ವಿದ್ಯುತ್‌ ಮಿತ ಬಳಕೆ ಕುರಿತು ಕಾರ್ಯಾಗಾರ

Team Udayavani, Jun 20, 2019, 3:03 AM IST

ಬೆಂಗಳೂರು: ರೈತರು ಕೃಷಿಯಲ್ಲಿ ಬಳಸುವ ನೀರೆತ್ತುವ ಪಂಪ್‌ಗ್ಳು ಹೆಚ್ಚುವರಿ ವಿದ್ಯುತ್‌ ಬಳಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಣಕೀಕೃತ ಸೂಚನಾ ನಿಯಂತ್ರಕಗಳು (ಡಿಜಿಟಲ್‌ ಸಿಗ್ನಲ್‌ ಕಂಟ್ರೋಲರ್‌) ಮಹತ್ವದ ಪಾತ್ರ ವಹಿಸಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವದ್ಯಾಲಯದ ಇಂಜಿನಿಯರಿಂಗ್‌ ವಿಭಾಗದ ಡೀನ್‌ ಮತ್ತು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್‌.ಸಿ.ನಾಗರಾಜ್‌ ತಿಳಿಸಿದರು.

ಎನ್‌ಎಂಐಟಿಯಲ್ಲಿ ಜರುಗುತ್ತಿರುವ “ವಿದ್ಯುತ್ಛಕ್ತಿಯ ಮಿತ ಬಳಕೆಯಲ್ಲಿ ಗಣಕೀಕೃತ ಸೂಚನಾ ನಿಯಂತ್ರಕಗಳ ಪಾತ್ರ’ ಕುರಿತ ರಾಜ್ಯ ಮಟ್ಟದ ಆರು-ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಈ ನಿಯಂತ್ರಕಗಳ ಅಳವಡಿಕೆಯಿಂದ ಸಣ್ಣಪುಟ್ಟ ಕೈಗಾರಿಕೆಗಳು ಹೆಚ್ಚುವರಿ ವಿದ್ಯುತ್ಛಕ್ತಿಯನ್ನು ಬಳಸುವುದು ತಪ್ಪುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಮುಂಬರುವ ಕೈಗಾರಿಕಾ ಕ್ರಾಂತಿಗೆ ಭಾರತ ದೇಶ ಸಮರ್ಥ ನಾಯಕತ್ವ ನೀಡಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮಟ್ಟದ ಸಂಶೋಧನೆಗಳು ನಡೆಯಬೇಕು.

ನಮಗೆ ತೊಂದರೆಯಾದಾಗ ಎಲ್ಲರಿಗೂ ತಿಳಿಯಲಿ ಎಂದು ಬೆಂಕಿ ಹಾಕುವುದು, ಕೂಗುವುದು ಇತ್ಯಾದಿ ಸಂಜ್ಞೆಗಳಿಂದ ಅಪಾಯದ ಸೂಚನೆಯನ್ನು ನೀಡುತ್ತಿದ್ದೆವು. ಈಗ ಈ ಸಂಜ್ಞೆಗಳ ಹೊಣೆಯನ್ನು ಈ ಗಣಕೀಕೃತ ಸೂಚನಾ ನಿಯಂತ್ರಕಗಳು ಹೊತ್ತಿವೆ. ಇದರಿಂದ ಕ್ಷಣಮಾತ್ರದಲ್ಲಿ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದರು.

ಕಾರ್ಯಾಗಾರದಲ್ಲಿ ಭಾರತದ ರಕ್ಷಣಾ ವಿಶ್ವದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಲ್‌.ಎಂ.ಪಟ್ನಾಯಕ್‌, ಎನ್‌ಎಂಐಟಿ ಡೀನ್‌ ಪ್ರೊ.ಶ್ರೀಧರ್‌ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ.ಎನ್‌.ಎಸ್‌.ದಿನೇಶ್‌ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಯಲಹಂಕ: ರಾಜ್ಯದಲ್ಲಿ ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಯಲಹಂಕ...

  • ಬೆಂಗಳೂರು: ಹೈದರಾಬಾದ್‌ನ ಪಶು ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಳಿಕ ಮಹಿಳಾ ಸುರಕ್ಷತೆ ಬಗ್ಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ನಗರ ಪೊಲೀಸರು ಕೈಗೊಳ್ಳುತ್ತಿದ್ದಾರೆ....

  • ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಕಾವು ಜೋರಿದೆ. ಆದರೆ, ಉದ್ಯಾನ ನಗರಿಯ ವಾತಾವರಣಇದಕ್ಕೆ ಭಿನ್ನವಾಗಿದ್ದು, ಸ್ಪಲ್ಪ ಯಾಮಾರಿದರು ಆಸ್ಪತ್ರೆ ಮೆಟ್ಟಿಲೇರಬಹುದು...

  • ಬೆಂಗಳೂರು: ನಗರದ 24 ಪ್ರಮುಖ ಮೇಲ್ಸೇತುವೆ, ಅಂಡರ್‌ ಪಾಸ್‌ ಮತ್ತು ತೂಗು ಸೇತುವೆಗಳಲ್ಲಿನ ಲೋಪ ಸರಿಪಡಿಸಲು ಬಿಬಿಎಂಪಿ 40 ಕೋಟಿ ರೂ. ಮೀಸಲಿರಿಸಿದ್ದು, ಟೆಂಡರ್‌ ಕರೆಯಲು...

  • ಬೆಂಗಳೂರು: ಉಪ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ, ಮದ್ಯ ಮಾರಾಟ ನಿಷೇಧ ಹಾಗೂ ಈ ಭಾಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ...

ಹೊಸ ಸೇರ್ಪಡೆ