ಕೋವಿಡ್ ಕಂಟಕ: ಅವಸಾನದತ್ತ ರೇಷ್ಮೆ ಉದ್ಯಮ

ಮಾರಾಟ ಕುಸಿತದಿಂದ ದಾಸ್ತಾನು ಮಾಡುತ್ತಿರುವ ರೇಷ್ಮೆ ಉದ್ಯಮಿಗಳು

Team Udayavani, Oct 14, 2020, 1:35 PM IST

br-tdy-1

ದೊಡ್ಡಬಳ್ಳಾಪುರ: ಲಾಕ್‌ಡೌನ್‌ನಿಂದ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಿದ ಕಾರಣ ದಿಂದಾಗಿ ರೇಷ್ಮೆ ಸೀರೆಗಳ ಮಾರಾಟ ತೀವ್ರವಾಗಿ ಕುಸಿಯುತ್ತಿದೆ. ಸೀರೆಗಳಿಗೆ ಸೂಕ್ತ ಬೆಲೆಯಿಲ್ಲದೇ ಸಹಸ್ರಾರು ಸೀರೆಗಳು ದಾಸ್ತಾನಾಗುತ್ತಿದ್ದು ರೇಷ್ಮೆ ಬಟ್ಟೆ ತ‌ಯಾರಕರು ಕಂಗಾಲಾಗಿದ್ದಾರೆ.

ರೇಷ್ಮೆ ಸೀರೆಗಳಿಗೆ ಹೆಸರಾಗಿದ್ದ ದೊಡ್ಡ ಬಳ್ಳಾಪುರದ ಲಿ ಈಗ ಶೇ.10 ಭಾಗ ಮಾತ್ರ ರೇಷ್ಮೆ ಬಟ್ಟೆ ‌ತಯಾರಿಕೆ ನ‌ಡೆಯುತ್ತಿದೆ. ಕೋವಿಡ್  ಉದ್ಭವಿಸುವುದಕ್ಕೂ ಮುನ್ನವೇ ಗ‌ಗನಕ್ಕೇರಿದ ‌ ರೇಷ್ಮೆ ಬೆಲೆ,ನೇಯ್ದ ಬಟ್ಟೆಗೆ ಸೂಕ್ತ ಮಾರುಕಟ್ಟೆ ಬೆಲೆ ಇಲ್ಲದೇ ನೇಯ್ಗೆ ಉದ್ಯಮ ತತ್ತರಿಸಿದೆ.

ಸಹಸ್ರಾರು ಸೀರೆಗಳ ದಾಸ್ತಾನು : ಕೋವಿಡ್ ಲಾಕ್‌ಡೌನ್‌ ಆಗುವುದಕ್ಕೂ ಮುನ್ನ ರೇಷ್ಮೆ ನೂಲಿನ ಬೆಲೆ 4,200 ರೂ. ಇತ್ತು.ಈ ಬೆಲೆಗ ರೇಷ್ಮೆ ನೂಲು ಕೊಂಡಿದ್ದ ನೇಕಾರರು ರೇಷ್ಮೆ ಸೀರೆಗಳನ್ನು ಮಾರಾಟ ಮಾಡುವಾಗ ‌ಸೂಕ್ತ ಬೆಲೆ ಸಿಗದೇ ದಾಸ್ತಾನು ಮಾಡಿದ್ದರು. ನಂತರ ರೇಷ್ಮೆ ಬೆಲೆ 3,000ಕ್ಕೆ ಕುಸಿಯಿತು. ಕೆಲಕಾಲ 2,500 ರೂ. ಗ‌ಳಿಗೂ ಬಂದಿರು. ಈ ಬೆಲೆಗೆ ಅನುಗುಣವಾಗಿ ರೇಷ್ಮೆ ಸೀರೆಗಳ ಖರೀದಿದಾರರು ಕ‌ಡಿಮೆ ಬೆಲೆಗೆ ಕೇಳಲಾರಂಭಿಸಿದರು.

ಅಸಲಿನಲ್ಲಿಯೇ ವಿವಿಧ ನಮೂನೆಯ ಸೀರೆಗಳ ಮೇಲೆ 200 ರೂ. ಕಡಿಮೆ ಕೇಳಲಾರಂಭಿಸಿದಾಗ ನೇಕಾರ‌ರು ವಿಧಿಯಿಲ್ಲದೇ ‌ಮನೆಗಳಲ್ಲಿಯೇ ಸೀರೆಗಳನ್ನು ದಾಸ್ತಾನು ಮಾಡುವ ಪರಿಸ್ಥಿತಿ ಒದಗಿ ಬಂದಿತ್ತು. ಬಹುತೇಕ ಎಲಾ ರೇಷ್ಮೆ ಉದ್ಯಮಿಗಳ‌ ಮನೆಗಳಲ್ಲಿ ಅವರ ಶಕ್ತಿಗೆ ಅನುಸಾರ ದಾಸ್ತಾನು ಮಾಡುತ್ತಿದ್ದಾರೆ.

ಬಂಡವಾಳಕ್ಕೆ ಹೊಡೆತ: ಸೀರೆಗಳು ನಷ್ಟದ ಬೆಲೆಗೆ ಮಾರಲೊಪ್ಪದ ನೇಕಾರರು ದಾಸ್ತಾನು ಮಾಡುತ್ತಿದ್ದು, ಮಗ್ಗದ ಹಾಗೂ ಇತರೆ ಕೆಲಸದವರಿಗ ಕೆಲಸ ನೀಡಲಾದರೂ ಮಗ್ಗಗಳನ್ನು ನಡೆಸಬೇಕಿದೆ. ಹೀಗಾಗಿ ವಾರಕ್ಕೆ ಒಂದು ಮಗ್ಗದಲ್ಲಿ 3 ಸೀರೆ ನೇಯಿಸಲಾಗುತ್ತಿದೆ.\ ಬಂಡವಾಳಕ್ಕಾಗಿ ಸಾಲ ಮಾಡುವ ಪ‌ರಿಸ್ಥಿತಿ ಬಂದೊದಗಿದೆ.ಕೆಲವು ನೇಕಾರರು ವಾರ್ಪುಗ‌ಳನ್ನು ಹಾಕಿಸಿ ಅದ‌ನ್ನು ನೇಯಿಸಿದರೆ ಎಂದು ಅಲ್ಲಿಗೆ ನಿಲ್ಲಿಸಿದ್ದಾರೆ. ಇನ್ನು ಹಲವು ನೇಕಾರರು ರೇಷ್ಮೆ ಉದ್ಯಮದಿಂದ ಆರ್ಟ್‌ ಸಿಲ್ಕ್, ಪಾಲಿಯಸ್ಟರ್ ಸೀರೆಗಳನ್ನು ನೇಯಿಸುತ್ತಿದ್ದಾರೆ. ಇದು ನೇಕಾರರಲ್ಲಿಯೇ ಸ್ಪರ್ಧೆ ಏರ್ಪಡಲು ಕಾರಣವಾಗುತ್ತಿದೆ.

ಉತ್ತರ ಭಾರತದ ಮಾರುಕಟ್ಟೆಯಿಲ್ಲ: ವಿಶೇಷವಾಗಿದೊಡ xಬಳ್ಳಾಪುರದಲ್ಲಿ ನೇಯ್ದು ‌ ಕ ‌ಡಿಮೆ ತೂಕದ ನಮೂನೆಯ ರೇಷ್ಮೆ ಸೀರೆಗಳು ಉತ್ತರ ಭಾರತ ದಲ್ಲಿ ಹೆಚ್ಚು ಮಾರಾಟವಾಗುತ್ತದೆ. ಕೋವಿಡ್  ‌ಪರಿಣಾಮ ಎಲ್ಲೆಡೆ ಶುಭ ‌ ಸಮಾರಂಭಗಳಿಗೆ ಹಲವಾರು ನಿರ್ಬಂಧ ಹೇರಿರುವುದರಿಂದ ಸೀರೆಗಳನು ಕೊಳ್ಳುವವರೇ ಇಲ್ಲದಂತಾಗಿ ರೇಷ್ಮೆ ಬಟ್ಟೆ ತಯಾರಿಕೆ ಕುಸಿಯುತ್ತಿದೆ. ಇದರಿಂದಾಗಿ ಅನಿವಾರ್ಯವಾಗಿ ಸೀರೆಗಳನ್ನು ದಾಸ್ತಾನು ಮಾಡಲಾಗುತ್ತಿದೆ ಎನ್ನುತ್ತಾರೆ ರೇಷ್ಮೆ ಸೀರೆಗಳ ಉದ್ಯಮಿ ರಮೇಶ್‌.

ಅವಲಂಬಿತ ಉದ್ಯಮಗಳಿಗೆ ಹೊಡೆತ: ರೇಷ್ಮೆ ಸೀರೆಗಳ ತಯಾರಿಕ ಕುಸಿತವಾಗುತ್ತಿರುವುದರಿಂದ ನೇಕಾರಿಕೆಯನ್ನು ಅವಲಂಬಿಸಿರುವ ಹುರಿಮಿಷನ್‌, ರೇಷ್ಮೆ ಬಣ್ಣ ಮಾಡುವ ‌ ಮಾಲೀಕರು, ಹಾಗೂ ಕಾರ್ಮಿಕರಿಗೆ ರೇಷ್ಮೆ ರೀಲರ್‌ಗಳ ಕೆಲಸಕ್ಕೂ ಹೊಡೆತ ‌ ಬಿದ್ದಿದ್ದು, ಈ ಘಟಕಗಳಲ್ಲಿಯೂ ಕೆಲಸವಿಲ್ಲದಂತಾಗಿದೆ. 3 ತಿಂಗಳಿನಿಂದ ‌ ರೇಷ್ಮೆ ನೂಲು ತಯಾರಿಕೆ ನಿಂತಿದೆ ಎನ್ನುತ್ತಾರೆ ಸಾಯಿ ರೀಲರ್ಸ್ ಮಾಲೀಕ ‌ರಾದ ಮೋಹನ್‌ ಕುಮಾರ್. ರೇಷ್ಮೆ ನಗರ ಎಂದು ಇಡೀ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದ ದೊಡ್ಡಬಳ್ಳಾಪುರಕ್ಕೆ ಸ್ವಾಗತ ನೀಡುವ ಕಮಾನುಗಳು ಮುಂದೆ ಅರ್ಥ ಕಳೆದುಕೊಂಡರೂ ಅಚ್ಚರಿಯಿಲ್ಲ.

ಸರ್ಕಾರ ಆವರ್ತನಿ ಸ್ಥಾಪಿಸಿ, ರೇಷ್ಮೆ ಬೆಲೆ ಸ್ಥಿರವಾಗಿರುವಂತೆಕ್ರಮ ಕೈಗೊಳ್ಳಬೇಕಿದೆ. ಮದುವೆ ಮೊದಲಾದಸಭೆ ಸಮಾರಂಭಗಳಿಗೆ ಇರುವ ನಿಯಮ ಸಡಿಲಗೊಳಿಸಿ ರೇಷ್ಮೆ ಸೀರೆಗಳಮಾರಾಟಕ್ಕೆ ಅನುಕೂಲ ಮಾಡಿಕೊಟ್ಟರೆ ರೇಷ್ಮೆ ಉದ್ಯಮ ಚೇತರಿಸಿಕೊಳ್ಳುತ್ತದೆ. ಪಿ.ಸಿ.ವೆಂಕಟೇಶ್‌, ಅಧ್ಯಕ್ಷರು, ಬೆ. ಗ್ರಾಮಾಂತರ ಹಾಗೂ ನಗರ ಜಿಲ್ಲಾ ನೇಕಾರರ ಉತ್ಪಾದನಾ, ಮಾರಾಟ ಸಹಕಾರ ಮಂಡಳಿ

ಡಿ.ಶ್ರೀಕಾಂತ

ಟಾಪ್ ನ್ಯೂಸ್

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.