ಯುವತಿ ಅರೆಪ್ರಜ್ಞೆ ಸ್ಥಿತಿಯಲ್ಲಿದ್ದಾಗ ದೈಹಿಕ ದೌರ್ಜನ್ಯ, ಆಸ್ಪತ್ರೆಗೆ ಹೋದಾಗಲೇ ವಿಷಯ ಗೊತ್ತಾಗಿದ್ದು!

ಆರೋಪಿಗೆ ಸಿಗರೇಟ್‌ ಕೊಡುವಂತೆ ಕೇಳಿದ್ದಾಳೆ

Team Udayavani, Nov 30, 2022, 11:10 AM IST

incident at benglore

ಬೆಂಗಳೂರು: ರ್ಯಾಪಿಡೋ ಚಾಲಕನೊಬ್ಬ ತನ್ನ ಸ್ನೇಹಿತನ ಜತೆ ಸೇರಿ ಕೇರಳ ಮೂಲದ ಯುವತಿ ಮೇಲೆ ದೈಹಿಕ ದೌರ್ಜನ್ಯ ಎಸಗಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

22 ವರ್ಷದ ಯುವತಿ ದೈಹಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಕೃತ್ಯ ಎಸಗಿದ ನಿಲಾದ್ರಿನಗರ ನಿವಾಸಿ ಶಹಾಬುದ್ದೀನ್‌, ಆತನ ಸ್ನೇಹಿತ ಅರಾಪತ್‌ ಷರೀಫ್ ಅಲಿಯಾಸ್‌ ಅಖ್ತರ್‌ ಮತ್ತು ಶಹಾಬುದ್ದೀನ್‌ ಪ್ರಿಯತಮೆಯ ಸ್ನೇಹಿತೆ ಸೇರಿ ಮೂವರನ್ನು ಬಂಧಿಸಲಾಗಿದೆ.

ಕೇರಳ ಮೂಲದ ಯುವತಿ ನಗರದಲ್ಲಿ ವಾಸವಾಗಿದ್ದು, ಬಿಟಿಎಂ ಲೇಔಟ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನ.25ರ ತಡರಾತ್ರಿ 1 ಗಂಟೆ ಸುಮಾರಿಗೆ ಬಿಟಿಎಂ ಲೇಔಟ್‌ನಿಂದ ಎಲೆಕ್ಟ್ರಾನಿಕ್‌ ಸಿಟಿ 3ನೇ ಹಂತದಲ್ಲಿರುವ ನಿಲಾದ್ರಿ ನಗರಕ್ಕೆ ಹೋಗಲು ರ್ಯಾಪಿಡೋ ಕಾಯ್ದಿರಿಸಿದ್ದರು.

ಆರೋಪಿ ಶಹಾಬುದ್ದೀನ್‌ ಯುವತಿಯನ್ನು ಕರೆದೊಯ್ಯಲು ಸ್ಥಳಕ್ಕೆ ಬಂದಿದ್ದಾನೆ. ಮಾರ್ಗ ಮಧ್ಯೆ ಯುವತಿ ಅರೆಪ್ರಜ್ಞಾ ಸ್ಥಿತಿಗೆ ತಲುಪಿದ್ದು, ಆಕೆಯ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಆರೋಪಿ, ಕೂಡಲೇ ಅಖ್ತರ್‌ಗೆ ಕರೆ ಮಾಡಿದ್ದಾಗ ತನ್ನ ಕೋಣೆಗೆ ಬರುವಂತೆ ಸೂಚಿಸಿದ್ದಾನೆ. ನಂತರ  ಕೋಣೆಗೆ ಕರೆದೊಯ್ದು ದೈಹಿಕ ದೌರ್ಜನ್ಯ ಎಸಗಿದ್ದಾನೆ. ಕೆಲ ಹೊತ್ತಿನ ಬಳಿಕ ಬಂದ ಅಖ್ತರ್‌ ಕೂಡ ಸಂತ್ರಸ್ತೆ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಶಹಾಬುದ್ದೀನ್‌ ಕೋಣೆಯಲ್ಲಿದ್ದ ಆತನ ಪ್ರೇಯಸಿ ಸ್ನೇಹಿತೆ ಆರೋಪಿಗಳ ಕೃತ್ಯ ತಡೆಯಲಿಲ್ಲ. ಜತೆಗೆ ಆಕೆಯೇ ಸಹಕಾರ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ಇಬ್ಬರು ಆರೋಪಿಗಳ ಜತೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆಸ್ಪತ್ರೆಗೆ ಹೋದಾಗ ದೌರ್ಜನ್ಯ ಬೆಳಕಿಗೆ: ನ.26ರಂದು ಮುಂಜಾನೆ 5 ಗಂಟೆ ಸುಮಾರಿಗೆ ಎಚ್ಚರಗೊಂಡ ಸಂತ್ರಸ್ತೆಗೆ ಯುವತಿ, ತಡರಾತ್ರಿ ಅರೆಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದರು. ಹೀಗಾಗಿ ನಮ್ಮ ಮನೆಗೆ ಕರೆತರಲಾಗಿದೆ ಎಂದು ಸುಳ್ಳು ಹೇಳಿ ಕಳುಹಿಸಿದ್ದಳು. ಅದೇ ದಿನ ಮಧ್ಯಾಹ್ನ ಸಂತ್ರಸ್ತೆಗೆ ಗುಪ್ತಾಂಗದಲ್ಲಿ ನೋವು ಹಾಗೂ ರಕ್ತಸ್ರಾವ ಹೆಚ್ಚಾದ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ಹೋದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕೇರಳ ಪೊಲೀಸರಿಂದ ಮಾಹಿತಿ: ಗಾಬರಿಗೊಂಡ ಸಂತ್ರಸ್ತೆ ಕೂಡಲೇ ತನ್ನ ಪ್ರಿಯಕರನಿಗೆ ವಿಷಯ ತಿಳಿಸಿ, ಕೇರಳದಲ್ಲಿ ಪರಿಚಯಸ್ಥ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಆ ಅಧಿಕಾರಿ ಆಗ್ನೇಯ ವಿಭಾಗ ಪೊಲೀಸರಿಗೆ ದೂರು ನೀಡಿದ್ದರು. ಅನಂತರ ಸಂತ್ರಸ್ತೆಯನ್ನು ಸಂಪರ್ಕಿಸಿದ ಪೊಲೀಸರು ಕೂಡಲೇ ಆಕೆಯಿಂದ ಹೇಳಿಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಮೂರು ತಂಡ ರಚಿಸಲಾಗಿತ್ತು. ಈ ತಂಡ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸರು ಹೇಳಿದರು.

ಸಂತ್ರಸ್ತೆ ಪ್ರಿಯಕರನಿಗೆ ಸುಳ್ಳು ಮಾಹಿತಿ
ನ.25ರಂದು ತಡರಾತ್ರಿ ಸಂತ್ರಸ್ತೆ ಎಲೆಕ್ಟ್ರಾನಿಕ್‌ ಸಿಟಿ 3ನೇ ಹಂತದಲ್ಲಿರುವ ಪ್ರಿಯಕರನ ಭೇಟಿಗೆ ರ್ಯಾಪಿಡೋ ಕಾಯ್ದಿರಿಸಿದ್ದರು. ಆದರೆ, ಮದ್ಯ ಸೇವಿಸಿದ್ದರಿಂದ ಮಾರ್ಗ ಮಧ್ಯೆ ಯುವತಿ ಅಸ್ವಸ್ಥಗೊಂಡಿದ್ದು, ಜತೆಗೆ ಆರೋಪಿಗೆ ಸಿಗರೇಟ್‌ ಕೊಡುವಂತೆ ಕೇಳಿದ್ದಾಳೆ ಎಂದು ಹೇಳಲಾಗಿದೆ.

ಆಗ ಆರೋಪಿ ಸ್ನೇಹಿತನಿಗೆ ಕರೆ ಮಾಡಿ, ಯುವತಿಯ ವಿಚಾರ ತಿಳಿಸಿ, ತನ್ನ ಕೋಣೆಗೆ ಬರುವಂತೆ ತಿಳಿಸಿದ್ದಾನೆ. ಅನಂತರ ಇಬ್ಬರು ದೈಹಿಕ ದೌರ್ಜನ್ಯ ಎಸಗಿದ್ದಾರೆ. ಈ ಮಧ್ಯೆ ಎಲೆಕ್ಟ್ರಾನಿಕ್‌ ಸಿಟಿ ಮೂರನೇ ಹಂತದಲ್ಲಿ ಕಾಯುತ್ತಿದ್ದ ಸಂತ್ರಸ್ತೆ ಪ್ರಿಯಕರ, ನಸುಕಿನಲ್ಲಿ ಯುವತಿಯ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಆಗ ಶಹಾಬುದ್ದೀನ್‌ ಪ್ರೇಯಸಿ ಕರೆ ಸ್ವೀಕರಿಸಿ, “ನಿಮ್ಮ ಸ್ನೇಹಿತೆ ರಸ್ತೆಯಲ್ಲಿ ಅಸ್ವಸ್ಥಗೊಂಡಿದ್ದರು. ಅದನ್ನು ಕಂಡು ಮನೆಗೆ ಕರೆ ತರಲಾಗಿದೆ. ಆರೋಗ್ಯವಾಗಿದ್ದಾರೆ. ಕೆಲವೇ ಹೊತ್ತಿನಲ್ಲಿ ಮನೆಗೆ ಬರಲಿದ್ದಾರೆ’ ಎಂದು ಕರೆ ಸ್ಥಗಿತಗೊಳಿಸಿ, ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿದ್ದಾಳೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಮೇಲೆ ಕ್ರಿಮಿನಲ್‌ ಕೇಸ್‌
ಆರೋಪಿಗಳ ಪೈಕಿ ಶಹಾಬುದ್ದೀನ್‌ ರ್ಯಾಪಿಡೋ ಚಾಲಕನಾಗಿದ್ದರೆ, ಅಖ್ತರ್‌ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಶಹಾಬುದ್ದೀನ್‌ ವಿರುದ್ಧ ನಗರ ಎರಡು ಠಾಣೆಯಲ್ಲಿ ಕ್ರಿಮಿನಲ್‌ ಕೇಸ್‌ ದಾಖಲಾಗಿದೆ. ಮತ್ತೊಂದೆಡೆ ರ್ಯಾಪಿಡೋ ಸಂಸ್ಥೆಗೆ ಆರೋಪಿಯ ಒಂದು ವರ್ಷದ ಪಿಕಪ್‌ ಮತ್ತು ಡ್ರಾಪ್‌ನ ಮಾಹಿತಿ ಪಡೆಯಲಾಗಿದೆ. ಅದನ್ನು ಪರಿಶೀಲಿಸಿ ಬೇರೆ ಎಲ್ಲಾದರೂ ಈ ರೀತಿಯ ಕೃತ್ಯ ಎಸಗಿದ್ದರೆ. ಈ ಸಂಬಂಧ ಹೆಚ್ಚುವರಿ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

ಕೇರಳ ಮೂಲದ ಸಂತ್ರಸ್ತೆ ಮೇಲೆ ಇಬ್ಬರಿಂದ ನಡೆದ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ತೆರಳಿದ್ದು, ಎಲ್ಲ ರೀತಿಯ ಸಾಕ್ಷ್ಯ ಸಂಗ್ರಹಿಸಲಾಗಿದೆ. ಯುವತಿ ಸೇರಿ ಮೂವರನ್ನು ಬಂಧಿಸಲಾಗಿದೆ.
●ಪ್ರತಾಪ್‌ ರೆಡ್ಡಿ, ನಗರ ಪೊಲೀಸ್‌ ಆಯುಕ್ತ

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ರ್ಯಾಪಿಡೋ ಚಾಲಕ ಮತ್ತು ಆತನ ಸ್ನೇಹಿತ ಹಾಗೂ ಒಬ್ಬ ಯುವತಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಸದ್ಯ ಆರೋಗ್ಯವಾಗಿದ್ದಾಳೆ. ಆರೋಪಿಗಳ ಹಿನ್ನೆಲೆ ಪರಿಶೀಲಿಸಲಾಗುತ್ತಿದೆ.
●ಸಿ.ಕೆ.ಬಾಬಾ, ಆಗ್ನೇಯ ವಿಭಾಗದ ಡಿಸಿಪಿ

 

ಟಾಪ್ ನ್ಯೂಸ್

ponds

ಅವಿಭಜಿತ ಕುಂದಾಪುರ ತಾ.: 69 ಕೆರೆಗಳಿಗೆ ಮರುಜೀವ

tdy-3

ದಳಪತಿ ವಿಜಯ್ ʼಲಿಯೋʼ ಚಿತ್ರದಿಂದ ಹೊರಬಂದ ತ್ರಿಷಾ?: ವೈರಲ್‌ ಸುದ್ದಿಗೆ ನಟಿ ತಾಯಿ ಸ್ಪಷ್ಟನೆ

tdy-2

ಮುಖಾಮುಖಿ ಢಿಕ್ಕಿಯಾಗಿ ಕಂದಕಕ್ಕೆ ಉರುಳಿದ ಬಸ್‌ – ಕಾರು : ಕನಿಷ್ಠ 30 ಮಂದಿ ಮೃತ್ಯು

ಪ್ರಗತಿ ಪಥದತ್ತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌

ಪ್ರಗತಿ ಪಥದತ್ತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌

ಉದಯವಾಣಿ- ಎಂಐಸಿ “ನಮ್ಮ ಸಂತೆ’: ಮಳಿಗೆ ನೋಂದಣಿಗೆ ನಾಳೆವರೆಗೆ ಅವಕಾಶ

ಉದಯವಾಣಿ- ಎಂಐಸಿ “ನಮ್ಮ ಸಂತೆ’: ಮಳಿಗೆ ನೋಂದಣಿಗೆ ನಾಳೆವರೆಗೆ ಅವಕಾಶ

thumb-1

ಸಿದ್ಧಾರ್ಥ್ ವೆಡ್ಸ್‌ ಕಿಯಾರಾ: ದಾಂಪತ್ಯಕ್ಕೆ ಕಾಲಿಟ್ಟ ʼಶೇರ್ ಷಾʼ ಜೋಡಿ

ವಿದ್ಯಾಕಾಶಿಯ ಮುಕುಟ : ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ವಿದ್ಯಾಕಾಶಿಯ ಮುಕುಟ : ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಗತಿ ಪಥದತ್ತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌

ಪ್ರಗತಿ ಪಥದತ್ತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌

ವಿದ್ಯಾಕಾಶಿಯ ಮುಕುಟ : ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ವಿದ್ಯಾಕಾಶಿಯ ಮುಕುಟ : ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಎಲ್ಲ ಜನವಸತಿ ಪ್ರದೇಶಗಳಲ್ಲಿ ಶುದ್ಧನೀರು

ಎಲ್ಲ ಜನವಸತಿ ಪ್ರದೇಶಗಳಲ್ಲಿ ಶುದ್ಧನೀರು

ಬ್ರಾಹ್ಮಣಕ್ಕೆ ಬದ್ಧ: ಕುಮಾರಸ್ವಾಮಿ: ಮುಂದುವರಿದ ಜೆಡಿಎಸ್‌-ಬಿಜೆಪಿ ಸಿಎಂ ಸಮರ

ಬ್ರಾಹ್ಮಣಕ್ಕೆ ಬದ್ಧ: ಕುಮಾರಸ್ವಾಮಿ: ಮುಂದುವರಿದ ಜೆಡಿಎಸ್‌-ಬಿಜೆಪಿ ಸಿಎಂ ಸಮರ

ಸಚಿವ ಅಶ್ವತ್ಥನಾರಾಯಣ ವಿರುದ್ಧ ಮತ್ತೆ “ಬಿಎಂಎಸ್‌’ ಆರೋಪ

ಸಚಿವ ಅಶ್ವತ್ಥನಾರಾಯಣ ವಿರುದ್ಧ ಮತ್ತೆ “ಬಿಎಂಎಸ್‌’ ಆರೋಪ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ponds

ಅವಿಭಜಿತ ಕುಂದಾಪುರ ತಾ.: 69 ಕೆರೆಗಳಿಗೆ ಮರುಜೀವ

tdy-3

ದಳಪತಿ ವಿಜಯ್ ʼಲಿಯೋʼ ಚಿತ್ರದಿಂದ ಹೊರಬಂದ ತ್ರಿಷಾ?: ವೈರಲ್‌ ಸುದ್ದಿಗೆ ನಟಿ ತಾಯಿ ಸ್ಪಷ್ಟನೆ

tdy-2

ಮುಖಾಮುಖಿ ಢಿಕ್ಕಿಯಾಗಿ ಕಂದಕಕ್ಕೆ ಉರುಳಿದ ಬಸ್‌ – ಕಾರು : ಕನಿಷ್ಠ 30 ಮಂದಿ ಮೃತ್ಯು

ಪ್ರಗತಿ ಪಥದತ್ತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌

ಪ್ರಗತಿ ಪಥದತ್ತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌

ಉದಯವಾಣಿ- ಎಂಐಸಿ “ನಮ್ಮ ಸಂತೆ’: ಮಳಿಗೆ ನೋಂದಣಿಗೆ ನಾಳೆವರೆಗೆ ಅವಕಾಶ

ಉದಯವಾಣಿ- ಎಂಐಸಿ “ನಮ್ಮ ಸಂತೆ’: ಮಳಿಗೆ ನೋಂದಣಿಗೆ ನಾಳೆವರೆಗೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.