ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಬನ್ನಿ


Team Udayavani, Jan 5, 2021, 3:10 PM IST

ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಬನ್ನಿ

ದೇವನಹಳ್ಳಿ: ಸಭೆಗೆ ಬಂದು ಹೋದರೆ ಸಾಲದು, ಸಮರ್ಪಕ ಮಾಹಿತಿಯೊಂದಿಗೆಹಾಜರಾಗಬೇಕು ಎಂದು ಜಿಪಂ ಅಧ್ಯಕ್ಷ ವಿ.ಪ್ರಸಾದ್‌ ತಿಳಿಸಿದರು.

ತಾಲೂಕಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೊರೊನಾ,ಗ್ರಾಪಂ ಚುನಾವಣೆ ನೀತಿ ಸಂಹಿತೆ, ಇತರೆಕಾರಣಗಳಿಂದ ಸರ್ವ ಸದಸ್ಯರ ಸಾಮಾನ್ಯಸಭೆ ಒಂದು ತಿಂಗಳು ಮುಂದೂಡಲಾಗಿತ್ತು.ಸಭೆಯಲ್ಲಿ ಏನೋ ಒಂದು ಹರಕೆ ಉತ್ತರನೀಡಬಹುದೆಂದು ಅಧಿಕಾರಿಗಳುಅಂದುಕೊಂಡಿದ್ದಾರೆ. ಆದರೆ, ಎಲ್ಲಾಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದರು.

ಕಠಿಣ ಕ್ರಮದ ಎಚ್ಚರಿಕೆ: ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆ ನೌಕರರು, ನರ್ಸ್ ಗಳಿಗೆ ಆರೇಳು ತಿಂಗಳಾದರೂ ಸಂಬಳನೀಡುತ್ತಿಲ್ಲ ಎಂದು ದೂರುಗಳು ಬರುತ್ತಿವೆ.ಆದರೆ, ಜಿಲ್ಲಾ ಆರೋಗ್ಯಾಧಿಕಾರಿಗಳುಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇಸಂಬಳ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಜಿಲ್ಲಾ ಆರೋಗ್ಯಾಧಿಕಾರಿಗಳಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ದೂರಿದರು.

ವರ್ಗ ಮಾಡಿಸಿಕೊಂಡು ಹೋಗಿ: ಆರೋಗ್ಯ ಅಧಿಕಾರಿಗಳೇ ನಿಮಗೆ ಒಂದುತಿಂಗಳ ಸಂಬಳ ಅಗದಿದ್ದರೆ ಏನುಮಾಡುತ್ತೀರಿ? ಕೋವಿಡ್‌ ಸಂದರ್ಭದಲ್ಲಿಡಿ ದರ್ಜೆ ನೌಕರರು, ನರ್ಸ್‌ಗಳಿಗೆ ಸಂಬಳಇಲ್ಲದಿದ್ದರೆ ಹೇಗೆ ಜೀವನ ಸಾಗಿಸುತ್ತಾರೆ.ಮಾನವೀಯ ರೀತಿ ಕೆಲಸ ಮಾಡಿ,ಇಲ್ಲದಿದ್ದರೆ ಬೇರೆ ಜಿಲ್ಲೆಗೆ ವರ್ಗಮಾಡಿಸಿಕೊಂಡು ಹೋಗಿ ಎಂದು ಹೇಳಿದರು.

ಡೀಸಿ, ಸಿಇಒಗೆ ಮನೆ ನಿರ್ಮಾಣ: ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಜನರಿಗೆಅನುಕೂಲವಾಗುವ ರೀತಿ ಕೆಲಸಮಾಡಬೇಕು. ಕಾಟಾಚಾರಕ್ಕೆ ಬಂದುಹೋದರೆ ಆಗದು. ಕೋವಿಡ್ 2ನೇ ಅಲೆಬರುತ್ತಿದೆ. ಅದಕ್ಕೆ ಪೂರಕವಾಗಿಕಾರ್ಯಕ್ರಮ ರೂಪಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಕೋವಿಡ್ ಲಸಿಕೆ ಬಂದರೆ ದಾಸ್ತಾನು ಮಾಡಲು, ಈಗಾಗಲೇ ರೂಪುರೇಷೆಕೈಗೊಂಡು, ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ಮನೆ ನಿರ್ಮಿಸಲು ದೊಡ್ಡಬಳ್ಳಾಪುರದ ಬಳಿ ಜಾಗ ಗುರುತಿಸಲಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನೀರಿಗೆ ತೊಂದರೆ ಆಗದಿರಲಿ: ಜಿಪಂ ಸಿಇಒ ಎಂ.ಆರ್‌.ರವಿಕುಮಾರ್‌ ಮಾತನಾಡಿ, ಬೇಸಿಗೆ ಸಮೀಪಿಸುತ್ತಿರುವ ಕಾರಣ 4 ತಾಲೂಕುಗಳಲ್ಲಿ ಕುಡಿಯುವನೀರಿಗೆ ಎಲ್ಲೆಲ್ಲಿ ಸಮಸ್ಯೆ ಇರುವುದೆಂದು ನೋಡಿಕೊಂಡು, ನಿರ್ವಹಣೆ ಮಾಡಲುಗ್ರಾಪಂಗೆ ಹೊಣೆ ನೀಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದರು.

ಸರ್ಕಾರ ವಿವಿಧ ಇಲಾಖೆಗಳ ಕಾಮಗಾರಿಗೆ ಈಗಾಗಲೇ ಹಣಬಿಡುಗಡೆಗೊಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಬಳಸಿಕೊಂಡುಮಾ.5 ರೊಳಗೆ ಖಜಾನೆಗೆ ಹಣಬಳಕೆಪತ್ರವನ್ನು ಸಲ್ಲಿಸಬೇಕು. ಹಣ ಒಂದು ವೇಳೆದುರುಪಯೋಗವಾದಲ್ಲಿ ಸಂಬಂಧಿಸಿದಇಲಾಖೆಯ ಅಧಿಕಾರಿಗಳ ಸಂಬಳದಿಂದ ನಷ್ಟ ಪಡೆಯಲಾಗುವುದು ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ ಎಂದರು.

ಜಿಪಂ ಉಪಕಾರ್ಯದರ್ಶಿ ಕರಿಯಪ್ಪ,ಯೋಜನಾಧಿಕಾರಿ ವಿನುತಾರಾಣಿ, ಜಿಲ್ಲಾಲೆಕ್ಕಾಧಿಕಾರಿ ರಮೇಶ್‌ ರೆಡ್ಡಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಪಂ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತತರು ಇದ್ದರು.

ಟಾಪ್ ನ್ಯೂಸ್

1-rwerw

ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್

10death

ಬಂಟ್ವಾಳ: ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಮರದಿಂದ ಬಿದ್ದು ಸಾವು

vidhana-soudha

ಪೊಲೀಸರ ಮೇಲೆ ಶಾಕಸರಿಂದ ಹಲ್ಲೆ? ಅವಾಚ್ಯ ನಿಂದನೆ ಆರೋಪ

araga

ಸ್ಫೋಟ ಆರೋಪಿಗೆ ರಾಜಾತಿಥ್ಯ : ವರದಿಗೆ ಗೃಹ ಇಲಾಖೆ ಸೂಚನೆ

ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ಗೆ ಸಂದೇಶ ಅಳಿಸುವ ಅಧಿಕಾರ; ಏನಿದು ಹೊಸ ವ್ಯವಸ್ಥೆ

ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ಗೆ ಸಂದೇಶ ಅಳಿಸುವ ಅಧಿಕಾರ; ಏನಿದು ಹೊಸ ವ್ಯವಸ್ಥೆ

12 ಬಿಜೆಪಿ ಶಾಸಕರ ಅಮಾನತು ನಿರ್ಣಯವನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್

12 ಬಿಜೆಪಿ ಶಾಸಕರ ಅಮಾನತು ನಿರ್ಣಯವನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್

1-ffsdf

ಸಿಎಂಗೆ ಬಿಜೆಪಿ‌ ಅಭಿನಂದನೆ : ಪಕ್ಷ-ಸರಕಾರದ ನಡುವಿನ ಅಂತರ ತಗ್ಗಿಸಲು ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

ಮೇಕ್‌ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

ಮಾವಿಗೆ ಹೂ; ಭಾರೀ ಇಳುವರಿ ನಿರೀಕ್ಷೆ

ಮಾವಿಗೆ ಹೂ; ಭಾರೀ ಇಳುವರಿ ನಿರೀಕ್ಷೆ

Untitled-1

ಹಣಗಳಿಸಲು ಯುವತಿಯ ಅಪಹರಣ ಮಾಡಿದ ಕುಟುಂಬ ಪೊಲೀಸರ ವಶಕ್ಕೆ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

1-rwerw

ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್

10death

ಬಂಟ್ವಾಳ: ಶೇಂದಿ ತೆಗೆಯುತ್ತಿದ್ದ ವ್ಯಕ್ತಿ ಮರದಿಂದ ಬಿದ್ದು ಸಾವು

9life

ಸದೃಢ ಆರೋಗ್ಯಕ್ಕೆ ಮುಂಜಾಗ್ರತೆ ಅವಶ್ಯ: ಶ್ರೀ

vidhana-soudha

ಪೊಲೀಸರ ಮೇಲೆ ಶಾಕಸರಿಂದ ಹಲ್ಲೆ? ಅವಾಚ್ಯ ನಿಂದನೆ ಆರೋಪ

araga

ಸ್ಫೋಟ ಆರೋಪಿಗೆ ರಾಜಾತಿಥ್ಯ : ವರದಿಗೆ ಗೃಹ ಇಲಾಖೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.