Udayavni Special

ಬಾಶೆಟ್ಟಿಹಳ್ಳಿ ಕೆರೆ ಪುನಶ್ಚೇತನ ಸಂಭ್ರಮಾಚರಣೆ

ಗತಕಾಲದ ನೆನಪು ಮಾಡಿಕೊಂಡ ಗ್ರಾಮದ ಹಿರಿಯರು | ಎರಡೇ ದಿನದಲ್ಲಿ ಕೆರೆ ನೀರು ಬಿಡಿಸದ ಜಿಲ್ಲಾಧಿಕಾರಿ

Team Udayavani, Jul 3, 2019, 11:03 AM IST

br-tdy-2…

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಕೆರೆ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ, ನಡೆದ ಕೆರೆ ಪುನಶ್ಚೇತನ ಸಂಭ್ರಮಾಚರಣೆಯಲ್ಲಿ ಕೆರೆ ಅಭಿವೃದ್ಧಿಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.

ದೊಡ್ಡಬಳ್ಳಾಪುರ: ಹಿಂದೆ ಭತ್ತ ಬೆಳೆಯುತ್ತಿದ್ದ ಬಾಶೆಟ್ಟಿಹಳ್ಳಿಯಲ್ಲಿ ಇಂದು ಕೈಗಾರಿಕೆಗಳು ಸ್ಥಾಪನೆಯಾಗಿ ಬೆಳೆಯೇ ಇಲ್ಲವಾಗಿದೆ. ಆದರೆ ಕುಡಿಯುವ ನೀರಿಗಾದರೂ ಕೆರೆ ಉಳಿಸಿಕೊಳ್ಳಬೇಕು ಎಂದು ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದರು ಸಾಧ್ಯವಾಗಿರಲಿಲ್ಲ.ನಮ್ಮ ಕಣ್ಣ ಮುಂದೆಯೇ ನೋಡ ನೋಡುತ್ತಲೇ ಕೆರೆ ಒಣಗಿ ಹೋಗಿದ್ದನ್ನು ನೋಡಿ ವ್ಯಸನಪಟ್ಟಿದ್ದೆವು. ಈಗ ಕೆರೆ ನೋಡಿದರೆ ಮತ್ತೆ ಹಳೆಯ ನೆನಪುಗಳು ಮರುಕಳಿಸುತ್ತಿವೆ ಎಂದು ಗ್ರಾಪಂ ಸದಸ್ಯ ಬಿ.ಕೃಷ್ಣಪ್ಪ ಹೇಳಿದರು.

ಬಾಶೆಟ್ಟಿಹಳ್ಳಿ ಗ್ರಾಪಂ, ಕೆರೆ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ, ಕೈಗಾರಿಕೆಗಳು, ಸಾರ್ವಜನಿಕರು ಹಾಗೂ ವತಿಯಿಂದ ಅಭಿವೃದ್ಧಿಗೊಳಿಸಲಾದ ಬಾಶೆಟ್ಟಿಹಳ್ಳಿ ಕೆರೆ ಪುನಶ್ಚೇತನ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿಯಿಂದ ತುಂಬಿದ ಕೆರೆ: ಕೆರೆ ಅಂಗಳದಲ್ಲಿ ದನ, ಕುರಿಗಳು ಮೇಯುತ್ತ ಇದ್ದ ದಿನಗಳು ಮತ್ತೆ ಬರುತ್ತದೆಯೇ? ಕೆರೆಯಲ್ಲಿ ನೀರು ನಿಲ್ಲುವುದನ್ನು ನಮ್ಮ ಜೀವಿತ ಕಾಲದಲ್ಲಿಯೇ ಮತ್ತೆ ನೋಡಲು ಸಾಧ್ಯವ ಎನ್ನುವಂತಾಗಿತ್ತು. ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ನಂತರ ಕೆರೆ ನಿಧಾನವಾಗಿ ಹೂಳು ತುಂಬಿಕೊಳ್ಳುತ್ತ, ಕೊಳಚೆ ನೀರಿನಿಂದ ತುಂಬಿಕೊಳ್ಳುತ್ತ, ಕೆರೆ ಅಂಗಳದಲ್ಲಿ ಜಾಲಿ ಮರ ಸೇರಿದಂತೆ ಬೇಡವಾದ ಗಿಡಗಳು ಬೆಳೆಯಲಾರಂಭಿಸಿದವು ಎಂದರು.

2 ದಿನದಲ್ಲಿ ಅಭಿವೃದ್ಧಿ: ಕೆರೆಯಲ್ಲಿ ಮಣ್ಣು ತುಂಬಿಕೊಳ್ಳಲು ಹಲವಾರು ಜನ ಅಡ್ಡಾದಿಡ್ಡಿಯಾಗಿ ಬೃಹತ್‌ ಗುಂಡಿಗಳು ತೋಡಿದ್ದರು. ಕೆರೆಯನ್ನು ಹೇಗಾದರೂ ಮಾಡಿ ಅಭಿವೃದ್ಧಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅವರ ಬಳಿ ಕೆರೆ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ ಎರಡೇ ದಿನಗಳಲ್ಲಿ ವಿಶ್ವ ಜಲದಿನಾಚರಣೆ ದಿನ ಕಾಮಗಾರಿಯನ್ನೇ ಪ್ರಾರಂಭಿಸಿದರು. ಈಗ ನೋಡಿದರೆ ನಮ್ಮೂರಿನ ಕೆರೆಯಲ್ಲಿ ನೀರು ನಿಂತಿದ್ದು ಎಲ್ಲರೂ ಕೆರೆ ಅಂಚಿನಲ್ಲಿ ನಿಂತು ಸಂಭ್ರಮಪಡುವಂತಾಗಿದೆ ಎಂದರು.

ಸಂತಸ ತಂದಿದೆ: ಬಾಶೆಟ್ಟಿಹಳ್ಳಿ ಕೈಗಾರಿಕೋದ್ಯಮಿಗಳ ಸಂಘದ ಸಿಇಒ ಆಂಜನೇಯಲು ಮಾತನಾಡಿ, 80ರ ದಶಕದಲ್ಲಿ ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಹೊಸದಾಗಿ ಸ್ಥಾಪನೆಯಾಗುತ್ತಿದ್ದ ಕಾಲದಲ್ಲಿ ಇಲ್ಲಿನ ಕೆರೆ ಹಾಗೂ ಕೆರೆಯ ಮುಂಭಾಗದ ಕಾಲುವೆಗಳಲ್ಲಿ ಸದಾ ನೀರು ಹರಿಯುತ್ತಿದ್ದವು. ಆದರೆ ಕೈಗಾರಿಕಾ ಪ್ರದೇಶ ಬೃಹತ್‌ ಆಗಿ ಬೆಳೆದ ನಂತರ ಕೆರೆ ಎಲ್ಲಿದೆ ಎನ್ನುವುದೇ ತಿಳಿಯದಂತೆ ಹಾಳಾಗಿತ್ತು. ಕೆರೆ ಅಭಿವೃದ್ಧಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಿದ್ದರೂ ಸಹ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಮತಿಯೇ ದೊರೆತಿರಲಿಲ್ಲ. ಆದರೆ ಜಿಲ್ಲಾಧಿಕಾರಿಗಳ ಆಸಕ್ತಿಯಿಂದಾಗಿ ಕೈಗಾರಿಕೆಗಳವರು ಸೇರಿದಂತೆ ಎಲ್ಲರೂ ಸಹಕಾರ ನೀಡಿದ್ದು ಕೆರೆ ಸುಂದರವಾಗಿ ಅಭಿವೃದ್ಧಿಗೊಂಡಿರುವುದನ್ನು ನೋಡಿದರೆ ಸಂತಸವಾಗಿದೆ ಎಂದರು.

ಕೆರೆ ಸಂರಕ್ಷಣೆಗೆ ಒಳ್ಳೆಯ ಉದಾಹರಣೆ: ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾವು ನೋಕಿ ಯಾದ ಪಾಲುದಾರಿಕೆಯಲ್ಲಿ, ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿದ್ದು ಬಾಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿಯು ಸಮುದಾಯ ನೇತೃತ್ವದ ಕೆರೆ ಸಂರಕ್ಷಣೆಗೆ ಒಳ್ಳೆಯ ಉದಾಹರಣೆ. ಗ್ಲೋಬಲ್ ವೆಟ್ಲ್ಯಾಂಡ್‌ ಔಟ್ಲುಕ್‌ 2018 ರ ಪ್ರಕಾರ, ಕೆರೆಗಳ ನಾಶವು ಅರಣ್ಯಗಳಿಗಿಂತ ಮೂರು ಪಟ್ಟು ವೇಗವಾಗಿ ಆಗುತ್ತಿದೆ. ಹಾಗಿದ್ದರೂ, ಬಾಶೆಟ್ಟಿಹಳ್ಳಿ ಕೆರೆ ಇದಕ್ಕೆ ವ್ಯತಿರಿಕ್ತವಾಗಿ ಮಹೋನ್ನತ ಉದಾಹರಣೆಯಾಗಿ ಕಂಗೊಳಿಸುತ್ತಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾದ ನದಿ, ಕೆರೆ ಹಾಗೂ ಜಲ ನಿಯಮ ಯೋಜನೆಯ ನಿರ್ದೇಶಕ ಸುರೇಶ ಬಾಬು ತಿಳಿಸಿದರು.

ಬಾಶೆಟ್ಟಿಹಳ್ಳಿ ಕೈಗಾರಿಕಾ ಸಂಘಗಳ ಅಧ್ಯಕ್ಷ ಗುಲ್ಲಟ್ಟಿ, ಬಾಶೆಟ್ಟಿಹಳ್ಳಿ ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮಗುಂಡಪ್ಪ, ಉಪಾಧ್ಯಕ್ಷೆ ಶಿಲ್ಪಮುನಿಶಂಕರ್‌, ಡಬ್ಲ್ಯೂ ಡಬ್ಲ್ಯೂ ಎಫ್‌ ನಿರ್ದೇಶಕ ಸುರೇಶ್‌ ಬಾಬು, ತಾಪಂ ಸದಸ್ಯ ಚಿಕ್ಕಆಂಜಿನಪ್ಪ, ಗ್ರಾಪಂ ಸದಸ್ಯ ಮುನಿರಾಜು, ರಾಮಾಂಜಿನಪ್ಪ ಇದ್ದರು.

ಕೆರೆ ಅಂಚಿನಲ್ಲಿ ಸಸಿಗಳನ್ನು ನೆಡಲಾಯಿತು. ಜವಾಹರ್‌ ನವೋದಯ ವಿದ್ಯಾಲಯದ ಹಾಗೂ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನೀರಿನ ಮಹತ್ವ ಕುರಿತು ನಾಟಕ ಪ್ರದರ್ಶನ ನಡೆಯಿತು. ಡಬ್ಲ್ಯೂ ಡಬ್ಲ್ಯೂ ಎಫ್‌ ಅಧಿಕಾರಿ ವೈ.ಟಿ.ಲೋಹಿತ್‌ ಕಾರ್ಯಕ್ರಮ ನಿರ್ವಹಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಳ್ಳದಾಸ್ತಾನು ವಿರುದ್ಧ ಕ್ರಮದ ಎಚ್ಚರಿಕೆ ಬೆನ್ನಲ್ಲೇ ಈರುಳ್ಳಿ ದರ ಇಳಿಕೆ

ಕಳ್ಳದಾಸ್ತಾನು ವಿರುದ್ಧ ಕ್ರಮದ ಎಚ್ಚರಿಕೆ ಬೆನ್ನಲ್ಲೇ ಈರುಳ್ಳಿ ದರ ಇಳಿಕೆ

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು, ಹಲವರು ನಾಪತ್ತೆ

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

br-tdy-1

ಕೃಷಿಯಲ್ಲಿ ತಂತ್ರಜ್ಞಾನದ ಅರಿವು ಅಗತ್ಯ

br-tdy-1

ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

br-tdy-1

ನಿರಂತರ ಮಳೆಗೆ ನೆಲಕಚ್ಚಿದ ರಾಗಿ ಬೆಳೆ

br–tdy-2

ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಕಳ್ಳದಾಸ್ತಾನು ವಿರುದ್ಧ ಕ್ರಮದ ಎಚ್ಚರಿಕೆ ಬೆನ್ನಲ್ಲೇ ಈರುಳ್ಳಿ ದರ ಇಳಿಕೆ

ಕಳ್ಳದಾಸ್ತಾನು ವಿರುದ್ಧ ಕ್ರಮದ ಎಚ್ಚರಿಕೆ ಬೆನ್ನಲ್ಲೇ ಈರುಳ್ಳಿ ದರ ಇಳಿಕೆ

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದೋಣಿ ಅವಘಡ: ನಾಲ್ವರು ಸಾವು, ಹಲವರು ನಾಪತ್ತೆ

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.