ಉಡದ ಮಾಂಸ ಸಾಗಾಟ: ಬಂಧನ

ಫ್ರೈ ಮಾಡಿಕೊಂಡು ಟೆಂಪೋದಲ್ಲಿ ಸಾಗುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳಿಂದ ಬಂಧನ: ತನಿಖೆ

Team Udayavani, Jan 5, 2021, 3:19 PM IST

ಉಡದ ಮಾಂಸ ಸಾಗಾಟ: ಬಂಧನ

ಉಡದ ಮಾಂಸ ಸಾಗಾಟ ಮಾಡುತ್ತಿದ್ದ ಟೆಂಪೋ ಪರಿಶೀಲನೆ ಮಾಡಿದ ನೆಲಮಂಗಲ ತಾಲೂಕಿನ ವಲಯಅರಣ್ಯಾಧಿಕಾರಿಗಳು

ನೆಲಮಂಗಲ: ಉಡವನ್ನು ಕೊಂದು ಮಾಂಸವನ್ನು ಟೆಂಪೋ ಮೂಲಕ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಾಲೂಕು ಅರಣ್ಯ ಅಧಿಕಾರಿಗಳು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

ಮಲ್ಲಪ್ಪ ಬಿ ಮುತ್ತಣ್ಣನವರ್‌(31) ಬಂಧಿತ ಆರೋಪಿ. ಈ ನೆಲಮಂಗಲದಿಂದ ಬೆಂಗಳೂರು ಮಾರ್ಗವಾಗಿ ಟೆಂಪೋದಲ್ಲಿ ಉಡದ ಮಾಂಸವನ್ನು ಫ್ರೈ ಮಾಡಿಕೊಂಡು ಸಂಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾದ ನಾಯಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಮೀ ಪದಲ್ಲಿ ದಾಳಿ ಮಾಡಿದ ವಲಯ ಅರಣ್ಯಾಧಿಕಾರಿ ಲಶ್ಕರ್‌ ನೇತೃತ್ವದ ಅಧಿಕಾರಿಗಳ ತಂಡ, ಆರೋಪಿಯನ್ನು ಬಂಧಿಸಿದೆ. 600 ಗ್ರಾಂ ಫ್ರೈ ಮಾಡಿರುವ ಉಡದ ಮಾಂಸ ಹಾಗೂ ಟೆಂಪೋವನ್ನುವಶಕ್ಕೆ ಪಡೆದುಕೊಳ್ಳಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಅನ್ವಯ ದೂರು ದಾಖಲು ಮಾಡಲಾಗಿದೆ ಎಂದು ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಸುಬ್ಬರಾವ್‌ ತಿಳಿಸಿದರು.

ತನಿಖೆ ಆರಂಭ: ಉಡವನ್ನು ಕೊಂದು ಮಾಂಸವನ್ನು ಸಾಗಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ವ್ಯಕ್ತಿಗಳು ಈ ಪ್ರಕರಣದಲ್ಲಿರುವುದು ಕಂಡು ಬಂದಿದೆ. ಉಡವನ್ನು ಸೆರೆ ಹಿಡಿದಿದ್ದು ಎಲ್ಲಿ? ಯಾರುಆರೋಪಿಯ ಜೊತೆಯಾಗಿದ್ದರು? ಮಾಂಸವನ್ನು ಫ್ರೈ ಮಾಡಿದ್ದು ಎಲ್ಲಿ, ಎಲ್ಲಿಗೆ ಸಾಗಾಟ ಮಾಡುತ್ತಿದ್ದರು ಎಂಬ ಸಮಗ್ರ ಮಾಹಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ವಿಶೇಷ ತಂಡದ ಮೂಲಕ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

ಮಾಹಿತಿ ನೀಡಿ: ವನ್ಯಜೀವಿಗಳನ್ನು ಬೇಟೆ ಆಡುವುದು, ಸಾಗಾಟ ಮಾಡುವುದು, ಉಡಗಳಂತಹ ಅಳಿವಿನಂಚಿನ ಪ್ರಾಣಿಗಳನ್ನು ಸೆರೆಹಿ ಡಿಯುವುದು ಕಂಡುಬಂದರೆ ತಕ್ಷಣ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಅಥವಾಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು, ಮಾಹಿತಿ ನೀಡಿದವರ ಹೆಸರುಗಳನ್ನು ಗೌಪ್ಯವಾಗಿ ಇಟ್ಟು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಲಶ್ಕರ್‌ ತಿಳಿಸಿದರು.

ಟಾಪ್ ನ್ಯೂಸ್

ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16

ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16

ICC U-19 World Cup: Afghanistan beat Sri Lanka

ಲಂಕಾಗೆ ಶಾಕ್ ನೀಡಿದ ಅಫ್ಘಾನ್ ಹುಡುಗರು: ಸೆಮಿ ಫೈನಲ್ ತಲುಪಿದ ಅಫ್ಘಾನ್ ಅಂಡರ್ 19 ತಂಡ

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

28-1

ಕಾರು-ಬೈಕ್ ಢಿಕ್ಕಿ: ಓರ್ವ ಸಾವು, ಇಬ್ಬರು ಗಂಭೀರ

Execution for man who robbed hotel for girlfriend’s bail

ಗೆಳತಿಗೆ ಜಾಮೀನಿಗಾಗಿ ಜೋಡಿ ಕೊಲೆ ಮಾಡಿದ್ದಾತನಿಗೆ ಚುಚ್ಚುಮದ್ದಿನ ಮೂಲಕ ಮರಣದಂಡನೆ!

ಹುಟ್ಟುಹಬ್ಬದ ಪ್ರಯುಕ್ತ ಸಿಎಂ ಬೊಮ್ಮಾಯಿ ಗೋಪೂಜೆ: ಶುಭ ಹಾರೈಸಿದ ಪ್ರಧಾನಿ ಮೋದಿ

ಹುಟ್ಟುಹಬ್ಬದ ಪ್ರಯುಕ್ತ ಸಿಎಂ ಬೊಮ್ಮಾಯಿ ಗೋಪೂಜೆ: ಶುಭ ಹಾರೈಸಿದ ಪ್ರಧಾನಿ ಮೋದಿ

India Maharajas lost match against World Giants in legends league

ಬ್ರೆಟ್ ಲಿ ಯಾರ್ಕರ್ ಗೆ ಮಣಿದ ಮಹಾರಾಜರು ಕೂಟದಿಂದ ಔಟ್; ನಮನ್-ಪಠಾಣ್ ಹೋರಾಟ ವ್ಯರ್ಥ; ವಿಡಿಯೋಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

ಮಾವಿಗೆ ಹೂ; ಭಾರೀ ಇಳುವರಿ ನಿರೀಕ್ಷೆ

ಮಾವಿಗೆ ಹೂ; ಭಾರೀ ಇಳುವರಿ ನಿರೀಕ್ಷೆ

Untitled-1

ಹಣಗಳಿಸಲು ಯುವತಿಯ ಅಪಹರಣ ಮಾಡಿದ ಕುಟುಂಬ ಪೊಲೀಸರ ವಶಕ್ಕೆ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16

ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16

2selection

5ರಂದು ಪ್ರಥಮ ಪ್ರಜೆ ಆಯ್ಕೆಗೆ ಮುಹೂರ್ತ

ICC U-19 World Cup: Afghanistan beat Sri Lanka

ಲಂಕಾಗೆ ಶಾಕ್ ನೀಡಿದ ಅಫ್ಘಾನ್ ಹುಡುಗರು: ಸೆಮಿ ಫೈನಲ್ ತಲುಪಿದ ಅಫ್ಘಾನ್ ಅಂಡರ್ 19 ತಂಡ

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

28-1

ಕಾರು-ಬೈಕ್ ಢಿಕ್ಕಿ: ಓರ್ವ ಸಾವು, ಇಬ್ಬರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.