ಡ್ರೋನ್‌ ಮೂಲಕ ಆಸ್ಪತ್ರೆಗೆ ಔಷಧ ರವಾನೆ

ನ್ಯಾಷನಲ್‌ ಏರೋಸ್ಪೇಸ್ ಲ್ಯಾಬೋರೇಟರಿ ನಡೆಸಿದ ಪ್ರಯೋಗ ಯಶಸ್ವಿ

Team Udayavani, Nov 15, 2021, 11:11 AM IST

ಡ್ರೋನ್‌ ಮೂಲಕ ಆಸ್ಪತ್ರೆಗೆ ಔಷಧ ರವಾನೆ

ಆನೇಕಲ್‌: ಒಂದು ಆಸ್ಪತ್ರೆಯಿಂದ ಮತ್ತೂಂದು ಆಸ್ಪತ್ರೆಗೆ ಡ್ರೋನ್‌ ಮೂಲಕ ವ್ಯಾಕ್ಸಿನ್‌ ರವಾನಿಸುವ ಮೂಲಕ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರಿ ಮಹತ್ತರ ಸಾಧನೆ ಮಾಡಲು ಮುಂದಾಗಿದ್ದು, ಇದೇ ಮೊದಲ ಬಾರಿಗೆ ನಡೆಸಿದ ಈ ಪ್ರಯೋಗವು ಯಶಸ್ವಿಯಾಗಿದೆ.

ಆನೇಕಲ್‌ ತಾಲೂಕಿನ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 50 ವಯಲ್‌ ಕೋವಿಶೀಲ್ಡ್‌ ವ್ಯಾಕ್ಸಿನ್‌ ಕೇವಲ ಏಳು ನಿಮಿಷಕ್ಕೆ ಆಗಸದಲ್ಲಿ ಕೊಂಡೊ ಮೂಲಕ ಹೊಸ ಪ್ರಯೋಗಕ್ಕೆ ಯಶಸ್ಸು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ತುರ್ತು ಸಮಯದಲ್ಲಿ ಡ್ರೋನ್‌ ಮೂಲಕ ಔಷಧಗಳನ್ನು ಸಾಗಿಸಬಹುದಾಗಿದೆ. ಬೆಳಗ್ಗೆ 9.15 ನಿಮಿಷಕ್ಕೆ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 5.4 ಕೆ.ಜಿ. ತೂಕವಿರುವ ವ್ಯಾಕ್ಸಿನ್‌ ಬಾಕ್ಸ್‌ನ್ನು ಹಾರಗದ್ದೆ ಪ್ರಾಥಮಿಕ ಆರೋಗ್ಯಕ್ಕೆ ಕೊಂಡೊಯ್ದಿದೆ.

ಇದನ್ನೂ ಓದಿ:- ಖ್ಯಾತ ಇತಿಹಾಸಕಾರ, ಪದ್ಮವಿಭೂಷಣ ಬಾಬಾಸಾಹೇಬ್ ಪುರಂದರೆ ಇನ್ನಿಲ್ಲ

ಚಂದಾಪುರದಿಂದ ಏಳು ಕಿ.ಮೀ. ದೂರ ಇರುವ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೇವಲ ಏಳು ನಿಮಿಷಕ್ಕೆ ತಲುಪಿದ್ದು, ಮೊದಲನೇ ಬಾರಿಗೆ ನಡೆಸಿದ ಪ್ರಯೋಗ ಯಶಸ್ಸು ಕಂಡಿದೆ. ವಾಹನ, ಸಮಯ, ಕೆಲಸದವರನ್ನು ಬಳಸದೆ ಇದೇ ಮೊದಲ ಬಾರಿಗೆ ತುರ್ತು ಪರಿಸ್ಥಿತಿಯಲ್ಲಿ ವ್ಯಾಕ್ಸಿನ್‌ ಕಳುಹಿಸಲು ಇಂತಹ ಒಂದು ಕಾರ್ಯವನ್ನು ಮಾಡಲು ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರಿ ಮುಂದಾಗಿದ್ದು, ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್‌ ಹಾಗೂ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರಿ ಅಧಿಕಾರಿ ವೆಂಕಟೇಶ್‌ ಸಮ್ಮುಖದಲ್ಲಿ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವ್ಯಾಕ್ಸಿನ್‌ ಹೊತ್ತ ಡ್ರೋನ್‌ಗೆ ಚಾಲನೆ ನೀಡಲಾಯಿತು.

14 ನಿಮಿಷ ಹಾರಾಟ: ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವ್ಯಾಕ್ಸಿನ್‌ ಹೊತ್ತು ಹಾರಗದ್ದೆಗೆ ತಲುಪಿದ ಬಳಿಕ ಅಲ್ಲಿಂದ ಮತ್ತೆ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಏಳು ನಿಮಿಷದಲ್ಲಿ ವಾಪಸ್‌ ಬಂದ ಡ್ರೋನ್‌ ಒಟ್ಟು 14 ನಿಮಿಷಗಳ ಹಾರಾಟವನ್ನು ನಡೆಸಿ 14 ಕಿಲೋಮೀಟರ್‌ನಷ್ಟು ದೂರ ತಲುಪುವ ಮೂಲಕ ಯಶಸ್ವಿಯಾಗಿ ಹಾರಾಟ ನಡೆಸಿದೆ. 1.2 ಕಿಲೋ ಮೀಟರ್‌ ಮೇಲೆ ಹಾರಾಟ ನಡೆಸಿಕೊಂಡು ಹೋಗಿರುವ ಡ್ರೋನ್‌ ಯಶಸ್ವಿಯಾಗಿ ಹಾರಾಟವನ್ನು ಪ್ರಾಯೋಗಿಕ ವಾಗಿ ನಡೆಸಿ ರುವುದರಿಂದ ಮುಂದಿನ ದಿನಗಳಲ್ಲಿ ಇದನ್ನು ಮುಂದುವರಿಸುವ ಚಿಂತನೆಯನ್ನು ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರಿ ಹೊಂದಿದೆ.

ಚರ್ಚಿಸಿ ಕ್ರಮ ಕೈಗೊಳ್ಳಲಿದ್ದಾರೆ: ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್‌ ಮಾತನಾಡಿ, ಪ್ರಾಯೋಗಿಕವಾಗಿ ಡ್ರೋನ್‌ ಮೂಲಕ ವ್ಯಾಕ್ಸಿನ್‌ ಸರಬರಾಜು ಮಾಡುವ ಮೂಲಕ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರಿ ಅಧಿಕಾರಿಗಳು ಉತ್ತಮವಾದ ಕಾರ್ಯ ಮಾಡಿದ್ದಾರೆ. ಇದು ಯಾವುದೇ ಹೆಚ್ಚುವರಿ ಖರ್ಚು ಇಲ್ಲದೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಇದು ಪ್ರಾಯೋಗಿಕವಾಗಿ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಚರ್ಚಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಆನೇಕಲ್‌ ತಾಲೂಕು ಆರೋಗ್ಯ ಅಧಿಕಾರಿ ವಿನಯ್‌, ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ ನೀತು ಮತ್ತಿತರರು ಇದ್ದರು.

15 ಕೆ.ಜಿ. ಭಾರ ಹೊರುವ ಸಾಮರ್ಥ್ಯ

ಇದು ಪ್ರಾಯೋಗಿಕವಾಗಿ ನಡೆಸಿರುವ ಹಾರಾಟ. 15 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಇರುವ ಡ್ರೋನ್‌ ಇದಾಗಿದ್ದು, ಕೇವಲ ಏಳು ನಿಮಿಷದಲ್ಲಿ ಚಂದಾಪುರದಿಂದ ಹಾರಗದ್ದೆವರೆಗೆ ಹಾರಾಟ ನಡೆಸಿದೆ. 14 ನಿಮಿಷಗಳಲ್ಲಿ ಚಂದಾಪುರದಿಂದ ಹಾರಗದ್ದೆಗೆ ಹೋಗಿ ಮತ್ತೆ ಬಂದಿರುವುದು ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಇದನ್ನು ಯಾವ ರೀತಿ ಬಳಸಬೇಕು ಎನ್ನುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರಿ ಅಧಿಕಾರಿ ವೆಂಕಟೇಶ್‌ ಹೇಳಿದರು.

ಟಾಪ್ ನ್ಯೂಸ್

1-ff

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಕೆ. ರೋಸಯ್ಯ ವಿಧಿವಶ

ಪಾಕಿಸ್ತಾನ; ಧರ್ಮನಿಂದನೆ ಆರೋಪ, ಲಂಕಾ ಪ್ರಜೆಗೆ ಬೆಂಕಿ ಹಚ್ಚಿ ಸಜೀವ ದಹನ

ಪಾಕಿಸ್ತಾನ; ಧರ್ಮನಿಂದನೆ ಆರೋಪ, ಲಂಕಾ ಪ್ರಜೆಗೆ ಬೆಂಕಿ ಹಚ್ಚಿ ಸಜೀವ ದಹನ

ಮದಗಜ ಚಿತ್ರ ವಿಮರ್ಶೆ: ಹೈವೋಲ್ಟೇಜ್‌ ಗಜಕಾಳಗದಲ್ಲಿ ಮಾಸ್‌ ಮಿಂಚು

ಮದಗಜ ಚಿತ್ರ ವಿಮರ್ಶೆ: ಹೈವೋಲ್ಟೇಜ್‌ ಗಜಕಾಳಗದಲ್ಲಿ ಮಾಸ್‌ ಮಿಂಚು

ಮದುರೈ: ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಹೋಟೆಲ್, ಮಾಲ್ ಗೆ ಪ್ರವೇಶಕ್ಕೆ ನಿರ್ಬಂಧ

ಮದುರೈ: ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಹೋಟೆಲ್, ಮಾಲ್ ಗೆ ಪ್ರವೇಶಕ್ಕೆ ನಿರ್ಬಂಧ

ರಾಜ್ಯದಲ್ಲಿ ಜನ, ಅಧಿಕಾರಿಗಳು ಬದಲಾವಣೆ ಬಯಸುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ರಾಜ್ಯದಲ್ಲಿ ಜನ, ಅಧಿಕಾರಿಗಳು ಬದಲಾವಣೆ ಬಯಸುತ್ತಿದ್ದಾರೆ: ಡಿ.ಕೆ.ಶಿವಕುಮಾರ್

rape

ಬೆಂಗಳೂರು: ಮಹಿಳೆಯ ಎದುರೇ ಕ್ಯಾಬ್‌ ಚಾಲಕನಿಂದ ಹಸ್ತಮೈಥುನ

ತಿರುಪತಿಯಲ್ಲಿ ಆಣೆ ಮಾಡಲು ನಾನು ಸಿದ್ದ, ಆದರೆ..: ಎಚ್ಚರಿಕೆ ನೀಡಿದ ಶಾಸಕ ಶಾಸಕ ಎಸ್.ಆರ್. ವಿಶ್ವನಾಥ್

ತಿರುಪತಿಯಲ್ಲಿ ಆಣೆ ಮಾಡಲು ನಾನು ಸಿದ್ದ, ಆದರೆ..:ಎಚ್ಚರಿಕೆ ನೀಡಿದ ಶಾಸಕ ಎಸ್.ಆರ್.ವಿಶ್ವನಾಥ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PANCHAYATH ELECTION

ಗ್ರಾಪಂಗಳಿಗೆ ಚುನಾವಣೆ ಘೋಷಣೆ

lake filled

ಬೂದಿಗೆರೆ ಕೆರೆಯಲ್ಲಿನ್ನು 24ಗಂಟೆಯೂ ನೀರು

protest

ಸಚಿವರ ಮನವಿಗೂ ಕ್ಯಾರೆ ಎನ್ನಲಿಲ್ಲ..!

ಆನೆಗಳ ಹಿಂಡು

ಆನೇಕಲ್‌ನಲ್ಲಿ ಕಾಡಾನೆ ಹಿಂಡು ದಾಳಿ: ರಾಗಿ ಬೆಳೆ ನಾಶ

aids victims in benglore rural

ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 3,771 ಮಂದಿ ಏಡ್ಸ್‌ ಪೀಡಿತರು..

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

1-ff

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಕೆ. ರೋಸಯ್ಯ ವಿಧಿವಶ

7knowledge

ಭಾಷಾ ಜ್ಞಾನ ಅರಿತರೆ ಹೆಮ್ಮೆ

ಪಾಕಿಸ್ತಾನ; ಧರ್ಮನಿಂದನೆ ಆರೋಪ, ಲಂಕಾ ಪ್ರಜೆಗೆ ಬೆಂಕಿ ಹಚ್ಚಿ ಸಜೀವ ದಹನ

ಪಾಕಿಸ್ತಾನ; ಧರ್ಮನಿಂದನೆ ಆರೋಪ, ಲಂಕಾ ಪ್ರಜೆಗೆ ಬೆಂಕಿ ಹಚ್ಚಿ ಸಜೀವ ದಹನ

6protest

ಕಳಪೆ ಸಿಸಿ ರಸ್ತೆ ನಿರ್ಮಾಣ: ಸ್ಥಳೀಯರಿಂದ ಪ್ರತಿಭಟನೆ

5border

ಗಡಿಭಾಗದ ಅನ್ಯ ಮಾರ್ಗಗಳಲ್ಲಿ ನಿಗಾ ಅವಶ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.