ ಮೂಲಕ “ಹ್ಯಾಪಿ ನ್ಯೂ ಇಯರ್‌’ “ಹೊಸ ವರ್ಷದ ಶುಭಾಶಯಗಳು’ ಎಂದು ಹರ್ಷೋದ್ಗಾರದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು. ಹೊಸ ವರ್ಷದ ಸ್ವಾಗತ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಹಾಗೂ ಕಮರ್ಷಿಯಲ್‌ ಸ್ಟ್ರೀಟ್‌ಗಳಲ್ಲಿ ಎರಡು ದಿನ ಮುಂಚೆಯೇ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ವಾಣಿಜ್ಯ ಮಳಿಗಗಳು, ಕಟ್ಟಡಗಳು ಸಿಂಗಾರಗೊಂಡಿದ್ದವು.

ಶುಭಾಶಯ ವಿನಿಮಯ: ವಿವಿಧ ವೇಷಭೂಷಣಗಳು ಹಾಗೂ ರಂಗುರಂಗಿನ ಉಡುಗೆ ತೊಡುಗೆಗಳನ್ನು ಧರಿಸಿಕೊಂಡು ಬಂದಿದ್ದ ಯುವಕರು ಎಲ್ಲರನ್ನು ಆಕರ್ಷಿಸಿದರು. ನಾನಾ ನಮೂನೆಯ ಸಂಗೀತ ವಾದ್ಯಗಳು, ಬಲೂನು, ಹೊಸ ವರ್ಷ ಶುಭಾಶಯ ಕೊರುವ ಫ‌ಲಕಗಳನ್ನು ಹಿಡಿದು ತಂಡೋಪ ತಂಡವಾಗಿ ಬಂದಿದ್ದರು. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಯುವ ಜನತೆ ವರ್ಷಪೂರ್ತಿ ಇದೇ ಹರ್ಷ ಇರಲೆಂದು ಪರಸ್ಪರ ಆತ್ಮೀಯ ಅಪ್ಪುಗೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

“ಹ್ಯಾಪಿ ನ್ಯೂ ಇಯರ್‌…’ ಶುಭಾಶಯ ವಿನಿಮಯ ಎಲ್ಲೆಡೆಯಿಂದ ಕೇಳಿಬರುತ್ತಿತ್ತು. ಈ ಹಿಂದೆ ಹೊಸ ವರ್ಷಾಚರಣೆಯ ವೇಳೆ ನೂಕು ನುಗ್ಗಲು ಉಂಟಾಗಿ, ಲೈಂಗಿಕ ದೌರ್ಜನ್ಯದಂತಹ ಘಟನೆಗಳು ವರದಿಯಾಗಿದ್ದವು. ಹೀಗಾಗಿ ಈ ವರ್ಷವೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಳೆದ ವರ್ಷದಂತೆ ಈ ವರ್ಷವೂ ಬ್ರಿಗೇಡ್‌ ರಸ್ತೆಯಲ್ಲಿ 12 ಗಂಟೆಗೆ ವಿದ್ಯುತ್‌ ದೀಪಗಳನ್ನು ಸ್ಥಗಿತಗೊಳಿಸಲಿಲ್ಲ. ಹೆಚ್ಚಿನ ಜನದಟ್ಟಣೆ ಹಿನ್ನೆಲೆ ಒಂದಿಷ್ಟು ನೂಕುನುಗ್ಗುಲು ಉಂಟಾಯಿತು.

ಸಂಜೆಯಿಂದಲೇ ಸಂಭ್ರಮ: ನಗರದಾದ್ಯಂತ ಮಂಗಳವಾರ ಸಂಜೆಯಿಂದಲೇ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಕಮರ್ಷಿಯಲ್‌ ಸ್ಟ್ರೀಟ್‌, ಮಲ್ಲೇಶ್ವರ, ಜಯನಗರ, ಇಂದಿರಾನ ಗರ, ಕೋರಮಂಗಲ, ಮಾರತ್ತಹಳ್ಳಿ, ಹಲಸೂರು, ಕಾಡು ಗೋಡಿ, ವೈಟ್‌ಫೀಲ್ಡ್‌ ಹಾಗೂ ಹೊಸೂರು ರಸ್ತೆ, ಎಲೆಕ್ಟ್ರಾನಿಕ್‌ ಸಿಟಿಯ ಪ್ರಮುಖ ಕಟ್ಟಡ, ಹೋಟೆಲ್‌, ರೆಸ್ಟೋರೆಂಟ್‌ ಪಬ್‌ಗಳನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿತ್ತು.

ಸಂಜೆ 7 ಗಂಟೆಯಿಂದಲೇ ನಗರದ ಬಹುತೇಕ ಐಶಾರಾಮಿ ಹೋಟೆಲ್‌, ಪಬ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮೋಜು ಮಸ್ತಿ ಆರಂಭವಾಗಿತ್ತು. ಕೆಲವು ಮಳಿಗೆಗಳ ಮುಂದೆ ಅಳವಡಿಸಿದ್ದ ಧ್ವನಿವರ್ಧಕಗಳಿಂದ ವಿದೇಶಿ ಮಿಶ್ರಿತ ಸಂಗೀತ ಕೇಳಿಬರುತ್ತಿತ್ತು.

ಮನೆ ಕಚೇರಿಗಳಲ್ಲಿಯೇ ಕಾರ್ಯಕ್ರಮ: ಅನೇಕರು ಮನೆಗಳಲ್ಲಿ, ಕಚೇರಿಗಳಲ್ಲಿಯೇ ಹೊಸ ವರ್ಷದ ವಿಶೇಷ ಕಾರ್ಯಕ್ರಮ ಹಾಗೂ ಔತಣಕೂಟ ಆಯೋಜಿಸಿದ್ದರು. ಸಂಜೆಯಿಂದಲೇ ಪಾನೀಯ ಜೊತೆಗೆ ಹಾಡು, ನೃತ್ಯ, ಆಟಗಳ ಮೂಲಕ ಸಂತಸ ಪಟ್ಟರು. ಬಳಿಕ 12 ಗಂಟೆಗೆ ಕೇಕ್‌ ಕತ್ತರಿಸುವ ಮೂಲಕ 2019ಕ್ಕೆ ಸ್ವಾಗತ ಕೋರಿದರು. ಸ್ನೇಹಿತರು, ಸಂಬಂಧಿಕರು, ಕುಟುಂಬದವರು ಪರಸ್ಪರ ಶುಭಾಶಯ ಕೋರಿ ಕುಣಿದು ಕುಪ್ಪಳಿದರು. ಕೆಲವರು ರಾತ್ರಿ ಚರ್ಚ್‌ಗಳ ಆವರಣಕ್ಕೆ ತೆರಳಿ ಮೂಂಬತ್ತಿ ಹಚ್ಚುವ ಮೂಲಕ ಹೊಸ ವರ್ಷ ಸ್ವಾಗತಿಸಿದರು.

ಮಹಿಳೆಯರ ರಕ್ಷಣೆಗೆ ಆದ್ಯತೆ: ಸಂಭ್ರಮಾಚರಣೆ ಬಳಿಕ ಮನೆಗೆ ತೆರಳುತ್ತಿದ್ದ ಮಹಿಳೆಯರು, ಯುವತಿಯರ ಬಳಿ ಅನುಚಿತವಾಗಿ ವರ್ತನೆ ತೋರಿದ ಘಟನೆಯು ನಡೆಯಿತು. ಅದರಿಂದ ಗಾಬರಿಗೊಂಡ ಸಂತ್ರಸ್ತೆಯರು ಸಮೀಪದಲ್ಲೇ ಇದ್ದ ಸೇಫ್ಟಿ ಐಲ್ಯಾಂಡ್‌ ಸಿಬ್ಬಂದಿಗೆ ತಮ್ಮ ಅಹವಾಲು ತಿಳಿಸಿದರು. ಅವರನ್ನು ಸಂತೈಸಿದ ಸಿಬ್ಬಂದಿ ಅವರ ಮನೆ ವಿಳಾಸ ಹಾಗೂ ಪೋಷಕರ ಮಾಹಿತಿ ಪಡೆದು ಕಳುಹಿಸಿಕೊಟ್ಟರು. ಮಹಿಳೆಯರ ರಕ್ಷಣೆಗಾಗಿ ಪ್ರತ್ಯೇಕವಾಗಿ ತೆರೆದಿರುವ ಸೇಫ್ಟಿ ಐಲ್ಯಾಂಡ್‌ನ‌ಲ್ಲಿ ಪಾನಮತ್ತ ಯುವತಿಯರನ್ನು ಕರೆದೊಯ್ದು ಕೆಲ ಹೊತ್ತಿನ ಬಳಿಕ ಅವರ ವಿಳಾಸ ಅಥವಾ ಸಂಬಂಧಿಕರನ್ನು ಸಂಪರ್ಕಿಸಿ ಮನೆಗೆ ಕಳುಹಿಸುವ ಕೆಲಸವನ್ನು ಪೊಲೀಸ್‌ ಸಿಬ್ಬಂದಿ ಮಾಡಿದರು.

ಬ್ರಿಗ್ರೇಡ್‌ ರೋಡ್‌ ಎಲ್ಲಿ?: ಇದೇ ಮೊದಲ ಬಾರಿಗೆ ಬ್ರಿಗೇಡ್‌ ರಸ್ತೆಗೆ ಬಂದಿದ್ದ ಸಾರ್ವಜನಿಕರೊಬ್ಬರು, ಸಾವಿರಾರು ಮಂದಿಯನ್ನು ಕಂಡು ಅಚ್ಚರಿಗೊಂಡಿದ್ದರು. ಅಲ್ಲದೆ, ವಾಟ್‌ ಟವರ್‌ ಮೇಲೆ ನಿಂತಿದ್ದ ಪೊಲೀಸ್‌ ಸಿಬ್ಬಂದಿಗೆ ಬ್ರಿಗೇಡ್‌ ರಸ್ತೆ ಎಲ್ಲಿ ಎಂದು ಪ್ರಶ್ನಿಸಿದರು? ಆಗ ಧ್ವನಿ ವರ್ಧಕದ ಮೂಲಕ ಸೂಚನೆ ನೀಡುತ್ತಿದ್ದ ಪೊಲೀಸ್‌ ಸಿಬ್ಬಂದಿ” ಏನಪ್ಪ ಇಲ್ಲಿ ನಿಂತು ಬ್ರಿಗೇಡ್‌ ರಸ್ತೆ ಎಲ್ಲಿ ಅಂತಿಯಲ್ಲ. ಈ ವರ್ಷನಾದರೂ ಒಳ್ಳೆಯದಾಗಲಿ. ಇದೇ ಬ್ರಿಗೇಡ್‌ ರಸ್ತೆ ಎಂದರು. ಆಗ ಸ್ಥಳದಲ್ಲಿದ್ದ ಸಾವಿರಾರು ಮಂದಿ ಸಾರ್ವಜನಿಕರು ಒಂದು ಕ್ಷಣ ನಗೆಗಡಲಲ್ಲಿ ತೇಲಿದರು.

ನಿರಾಸೆ ವ್ಯಕ್ತಪಡಿಸಿದ ಜನರು: ಪ್ರತಿ ವರ್ಷ ಲೈಟ್‌ ಆನ್‌ ಮಾಡುವುದು, ಸಂಗೀತ ಹಾಕುವ ಮೂಲಕ ಹೊಸವರ್ಷ ಸ್ವಾಗತಿಸುತ್ತಿದ್ದೇವು. ಆದರೆ, ಈ ಬಾರಿ ಯಾವುದಕ್ಕೂ ಪೊಲೀಸರು ಅವಕಾಶ ನೀಡಲಿಲ್ಲ. ಅಲ್ಲದೆ, ಕಾವೇರಿ ಎಂಪೋರಿಯಂ ಬಳಿ ಎಲ್ಲರೂ ಒಂದೆಡೆ ಸೇರಿ ಜೋರಾಗಿ ಕೂಗುವ ಮೂಲಕ ಸಂಭ್ರಮಿಸುತ್ತಿದ್ದವು. ಆದರೆ, ಎಲ್ಲಿಯೂ ನಿಲ್ಲದೆ ಸರದಿ ಸಾಲಿನಲ್ಲಿ ಕಳುಹಿಸುತ್ತಿದ್ದರಿಂದ ಸಂಭ್ರಮಾಚರಣೆಗೆ ಬ್ರೇಕ್‌ ಹಾಕಿದ್ದಾರೆ ಎಂದು ಕೆಲ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

Nalin-kumar

ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ: ನಳಿನ್ ಕಟೀಲ್ ನೇತೃತ್ವದಲ್ಲಿ ಸಭೆ

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

jcb

ರಸ್ತೆ ಬದಿಯಲ್ಲಿ ನಿಲ್ಲಿಸಿದ ಜೆಸಿಬಿಯನ್ನೇ ಕದ್ದೊಯ್ದ ಖದೀಮರು : ಪೊಲೀಸರಿಂದ ಶೋಧಕಾರ್ಯ

ರೌಡಿಯನ್ನು ಬಿಡಿಸಲು ಬೇಕಾದ ಹಣಕ್ಕಾಗಿ ಗಾಂಜಾ ಮಾರಾಟ ಮಾಡಲು ಹೋದ ಸಹಚರರೂ ಕೂಡ ಅಂದರ್

ತನ್ನ ಸಹಚರನನ್ನು ಜೈಲಿನಿಂದ ಬಿಡಿಸಲು ಹೋಗಿ ತಾವೇ ಪೊಲೀಸರ ಖೆಡ್ಡಾಕ್ಕೆ ಬಿದ್ದರು

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.