ಸೆರಗೊಡ್ಡಿ ಮತಭಿಕ್ಷೆ ಕೇಳುವಾಗ ಕಾಂಗ್ರೆಸ್ ಕಚೇರಿ ನೆನಪಾಗುತಿತ್ತು:ಸುಮಲತಾ ವಿರುದ್ಧ ಆಕ್ರೋಶ

Team Udayavani, Oct 10, 2019, 9:15 AM IST

ಮಂಡ್ಯ: ಸೆರಗೊಡ್ಡಿ ಮತಭಿಕ್ಷೆ ಕೇಳುವಾಗ ನಮ್ಮ ಕಚೇರಿ ಗೊತ್ತಿತ್ತು , ಈಗ ಬಿಜೆಪಿ ಕಚೇರಿ ನೆನಪಾಗುತ್ತಿದೆ ಎಂದು ಸಂಸದೆ ಸುಮಲತಾ ವಿರುದ್ಧ ಮಂಡ್ಯ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸಿ. ಎಂ ದ್ಯಾವಪ್ಪ ಕಿಡಿಕಾರಿದ್ದಾರೆ.

ಸುಮಲತಾ ಏನೆಂದು ಜಿಲ್ಲೆಯ ಜನರು ತಿಳಿದುಕೊಳ್ಳಬೇಕಾಗಿದೆ. ಅಧಿಕಾರಕ್ಕಾಗಿ ಜನರು ಹೀಗೆ ಬದಲಾಗುತ್ತಾರೆ. ಅವರ ಕುರಿತು ಮಾತನಾಡಲು ಕೂಡ ಅಸಹ್ಯವಾಗುತ್ತದೆ.  ಗೆಲ್ಲುವ ಮೊದಲು ಕಾಂಗ್ರೇಸ್ ಕಚೇರಿ ಪದೇ ಪದೇ ನೆನಪಾಗುತ್ತಿತ್ತು.

ಜಿಲ್ಲೆಯ ಜನ ಮುಂದೆ ನಿಮಗೆ ಉತ್ತರ ಕೊಡುತ್ತಾರೆ ಜಿಲ್ಲೆಯ ಜನ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅವರನ್ನು ಗೆಲ್ಲಿಸಿದ್ದನ್ನು ಮರೆತಿದ್ದಾರೆ. ಆ ಕಾರಣದಿಂದಲೇ ಬಿಜೆಪಿ ಕಚೇರಿಗೆ ಹೋಗಿ ಕೃತಜ್ಙತೆ ಸಲ್ಲಿಸಿ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಷ್, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನನ್ನನ್ನು ಬೆಂಬಲಿಸಲಿಲ್ಲ. ಆ ಪಕ್ಷದ ಕಾರ್ಯಕರ್ತರು ಮಾತ್ರ ನನಗೆ ಶಕ್ತಿಯಾಗಿ ನಿಂತರು. ಬಿಜೆಪಿ ನನಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿತು.ಹಾಗಾಗಿ, ನಾನು ಬಿಜೆಪಿ ಕಚೇರಿಗೆ ಬಂದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಕಾಂಗ್ರೆಸ್‌ ಪಕ್ಷದ ಕಚೇರಿಗೆ ಹೋಗಲಾಗುವುದಿಲ್ಲ. ಆದರೆ, ಪಕ್ಷದ ಕಾರ್ಯಕರ್ತರಿಗೆ ಈಗಾಗಲೇ ಹಲವಾರು ವೇದಿಕೆಗಳಲ್ಲಿ ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ