Udayavni Special

ಯುವತಿ ವಂಚಿಸಿದವನ ಬಂಧನ


Team Udayavani, Aug 5, 2018, 3:20 PM IST

yuvatige.jpg

ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಿಯಕರನ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಅಸಮಾಧಾನಗೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪ್ರಿಯಕರ ರವಿಕಿರಣ್‌ನನ್ನು ಕೊನೆಗೂ ಚಂದ್ರಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರವಿಕಿರಣ್‌ ವಿರುದ್ಧ ಸಂತ್ರಸ್ತೆ ಮಂಜುಳಾ ವಂಚನೆ, ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ಮತ್ತೂಂದೆಡೆ ಪೊಲೀಸರು ಕೂಡ ರಾಜಕೀಯ ಪ್ರಭಾವಕ್ಕೊಳಗಾಗಿ ಪ್ರಕರಣ ದಾಖಲಿಸಿ ಒಂದು ವಾರವಾದರೂ ಆರೋಪಿಯನ್ನು ಬಂಧಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಇದರಿಂದ ನೊಂದಿದ್ದ ಮಂಜುಳಾ ಶುಕ್ರವಾರ ಮಧ್ಯಾಹ್ನ ಪೊಲೀಸರ ಕ್ರಮದ ಬಗ್ಗೆ ಅಸಮಾಧಾನಗೊಂಡ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಮಂಜುಳಾ ಪೋಷಕರು ಸಹ ಆರೋಪಿಯ ಬಂಧನದ ಬಳಿಕವಷ್ಟೇ ಮೃತ ದೇಹವನ್ನು ಕೊಂಡೊಯ್ಯುವುದಾಗಿ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಆರೋಪಿಗಾಗಿ ತೀವ್ರ ಶೋಧ ನಡೆಸಿದ ಪೊಲೀಸರು ಕುಣಿಗಲ್‌ನಲ್ಲಿ ತಲೆಮರೆಸಿಕೊಂಡಿದ್ದ ರವಿಕಿರಣ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಬಂಧನದ ಖಚಿತ ಮಾಹಿತಿ ಪಡೆದ ನಂತರವೇ ಮೃತದೇಹ ವಶಕ್ಕೆ ಪಡೆದ ಮಂಜುಳಾ ಪೋಷಕರು, ಅಂತ್ಯಕ್ರಿಯೆಗೆ ಮಾಗಡಿಗೆ ಕೊಂಡೊಯ್ದಿದ್ದಾರೆ. ಮಾಗಡಿ ಮೂಲದ ಮಂಜುಳಾ ರಾಜರಾಜೇಶ್ವರನಗರದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಭೈರವೇಶ್ವರನಗರದ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದರು.

ಸಂಬಂಧಿಯನ್ನು ವಿವಾಹವಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ಪಡೆದ ಮಂಜುಳಾಗೆ ಖಾಸಗಿ ಕಂಪನಿ ಉದ್ಯೋಗಿ ರವಿಕಿರಣ್‌ ಪರಿಚಯವಾಗಿದ್ದು, ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವುದಾಗಿ ನಂಬಿಸಿದ ರವಿಕಿರಣ್‌, ಕಡೆಗೆ ಮುದುವೆಗೆ ಮನೆಯವರು ಒಪ್ಪುತ್ತಿಲ್ಲ ಎಂದು ದೂರ ಮಾಡಿದ್ದ. ಈ ಸಂಬಂಧ ಚಂದ್ರಾಲೇಔಟ್‌ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದರು.

ಪ್ರತಿಭಟನೆ: ಮಂಜುಳಾ ಸಾವಿಗೆ ಕಾರಣವಾದ ರವಿಕಿರಣ್‌ನನ್ನು ಶವಾಗಾರದ ಬಳಿ ಕರೆಸಬೇಕು ಎಂದು ಒತ್ತಾಯಿಸಿ ಶನಿವಾರ ಬೆಳಗ್ಗೆ ಮೃತಳ ಪೋಷಕರು ಮರಣೋತ್ತರ ಪರೀಕ್ಷೆ ಬಳಿಕವೂ ಮೃತದೇಹವನ್ನು ಪಡೆಯಲು ನಿರಾಕರಿಸಿದರು. ಬಳಿಕ ಪ್ರತಿಭಟನೆ ವಿಚಾರ ತಿಳಿದು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ ರಾಜ್ಯ ಮಹಿಳಾ ಆಯೋಗದ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿರುವುದನ್ನು ಖಚಿತಪಡಿಸಿದರು. ಜತೆಗೆ ಮೃತಳ ಹಿರಿಯ ಸಹೋದರ ಹಾಗೂ ಸಂಬಂಧಿಯನ್ನು ಚಂದ್ರಲೇಔಟ್‌ ಠಾಣೆಗೆ ಕರೆದೊಯ್ದು ರವಿಕಿರಣನನ್ನು ತೋರಿಸಲಾಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

arjkala

ಕಾರ್ಕಳ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

smith

ಪಂಜಾಬ್–ರಾಜಸ್ಥಾನ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಮಿತ್ ಪಡೆ

ಇಲ್ಲಿ ರಾತ್ರಿ ಚಿರತೆ ಸಂಚಾರ ! ಹಟ್ಟಿಯಲ್ಲಿದ್ದ ಕರು ಸಾವು, ಆತಂಕದಲ್ಲಿ ಗ್ರಾಮಸ್ಥರು

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

rock-1

ಮಾನವ ನಿರ್ಮಿತ ರಾಕ್ ಗಾರ್ಡನ್: ಇದರ ಸೌಂದರ್ಯಕ್ಕೆ ಮನಸೋಲದವರಿಲ್ಲ !

riga-1

ಮನಮೋಹಕ ಪ್ರವಾಸಿ ತಾಣ: ಚಿಕ್ಕದಾದರೂ ಚೊಕ್ಕದಾದ ದೇಶ ರೀಗಾ ಲಾಟ್ಟಿಯಾ !

ಸಾಲಭಾದೆ ತಾಳಲಾರದೆ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ನೊಂದ ರೈತ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-4

ಮಾಸ್ಕ್ ಹಾಕದಿದ್ದರೆ ಸಾವಿರ ರೂ.ದಂಡ?

ಸಚಿವ ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮಾಜ ನಾಯಕರ ಸಭೆ

ಸಚಿವ ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮಾಜ ನಾಯಕರ ಸಭೆ

bng-tdy-3

ವಿಕ್ಟೋರಿಯಾ ಆಸ್ಪತ್ರೆಗಳ ಸೇವೆ ಪುನಾರಂಭ

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಗ್ರಿಲ್‌

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಸಿಸಿಬಿ ಗ್ರಿಲ್‌

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

MNG-TDY-1

ಪಾಲಿಕೆ ಪಟ್ಟಿ ಅಂತಿಮ; ಮುಡಾದಲ್ಲಿ ಆಕಾಂಕ್ಷಿಗಳ ಪೈಪೋಟಿ

“ಭಾರತವು ವಿಶ್ವದ ಜ್ಞಾನದ ಕೇಂದ್ರವಾಗಬೇಕು’

“ಭಾರತವು ವಿಶ್ವದ ಜ್ಞಾನದ ಕೇಂದ್ರವಾಗಬೇಕು’

kund-tdy-1

ಚರಂಡಿ ಅವ್ಯವಸ್ಥೆ, ಸಂಚಾರ ಸಂಕಷ್ಟ; ದುರಸ್ತಿಗೆ ಆಗ್ರಹ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಎಲ್ಲಾ ಮೂರು ರೈತ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

arjkala

ಕಾರ್ಕಳ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.