ಮಧ್ಯಾಹ್ನ 2ರ ನಂತರ “ದೊಡ್ಡಬಳ್ಳಾಪುರ ಲಾಕ್‌’


Team Udayavani, Jun 30, 2020, 7:16 AM IST

madyana-2

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ಮೂರು ಕೋವಿಡ್‌-19 ಪ್ರಕರಣ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜು.1ರಿಂದ ಮಧ್ಯಾಹ್ನ 2 ಗಂಟೆ ನಂತರ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಅಂಗಡಿಗಳನ್ನು ಸ್ವಯಂ  ಪ್ರೇರಿತವಾಗಿ ಬಂದ್‌ ಮಾಡಲು ವ್ಯಾಪಾರಸ್ಥರು ಒಮ್ಮತದ ನಿರ್ಧಾರ ಕೈಗೊಂಡರು.

ಸೋಮವಾರ ನಗರದ ಕಾವೇರಿ ಕಲ್ಯಾಣ ಮಂದಿರದಲ್ಲಿ ವರ್ತಕರು ಸೇರಿ ವಿವಿಧ ವಲಯಗಳ ವ್ಯಾಪಾರಸ್ಥರು ಸಭೆ ನಡೆಸಿ ದೂರದ ಎಲ್ಲೋ ಇದ್ದ  ಕೋವಿಡ್‌ 19 ಈಗ ನಮ್ಮ ಮನೆಗಳ ಪಕ್ಕಕ್ಕೆ ಬಂದಿದೆ. ನಮ್ಮ ಮನೆಗಳಿಗೂ ಬಾರದಂತೆ ತಡೆಯಲು ಅಂಗಡಿ, ಹೋಟೆಲ್‌ ಗಳ ವಹಿವಾಟನ್ನು ಅನಿವಾರ್ಯವಾಗಿ ಬಂದ್‌ ಮಾಡಲೇ ಬೇಕಿದೆ. ಎಲ್ಲಾ ರೀತಿಯ ವ್ಯಾಪಾರಸ್ಥರ ಅಭಿಪ್ರಾಯ  ಗೌರವಿಸಿ ತಾಲೂ ಕು ಮತ್ತು ನಗರಸಭೆ ಆಡಳಿತ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ಮಾತ ನಾಡಿ, ನಗರದಲ್ಲಿ ಕೋವಿಡ್‌ 19 ಸೋಂಕು ತಡೆಯುವುದು ಕಷ್ಟ. ಗ್ರಾಮೀಣ ಪ್ರದೇಶದಲ್ಲಿ  ಸೋಂಕು ಹರಡುವುದನ್ನು ತಡೆಯುವುದು ಸುಲಭ. ವರ್ತಕರು ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು, ಅಂತರ ಕಾಪಾಡು ವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ತುರ್ತು ಅಗತ್ಯ. ಸಭೆಯಲ್ಲಿ ವರ್ತಕರು,  ಸಂಘಟನೆಗಳ ಮುಖಂಡರು ತಿಳಿಸಿರುವ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿ ಗಳ ಗಮನಕ್ಕೆ ತಂದು ಆದೇಶ ನೀಡಲಾಗು ವುದೆಂದರು. ನಗರಸಭೆ ಪೌರಾಯುಕ್ತ ರಮೇಶ್‌ ಎಸ್‌.ಸುಣಗಾರ್‌ ಮಾತನಾಡಿ, ನಗರಸಭೆ ವ್ಯಾಪ್ತಿಯ 3  ಕಂಟೈನ್ಮೆಂಟ್‌ ಪ್ರದೇಶ ಗಳಲ್ಲಿ ಸೋಂಕು ತಡೆಗೆ ಕ್ರಮ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದೆಂದರು. ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ಕೋವಿಡ್‌-19 ತಡೆಗೆ ಸ್ಥಳೀಯರು,  ವ್ಯಾಪಾರಸ್ಥರು, ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆ ನಂತರ ಸ್ವಯಂ ಪ್ರೇರಣೆಯಿಂದ ಬಂದ್‌ ಕೈಗೊಳ್ಳುವುದಾದರೆ ನಮ್ಮ ಯಾವುದೇ ಅಡ್ಡಿ ಇಲ್ಲ. ಆದರೆ, ನಾವು ಬಲವಂತವಾಗಿ ಬಾಗಿಲು ಮುಚ್ಚಿಸುವುದಿಲ್ಲ. ಸಾರ್ವಜನಿಕ ಸ್ಥಳ  ಹಾಗೂ ಹೋಟೆಲ್‌ಗ‌ಳಲ್ಲಿ ಕುಳಿತು ಧೂಮಪಾನ, ಉಗುಳುವುದು ಮೊದಲಾದ ವರ್ತನೆ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವು ದೆಂದರು.

ಲಾಕ್‌ಡೌನ್‌ -ಕರ್ಫ್ಯೂ: ಸೋಂಕು ತಡೆಗೆ ರಾಜ್ಯ ಸರ್ಕಾರ ಜು.5 ರಿಂದ ಮುಂದಿನ 4 ಭಾನುವಾರಗಳಂದು ಕಟ್ಟುನಿಟ್ಟಿನ ಲಾಕ್‌ ಡೌನ್‌ ಜಾರಿಗೆ ಸೂಚನೆ ನೀಡಿದೆ. ಜನ ಅನ ವಶ್ಯಕವಾಗಿ ತಿರುಗಾಡಿದರೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ  4 ಶನಿವಾರಗಳೂ ಸರ್ಕಾರಿ ಕಚೇರಿಗಳು ರಜೆ ಇರಲಿವೆ. ಆದರೆ, ಲಾಕ್‌ಡೌನ್‌ ಇಲ್ಲ. ಮಂಗಳವಾರದಿಂದಲೇ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆವರೆಗೆ ಪೂರ್ಣ ಪ್ರಮಾಣದ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದರು.

ಟಾಪ್ ನ್ಯೂಸ್

siddu 2

ರಮೇಶ ಜಾರಕಿಹೊಳಿ ಈ ಬಾರಿ ಬಿಜೆಪಿ ಸೋಲಿಸಿದರೆ ಅಚ್ಚರಿಯಿಲ್ಲ: ಸಿದ್ದರಾಮಯ್ಯ

1-fdfd.

ದೂದ್ ಸಾಗರ್ ನಲ್ಲಿ ಕೋವಿಡ್ ಇದೆಯೆಂದು ಸುಳ್ಳು ಪ್ರಚಾರ; ಸ್ಪಷ್ಟನೆ

17banana

ಶಾಲೆಗಳಲ್ಲಿ ಮೊಟ್ಟೆ ವಿತರಿಸದಂತೆ ಬಸವ ಧರ್ಮ ಮಠಾಧೀಶರ ಹೇಳಿಕೆಗೆ ಖಂಡನೆ

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

ಹಿಂದೆಂದೂ ಕಾಣದ ಸಿನಿಮಾ ಅನುಭವ!: ಪುನೀತ್ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಅಶ್ವಿನಿ ಟ್ವೀಟ್

15-crocodile

ಬೆಳ್ತಂಗಡಿ: ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ ರಕ್ಷಣೆ

11–sdsd

ಅಮೇಥಿಯ ಅಭಿವೃದ್ಧಿ ಪ್ರಸ್ತಾಪವೇ ಇಲ್ಲ : ರಾಹುಲ್ ಗೆ ಸ್ಮೃತಿ ಟಾಂಗ್

ashwin

ಮುಂಬೈ ಟೆಸ್ಟ್: ಅನಿಲ್ ಕುಂಬ್ಳೆ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

weaste management

ಕಸ ವಿಲೇವಾರಿ ಘಟಕದ ವಿರುದ್ಧ ತೀವ್ರ ಪ್ರತಿಭಟನೆ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

PANCHAYATH ELECTION

ಗ್ರಾಪಂಗಳಿಗೆ ಚುನಾವಣೆ ಘೋಷಣೆ

lake filled

ಬೂದಿಗೆರೆ ಕೆರೆಯಲ್ಲಿನ್ನು 24ಗಂಟೆಯೂ ನೀರು

MUST WATCH

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

udayavani youtube

ಜೋಯಿಡಾ : ರೈತರಿಗೆ ಒಂದು ಕಡೆ ಮಳೆಯ ಸಮಸ್ಯೆಯಾದರೆ ಇನ್ನೊಂದೆಡೆ ಆನೆಗಳ ಹಾವಳಿ

udayavani youtube

ವಿಭಿನ್ನ ರೀತಿಯಲ್ಲಿ ಹೂವು ಕಟ್ಟುವ ವಿಧಾನ

ಹೊಸ ಸೇರ್ಪಡೆ

siddu 2

ರಮೇಶ ಜಾರಕಿಹೊಳಿ ಈ ಬಾರಿ ಬಿಜೆಪಿ ಸೋಲಿಸಿದರೆ ಅಚ್ಚರಿಯಿಲ್ಲ: ಸಿದ್ದರಾಮಯ್ಯ

18busanura

ನೀರಿನ ಬವಣೆ ತಪ್ಪಿಸಲು ಕೆರೆ ಅಭಿವೃದ್ದಿ: ಭೂಸನೂರ

1-fdfd.

ದೂದ್ ಸಾಗರ್ ನಲ್ಲಿ ಕೋವಿಡ್ ಇದೆಯೆಂದು ಸುಳ್ಳು ಪ್ರಚಾರ; ಸ್ಪಷ್ಟನೆ

17banana

ಶಾಲೆಗಳಲ್ಲಿ ಮೊಟ್ಟೆ ವಿತರಿಸದಂತೆ ಬಸವ ಧರ್ಮ ಮಠಾಧೀಶರ ಹೇಳಿಕೆಗೆ ಖಂಡನೆ

aravind

ಮಹಿಳೆಯರ ಮಾಸಿಕ ಭತ್ಯೆ 1,500 ರೂ ನಿಂದ 2500 ಕ್ಕೆ : ಗೋವಾದಲ್ಲಿ ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.