Udayavni Special

ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ


Team Udayavani, Jul 31, 2018, 6:00 AM IST

180730kpn9.jpg

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹಲವು ಸಮಸ್ಯೆಗಳು ಕಾಣಿಸಿರಬಹುದು. ಅದೇ ಕಾರಣಕ್ಕೆ ಕೆಲವರಲ್ಲಿ ಈ ಸರ್ಕಾರ ಎಷ್ಟು ದಿನ ಇರುತ್ತದೋ? ಇದ್ದಷ್ಟು ದಿನ ಆಟವಾಡಿಕೊಂಡು ಹೋಗೋಣ ಎಂಬ ಭಾವನೆ ಇರುವುದು ಗೊತ್ತಾಗಿದೆ. ಅದೆಲ್ಲವನ್ನೂ ಬಿಟ್ಟು ಸರ್ಕಾರ ಏನು ನಿರೀಕ್ಷೆ ಇಟ್ಟುಕೊಂಡಿದೆಯೋ ಅದನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಿ” ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

“”ಸಮ್ಮಿಶ್ರ ಸರ್ಕಾರದಲ್ಲಿರುವ ಸಮಸ್ಯೆಗಳು ಬಗೆಹರಿಸಲಾಗದೇ ಇರುವಂಥದ್ದಲ್ಲ. ಹೀಗಾಗಿ ಈ ಸಮಸ್ಯೆಗಳಿಗಿಂತ ಜನರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಇರಬೇಕು. ಕೆಲವು ಜನರಲ್ಲಿರುವಂತೆ ಕೆಲವು ಅಧಿಕಾರಿಗಳಲ್ಲೂ ಈ ಸರ್ಕಾರ ಎಷ್ಟು ದಿನ ಇರುತ್ತದೋ ಎಂಬ ಅನುಮಾನ ಇದೆ. ಆದರೆ, ಈ ಬಗ್ಗೆ ಚಿಂತೆ ಬೇಡ. ಸರ್ಕಾರ ಐದು ವರ್ಷ ಭದ್ರವಾಗಿರುತ್ತದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ. ನಿಮ್ಮ ರಕ್ಷಣೆಗೆ ನಾವಿದ್ದೇವೆ” ಎಂದು ಅಧಿಕಾರಿಗಳಿಗೆ ಭರವಸೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯ ಆರಂಭದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದ ಆದ್ಯತೆ, ನಿರೀಕ್ಷೆಗಳನ್ನು ಹೇಳಿದರಲ್ಲದೆ ಅವುಗಳನ್ನು ಪೂರೈಸಲು ಅಧಿಕಾರಿಗಳು ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನೂ ವಿವರಿಸಿದರು.

“”ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದರೆ ಅದಕ್ಕೆ ಅಧಿಕಾರಿಗಳೇ ಕಾರಣ. ಅದೇ ರೀತಿ ಕೆಟ್ಟ ಹೆಸರು ಬಂದರೂ ಅದಕ್ಕೆ ನೀವೇ ಕಾರಣರಾಗುತ್ತೀರಿ. ಹೀಗಾಗಿ  ಸಮ್ಮಿಶ್ರ ಸರ್ಕಾರದ ಬಗ್ಗೆ ಬರುವ ಟೀಕೆಗಳ ಬಗ್ಗೆ ಗಮನಹರಿಸದೆ ಕೆಲಸದ ಬಗ್ಗೆ ಗಮನ ಕೊಡಿ. ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಜನಪರ ಸರ್ಕಾರ ಇದೆ ಎಂಬ ಭಾವನೆ ಜನರಲ್ಲಿ ಮೂಡಿಸಿ. ಹಿರಿಯ ಅಧಿಕಾರಿಗಳಿಗಿಂತ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ನಾಡಿನ ಜನಸಾಮಾನ್ಯರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವವರು. ಹೀಗಾಗಿಯೇ ನಿಮ್ಮ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದೇನೆ” ಎಂದು ಹೇಳಿದರು.

ಅಭಿವೃದ್ಧಿ ಕುಂಠಿತ:
“”ವಿಧಾನಸಭೆ ಚುನಾವಣೆ ಕಾರಣದಿಂದಾಗಿ ಕಳೆದ ಜನವರಿ ತಿಂಗಳಿನಿಂದ ಅಭಿವೃದ್ಧಿ ಕುಂಠಿತವಾಗಿದೆ. ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಗೆ ಸಮಯ ಮೀಸಲಿಡುವ ಸಂದರ್ಭದಲ್ಲಿ ಅಭಿವೃದ್ಧಿಗೆ ಎಲ್ಲೋ ಒಂದು ಕಡೆ ಚ್ಯುತಿ ಬಂದಿದೆ. ಅದರ ಮಧ್ಯೆ ನಾವು ಜುಲೈ ತಿಂಗಳ ಅಂತ್ಯಕ್ಕೆ ಬಂದಿದ್ದೇವೆ. ಇದೀಗ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಯಾಗಿದೆ. ಮುಂದೆ ಇರುವ ಅವಧಿಯಲ್ಲಿ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿಗೆ ತನ್ನಿ. ಅದಕ್ಕಾಗಿ ಕಚೇರಿಯಲ್ಲಿ ಕುಳಿತುಕೊಳ್ಳದೆ ಜನರ ಮಧ್ಯೆ ಹೋಗಿ ಕೆಲಸ ಮಾಡಿ. ಅಧಿಕಾರಿಗಳು ಜನರ ಮಧ್ಯೆ ಕಂದಕ ಸೃಷ್ಟಿ ಮಾಡಿಕೊಂಡು ಹೋದರೆ ಜನಸಾಮಾನ್ಯರ ಕಷ್ಟಗಳು ಅರ್ಥವಾಗುವುದಿಲ್ಲ. ಈ ನಿಟ್ಟಿನಲ್ಲಿ ಕೆಲವು ಜಿಲ್ಲಾಧಿಕಾರಿಗಳು ತಾಲೂಕುಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸುತ್ತಿರುವುದನ್ನು ಗಮನಿಸಿದ್ದೇನೆ. ಇದನ್ನು ಎಲ್ಲಾ ಜಿಲ್ಲಾಧಿಕಾರಿಗಳೂ ಅನುಸರಿಸಿ” ಎಂದು ತಾಕೀತು ಮಾಡಿದರು.

ಶಾಲೆ ಕಾಲೇಜುಗಳಿಗೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೊಠಡಿ, ಶೌಚಾಲಯ, ಪ್ರಯೋಗಾಲಯ ಮತ್ತಿತರ ಸೌಲಭ್ಯ ಒದಗಿಸಲು ಸರ್ಕಾರ ಉದ್ದೇಶಿಸಿದೆ. ಅದೇ ರೀತಿ 4 ಸಾವಿರಕ್ಕೂ ಹೆಚ್ಚು ಕಿ.ಮೀ. ಹೆ¨ªಾರಿ ಕಾಮಗಾರಿ ಪೂರ್ಣ ಗೊಳಿಸಲು ಅಗತ್ಯ ಭೂಸ್ವಾಧೀನ ಮತ್ತಿತರ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ವಸತಿ ಯೋಜನೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸರ್ಕಾರಿ ಜಮೀನು ಗುರುತಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಪ್ರಮುಖ ನಿರ್ದೇಶನಗಳು
– ರೈತರ ಸಾಲ ಮನ್ನಾ ಕುರಿತು ನಾಲ್ಕೈದು ದಿನಗಳಲ್ಲಿ ಆದೇಶಿಸಲಾಗುವುದು. ಇದನ್ನು ಯಶಸ್ವಿಗೊಳಿಸಿ, ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿ.
– ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗಳ ಕಾರ್ಯನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿ, ಜಾಗೃತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿ.
– ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಡಿ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳ ತಂಡ ರಚನೆ ಮಾಡಿ ಉದ್ಯೋಗ ಕೊಡಿಸಲು ಮುಂದಾಗಬೇಕು.
– ಆರೋಗ್ಯ, ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಇದೆ. ಅನಿರೀಕ್ಷಿತ ಭೇಟಿ ನೀಡಿ ಕೊರತೆ ಪತ್ತೆಹಚ್ಚಿ ಅದನ್ನು ಸರಿಪಡಿಸಿ.
– ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆ ವ್ಯಕ್ತಿಗಳ ಸಣ್ಣತನಕ್ಕೆ ನೀವು ದಾರಿ ತಪ್ಪಬೇಡಿ.
– ಚುನಾವಣೆ ಕಾರಣದಿಂದ ಕುಂಠಿತವಾಗಿರುವ ಅಭಿವೃದ್ಧಿ ಕೆಲಸಗಳನ್ನು ಚುರುಕುಗೊಳಿಸಿ. ಒಳ್ಳೆಯ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ.

ಟಾಪ್ ನ್ಯೂಸ್

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅಂತರಂಗ ಪರಿಶುದ್ಧವಾಗಿರಲಿ

ಅಂತರಂಗ ಪರಿಶುದ್ಧವಾಗಿರಲಿ

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ದೇಶಕ್ಕೆ ಲಸಿಕೆ; ಪಕ್ಷಕ್ಕೆ ಜ್ವರ 

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1,000 ಇ ಚಾರ್ಜಿಂಗ್‌ ಕೇಂದ್ರ: ಸುನಿಲ್‌

1,000 ಇ ಚಾರ್ಜಿಂಗ್‌ ಕೇಂದ್ರ: ಸುನಿಲ್‌

gfjfytfyjt

ಬೆಳಗಾವಿ:  ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು

gfgrr

ತಾಂತ್ರಿಕ ದೋಷ : ರನ್‍ವೇನಲ್ಲೆ ನಿಂತ ಏರ್‌ ಇಂಡಿಯಾ ವಿಮಾನ

ನನ್ನ ಪ್ರವಾಸ ಆರಂಭವಾಗಿದೆ : ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ : ಬಿಎಸ್ ವೈ

ನನ್ನ ಪ್ರವಾಸ ಆರಂಭವಾಗಿದೆ : ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ : ಬಿಎಸ್ ವೈ

ರಾತ್ರೋರಾತ್ರಿ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣ :ಪೊಲೀಸರಿಂದ ತೆರವು, ಅಭಿಮಾನಿಗಳ ಪ್ರತಿಭಟನೆ

ರಾತ್ರೋರಾತ್ರಿ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣ :ಪೊಲೀಸರಿಂದ ತೆರವು, ಅಭಿಮಾನಿಗಳ ಪ್ರತಿಭಟನೆ

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಗ್ರಾಮೀಣ ಪ್ರದೇಶಗಳ ಜನರಿಗೂ ಬೇಕಿದೆ ಯೋಗದ ಅರಿವು

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಅನಂತ ಫ‌ಲದಾಯಕ ಅನಂತ ಚತುರ್ದಶಿ ವ್ರತ

ಖೇಲ್‌ರತ್ನಕ್ಕೆ ನಾಲ್ವರು ಪ್ಯಾರಾ ಆ್ಯತ್ಲೀಟ್‌ಗಳ ಹೆಸರು ಶಿಫಾರಸು

ಖೇಲ್‌ರತ್ನಕ್ಕೆ ನಾಲ್ವರು ಪ್ಯಾರಾ ಆ್ಯತ್ಲೀಟ್‌ಗಳ ಹೆಸರು ಶಿಫಾರಸು

1,000 ಇ ಚಾರ್ಜಿಂಗ್‌ ಕೇಂದ್ರ: ಸುನಿಲ್‌

1,000 ಇ ಚಾರ್ಜಿಂಗ್‌ ಕೇಂದ್ರ: ಸುನಿಲ್‌

ಅಂತರಂಗ ಪರಿಶುದ್ಧವಾಗಿರಲಿ

ಅಂತರಂಗ ಪರಿಶುದ್ಧವಾಗಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.