ಕೊರೊನಾ ಭೀತಿ: 21ಸಾವಿರ ಕೋಳಿಗಳ ಸಜೀವ ಸಮಾಧಿ

Team Udayavani, Mar 17, 2020, 6:02 PM IST

br-tdy-1

ನೆಲಮಂಗಲ: ಕೋಳಿ ಸೇವಿಸುವುದರಿಂದ ಕೊರೊನಾ ವೈರಸ್‌ ಬರಲು ಕಾರಣವಾಗುತ್ತದೆ ಎಂಬ ವದಂತಿಯಿಂದ ಕೋಳಿ ಉದ್ಯಮ ಸಂಪೂರ್ಣವಾಗಿ ನೆಲಕಚ್ಚಿದ್ದು, ತಾಲೂಕಿನ ಕೋಳಿ ಸಾಕಾಣಿಕೆದಾರರು ನಷ್ಟದಿಂದ ಕೋಳಿಗಳ ಜೀವಂತ ಸಮಾಧಿಗೆ ಮುಂದಾಗಿದ್ದಾರೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಕುಪ್ಪೆಮಳ ಹಾಗೂ ಎಣ್ಣೆಗೆರೆ ಗ್ರಾಮದಲ್ಲಿ ರೈತ ರಘು 21 ಸಾವಿರ ಕೋಳಿಗಳನ್ನು ಜೆಸಿಬಿಯಿಂದ ಗುಂಡಿ ತೆಗೆಸಿ ಜೀವಂತ ಸಮಾಧಿ ಮಾಡಿದರೆ, ತಾಲೂಕಿನ ಅನೇಕ ಸಾಕಾಣಿಕೆದಾರರು ಹಂತ ಹಂತವಾಗಿ ಕೋಳಿಗಳ ಜೀವಂತ ಸಮಾಧಿ ಮಾಡಲು ನಿರ್ಧರಿಸಿದ್ದಾರೆ.

ಉಚಿತ ಕೊಟ್ಟರು ಪಡೆಯುತಿಲ್ಲ: ಕೋಳಿಗಳನ್ನು ಉಚಿತವಾಗಿ ನೀಡಿದರೂ, ಯಾವ ಮಾಂಸಪ್ರಿಯರು ತೆಗೆದುಕೊಂಡು ಹೋಗಲು ಮುಂದಾಗುತ್ತಿಲ್ಲ . ಮಾರಾಟಗಾರರು ಕೋಳಿಯ ಬೆಲೆ ದಿಢೀರ್‌ ಕುಸಿತವಾದ ಕಾರಣ ಖರೀದಿದಾರರಿಲ್ಲದೆ ನಷ್ಟದಿಂದ ಸಾಕಾಣಿಕೆದಾರರ ಕಡೆ ಮುಖಮಾಡುತ್ತಿಲ್ಲ. ಕೋಳಿ ಖರೀದಿಸುವ ಜನರಿಲ್ಲದ ಕಾರಣ ಮಣ್ಣಿನಲ್ಲಿ ಮುಚ್ಚುವ ನಿರ್ಧಾರಕ್ಕೆ ಸಾಕಾಣಿಕೆದಾರರು ಮುಂದಾಗಿದ್ದಾರೆ.

 ಬೆಲೆ ದಿಢೀರ್‌ ಕುಸಿತ : ರಾಜ್ಯದಲ್ಲಿ ಜನವರಿ ತಿಂಗಳು ಫಾರಂ ಕೋಳಿ ಕೆಜಿಗೆ 96 ರಿಂದ 116 ರೂ.ಇದ್ದ ಬೆಲೆ ಮಾರ್ಚ್‌ ಆರಂಭದಲ್ಲಿ 36ರೂ.ಗೆ ಕುಸಿತ ಕಂಡಿದ್ದು, ಇದರಿಂದ ಫಾರಂ ಕೋಳಿಗಳ ನಿರ್ವಹಣೆ ಖರ್ಚು ಹೆಚ್ಚಾಗುತ್ತಿರುವ ಕಾರಣ ಅಪಾರ ಪ್ರಮಾಣದ ನಷ್ಟದಿಂದ ತಪ್ಪಿಸಿಕೊಳ್ಳಲು ಕೋಳಿಗಳನ್ನು ಸಾಯಿಸಲಾಗುತ್ತಿದೆ ಎಂದು ಸಾಕಾಣಿಕೆದಾರರು ಬೇಸರ ವ್ಯಕ್ತಪಡಿಸಿದರು.

ಕೋಳಿ ಅಂಗಡಿ ಬಂದ್‌ : ಸರ್ಕಾರ ಆದೇಶದಂತೆಎಲ್ಲಾ ಕೋಳಿ ಹಾಗೂ ಕೋಳಿ ಮಾಂಸ ಮಾರಾಟ ಅಂಗಡಿಗಳು ಸಂಪೂರ್ಣವಾಗಿ ಬಂದ್‌ ಮಾಡಿದ ಹಿನ್ನಲೆ ಫಾರಂ ಗಳಿಂದ ಕೋಳಿಗಳನ್ನು ಖರೀದಿಸುವವರು ಇಲ್ಲದಂತಾಗಿದೆ. ಒಟ್ಟಾರೆ ಕೊರೊನಾ ಭೀತಿ ಕೋಳಿ ಉದ್ಯಮಕ್ಕೆ ಭಾರಿ ಹೊಡೆತ ನೀಡಿದ್ದು ಕೆಲ ಸಾಗಾಣಿಕೆದಾರರು ಫಾರಂಗಳನ್ನು ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ.

ನಿರ್ವಹಣೆ ಖರ್ಚು ಹೆಚ್ಚುತ್ತಿದೆ: ಕೋಳಿ ಸಾಗಣಿಕೆದಾರ ರಘು ಪ್ರತಿಕ್ರಿಯಿಸಿ, ಕೊರೊನಾಭೀತಿಯಿಂದ ಕೋಳಿ ಬೆಲೆ ಸಂಪೂರ್ಣ ಕುಸಿತ ಕಂಡಿದ್ದು, ಕೋಳಿಗಳ ನಿರ್ವಹಣೆ ಮಾಡಲು ಖರ್ಚು ಹೆಚ್ಚಾಗುತ್ತಿದ್ದು ಹೆಚ್ಚು ನಷ್ಟಕ್ಕೆ ಒಳಗಾಗುವ ಮುಂಚೆಯೇ ತಪ್ಪಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದೇನೆ ಎಂದರು.

ಕೋಳಿ ಅಂಗಡಿಯ ಕೆಲಸಗಾರ ಸುರೇಶ್‌ ಪ್ರತಿಕ್ರಿಯಿಸಿ, ಕೋಳಿ ಮಾಂಸವನ್ನು ಕೇಳುವವರಿಲ್ಲ ಸರ್ಕಾರ ಆದೇಶದ ನಂತರ ಕೋಳಿ ಅಂಗಡಿ ಮುಚ್ಚಲಾಗಿದೆ. ಆದ್ದರಿಂದ ಕೋಳಿ ಉದ್ಯಮ ಸಂಪೂರ್ಣ ಸ್ಥಗಿತವಾಗಿದೆ ಎಂದರು.

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ

Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ

Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್‌ ಸ್ಪರ್ಧೆ

Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್‌ ಸ್ಪರ್ಧೆ

Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ

Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ

Road Dispute: ರಸ್ತೆ ವಿವಾದ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

Road Dispute: ರಸ್ತೆ ವಿವಾದ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.