ಶಕ್ತಿಮೀರಿ ಅಕಾಡೆಮಿಗೆ ದುಡಿಮೆ


Team Udayavani, Aug 11, 2017, 11:48 AM IST

ms-murthy.jpg

ಬೆಂಗಳೂರು: “ಅರ್ಜಿ ಹಾಕಿ ಬಂದಂತಹ ಅಧ್ಯಕ್ಷ ನಾನಲ್ಲ. ನನಗೆ ಸಿಕ್ಕ ಅವಕಾಶವನ್ನು ತುಂಬಾ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಜಾತ್ಯಾತೀತ, ಧರ್ಮಾತೀತವಾಗಿ ಪ್ರಾಂತೀಯ ಎಲ್ಲೆ ಮೀರಿ ಕೆಲಸ ಮಾಡಿದ್ದೇನೆ” ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್‌.ಮೂರ್ತಿ ಹೇಳಿದರು. 

ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಆ.13ರಂದು ಪದತ್ಯಾಗ ಮಾಡಲಿರುವ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 50 ವರ್ಷಗಳಲ್ಲಿ ಆಗದಷ್ಟು ಕಾರ್ಯಕ್ರಮಗಳನ್ನು ಮೂರೂವರೆ ವರ್ಷದಲ್ಲಿ ಮಾಡಿದ್ದೇವೆ. ಸಾವಿರಾರು ಅವಕಾಶ ವಂಚಿತ ಕಲಾವಿದರಿಗೆ ಮೊದಲ ಬಾರಿಗೆ ಅಕಾಡೆಯು ವಿವಿಧ ಅವಕಾಶ ನೀಡಿದೆ. ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಉದ್ದೇಶದಿಂದ ರಾಜ್ಯ ಉದ್ದಗಲಕ್ಕೂ ಸುಮಾರು 1 ಲಕ್ಷ ಕಿ.ಮೀ ಪ್ರವಾಸ ಮಾಡಿದ್ದೇನೆ  ಎಂದು ತಿಳಿಸಿದರು.
 
50 ವರ್ಷಗಳ ಅವಧಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಲಾ ಸಾಹಿತ್ಯ ಕುರಿತು 8ಕ್ಕೂ ಹೆಚ್ಚು ವಿಚಾರ ಸಂಕಿರಣಗಳು, ಕಲಾಕಮ್ಮಟಗಳನ್ನು ಏರ್ಪಡಿಸಲಾಗಿತ್ತು. ಈವರೆಗೆ ಕಲಾಸಂಚಾರ ಪುಸ್ತಕ ಸೇರಿದಂತೆ ಕಲಾವೈಚಾರಿಕ ಸಾಹಿತ್ಯ, 6 ಚಿತ್ರಸಂಪುಟಗಳನ್ನು ಅಕಾಡೆಮಿ ಹೊರತಂದಿದೆ ಎಂದು ಹೇಳಿದರು.

 ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಕಲಾಪ್ರದರ್ಶನ ಮತ್ತು ಸಂಕ್ರಾಂತಿ ಕಲಾಪುರಸ್ಕಾರ-2016 ಆಯೋಜಿಸಲಾಗಿತ್ತು. ಪರಿಶಿಷ್ಟ ಜಾತಿ, ಪಂಗಡ ಮತ್ತು ಸಾಮಾನ್ಯ ವರ್ಗ 2015 ಹಾಗೂ 2016ರಲ್ಲಿ ಮೂವರು ಹಿರಿಯ ಕಲಾವಿದರಿಗೆ ಗೌರವ ಫೆಲೋಶಿಪ್‌ ನೀಡಿ ಗೌರವಿಸಿದೆ. 44 ಯುವ ಕಲಾವಿದರಿಗೆ ಫೆಲೋಶಿಪ್‌ ಗೌರವ ನೀಡಿದೆ. ಎಸ್ಸಿ,ಎಸ್ಟಿ ಮತ್ತು ಸಾಮಾನ್ಯ ವರ್ಗದ ಯೋಜನೆಯಡಿ ಕಲಿಯುತ್ತಿರುವ ಸುಮಾರು 700ಕ್ಕೂ ಹೆಚ್ಚು ಕಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದೆ ಎಂದರು. 

ರಾಜ್ಯ, ದೇಶದ ಚಾರಿತ್ರಿಕ ಕಲೆಯ ಅಧ್ಯಯನದ ಆಸಕ್ತಿ ಬೆಳೆಸುವ ಸಲುವಾಗಿ ಅಕಾಡೆಮಿಯು ಹೊಸ ಯೋಜನೆ ರೂಪಿಸಿತ್ತು. ಸುವರ್ಣ ಕಲಾ ಸಂಚಾರ್‌ ಎಂಬ ವಿಶಿಷ್ಟ ಪರಿಕಲ್ಪನೆಯಲ್ಲಿ 52 ಯುವ ಕಲಾವಿದರಿಗೆ ತಲಾ 25 ಸಾವಿರ ಧನ ಸಹಾಯ ನೀಡಿ, ದೇಶದ ಪ್ರಮುಖ ಪ್ರವಾಸಿ, ಐತಿಹಾಸಿಕ ಕಲಾಕ್ಷೇತ್ರಗಳಿಗೆ ಕಲೂಹಿಸಿಕೊಡಲಾಗಿತ್ತು. ಕಲಾವಿದರು ಪ್ರವಾಸ ಮಾಡಿ ಕಲಾಕೃತಿಗಳ ರಚನೆ ಮಾಡುವ ಮಹತ್ವದ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ತಿಳಿಸಿದರು. 

ಮೈಸೂರಿನ ಪಿ.ಆರ್‌.ತಿಪ್ಪೇಸ್ವಾಮಿ, ಎಂ.ಜೆ.ಶುದೊœàದನ, ರಘೋತ್ತಮ ಪುಟ್ಟಿ, ಗುಲಬರ್ಗಾದ ಎಸ್‌.ಎಂ.ಪಂಡಿತ್‌ ಮತ್ತು ಬೆಂಗಳೂರಿನ ಬಿ.ವಿ.ಕೆ.ಶಾಸಿ ಈ ಮಹನೀಯ ಹಿರಿಯ ಕಲಾವಿದರ ಜನ್ಮಶತಮಾನೋತ್ಸವ ಕಾರ್ಯಕ್ರಮ ಅಕಾಡೆಮಿಯಿಂದ ನಡೆಸಿ ಗೌರವ ಸಲ್ಲಿಸಲಾಯಿತು. ಈ ಮೂರುವರೆ ವರ್ಷದಲ್ಲಿ ಅಂದಾಜು 4 ಸಾವಿರಕ್ಕೂ ವಕಾಶ ವಂಚಿತರಾದ ಪರಿಶಿಷ್ಟ ಜಾತಿ, ಪಂಗಡ ಮತ್ತು ಸಾಮಾನ್ಯ ವರ್ಗದ ಕಲಾವಿದರಿಗೆ ಅವಕಾಶ ನೀಡಿದ್ದು, ರಾಜ್ಯಾದ್ಯಂತ 90ಕ್ಕೂ ಹೆಚ್ಚು ಸ್ಥಳಗಳಿಗೆ ಕಲಾಶಿಬಿರವನ್ನು ಮಾಡಲಾಗಿದೆ. 

ನಗರದ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಗ್ರಾಫಿಕ್‌ ಕಲಾಕೇಂದ್ರಕ್ಕೆ ಸಚಿವೆ ಉಮಾಶ್ರೀಯವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಲೋಕೋಪಯೋಗಿ ಇಲಾಖೆಗೆ ಹಣ ಸಂದಾಯವಾಗಿದ್ದು, ಮುಂಬರುವ ಅಕಾಡೆಮಿ ಅಧ್ಯಕ್ಷರು ಮುತುವರ್ಜಿ ವಹಿಸಿ ಶೀಘ್ರವೇ ಗ್ರಾಫಿಕ್‌ ಕಲಾಕೇಂದ್ರ ನಿರ್ಮಿಸಿ ಲೋಕಾರ್ಪಣೆ ಮಾಡಬೇಕು. ಇದಲ್ಲದೇ ಮೂರೂವರೆ ವರ್ಷದಲ್ಲಿ ಹಲವಾರು ವಿಚಾರ ಸಂಕಿರಣ, ಕಲಾಕಮ್ಮಟಗಳು, ಕಾರ್ಯಾಗಾರ, ನೇಪಥ್ಯ ಕಲಾಕಮ್ಮಟ ಇತ್ಯಾದಿಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಹೇಳಿದರು. 

ಬಾದಾಮಿಯಲ್ಲಿ ದೃಶ್ಯಕಲೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು ಎಂಬ ಪ್ರಸ್ತಾವನೆ ಇತ್ತು. ಅದಕ್ಕಾಗಿ 450 ಎಕರೆ ಭೂಮಿ ಕೂಡ ನಿಗದಿಯಾಗಿತ್ತು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಹಣವಿಲ್ಲ ಎಂಬ ಕಾರಣಕ್ಕೆ ಅದನ್ನು ಸ್ಥಾಪಿಸದಿರುವುದು ಬೇಸರ ತಂದಿದೆ. ಮುಂಬರುವ ಅಧ್ಯಕ್ಷರುಗಳು ಜಾತ್ಯಾತೀತ, ಧರ್ಮಾತೀತವಾಗಿ ಕೆಲಸ ಮಾಡಬೇಕು. ತಾತ್ವಿಕತೆ ಮತ್ತು ನಿಲುವುಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಆಗ ಮಾತ್ರ ಅಕಾಡೆಮಿ ಅಭಿವೃದ್ಧಿಯಾಗಲಿದೆ.
-ಎಂ.ಎಸ್‌.ಮೂರ್ತಿ, ಅಧ್ಯಕ್ಷ, ಲಲಿತಕಲಾ ಅಕಾಡೆಮಿ 

ಟಾಪ್ ನ್ಯೂಸ್

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25ramamandira

ಅಯೋಧ್ಯೆ ರಾಮ ಮಂದಿರದ ತಳಪಾಯಕ್ಕೆ ಕರ್ನಾಟಕದ ಶಿಲೆಗಳು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

breast cancer

ಪ್ರತಿ 4 ನಿಮಿಷಕ್ಕೆ ಓರ್ವ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್‌

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.