ಪರಿಸರದ ಅರಿವು ಮೂಡಿಸಿ

Team Udayavani, Aug 23, 2019, 6:01 PM IST

ದೇವನಹಳ್ಳಿ: ಶಾಲಾ ಹಂತದಿಂದಲೇ ಮರ ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದರು.

ತಾಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ವತಿಯಿಂದ ಪೌಷ್ಟಿಕ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಹಂತದಲ್ಲೇ ಪರಿಸರ ಜಾಗೃತಿ:ಜಿಪಂ ಸಿಇಒ ಕಳೆದ ಆರು ತಿಂಗಳಿನಿಂದ ಶ್ರಮವಹಿಸಿ ಶಾಲೆ, ಹಾಸ್ಟೆಲ್‌, ಅಂಗನವಾಡಿ ಇತರೆ ಸರ್ಕಾರಿ ಜಾಗಗಳನ್ನು ಗುರ್ತಿಸಿ ಪೌಷ್ಟಿಕ ಆಹಾರವುಳ್ಳ ತರಕಾರಿ, ಇತರೆ ಸಸಿ ಹಾಕುವುದರ ಮೂಲಕ

ಶಾಲಾ ಹಂತದಲ್ಲಿಯೇ ಪರಿಸರದ ಜಾಗೃತಿ ಯನ್ನು ಮಕ್ಕಳಲ್ಲಿ ತುಂಬಲು ಅನುಕೂಲ ವಾಗುತ್ತಿದೆ. ಪೌಷ್ಟಿಕ ಆಹಾರ ತಿನ್ನುವುದರಿಂದ ಆರೋಗ್ಯವಂತ ಮಕ್ಕಳನ್ನು ಕಾಣಬಹುದು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಮಳೆಕೊಯ್ಲು ಅಳವಡಿಸಿಕೊಳ್ಳಿ: ಮಳೆ ಕೊಯ್ಲು ಬಯಲು ಸೀಮೆ ಜನರಿಗೆ ಮಳೆ ನೀರು ಸಂಗ್ರಹ ವರದಾನವಾಗಲಿದೆ. ಜನ ಬರಗಾಲದ ಸ್ಥಿತಿ ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬರು ಮಳೆಕೊಯ್ಲು ಮಾಡಿದರೆ ಅನುಕೂಲ ವಾಗುತ್ತದೆ ಎಂದರು. 6 ತಿಂಗಳ ಹಿಂದೆ ಸಭೆ:ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ಲತಾ ಮಾತನಾಡಿ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಾಲೆ, ಹಾಸ್ಟೆಲ್‌, ಅಂಗನವಾಡಿ ಜಾಗಗುರ್ತಿಸಲಾಗಿದೆ. 1669 ಶಾಲೆಗಳಲ್ಲಿ ನುಗ್ಗೆ, ಕರಿಬೇವು, ಸೀಬೆ, ಮಾವು, ಸೀತಾಫಲ ಹಾಗೂ ತರಕಾರಿ ಸಸಿ ನೀಡಿ ಮಕ್ಕಳಿಗೆ ಸಾವಯವ ಪೋಷಕಾಂಶಗಳ ಆಹಾರ ದೊರೆಯುವ ನಿಟ್ಟಿನಲ್ಲಿ ಮಾಡಲಾಗುತ್ತಿದೆ. 6 ತಿಂಗಳ ಹಿಂದೆಯೇ ಸಭೆ ಮಾಡಿ ಎಷ್ಟು ಗಿಡಗಳ ಬೇಡಿಕೆ ಇದೆ ಎಂಬುವುದರ ಮಾಹಿತಿಯನ್ನು ಪಡೆದು ತೋಟಗಾರಿಕೆ ಇಲಾಖೆ ಮೂಲಕ ಸಸಿ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ತಯಾರಿ: ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಮೂರನೇ ಸ್ಥಾನಕ್ಕೆ ಬಂದಿದ್ದೇವೆ. ಈಗಿನಿಂದಲೇ ಎಸ್ಸೆಸ್ಸೆಲ್ಸಿಗಾಗಿ ಮಕ್ಕಳನ್ನು ತಯಾರು ಮಾಡಿ ಮೊದಲ ಸ್ಥಾನಕ್ಕೆ ಬರಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಜಯಮ್ಮ ಮಾತನಾಡಿ, ಇದೊಂದು ಉತ್ತಮ ಯೋಜನೆಯಾಗಿದೆ. ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿ ಸಲಾಗಿತ್ತು. ತೋಟಗಾರಿಕೆ ಇಲಾಖೆ ಉತ್ತಮ ಕೆಲಸಕ್ಕೆ ಮುಂದಾಗಿದ್ದು ಗಾಳಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದರು. ಈ ವೇಳೆ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ, ತಾಪಂ ಅಧ್ಯಕ್ಷೆ ಚೈತ್ರಾ, ಸದಸ್ಯೆ ಶೈಲಜಾ, ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ಜಗದೀಶ್‌, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಮಹಾಂತೇಶ್‌ ಮುರುಗೋಡು, ಪ್ರಭಾರ ತಾಲೂಕು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸುಬ್ಬಣ್ಣ, ಕರ್ನಾಟಕ ಪಬ್ಲಿಕ್‌ ಶಾಲೆ ಪ್ರಾಂಶುಪಾಲೆ ವಾಣಿಶ್ರೀ, ಮುಖ್ಯ ಶಿಕ್ಷಕ ಬಸವರಾಜ್‌, ದೈಹಿಕ ಶಿಕ್ಷಣ ಶಿಕ್ಷಕ ಸುಬಾನ್‌ಸಾಬ್‌ ಮತ್ತಿತರರಿದ್ದರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೊಡ್ಡಬಳ್ಳಾಪುರ : ರೇಷ್ಮೆ ಬೆಲೆ ಏರಿಕೆ ಹಾಗೂ ಮಾರುಕಟ್ಟೆಯ ವೈಪರೀತ್ಯಗಳಿಂದಾಗಿ ರೇಷ್ಮೆ ನಗರಿಗೆ ಸ್ವಾಗತ ಎಂದು ಕಮಾನು ಮೂಲಕ ಊರಿಗೆ ಸ್ವಾಗತಿಸುತ್ತಿದ್ದ ದೊಡ್ಡಬಳ್ಳಾಪುರ...

  • ದೊಡ್ಡಬಳ್ಳಾಪುರ: ನಮ್ಮ ಜಾನಪದ ಕಲೆ, ಸಂಸ್ಕೃತಿಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಜಾನಪದ ತರಬೇತಿ ಕಾರ್ಯಕ್ರಮ ರೂಪಿಸಲಾಗಿದ್ದು,...

  • ಆನೇಕಲ್‌: ಅರಣ್ಯ ಇಲಾಖೆಯ ನೂತನ ಸಚಿವ ಆನಂದ್‌ ಸಿಂಗ್‌ ಶುಕ್ರವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಪಾರ್ಕ್‌, ಜೂ ವೀಕ್ಷಣೆ ಮಾಡಿದ ನಂತರ ಅಧಿಕಾರಿಗಳೊಂದಿಗೆ...

  • ದೊಡ್ಡಬಳ್ಳಾಪುರ : ಡಾ.ಸರೋಜಿನಿ ಮಹಿಷಿ ವರದಿಯ ಜಾರಿಗೆ ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ಹೋರಾಟವನ್ನು ಬೆಂಬಲಿಸಿ ಪ್ರಜಾ ವಿಮೋಚನಾ ಚಳವಳಿ ಸ್ವಾಭಿಮಾನದ...

  • ದೊಡ್ಡಬಳ್ಳಾಪುರ : ಪ್ರೇಮಿಗಳ ದಿನಾಚರಣೆ, ಮದುವೆ ಸೀಸನ್‌ನಿಂದಾಗಿ ಗುಲಾಬಿ ಹೂಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಡಚ್‌ ರೋಸ್‌ ಸೇರಿದಂತೆ ವಿವಿಧ ಜಾತಿಯ ಗುಲಾಬಿ...

ಹೊಸ ಸೇರ್ಪಡೆ