Udayavni Special

ಬಿಬಿಎಂಪಿಯಿಂದ ಪ್ಲಾಸ್ಟಿಕ್‌ ಸ್ವೀಕರಿಸಿದ ಬಿಐಎಎಲ್‌

Team Udayavani, Aug 27, 2019, 3:00 AM IST

bbmp-inda

ದೇವನಹಳ್ಳಿ: ಪರಿಸರ ಸಂರಕ್ಷಣೆ ಮತ್ತು ಮುಂದುವರಿಕೆ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡುವುದಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು(ಬಿಎಲ್‌ಆರ್‌ ವಿಮಾನ ನಿಲ್ದಾಣ) ಸುಮಾರು 11 ಟನ್‌ಗಳಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಿಬಿಎಂಪಿಯಿಂದ ಸ್ವೀಕರಿಸಿದೆ.

ರಸ್ತೆ ನಿರ್ಮಾಣಕ್ಕೆ ಬಳಕೆ: ಈ ಪ್ಲಾಸ್ಟಿಕ್‌ ಅನ್ನು ವಿಮಾನ ನಿಲ್ದಾಣ ಆವರಣದ ಒಳಗಿನ ರಸ್ತೆ ನಿರ್ಮಿಸುವ ಕಾರ್ಯಗಳಿಗಾಗಿ ಬಿಐಎಎಲ್‌ ಬಳಕೆ ಮಾಡಲಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ ಒಂದು ಬಾರಿ ಮಾತ್ರ ಬಳಸುವ ಪ್ಲಾಸ್ಟಿಕ್‌ ಅನ್ನು ನಿಷೇಧಿಸುವುದರೊಂದಿಗೆ ಪ್ಲಾಸ್ಟಿಕ್‌ ನಿರ್ವಹಣೆಯತ್ತ ಬಿಐಎಎಲ್‌ ಈಗಾಗಲೇ ಮೊದಲ ಹೆಜ್ಜೆಯಿಟ್ಟಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಪ್ಲಾಸ್ಟಿಕ್‌ ಅನ್ನು ಬಿಐಎಎಲ್‌ನ ತಂಡಕ್ಕೆ ಹಸ್ತಾಂತರಿಸಿದರು.

ಶ್ಲಾಘನೀಯ: ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಗಂಗಾಬಿಕ ಮಾತನಾಡಿ, ಪ್ಲಾಸ್ಟಿಕ್‌ನಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ. ಭೂಮಿಯೊಳಗೆ ಪ್ಲಾಸ್ಟಿಕ್‌ ಹೋಗುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಪ್ಲಾಸ್ಟಿಕ್‌ ನಿಂದ ಪರಿಸರದ ಅಂದಚೆಂದ ಹಾಳಾಗುತ್ತಿದೆ ಎಂದು ಹೇಳಿದರು.

50 ಟನ್‌ಗೂ ಹೆಚ್ಚಿನ ಪ್ಲಾಸ್ಟಿಕ್‌ ಅವಶ್ಯ: ಪರಿಸರ ಅಭಿವೃದ್ಧಿ ಹಾಗೂ ಸುಸ್ಥಿರತೆಯೆಡೆಗೆ ಗಮನ ಕೇಂದ್ರೀಕರಿಸಿರುವ ಬಿಐಎಎಲ್‌ಗೆ ಸುಮಾರು 50 ಟನ್‌ಗಳಿಗೂ ಹೆಚ್ಚಿನ ಪ್ಲಾಸ್ಟಿಕ್‌ನ ಅಗತ್ಯವಿದೆ. ಬಿಐಎಎಲ್‌ ಇತ್ತೀಚೆಗೆ ಪ್ಲಾಸ್ಟಿಕ್‌ ಅನ್ನು ಬಿಟುಮೆನ್‌ ಜೊತೆಗೆ ಮಿಶ್ರಣ ಮಾಡಿ ಪ್ರಯೋಗಾಲಯ ಪರೀಕ್ಷೆ ನಡೆಸಿತ್ತು. ಸ್ವೀಕಾರಾರ್ಹ ಮಿತಿಗಳಲ್ಲಿ ಫಲಿತಾಂಶಗಳು ಬಂದಿದ್ದವು. ವಿಪರೀತ ಹವಾಮಾನ ಸ್ಥಿತಿ ತಡೆದುಕೊಳ್ಳಬಲ್ಲದು.

ಸಾಧಾರಣ ರಸ್ತೆಗಳು ಮೂರು ವರ್ಷಗಳ ಕಾಲ ಉಳಿದುಕೊಳ್ಳುವ ನಿರೀಕ್ಷೆ ಇದ್ದರೆ, ಪ್ಲಾಸ್ಟಿಕ್‌ ಮಿಶ್ರಿತ ರಸ್ತೆಗಳು ದೀರ್ಘ‌ಬಾಳಿಕೆ ಹೊಂದಿವೆ. ಹೆಚ್ಚುವರಿ ಫಾಲಿಮರೈಸ್ಡ್ ರಸ್ತೆಗಳು ಪ್ಲಾಸ್ಟಿಕ್‌ ಹಾವಳಿ ನಿಭಾಯಿಸಲು ಅತ್ಯಂತ ಜನಪ್ರಿಯ ಮತ್ತು ಪರಿಸರ ಸ್ನೇಹಿ ಪರಿಹಾರಗಳಾಗಿ ಬೆಳಕಿಗೆ ಬರುತ್ತಿವೆ ಎಂದು ತಿಳಿಸಿದರು. ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ರವಿಕುಮಾರ್‌ ಸುರ್‌ಪುರ್‌ ಮತ್ತಿತರರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

PTI23-04-2020_000083B

ದಾವಣಗೆರೆ: 124 ಜನರಲ್ಲಿ ಕೋವಿಡ್ ದೃಢ, ಸೋಂಕಿನಿಂದ ಒಬ್ಬರು ಸಾವು

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ

ಸಾವರ್ಕರ್‌ಗೆ ಏಕೆ ಇದುವರೆಗೆ ಭಾರತ ರತ್ನ ನೀಡಿಲ್ಲ? ಬಿಜೆಪಿಗೆ ಶಿವಸೇನೆ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

br-tdy-1

ಕೃಷಿಯಲ್ಲಿ ತಂತ್ರಜ್ಞಾನದ ಅರಿವು ಅಗತ್ಯ

br-tdy-1

ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

br-tdy-1

ನಿರಂತರ ಮಳೆಗೆ ನೆಲಕಚ್ಚಿದ ರಾಗಿ ಬೆಳೆ

br–tdy-2

ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

IPL

IPL 2020 : ಪಂಜಾಬ್ VS ಕೋಲ್ಕತಾ; ರಾಹುಲ್ ಪಡೆಗೆ 150 ರನ್ ಗೆಲುವಿನ ಗುರಿ

PTI23-04-2020_000083B

ದಾವಣಗೆರೆ: 124 ಜನರಲ್ಲಿ ಕೋವಿಡ್ ದೃಢ, ಸೋಂಕಿನಿಂದ ಒಬ್ಬರು ಸಾವು

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಪಿಲಿಕುಳ : ಹಳೇ ತಲೆಮಾರಿನ 21 ವರ್ಷದ ಹುಲಿ “ವಿಕ್ರಮ್” ಇನ್ನಿಲ್ಲ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಉಪ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ : ಶರವಣ ಆರೋಪ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

ಮಲ್ಯ ಸಾಲದಲ್ಲಿ 3,600 ಕೋಟಿ ವಸೂಲಿ, 11 ಸಾವಿರ ಕೋಟಿ ರೂ. ಬಾಕಿ: ಸುಪ್ರೀಂಗೆ ಅರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.