Udayavni Special

ಗ್ರಾಮಾಂತರ ಜಿಲ್ಲೆಗೆ ಕೋವಿಡ್‌ 19 ಆಘಾತ!

Team Udayavani, May 23, 2020, 6:01 AM IST

gramanatara

ದೊಡ್ಡಬಳ್ಳಾಪುರ/ನೆಲಮಂಗಲ: ಹಸಿರು ವಲಯದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶುಕ್ರವಾರ ಕೋವಿಡ್‌ 19ಘಾತವಾಗಿದ್ದು, 4 ಪ್ರಕರಣಗಳು ಪತ್ತೆಯಾಗಿವೆ. ದೊಡ್ಡಬಳ್ಳಾಪುರದಲ್ಲಿ 3 ಹಾಗೂ ನೆಲಮಂಗಲದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿದ್ದರೂ, ಜಿಲ್ಲೆ ಪ್ರಕರಣಗಳಿಲ್ಲದೇ ಹಸಿರುವ ವಲಯದಲ್ಲಿತ್ತು.

ದೊಡ್ಡಬಳ್ಳಾಪುರದ ಮೂವರು ಸೋಂಕಿತರು ಮುಂಬೈನಿಂದ ಬಂದಿದ್ದವರಾಗಿದ್ದರೆ, ನೆಲಮಂಗಲ  ತಾಲೂಕಿನ ತಾಲೂಕಿನ ವೀರಸಾಗರದ 55 ವರ್ಷದ ರೈತ ಮಹಿಳೆ  ಯಲ್ಲಿ ಸೋಂಕು ಪತ್ತೆಯಾಗಿದೆ. ತಾಲೂಕಿನ ತಿಪ್ಪೂರು ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ತಾಂಡ್ಯದ 6 ಮಂದಿ ಕಾರ್ಮಿಕರು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದು, ಅವರಲ್ಲಿ 3 ಮಂದಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಟ್ಟಿರುವ 3 ಜನರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಿನ್ನಲೆ: ತಾಲೂಕಿನ ಹೊಸಹಳ್ಳಿ ತಾಂಡ ಗ್ರಾಮದವರು  ಕೆಲಸದ ನಿಮಿತ್ತ ಮುಂಬೈ ಯಲ್ಲಿ ಐದು ವರ್ಷಗಳಿಂದ ನೆಲೆಸಿದ್ದರು. ಮುಂಬೈ ನಗರದಲ್ಲಿ ಕೂಲಿ ಕೆಲಸ ಮಾಡು  ತ್ತಿದ್ದ 12 ಮಂದಿ ಬಾಡಿಗೆ ವಾಹನದಲ್ಲಿ ಮೇ 17ರಂದು ಬಾಗೇಪಲ್ಲಿಗೆ ತೆರಳಿ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ  ಪರೀಕ್ಷೆಗೊಳಪಟ್ಟಿದ್ದರು.

ಮೂವರು ಬಾಗೇಪಲ್ಲಿ ನಿವಾಸಿಗಳು ಅಲ್ಲಿಯೇ ಉಳಿದು, ಉಳಿದವರು ಅವರ ತಾಲೂಕುಗಳಿಗೆ ತೆರಳುವಂತೆ ಸೂಚಿಸಿದಾಗ ಇವರಲ್ಲಿ ಮೂವರು ಗೌರಿಬಿದನೂರಿಗೆ ತೆರಳಿದ್ದಾರೆ. ಇನ್ನುಳಿದ ಆರು ಮಂದಿ  ದೊಡ್ಡಬಳ್ಳಾಪುರಕ್ಕೆ ಬಂದು ಇಲ್ಲಿನ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿಕೊಂಡು ಐಸೋಲೇಷನ್‌ ನಲ್ಲಿದ್ದರು. ಅವರಲ್ಲಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರಾಗಿದ್ದು, ಈ 6 ಮಂದಿಯನ್ನು ಕೋವಿಡ್‌-19 ಪರೀಕ್ಷೆಗೊಳಪಡಿಸಿದಾಗ ಮೂವರಲ್ಲಿ ಕೋವಿಡ್‌ -19 ಪಾಸಿಟಿವ್‌ ವರದಿಬಂದಿದೆ.

ಮೂವರು ಸೋಂಕಿತರು ಮಹಿಳೆಯರಾಗಿ ದ್ದಾರೆ. ಏ.13ರಂದು ತಾಲೂಕಿನ ಮಧುರೆ ಹೋಬಳಿಯ ಕೋಡಿಪಾಳ್ಯದಲ್ಲಿ ರೈಲ್ವೆ ಉದ್ಯೋಗಿಯೊಬ್ಬರಿಗೆ  ಕೋವಿಡ್‌-19 ದೃಢಪಟ್ಟು ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಸೋಂಕಿತ ವ್ಯಕ್ತಿ ಗುಣಮುಖನಾದ ನಂತರ ಈವರೆಗೂ ತಾಲೂಕಿನಲ್ಲಿ ಕೋವಿಡ್‌ 19 ಸೋಂಕಿನ ಪ್ರಕರಣಗಳು ವರದಿಯಾಗಿರಲಿಲ್ಲ.

ನೆಲಮಂಗಲಕ್ಕೆ ಕಾಲಿಟ್ಟ ಕೋವಿಡ್‌ 19: ತಾಲೂಕಿನ ವೀರಸಾಗರದ 55 ವರ್ಷದ ರೈತ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಪರೀಕ್ಷೆ ನಂತರ (ಪಿ.1686) ಕೋವಿಡ್‌ 19 ಪಾಸಿಟಿವ್‌ ಎಂದು ಗೊತ್ತಾಗಿದೆ. ಸೋಂಕಿತೆ 20  ದಿನಗಳ ಹಿಂದೆ ಕೊರಟಗೆರೆ ತಾಲೂಕಿನ ಬೈಚನಹಳ್ಳಿ ಗ್ರಾಮದ ಅಣ್ಣನ ಮನೆಗೆ ಹೋಗಿದ್ದರು. ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಪಾಸಿಟಿವ್‌ ದೃಢಪಟ್ಟಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ವಾರಂಟೈನ್‌: ತಾಲೂಕಿನಲ್ಲಿ ಸೋಂಕಿತ ಮಹಿಳೆ ಸಂಪರ್ಕದಲ್ಲಿದ್ದ 11 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಬೇಕಾಗಿದ್ದು, ಸೋಂಕಿತ 1207ರ ಸಂಪರ್ಕದ ಅಲಂಕಾರ್‌ ಡಾಬದ 9 ಮಂದಿ, ಸೋಂಕಿತ 1364ರ ಸಂಪರ್ಕದ ಹುಲ್ಲರಿವೆ  ಗ್ರಾಮದ 7 ಜನರು ಸೇರಿದಂತೆ ತಾಲೂಕಿನಲ್ಲಿ 82 ಜನರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ.

ಮಹಿಳೆಗೆ ಪಾಸಿಟಿವ್‌ ಪತ್ತೆಯಾದ ಬೆನ್ನಲ್ಲೆ ವೀರಸಾಗರಕ್ಕೆ ಭೇಟಿನೀಡಿದ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಪ್ರಾಥಮಿಕ ಸಂಪರ್ಕದ  ಮಾಹಿತಿ ಪಡೆದು ಮನೆಗಳ ಮೇಲೆ ಎಚ್ಚರಿಕೆ ಸಂದೇಶದ ಜತೆ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರುವಂತೆ ಸಲಹೆ ನೀಡಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಾಖಲೆ ಇದ್ದರೆ ಬಿಡುಗಡೆ ಮಾಡಿ: ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

ದಾಖಲೆ ಇದ್ದರೆ ಬಿಡುಗಡೆ ಮಾಡಿ: ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

ಕೋವಿಡ್ ಮಹಾಮಾರಿಗೆ ಕೊಪ್ಪಳದಲ್ಲಿ 6ನೇ ಸಾವು

ಕೋವಿಡ್ ಸೋಂಕಿಗೆ ಮಹಿಳೆ ಬಲಿ! ಕೊಪ್ಪಳದಲ್ಲಿ ಮಹಾಮಾರಿಗೆ 6ನೇ ಸಾವು

ಚಿಕ್ಕಬಳ್ಳಾಪುರ ಜಿಲ್ಲಾ‌ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ‌ ಕೆ.ಎಂ.ಮುನೇಗೌಡ ನೇಮಕ

ಚಿಕ್ಕಬಳ್ಳಾಪುರ ಜಿಲ್ಲಾ‌ ಜೆಡಿಎಸ್ ಅಧ್ಯಕ್ಷರಾಗಿ‌ ಕೆ.ಎಂ.ಮುನೇಗೌಡ ನೇಮಕ

ದ. ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಕೋವಿಡ್ ಸಾವಿನ ಸರಣಿ: ಬಂಟ್ವಾಳದ ವೃದ್ಧ ಸಾವು

ದ. ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಕೋವಿಡ್ ಸಾವಿನ ಸರಣಿ: ಬಂಟ್ವಾಳದ ವೃದ್ಧ ಸಾವು

ಸುಶಾಂತ್ ಸೂಸೈಡ್ ಅಲ್ಲ, ದಾವೂದ್ ತಂಡದಿಂದ ಹತ್ಯೆ?ಮಾಜಿ ರಾ ಅಧಿಕಾರಿ ಆರೋಪವೇನು

ಸುಶಾಂತ್ ಸೂಸೈಡ್ ಅಲ್ಲ, ದಾವೂದ್ ತಂಡದಿಂದ ಹತ್ಯೆ?ಮಾಜಿ ರಾ ಅಧಿಕಾರಿ ಆರೋಪವೇನು

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ

ಕೋವಿಡ್ ಭೀತಿಗೆ ಕೋಸ್ಟಲ್ ವುಡ್ ಗಲಿಬಿಲಿ; ಕಲಾವಿದರು ಕಂಗಾಲು

ಕೋವಿಡ್ ಭೀತಿಗೆ ಕೋಸ್ಟಲ್ ವುಡ್ ಗಲಿಬಿಲಿ; ಕಲಾವಿದರು ಕಂಗಾಲು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಮಹಾಮಾರಿಗೆ ಕೊಪ್ಪಳದಲ್ಲಿ 6ನೇ ಸಾವು

ಕೋವಿಡ್ ಸೋಂಕಿಗೆ ಮಹಿಳೆ ಬಲಿ! ಕೊಪ್ಪಳದಲ್ಲಿ ಮಹಾಮಾರಿಗೆ 6ನೇ ಸಾವು

ದ. ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಕೋವಿಡ್ ಸಾವಿನ ಸರಣಿ: ಬಂಟ್ವಾಳದ ವೃದ್ಧ ಸಾವು

ದ. ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಕೋವಿಡ್ ಸಾವಿನ ಸರಣಿ: ಬಂಟ್ವಾಳದ ವೃದ್ಧ ಸಾವು

ಕೋವಿಡ್ ಕಂಟಕ: ದ‌.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್

ಕೋವಿಡ್ ಕಂಟಕ: ದ‌.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್

ಮೂಲ್ಕಿ ಪೊಲೀಸ್ ಠಾಣಾ ಸಿಬ್ಬಂದಿಗೆ ಸೋಂಕು ದೃಢ: ಠಾಣೆ ಸೀಲ್ ಡೌನ್

ಮೂಲ್ಕಿ ಪೊಲೀಸ್ ಠಾಣಾ ಸಿಬ್ಬಂದಿಗೆ ಸೋಂಕು ದೃಢ: ಠಾಣೆ ಸೀಲ್ ಡೌನ್

ಅರ್ಧಂಬರ್ಧ ಅಂತ್ಯಸಂಸ್ಕಾರ, ರಸ್ತೆಗೆಸೆದ ಪಿಪಿಇ ಕಿಟ್: ಇದು ಸಿಎಂ ಜಿಲ್ಲೆಯ ಕೋವಿಡ್ ನಿರ್ವಹಣೆ

ಅರ್ಧಂಬರ್ಧ ಅಂತ್ಯಸಂಸ್ಕಾರ, ರಸ್ತೆಗೆಸೆದ ಪಿಪಿಇ ಕಿಟ್: ಇದು ಸಿಎಂ ಜಿಲ್ಲೆಯ ಕೋವಿಡ್ ನಿರ್ವಹಣೆ

MUST WATCH

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

ಹೊಸ ಸೇರ್ಪಡೆ

ದಾಖಲೆ ಇದ್ದರೆ ಬಿಡುಗಡೆ ಮಾಡಿ: ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

ದಾಖಲೆ ಇದ್ದರೆ ಬಿಡುಗಡೆ ಮಾಡಿ: ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

ಐದು ವಿಶೇಷ ಚೆಕ್‌ಪೋಸ್ಟ್‌

ಐದು ವಿಶೇಷ ಚೆಕ್‌ಪೋಸ್ಟ್‌

ಕೋವಿಡ್ ಮಹಾಮಾರಿಗೆ ಕೊಪ್ಪಳದಲ್ಲಿ 6ನೇ ಸಾವು

ಕೋವಿಡ್ ಸೋಂಕಿಗೆ ಮಹಿಳೆ ಬಲಿ! ಕೊಪ್ಪಳದಲ್ಲಿ ಮಹಾಮಾರಿಗೆ 6ನೇ ಸಾವು

ಮೀನುಗಾರಿಕೆಯ ಪುನಶ್ಚೇತನಕ್ಕೆ ಬೇಕು ಭರಪೂರ ನೆರವು

ಮೀನುಗಾರಿಕೆಯ ಪುನಶ್ಚೇತನಕ್ಕೆ ಬೇಕು ಭರಪೂರ ನೆರವು

ಹಲ್ಲೆ ಆರೋಪಿಗಳಿಗೆ ಶಿಕ್ಷೆ ವಿಧಿಸಿ

ಹಲ್ಲೆ ಆರೋಪಿಗಳಿಗೆ ಶಿಕ್ಷೆ ವಿಧಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.