ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ಕೋವಿಡ್


Team Udayavani, Jul 22, 2020, 7:22 AM IST

ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ಕೋವಿಡ್

ದೇವನಹಳ್ಳಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಆತಂಕ ಶುರುವಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಸೋಂಕಿತರ ಪ್ರಕರಣಗಳು ಶತಕದಂಚಿನಲ್ಲಿ ದಾಖಲಾಗುತ್ತಿದ್ದವು. ಆದರೆ, ಸೋಮವಾರ ಏಕಾಏಕೀ ದ್ವಿಶತಕ ದಾಟಿ ಸೋಂಕಿತರ ಸಂಖ್ಯೆ ಈಗಾಗಲೇ 928ಕ್ಕೆ ತಲುಪಿದೆ.

28 ದಿನ ಹೋಂ ಕ್ವಾರಂಟೈನ್‌ನಲ್ಲಿ 907 ಮಂದಿ ಇದ್ದು 691 ಮಂದಿ ಪೂರ್ಣಗೊಳಿಸಿದ್ದಾರೆ. ಹಾಗೆಯೇ ಆಸ್ಪತ್ರೆ ಮತ್ತಿತರ ಕಡೆ ಕ್ವಾರಂಟೈನ್‌ಗೊಳಪಟ್ಟಿರುವವರ ಸಂಖ್ಯೆ 1052 ಇದ್ದಾರೆ. ಪ್ರಸ್ತುತ ವೀಕ್ಷಣೆಯಲ್ಲಿ 1944 ಮಂದಿಯಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 856 ಸೋಂಕು ದೃಢಪಟ್ಟ ಪ್ರಕರಣಗಳಿದ್ದು, ಅದರಲ್ಲಿ 115 ಪ್ರಕರಣ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದವರಾಗಿದ್ದಾರೆ. ಉಳಿದ 741 ಪ್ರಕರಣ ಜಿಲ್ಲೆಯದ್ದಾಗಿವೆ.

ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಲಿದೆ ಎಂಬ ಕಾರಣಕ್ಕೆ ಒಂದು ವಾರದ ಲಾಕ್‌ ಡೌನ್‌ ಘೋಷಣೆ ಮಾಡಲಾಗಿದೆ. ಬುಧವಾರದಿಂದ ಲಾಕ್‌ಡೌನ್‌ ತೆರವಾಗಲಿದೆ. ಈಗಾಗಲೇ ಜಿಲ್ಲಾಡಳಿತ ಭವನ, ಜಿಪಂ ಕಚೇರಿ ಸಿಬ್ಬಂದಿಗೆ ಸೋಂಕು ತಗುಲಿದೆ. ಜಿಲ್ಲಾಧಿಕಾರಿ ಕಚೇರಿ, ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಹಲವಾರು ಸಿಬ್ಬಂದಿ ಬೆಂಗಳೂರಿನಿಂದ ಸಂಚಾರ ನಡೆಸುವುದರಿಂದ ಕೆಲಸ ಕಾರ್ಯಗಳಿಗೆ ಜಿಲ್ಲಾಧಿಕಾರಿ ಕಚೇರಿಗೆ ಹೋಗುವುದಾದರೂ ಹೇಗೆ ಎಂಬ ಚಿಂತೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ನಾಲ್ಕು ತಾಲೂಕು ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು.

8 ಮಂದಿ ಸಾವು :  ಜು.15ರಂದು 10 ಪ್ರಕರಣ, ಜು.16ಕ್ಕೆ 31, ಜು.17ಕ್ಕೆ 33, ಜು.18ಕ್ಕೆ 94, ಜು.19ಕ್ಕೆ 70, ಜು.20, 208, ಜು.21 95 ಪ್ರಕರಣ ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಇದುವರೆಗೂ 9362 ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ 833 ಮಂದಿಯಲ್ಲಿ ಪಾಸಿಟಿವ್‌ ಬಂದಿದೆ. ಇನ್ನೂ 1011ಕ್ಕೂ ಅಧಿಕ ಮಂದಿಯ ಫಲಿತಾಂಶ ನಿರೀಕ್ಷಿಸಲಾಗಿದೆ. ಈ 833 ಪ್ರಕರಣಗಳಲ್ಲಿ 319 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 530 ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ. 8 ಮಂದಿ ಸಾವನ್ನಪ್ಪಿದ್ದಾರೆ.

 

-ಎಸ್‌.ಮಹೇಶ್‌

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದುಳಿದವರ ಅಭಿವೃದ್ಧಿಯಿಂದ ಹಿಂದುತ್ವ ಅಭಿವೃದ್ಧಿ

ಹಿಂದುಳಿದವರ ಅಭಿವೃದ್ಧಿಯಿಂದ ಹಿಂದುತ್ವ ಅಭಿವೃದ್ಧಿ

ಮೀನುಹಿಡಿಯಲು ಹೋಗಿ ಯುವಕ ಸಾವು

ಮೀನು ಹಿಡಿಯಲು ಹೋಗಿ ಯುವಕ ಸಾವು

ಐದು ಜನ ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ

ಐದು ಜನ ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ

ದೊಡ್ಡಬಳ್ಳಾಪುರ- ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗ

ದೊಡ್ಡಬಳ್ಳಾಪುರ: ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗಡೆ

ರಾಹುಲ್‌ ಟೀಕಿಸುವ ನೈತಿಕತೆ ಕಟೀಲ್‌ಗೆ ಇಲ್ಲ

ರಾಹುಲ್‌ ಟೀಕಿಸುವ ನೈತಿಕತೆ ಕಟೀಲ್‌ಗೆ ಇಲ್ಲ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.