ಸಮಾಜದ ಅಜ್ಞಾನ ಹೋಗಲಾಡಿಸಿದ ಬುದ್ಧ

Team Udayavani, May 17, 2022, 2:50 PM IST

ಸಮಾಜದ ಅಜ್ಞಾನ ಹೋಗಲಾಡಿಸಿದ ಬುದ್ಧ

ದೇವನಹಳ್ಳಿ: ಸಮಾಜದಲ್ಲಿ ಅಜ್ಞಾನವನ್ನು ಹೋಗಲಾಡಿಸಿ, ಸುಜ್ಞಾನವನ್ನು ನೀಡಿದ ಬುದ್ಧ ವಿಶ್ವದ ಜ್ಞಾನಜ್ಯೋತಿ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ತಿಳಿಸಿದರು.

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಬುದ್ಧ ಧಮ್ಮ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 2566ನೇ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಇಡೀ ಜಗತ್ತು ಬುದ್ಧನ ಮಾರ್ಗವನ್ನು ಅನುಸರಿಸುತ್ತಿದ್ದು,ಇದರಿಂದ ಶಾಂತಿ, ನೆಮ್ಮದಿ ಮತ್ತು ಕರುಣೆ ನೋಡಲುಸಾಧ್ಯವಾಗಿದೆ. ದೇವನಹಳ್ಳಿಯಲ್ಲಿ ಬುದ್ಧ ವಿಹಾರಸ್ಥಾಪನೆಗೆ 2 ಎಕರೆ ಸೂಕ್ತ ಜಾಗ ನೀಡಲು ತಹಶೀಲ್ದಾರ್‌ಗೆಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಅಂಬೇಡ್ಕರ್‌ಭವನದಲ್ಲಿರುವ ಎಲ್ಲ ಸಮಸ್ಯೆ ಬಗೆಹರಿಸಿ ಮೂಲಭೂತ ಸೌಕರ್ಯ ನೀಡಲು ಗಮನ ಹರಿಸಲಾಗುವುದು. ಅದಕ್ಕೆಈಗಾಗಲೇ ಕಮಿಟಿ ರಚನೆ ಮಾಡಲಾಗಿದೆ ಎಂದರು.

ಸಾಮಾಜಿಕ ಸಬಲೀಕರಣ: ಬೆಂಗಳೂರು ಪ್ರಧಾನ ಪೊಲೀಸ್‌ ಕಚೇರಿ ವರಿಷ್ಠಾಧಿಕಾರಿ ಸಿದ್ದರಾಜುಮಾತನಾಡಿ, 2500 ವರ್ಷದ ಹಿಂದೆಯೇ ಸಾಮಾಜಿಕಸಬಲೀಕರಣ, ಪ್ರಗತಿಪರ ಚಿಂತನೆ ಹುಟ್ಟು ಹಾಕಿದ್ದು ಭಗವಾನ್‌ ಬುದ್ಧರು. ಅದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅನುಷ್ಠಾನ ಮಾಡಿದ್ದು ಡಾ. ಅಂಬೇಡ್ಕರ್‌. ಹೊಸ ಶಿಕ್ಷಣ ನೀತಿಯ ಜಾರಿಗೆ ಕರ್ನಾಟಕ ರಾಜ್ಯವು ಪ್ರಯೋಗ ಕೇಂದ್ರವಾಗಿಸಿಕೊಂಡಿದ್ದಾರೆ ಎಂದರು.

ಬುದ್ಧ ವಿಷ್ಣುವಿನ 9ನೇ ಅವತಾರ: ಶೋಷಿತರ, ದಮನೀತರ ಇತಿಹಾಸ ಮರೆಮಾಚಿ ವೈದಿಕ ಕತೆಗಳನ್ನು ಮಕ್ಕಳ ಪಠ್ಯದಲ್ಲಿ ಸೇರಿಸಲಾಗುತ್ತಿದೆ. ಬಾಬಾ ಸಾಹೇಬ್‌ಹೇಳಿದಂತೆ ಇತಿಹಾಸ ಮರೆತವರು ಅದನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ ಎಲ್ಲರೂ ಜಾಗೃತಿರಾಗಬೇಕು.ಭಗವಾನ್‌ ಬುದ್ಧ ವಿಷ್ಣುವಿನ 9ನೇ ಅವತಾರ. ಬೌದ್ಧ ತತ್ವದಿಂದ ಪ್ರೇರಿತಗವಾದ ಲಲಿತಾಸಾರವು ಹಿಂದೂ ಗ್ರಂಥ, ಪಿರಮಿಡ್‌ ದೇಗುಲದಿಂದ ಶಾಂತಿ ಎಂದೆಲ್ಲಾಸುಳ್ಳು ಹೇಳಿಕೊಂಡು ಬುದ್ಧ ತತ್ವಕ್ಕೆ ಪರ್ಯಾಯಮಾರ್ಗ ಹುಟ್ಟು ಹಾಕುವ ಷ್ಯಡ್ಯಂತ್ರ ನಡೆಯುತ್ತಿದೆ ಎಚ್ಚರ ಎಂದು ಹೇಳಿದರು.

ಅಶೋಕ ಬೌದ್ಧ ವಿಹಾರದ ಚೌಡಪ್ಪನಹಳ್ಳಿ ಲೋಕೇಶ್‌ಮಾತನಾಡಿ, ಸಂವಿಧಾನ ಕತೃ ಅಂಬೇಡ್ಕರ್‌ 1956ರಲ್ಲಿ ಸುಮಾರು 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸೇರಿದರು. 22 ಅಂಶಗಳ ಪ್ರತಿಜ್ಞಾ ವಿಧಿ ನೀಡಿದ್ದಾರೆ. ಅದರ ಅನ್ವಯ ಭಗವಾನ್‌ ಬುದ್ಧ ಪ್ರಜ್ವಲ ಬೆಳಕಿನ ಮಾರ್ಗದಲ್ಲಿ ಎಲ್ಲರೂ ಸಾಗೋಣ ಎಂದರು.

ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಿ: ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಪಕ ಶಫಿ ಅಹಮ್ಮದ್‌ ಮಾತನಾಡಿ, ಜಿಲ್ಲೆಯನ್ನು ನಂದಿ ಮಂಡಲವೆಂದು ಇತಿಹಾಸದಲ್ಲಿ ಗುರುತಿಸಲಾಗುತಿತ್ತು. ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟದಲ್ಲಿ 2500 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಚೈತ್ಯ ಹಾಗೂ ವಿಹಾರ ಮಂದಿರಗಳು ಇದ್ದ ಕುರುಹುಗಳಿವೆ. ಪಂಚಸ್ತಂಭಗಳ ಸ್ತೂಪಗಳು ಅಲ್ಲಿದ್ದವೂ. ಬೌದ್ಧ ಧರ್ಮದ ಕುರಿತು ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕು. ಸಮಗ್ರ ಅಧ್ಯಯನಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ಶಿವರಾಜ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಉಮಾಪತಿ, ಮೌಲ್ವಿ ಅಬ್ದುಲ್‌ ಜಬ್ಬರ್‌, ವಕೀಲ ಎಸ್‌. ಸಿದ್ಧಾರ್ಥ, ವೈದ್ಯ ಡಾ.ಜ್ಞಾನ್‌ ಕುಮಾರ್‌, ಬೌದ್ಧ ಬಿಕ್ಕು ಜ್ಞಾನಲೋಕ ಬತಾಂಜೆ ಮುಖಂಡ ಎನ್‌. ನಾರಾಯಣಸ್ವಾಮಿ, ಕುಂದಾಣ ಕೆ.ವಿ.ಸ್ವಾಮಿ, ಸಿ.ಮುನಿಯಪ್ಪ, ಅಕ್ಕಯಮ್ಮ, ಶ್ರೀನಿವಾಸ್‌ ದನಿ, ಜಂಗಮಕೋಟೆ ಕೃಷ್ಣಪ್ಪ, ವಕೀಲ ಮಧು, ಜೊನ್ನಹಳ್ಳಿ ಜಯರಾಮ್, ದೊಡ್ಡ ಚಿಕ್ಕಣ್ಣ, ಬ್ಯಾಂಕ್‌ ನಾರಾಯಣ್ಣಪ್ಪ, ನಾಗೇನಹಳ್ಳಿ ಕೃಷ್ಣಪ್ಪ, ಮಾಳಿಗೇನಹಳ್ಳಿ ಪ್ರಕಾಶ್‌, ಕುಂದಾಣ ಮುನಿಶಾಮಪ್ಪ,ಆಲೂರು ದುದ್ದನಹಳ್ಳಿ ಈರಣ್ಣ, ಬಾಲಪ್ಪ, ಕೊಯಿರಾ ಮುನಿನರಸಪ್ಪ, ಕಾರಹಳ್ಳಿ ಮುನಿರಾಜು, ಹೊಸಕೋಟೆ ಆಂಜಿನಪ್ಪ, ರವಿಕಲಾ, ಖುದೂಸ್‌, ಎಚ್‌.ಕೆ. ವೆಂಕಟೇಶಪ್ಪ ಹಾಗೂ ಇತರರು ಇದ್ದರು.

ಬುದ್ಧನ ಪಂಚಶೀಲ ತತ್ವ ಅಳವಡಿಸಿಕೊಳ್ಳಿ : ಭಾರತೀಯರು ಈ ನೆಲದ ಮೂಲ ಧರ್ಮವಾದಬೌದ್ಧ ಧರ್ಮವನ್ನು ಅನುಸರಿಸುವುದು. ಬುದ್ಧನಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂಅಳವಡಿಸಿಕೊಳ್ಳಬೇಕು. ಭಾರತದ ಎಲ್ಲಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಆದ್ದರಿಂದ,ಬುದ್ಧ ಜ್ಞಾನದ ಬೆಳಕಿನಲ್ಲಿ ಮುಂದೆ ಸಾಗಬೇಕು. ಅತಿಯಾದ ಮೋಹವನ್ನು ಬಿಡಬೇಕು. ಮನುಷ್ಯರು ಸರಳ ರೀತಿಯಲ್ಲಿ ಪ್ರಕೃತಿಯನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಹೇಳಿದರು.

ಟಾಪ್ ನ್ಯೂಸ್

ಆಸ್ಕರ್‌ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್‌ ನಟಿ ಕಾಜೋಲ್‌

ಆಸ್ಕರ್‌ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್‌ ನಟಿ ಕಾಜೋಲ್‌

ಕುಂಬಳೆ : ವಿದ್ಯಾರ್ಥಿನಿಯ ಅಪಹರಣ ಯತ್ನ ವಿಫಲ : ವ್ಯಾನ್‌ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ

ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್‌ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ

ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್

ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್

ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ

ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ

1-sasad

ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ

Uddhav

ಕೊನೆ ಕ್ಷಣದ ಬದಲಾವಣೆ : ಔರಂಗಾಬಾದ್- ಸಂಭಾಜಿ ನಗರ, ಒಸ್ಮಾನಾಬಾದ್- ಧಾರಶಿವ್

ನೂತನ ಉಪರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್ : ಆಗಸ್ಟ್ 6 ರಂದು ಚುನಾವಣೆ

ನೂತನ ಉಪರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್ : ಆಗಸ್ಟ್ 6 ರಂದು ಚುನಾವಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-18

ಸ್ನೇಹಿತನನ್ನು ಬೀಳ್ಕೊಡಲು ಏರ್ಪೋರ್ಟ್ ಗೆ ಹೋಗುತ್ತಿದ್ದಾಗ ಅಪಘಾತ: ಬೈಕ್‌ ಸವಾರ ಸಾವು

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ

ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಇಂದಿಗೂ ಪ್ರಸ್ತುತ

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಇಂದಿಗೂ ಪ್ರಸ್ತುತ

ಐತಿಹಾಸಿಕ ಆವತಿ ಬೆಟ್ಟ ಅಭಿವೃದ್ಧಿಗೆ ನಿರ್ಲಕ್ಷ್ಯ

ಐತಿಹಾಸಿಕ ಆವತಿ ಬೆಟ್ಟ ಅಭಿವೃದ್ಧಿಗೆ ನಿರ್ಲಕ್ಷ್ಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

MUST WATCH

udayavani youtube

ತುಪ್ಪವನ್ನು ಯಾರು, ಯಾವಾಗ, ಎಷ್ಟು ಸೇವಿಸಿದರೆ ಒಳ್ಳೆಯದು..?

udayavani youtube

ಬನಹಟ್ಟಿಯಲ್ಲಿ ಉಡುಪು ಕಳ್ಳತನ:ವಿಚಿತ್ರ ವ್ಯಕ್ತಿ ಆಕಾರ ನೋಡಿ ಬೆಚ್ಚಿ ಬಿದ್ದ ಜನತೆ!

udayavani youtube

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌!

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಸುಳ್ಯ – ಮಡಿಕೇರಿ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ : ಆತಂಕದಲ್ಲಿ ಜನತೆ

ಹೊಸ ಸೇರ್ಪಡೆ

ಆಸ್ಕರ್‌ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್‌ ನಟಿ ಕಾಜೋಲ್‌

ಆಸ್ಕರ್‌ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್‌ ನಟಿ ಕಾಜೋಲ್‌

ಕುಂಬಳೆ : ವಿದ್ಯಾರ್ಥಿನಿಯ ಅಪಹರಣ ಯತ್ನ ವಿಫಲ : ವ್ಯಾನ್‌ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ

ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್‌ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ

ಕುಣಿಗಲ್: ಕೆಂಪೇಗೌಡ ಜಯಂತೋತ್ಸವ ಮೆರವಣಿಗೆ ವೇಳೆ ಲೋಪ: ತಹಶೀಲ್ದಾರ್ ಮಹಬಲೇಶ್ವರ್ ಕ್ಷಮೆ 

ಕುಣಿಗಲ್: ಕೆಂಪೇಗೌಡ ಜಯಂತೋತ್ಸವ ಮೆರವಣಿಗೆ ವೇಳೆ ಲೋಪ: ತಹಶೀಲ್ದಾರ್ ಮಹಬಲೇಶ್ವರ್ ಕ್ಷಮೆ 

ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್

ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್

ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ

ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.