ಜಲಸಂರಕ್ಷಣೆಗಾಗಿ ನೀರಿನ ಮೂಲ ರಕ್ಷಣೆ ಅನಿವಾರ್ಯ
Team Udayavani, Jan 6, 2021, 12:23 PM IST
ನೆಲಮಂಗಲ: ಕೆರೆ, ಕುಂಟೆಗಳು ನೀರಿನಪ್ರಮುಖ ಮೂಲಗಳಾಗಿದೆ. ಹಳ್ಳಿ ಜನರು ಅದೇನೀರು ಬಳಸಿ ಆರೋಗ್ಯವಂತರಾಗಿದ್ದರು. ಆದರೆ, ಇಂದು ಅವುಗಳ ರಕ್ಷಣೆ ಅನಿವಾರ್ಯವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದರು.
ಬೆಂಗಳೂರು ಉತ್ತರ ತಾಲೂಕಿನ ಗೋಪಾಲಪುರ ಗ್ರಾಮದ ಕೆರೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಹಾಲು ನೀಡುವ ಗೋವು ಹಾಗೂ ನೀರಿನಮೂಲಗಳಾದ ಕೆರೆ, ಕುಂಟೆ ರಕ್ಷಣೆ ನಮ್ಮ ಜವಾಬ್ದಾರಿ. ಆದರೆ, ಇಂದು ಕೆರೆಗಳ ಜಾಗಗಳನ್ನು ಬಡಾವಣೆ, ರೆಸಾರ್ಟ್ ನಿರ್ಮಾಣ ಮಾಡಿದ್ದು, ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಅಂತರ್ಜಲದ ಮಟ್ಟ ಕುಸಿದು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಬೆಳೆ ಬೆಳೆಯಲು ಸಹಕಾರಿ: ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಲ್.ಹೆಚ್ ಮಂಜುನಾಥ್‌ಮಾತನಾಡಿ, 38 ಎಕರೆಯ ಗೋಪಾಲಪುರ ಕೆರೆಯನ್ನು 136 ದಿನದಲ್ಲಿ 48730 ಟ್ರ್ಯಾಕ್ಟರ್ ಲೋಡ್ ಹೂಳೆತ್ತವ ಮೂಲಕ ಸ್ಥಳೀಯರು 48.23 ಲಕ್ಷ ಹಾಗೂ ಕೆರೆ ಪ್ರಾಧಿಕಾರ 20 ಲಕ್ಷ ಸೇರಿ ದಂತೆ ಒಟ್ಟಾರೆ 68.73 ಲಕ್ಷ ವೆಚ್ಚದಲ್ಲಿ ಕೆರೆಅಭಿವೃದ್ಧಿ ಮಾಡಲಾಗಿದೆ. ಇದರಿಂದ 500ಕುಟುಂಬಗಳಿಗೆ ನೆರವಾಗಲಿದೆ. ಈ ಕೆರೆಯಲ್ಲಿಅಂದಾಜು 9.74 ಕೋಟಿ ಲೀಟರ್ ನೀರು ಸಂಗ್ರಹವಾಗಲಿದ್ದು, ರೈತರು ಬೆಳೆ ಬೆಳೆಯಲು ಸಹಕಾರಿಯಾಗಿದೆ ಎಂದರು.
ಬಾಗಿನ ಅರ್ಪಣೆ: ಗೋಪಾಲಕೆರೆ ಅಭಿವೃದ್ಧಿ ನಂತರ ಕೆರೆಗೆ ನೀರು ಬಂದಿದ್ದು, ಗೋಪಾಲಪುರ ಕೆರೆ ಬಳಕೆದಾರರ ಸಂಘದ ವತಿಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಆರ್.ವಿಶ್ವನಾಥ್ ಸಮ್ಮುಖದಲ್ಲಿ ಕೆರೆಗೆ ಬಾಗಿನ ಅರ್ಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ರವಿಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಇ.ರವಿಕುಮಾರ್, ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಎಂ, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಮ, ಗೋಪಾಲ ಕೆರೆ ಬಳಕೆದಾರರಸಂಘದ ಅಧ್ಯಕ್ಷ ರಾಮಸ್ವಾಮಿ, ಅಖೀಲಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷೆ ವೀಣಾ ರಮೇಶ್, ಯೋಜನಾಧಿಕಾರಿ ಪಾರ್ವತಿ ಹಾಜರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444