ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ಜಿಲ್ಲಾದ್ಯಂತ 53,350 ಹೆಕ್ಟೆರ್‌ ರಾಗಿ ಬಿತ್ತನೆ „ ಬಂಪರ್‌ ಇಳುವರಿ ನಿರೀಕ್ಷೆಯಲ್ಲಿರುವ ರಾಗಿ ಬೆಳೆಗಾರರು

Team Udayavani, Oct 20, 2021, 3:24 PM IST

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ದೇವನಹಳ್ಳಿ: ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿರುವ ರಾಗಿ ಬೆಳೆ ಮಳೆಯಿಲ್ಲದೆ ಬತ್ತಿಹೋಗುತ್ತಾ. ಮಳೆಗಾಗಿ ಮುಗಿಲಕಡೆ ಮುಖಮಾಡಿದ್ದ ರೈತಸಮುದಾಯಕ್ಕೆ ಹೆಚ್ಚಿನ ಮಳೆ ಬಂದಿದೆ. ಜಿಲ್ಲೆಯಲ್ಲಿ ರಾಗಿ ಬೆಳೆ ಹಸಿರುಹೊದಿಕೆಯೊಂದಿಗೆ ಹುಲ್ಲುಹಾಸಾಗಿ ಬೆಳೆಯುತ್ತಿದ್ದು ಬಹುತೇಕ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಜುಲೈ ಮತ್ತು ಆಗಸ್ಟ್‌ನಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದು, ಮಳೆ ಆಗಿರಲಿಲ್ಲ. ನಂತರ ಬಂದಮಳೆಗೆ ರಾಗಿ ಪೈರು ಮೊಳಕೆಯೊಡೆದು ಹುಟ್ಟಿಬಂದಿತ್ತು. ಕಳೆದ ಹದಿನೈದು ದಿನಗಳಿಂದ ಉತ್ತಮ ಮಳೆ ಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಬಯಲುಸೀಮೆಯ ಪ್ರದೇಶವಾಗಿರು ವುದರಿಂದ ಯಾವುದೇ ನದಿಮೂಲಗಳು, ಡ್ಯಾಮ್‌ ಗಳು ಇಲ್ಲದ ಕಾರಣ ಮಳೆ ಆಶ್ರಿತವಾಗಿಯೇ ರಾಗಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆ ಆಶ್ರಿತ ಬೆಳೆಗಳೇ ಅಧಿಕವಾಗಿದೆ. ಜಿಲ್ಲೆಯ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಜಿಲ್ಲೆಯಲ್ಲಿ ಒಣಗಿದ್ದ ಬೆಳೆ ಈಗ ಕಳೆಕಟ್ಟಿದೆ. ಕೆಲಕೆರೆಗಳು ಕೋಡಿ ಬಿದ್ದಿವೆ. ಕೆರೆ ಕಟ್ಟೆ, ಹಳ್ಳಕೊಳ್ಳ, ಕೃಷಿಹೊಂಡ, ಕುಂಟೆಗಳಲ್ಲಿ ಮಳೆಯಿಂದ ನೀರು ತುಂಬಿವೆ.

ಮಳೆಯಿಂದ ಅನುಕೂಲವಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಇದೇ ರೀತಿ ಮಳೆ ಬಂದರೆ ರಾಗಿ ಬೆಳೆ ಬಂಪರ್‌ ಬರಲಿದೆ. ರೈತರು ಪ್ರತಿವರ್ಷವೂ ರಾಗಿಬೆಳೆಯನ್ನೇ ನಂಬಿ ಕಾಲಕಾಲಕ್ಕೆ ಮಳೆರಾಯ ಕೃಪೆ ತೋರಬೇಕೆಂದು ಮಳೆಗಾಗಿ ದೇವರ ಮೊರೆ ಹೋಗುತ್ತಾರೆ. ಇದೀಗ ಅಕ್ಟೋಬರ್‌ ಮೊದಲ ವಾರದಿಂದ ಬರುತ್ತಿರುವ ಹದ ಮಳೆಗೆ ಉತ್ತಮ ಬೆಳೆಗಳು ಎಲ್ಲೆಲ್ಲೂ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಸರ್ಕಾರ ರಾಗಿಗೆ ಬೆಂಬಲ ಬೆಲೆ ನಿಗದಿಪಡಿಸಿದೆ.

ಇದನ್ನೂ ಓದಿ;- ಕಾಲುವೆಗೆ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ

ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಆಗುತ್ತಿದೆ. ರೈತರು ನಿತ್ಯಬಳಕೆಗೆ ಸಾಕಾಗುವಷ್ಟು ಇಟ್ಟುಕೊಂಡು ಉಳಿದ ರಾಗಿಯನ್ನು ಮಾರಾಟ ಮಾಡುತ್ತಿದ್ದರಿಂದ ಖರ್ಚಿನ ಭಾಗವಾದರೂ ಸಿಗುತ್ತಿತ್ತು. ಈ ವರ್ಷವೂ ಅದೇ ನಿರೀಕ್ಷೆಯಲ್ಲಿರುವ ರೈತರು ಮಳೆ ಬಿಂದಿರುವುದರಿಂದ ತುಸು ಖುಷಿಯಲ್ಲಿದ್ದಾರೆ. ರಾಸುಗಳಿಗೆ ಮೇವಿನ ಕೊರತೆ ನೀಗಿದೆ. ಹೆಚ್ಚು ಹುಲ್ಲು ಬರುವುದರಿಂದ ರಾಸುಗಳಿಗೆ ಮೇವು ಸಿಗುವಂತಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರು ಇಂದಿಗೂ ಸಹ ಹೈನುಗಾರಿಕೆಯನ್ನು ನಂಬಿದ್ದಾರೆ. ಭೂಮಿತಾಯಿ ಹಸಿರಿನಿಂದ ಕಂಗೊಳಿಸುತ್ತಿದ್ದು, ರಾಸುಗಳಿಗೆ ಬರಪೂರ ಮೇವು ಸಿಗುತ್ತಿದ್ದು ರೈತರಿಗೆ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯಲ್ಲಿ ಮಳೆ- ಬಿತ್ತನೆ ಮಾಹಿತಿ-

„ ಜಿಲ್ಲೆಯಲ್ಲಿ ಜನವರಿಯಿಂದ ಅಕ್ಟೋಬರ್‌ ವರೆಗೆ 910ಮಿ.ಮಿ. ಮಳೆಯಾಗಿದೆ. ಅ, 1 ರಿಂದ 18ರವರೆಗೆ 214ಮಿ.ಮೀ. ಮಳೆಯಾಗಿದೆ.

„ ಅಕ್ಟೋಬರ್‌ ಮಾಹೆಯಲ್ಲಿ ದೇವನಹಳ್ಳಿ-214ಮಿ. ಮೀ., ದೊಡ್ಡಬಳ್ಳಾಪುರ-245ಮಿ.ಮೀ., ನೆಲಮಂಗಲ-221ಮಿ.ಮೀ., ಹೊಸಕೋಟೆ- 157ಮಿ.ಮೀ. ಒಟ್ಟು 214ಮಿ.ಮೀ. ಮಳೆಯಾಗಿದೆ.

„ ಜನವರಿಯಿಂದ ಅಕ್ಟೋಬರ್‌ ವರೆಗೆ ದೇವನಹಳ್ಳಿ- 867ಮಿ.ಮೀ., ದೊಡ್ಡಬಳ್ಳಾಪುರ- 967ಮಿ.ಮೀ., ಹೊಸಕೋಟೆ-886ಮಿ.ಮೀ., ನೆಲಮಂಗಲ-879ಮಿ.ಮೀ. ಒಟ್ಟು 910ಮಿ.ಮೀ. ಮಳೆಯಾಗಿದೆ.

„ ಜಿಲ್ಲೆಯಲ್ಲಿ ಸುಮಾರು 53350 ಹೆಕ್ಟೇರ್‌ ರಾಗಿ ಬಿತ್ತನೆ ಮಾಡಿದ್ದಾರೆ. ರಾಗಿ ಬೆಳೆಯನ್ನು ನಂಬಿದ್ದಾರೆ. ಶೇ.105.7ರಷ್ಟು ರಾಗಿ ಬಿತ್ತನೆ ಕಾರ್ಯ ಮುಗಿದಿದೆ.

„ ದೇವನಹಳ್ಳಿ-10842ಹೆಕ್ಟೇರ್‌, ದೊಡ್ಡಬಳ್ಳಾಪುರ- 16710ಹೆಕ್ಟೇರ್‌, ಹೊಸಕೋಟೆ-9712ಹೆಕ್ಟೇರ್‌, ನೆಲಮಂಗಲ-16086ಹೆಕ್ಟೇರ್‌ ಒಟ್ಟು 53350ಹೆಕ್ಟೇರ್‌ರಾಗಿ ಬಿತ್ತನೆಯಾಗಿದೆ.

“ಕಳೆದವರ್ಷ ತೆನೆ ಬಿಡುವ ವೇಳೆಗೆ ಮಳೆ ಕೈಕೊಟ್ಟ ಪರಿಣಾಮ ಇಳುವರಿ ಕಡಿಮೆ ಬಂದಿತ್ತು. ಈ ಭಾರಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಗಿ ಬೆಳೆ ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿದ್ದೇವೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಗೆ ಅನುಕೂಲವಾಗಿದೆ.”

ರವಿಕುಮಾರ್‌, ರೈತ

ಜಿಲ್ಲೆಯ ಎಲ್ಲಾಕಡೆ ಮಳೆ ಸುರಿಯುತ್ತಿದೆ. ಇದರಿಂದ ರಾಗಿಬೆಳೆಗೆ ಬಹಳ ಅನುಕೂಲವಾಗಿದೆ. ಜಿಲ್ಲೆಯಲ್ಲಿ 53350ಹೆಕ್ಟೇರ್‌ ರಾಗಿ ಬಿತ್ತನೆಯಾಗಿದೆ. ಉತ್ತಮ ಇಳುವರಿ ಬರುವ ಸಾಧ್ಯತೆಯಿದೆ. ರೈತರಿಗೆ ಎಲ್ಲಾ ರೀತಿಯ ಸಲಹೆಗಳನ್ನು ನೀಡಲಾಗುತ್ತಿದೆ.

ವಿನುತ, ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೇಶಕಿ.

ಟಾಪ್ ನ್ಯೂಸ್

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು

ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು

ಲಂಕೆಯ ವನಿತಾ ಕ್ರಿಕೆಟಿಗರಿಗೆ ಕೋವಿಡ್‌

ಲಂಕೆಯ ವನಿತಾ ಕ್ರಿಕೆಟಿಗರಿಗೆ ಕೋವಿಡ್‌

ಈಶ್ವರಪ್ಪ ಪೆದ್ದ, ನಳಿನ್‌ ಭಯೋತ್ಪಾದಕ: ಸಿದ್ದು

ಈಶ್ವರಪ್ಪ ಪೆದ್ದ, ನಳಿನ್‌ ಭಯೋತ್ಪಾದಕ: ಸಿದ್ದು

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರ್ಸಿಂಗ್‌ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಸೋಂಕು

ನರ್ಸಿಂಗ್‌ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಸೋಂಕು

ಕುಟುಂಬಗಳ ನಡುವೆ ಮಾರಾಮಾರಿ

ಕುಟುಂಬಗಳ ನಡುವೆ ಮಾರಾಮಾರಿ

ನವಜಾತ ಶಿಶು ಪತ್ತೆ

ದೇಗುಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ..!

thefted meterials are returned

95 ಲಕ್ಷ ಮೌಲ್ಯದ ಕಳವು ಸ್ವತ್ತು ವಾಪಸ್‌

election analysis

ಮೇಲ್ಮನೆ: ಗ್ರಾಪಂ ಸದಸ್ಯರೇ ನಿರ್ಣಾಯಕ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಯಕ್ಷಗಾನದಿಂದ ಪುರಾಣ ಚಿಂತನೆಗಳ ಪ್ರಚಾರ: ಅದಮಾರು ಶ್ರೀ

ಯಕ್ಷಗಾನದಿಂದ ಪುರಾಣ ಚಿಂತನೆಗಳ ಪ್ರಚಾರ: ಅದಮಾರು ಶ್ರೀ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಮಧುಮೇಹ ಔಷಧಗಳು ಅಗ್ಗವಾಗಲಿ: ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ಎರಡರಲ್ಲೂ ಮಣಿದ ಮಣಿಕಾ ಬಾತ್ರಾ ಜೋಡಿ

ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು

ದೇಶದ ಶಿಲ್ಪಿಗಳ ಚರಿತ್ರೆಗೆ ನಾಂದಿ ಹಾಡಿದ ಕನ್ನಡನಾಡು

ಲಂಕೆಯ ವನಿತಾ ಕ್ರಿಕೆಟಿಗರಿಗೆ ಕೋವಿಡ್‌

ಲಂಕೆಯ ವನಿತಾ ಕ್ರಿಕೆಟಿಗರಿಗೆ ಕೋವಿಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.