ಗೋಹತ್ಯೆ ನಿಷೇಧ: ಮೃಗಾಲಯಗಳಿಗೆ ಹೊರೆ

ಮಾಂಸಹಾರಿ ಪ್ರಾಣಿಗಳ ಆಹಾರ ಬದಲಾಗಲಿದೆಯೇ? , ಕುರಿ, ಮೇಕೆ ಮಾಂಸ ನೀಡಿದರೆ ಆರ್ಥಿಕ ಸಂಕಷ್ಟ

Team Udayavani, Dec 11, 2020, 3:35 PM IST

ಗೋಹತ್ಯೆ ನಿಷೇಧ: ಮೃಗಾಲಯಗಳಿಗೆ ಹೊರೆ

ಆನೇಕಲ್‌: ದೇಶದಲ್ಲಿ ಗೋಹತ್ಯೆ ನಿಷೇಧ ಮಾಡಿದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆ ರಾಜ್ಯಕ್ಕೆ ಸಂದಿದ್ದು, ಇಲ್ಲಿಯವರೆಗೆ ರಾಜ್ಯ ಸರ್ಕಾರದ ಅನುದಾನದಲ್ಲೇ ರಾಜ್ಯದಲ್ಲಿನ ಮೃಗಾಲಯಗಳಿಗೆ ಗೋ ಮಾಂಸ ಬಳಕೆ ಮಾಡಲಾಗುತ್ತಿತ್ತು. ಇದೀಗ ಗೋಹತ್ಯೆ ನಿಷೇಧ ಹಿನ್ನೆಲೆಮೃಗಾಲಯದ ಮಾಂಸಹಾರಿ ಪ್ರಾಣಿಗಳಿಗೆ ಆಹಾರ ಏನು? ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ರಾಜ್ಯದ 9 ಮೃಗಾಲಯಗಳಲ್ಲಿನ ಹುಲಿ, ಸಿಂಹ,ಚಿರತೆ, ಮೊಸಳೆ ಸೇರಿದಂತೆ ಹಲವು ಮಾಂಸಹಾರಿಪ್ರಾಣಿಗಳಿಗೆ ಪ್ರತಿ ದಿನ ಸುಮಾರು 1300ಕೆ.ಜಿ.ದನದ ಮಾಂಸ ಮುಖ್ಯ ಆಹಾರವಾಗಿ ಬಳಕೆಯಾಗುತ್ತಿದೆ. ಇದಕ್ಕೆ ಮೃಗಾಲಯಗಳೇ ನೇರವಾಗಿ ಮಾಂಸಸರಬರಾಜು ಮಾಡುವವರೊಂದಿಗೆ ಒಪ್ಪಂದಮಾಡಿಕೊಂಡಿದೆ. ಹೀಗಿರುವಾಗ ಸರ್ಕಾರ ಸಂಪೂರ್ಣ ಗೋ ಹತ್ಯೆನಿಷೇಧ ಕಾನೂನು ಜಾರಿಗೆ ತಂದರೆ ರಾಜ್ಯದಲ್ಲಿನಬಹುತೇಕ ಕಸಾಯಿಖಾನೆಗಳು ಬಂದ್‌ ಆದರೆ ಆಗ 9 ಮೃಗಾಲಯಗಳಲ್ಲಿನ ಮಾಂಸಹಾರಿ ಪ್ರಾಣಿಗಳಿಗೆ ದನದ ಮಾಂಸ ಸರಬರಾಜು ನಿಂತಂತೆ ಆಗುತ್ತದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 100 ಪ್ರಾಣಿಗಳಿಗೆ ಬೇಕು ಮಾಂಸ: ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಸಿಂಹ, ಹುಲಿ,ಚಿರತೆ, ಮೊಸಳೆ, ಸೀಳುನಾಯಿ, ಕೆಲ ಪಕ್ಷಿಗಳು ಸೇರಿದಂತೆ 100 ಕ್ಕೂ ಹೆಚ್ಚು ಪ್ರಾಣಿಗಳಿಗೆ ಸುಮಾರು 500 ರಿಂದ 600 ಕೆ.ಜಿ.ದನದ ಮಾಂಸ ಅವಶ್ಯವಿದೆ. ಪರ್ಯಾಯ ಆಹಾರ: ಪ್ರಾಣಿಗಳಿಗೆ ದನದ ಮಾಂಸದ ಬದಲಾಗಿ ಕುರಿ, ಮೇಕೆ, ಕೋಳಿ, ಹಂದಿಯಂತಹ ಪ್ರಾಣಿಗಳ ಆಹಾರ ನೀಡಬೇಕಾದ ಅನಿವಾರ್ಯತೆ ಬರಲಿದೆ. ಆಗ ಮೃಗಾಲಯಗಳ ಅಧಿಕಾರಿಗಳು, ಪ್ರಾಣಿ ತಜ್ಞರು ಯಾವ ಪ್ರಾಣಿಗಳಿಗೆ ಯಾವ ಆಹಾರ ಸೂಕ್ತ ಎಂಬುದನ್ನು ಅಧ್ಯಯನ ಮಾಡಿ ಮುಂದಿನ ನಿಲುವಿಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ : ಜೆಪಿ ನಡ್ಡಾ, ಬೆಂಗಾವಲು ವಾಹನದ ಮೇಲೆ ದಾಳಿ; ಬಂಗಾಳದ ಡಿಜಿಪಿ, ಸಿಎಸ್ ಗೆ ಕೇಂದ್ರದ ಸಮನ್ಸ್

ಇನ್ನೂ, ದನದ ಮಾಂಸದ ಬದಲಾಗಿ ಕುರಿ, ಮೇಕೆ ನೀಡಲು ಮುಂದಾದರೆ ಮೃಗಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಒಟ್ಟಾರೆ ಸರ್ಕಾರ ಗೋ ಹತ್ಯೆ ಕಾನೂನು ಜಾರಿಗೆ ತರುವ ಮುನ್ನ ಮೃಗಾಲಯಗಳಿಗೆ ಸರಬರಾಜು ಆಗುತ್ತಿರುವ ದನದ ಮಾಂಸದ ಬಗ್ಗೆ ಸ್ಪಷ್ಟತೆ ನೀಡಿದ್ದರೆ ಯಾವುದೇ ಗೊಂದಲ ಮೂಡುತ್ತಿರಲಿಲ್ಲ ಎಂದು ಹೇಳುತ್ತಾರೆ ಪ್ರಾಣಿ ಪ್ರಿಯರು.

ಪರ್ಯಾಯ ಆಹಾರಕ್ಕೆ ಚಿಂತನೆ: ಬಿ.ಪಿ.ರವಿ :

ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಪಾಲನೆಗೆ ಸೂಚನೆ ನೀಡಿದ ಕೂಡಲೇ ಪರ್ಯಾಯ ಆಹಾರ ನೀಡುವ ಚಿಂತನೆ ಮಾಡಲಾಗುವುದು ಎಂದು ರಾಜ್ಯ ಮೃಗಾಲಯಗಳ ಪ್ರಾದಿಕಾರದ ಸದಸ್ಯಕಾರ್ಯದರ್ಶಿ ಬಿ.ಪಿ.ರವಿ ಹೇಳಿದರು. ಉದಯವಾಣಿಯೊಂದಿಗೆ ಮಾತನಾಡಿದ ಅವರು, ಸರ್ಕಾರಗಳು ಯಾವುದೇ ಕಾನೂನು ಜಾರಿಗೆ ತರುತ್ತಿದ್ದಂತೆ ಪರ್ಯಾಯ ಮಾರ್ಗಗಳಿಗೂ ಅವಕಾಶ ಕಲ್ಪಿಸಿರುತ್ತದೆ. ಹಾಗೆ ಮೃಗಾಲಯಗಳ ಪ್ರಾಣಿಗಳಿಗೆ ಸರಬರಾಜು ಆಗುತ್ತಿರುವ ದನದ ಮಾಂಸದ ಬಗ್ಗೆಯೂ ಒಂದು ಸ್ಪಷ್ಟ ನಿರ್ದೇಶನ ಸೂಚಿಸಿರುತ್ತದೆ. ನಿಷೇಧದ ನಿಯಮಗಳು ನಾವು ಪರಿಶೀಲಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದ 9 ಮೃಗಾಲಯಗಳಿಗೂ ಪ್ರತಿ ದಿನಕೇವಲ 1300 ಕೆ.ಜಿ.ಗಳಷ್ಟು ದನದ ಮಾಂಸ ಅವಶ್ಯಕತೆ ಇದೆ. ನಿಷೇಧದ ನಡುವೆ ಪ್ರಾಣಿಗಳಿಗೆ ದನದ ಮಾಂಸ ನೀಡಲು ಕಾಯ್ದೆಯಲ್ಲಿ ಅವಶ್ಯಕತೆ ಇದ್ದರೆ ಮಾಂಸಕೊಳ್ಳಲು ದುಬಾರಿಯಾಗದು ಎಂದು ಅವರು ಹೇಳಿದರು.

ಆರೋಗ್ಯದಲ್ಲಿ ಏರುಪೇರು ಸಾಧ್ಯತೆ :  ಕುರಿ, ಮೇಕೆ ಮಾಂಸಕ್ಕಿಂತ ಕಡಿಮೆ ಬೆಲೆಯಲ್ಲಿ ಕೋಳಿ ಮಾಂಸ ಸಿಗಲಿದೆ. ಆದರೆ ಕೋಳಿಯಲ್ಲಿ ಕೊಬ್ಬಿನಾಂಶಹೆಚ್ಚಾಗಿರುವುದರಿಂದಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಪ್ರತಿದಿನ ಸೇವಿಸಿದರೆ ಆರೋಗ್ಯದಲ್ಲಿ ಬದಲಾವಣೆಯೂ ಆಗಬಹುದು ಎಂಬ ವಿಚಾರವೂ ಪ್ರಾಣಿ ತಜ್ಞರಲ್ಲಿ ನಡೆಯುತ್ತಿದೆ.

ಬೇರೆ ಆಹಾರಕ್ಕೆ ಹೇಗೆ ಹೊಂದಿಕೊಳ್ಳಲಿವೆ? : ಕಾಡಿನ ರಾಜ ಸಿಂಹ, ಹುಲಿ, ಚಿರತೆ, ಮೊಸಳೆ, ಕಾಡುನಾಯಿ,ತೋಳ,ಕೆಲಪಕ್ಷಿಗಳಿಗೆಇಲ್ಲಿವರೆಗೂ ಲಭ್ಯವಿದ್ದ ದನದ ಮಾಂಸಬಂದ್‌ಆಗಲಿದೆಯೇ? ಒಂದು ವೇಳೆ ದನದ ಮಾಂಸ ಸಿಗದಿದ್ದರೆ ಪ್ರಾಣಿ ಗಳು ಬೇರೆ ಆಹಾರಕ್ಕೆ ಹೇಗೆ ಹೊಂದಿಕೊಳ್ಳಲಿವೆ ಎಂಬುದು ಕುತೂಹಲ ಮೂಡಿಸಿದೆ.

 

ಮಂಜುನಾಥ್‌ ಎನ್‌.ಬನ್ನೇರುಘಟ್ಟ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.