ಮಹಿಳೆ ಕೊಲೆ ಪ್ರಕರಣ: ಪ್ರಿಯಕರನೇ ಕೊಲೆಗಾರ

Team Udayavani, Jun 13, 2019, 3:00 AM IST

ಬೆಂಗಳೂರು: ಕೆಲದಿನಗಳ ಹಿಂದೆ ಎಚ್‌ಬಿಆರ್‌ ಲೇಔಟ್‌ನ ಪಾಳುಬಿದ್ದ ಕಟ್ಟಡದ ಶೌಚಗೃಹದಲ್ಲಿ ಅಪರಿಚಿತ ಮಹಿಳೆಯ ಶವದ ಮೂಲ ಪತ್ತೆಹಚ್ಚಿರುವ ಬಾಣಸವಾಡಿ ಠಾಣೆ ಪೊಲೀಸರು, ಮಹಿಳೆಯನ್ನು ಕೊಲೆಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಥಣಿಸಂದ್ರದ ನಿವಾಸಿ ನಳಿನಿ ಮೇರಿ (46) ಕೊಲೆಯಾದ ಮಹಿಳೆ. ಆಕೆಯ ಪ್ರಿಯಕರ ರಮೇಶ್‌ ಮೇ 31ರಂದು ನಳಿನಿಯನ್ನು ಶೌಚಗೃಹದಲ್ಲಿ ಕೊಲೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 31ರಂದು ಬೆಳಗ್ಗೆ 9 ಗಂಟೆಗೆ ಕಾಚರಕನಹಳ್ಳಿಯಲ್ಲಿ ಕೆಲಸ ಹುಡುಕಿಕೊಂಡು ಬರುವುದಾಗಿ ಹೇಳಿ ತೆರಳಿದ್ದ ನಳಿನಿ ಕೆಲ ದಿನ ಕಳೆದರೂ ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ತಾಯಿ ನಾಪತ್ತೆ ಬಗ್ಗೆ ಅವರ ಪುತ್ರ ಹೆಣ್ಣೂರು ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.

ಜೂ.11ರ ಮಧ್ಯಾಹ್ನ ಎಚ್‌ಬಿಆರ್‌ ಲೇಔಟ್‌ನ ಪಾಳುಬಿದ್ದ ಶೌಚಗೃಹದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆಯಾಗಿತ್ತು. ಈ ಕುರಿತು ತನಿಖೆ ಚುರುಕುಗೊಳಿಸಿದ ಬಾಣಸವಾಡಿ ಠಾಣೆ ಪೊಲೀಸರು ನಾಪತ್ತೆಯಾಗಿದ್ದ ನಳಿನಿ ಎಂಬುದನ್ನು ಪತ್ತೆಹಚ್ಚಿದ್ದರು. ಜತೆಗೆ, ಆಕೆಯ ಜತೆ ರಮೇಶ್‌ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದರು.

ಅನುಮಾನದ ಮೇರೆಗೆ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ನಳಿನಿ ಜತೆ ಉತ್ತಮ ಒಡನಾಟ ಹೊಂದಿದ್ದೆ. ಆದರೆ, ಆಕೆ ಬೇರೆಯವರ ಜತೆ ಒಡನಾಟ ಹೊಂದಿದ್ದಳು. ಈ ನನ್ನ ಗಮನಕ್ಕೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಆಕೆಯನ್ನು ಎಚ್‌ಬಿಆರ್‌ ಲೇಔಟ್‌ನ ಪಾಳುಬಿದ್ದ ಕಟ್ಟಡದ ಶೌಚಗೃಹಕ್ಕೆ ಕರೆಸಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: "ನನ್ನ ಸಾವಿಗೆ ಪತಿ ಹಾಗೂ ಆತನ ದೊಡ್ಡಮ್ಮ ಕಾರಣ' ಕಾರಣ ಎಂದು ಸಹೋದರನ ಮೊಬೈಲ್‌ಗೆ ಸಂದೇಶ ಕಳುಹಿಸಿ ಹಿನ್ನೆಲೆ ಗಾಯಕಿ ಸುಶ್ಮಿತಾ (26) ಭಾನುವಾರ ತಡರಾತ್ರಿ...

  • ಬೆಂಗಳೂರು: ವಿಶ್ವದಾದ್ಯಂತ ಚೀನಾದ ಕೊರೊನಾ ವೈರಸ್‌ ಸದ್ದು ಮಾಡುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಅಷ್ಟೇ ಅಪಾಯಕಾರಿ ರೇಬಿಸ್‌ ಬಗ್ಗೆ...

  • ಬೆಂಗಳೂರು: ಯಕ್ಷಗಾನ ಹಾಗೂ ಮೂಡಲಪಾಯ ಕಲೆಯನ್ನು ಉಳಿಸಿ-ಬೆಳೆಸಿದವರು ಹಳ್ಳಿಗಾಡು ಪ್ರದೇಶಗಳಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅಂತಹವರ ಸೇವೆಯನ್ನು ನೆನೆಯುವ ಕಾರ್ಯಕ್ಕೆ...

  • ಬೆಂಗಳೂರು: ಚಲಿಸುತ್ತಿದ್ದ ಬಸ್‌ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನನ್ನು ಸಂತ್ರಸ್ತೆಯ ಸಂಬಂಧಿಕರೇ...

  • ಬೆಂಗಳೂರು: ಆನಂದ ರಾವ್‌ ವೃತ್ತದಲ್ಲಿರುವ ವಿದ್ಯುತ್‌ ವಿತರಣಾ ಕೇಂದ್ರದ ಆವರಣದಲ್ಲೇ ಆಕಸ್ಮಿಕ ಬೆಂಕಿಯಿಂದ 20 ಎಂವಿಎ ಸಾಮರ್ಥ್ಯದ ಎರಡು ಟ್ರಾನ್ಸ್‌ಫಾರ್ಮರ್‌ಗಳು...

ಹೊಸ ಸೇರ್ಪಡೆ