Udayavni Special

ವಿದ್ಯಾರ್ಥಿಗಳಿಗೆ ಜಾನಪದ ತರಬೇತಿ

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಜಯಮ್ಮ ಜೋಗತಿ ಮಾಹಿತಿ

Team Udayavani, Feb 16, 2020, 6:13 PM IST

16-February-25

ದೊಡ್ಡಬಳ್ಳಾಪುರ: ನಮ್ಮ ಜಾನಪದ ಕಲೆ, ಸಂಸ್ಕೃತಿಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಜಾನಪದ ತರಬೇತಿ ಕಾರ್ಯಕ್ರಮ ರೂಪಿಸಲಾಗಿದ್ದು, ಜಾನಪದ ಅಕಾಡೆಮಿಯಿಂದ ಜಾನಪದ ಹಬ್ಬದಂತಹ ವಿಶಿಷ್ಠ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಜಯಮ್ಮ ಜೋಗತಿ ಹೇಳಿದರು.

ನಗರದ ಭಗತ್‌ ಸಿಂಗ್‌ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಸಹಯೋಗದೊಂದಿಗೆ ಜಾನಪದ ಹಬ್ಬ- ಭಾವೈಕ್ಯತೆಯ ಸಮ್ಮಿಲನ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಡಿನ ಅನನ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದಾಗಿರುವ ಜಾನಪದ ಕಲೆಗಳನ್ನು ಬೆಳೆಸಲು ಎಲ್ಲಾ ವಯೋಮಾನದವರಿಗೂ ಮಾನ್ಯತೆ ನೀಡಲು ಸೂಕ್ತ ಯೋಜನೆ ರೂಪಿಸಲಾಗುತ್ತಿದೆ. ಕನ್ನಡ ಕಲಿಸಿ, ಕನ್ನಡ ಸಂಸ್ಕೃತಿ ಬೆಳೆಸಿ ಎಂಬುದು ಅಕಾಡೆಮಿಯ ಚಿಂತನೆಯಾಗಿದೆ. ಕಲಾವಿದರು ತಮ್ಮ ಕಲೆಯನ್ನು ವೇದಿಕೆಯ ಮೇಲೆ ಅಥವಾ ಜನರ ಮುಂದೆ ಪ್ರಸ್ತುತಪಡಿಸುವ ವೇಳೆ ತಮ್ಮ ಹಾವ,ಭಾವ ಮತ್ತು ವಸ್ತ್ರದ ಶಿಸ್ತಿಗೂ ಆದ್ಯತೆ ನೀಡಬೇಕು. ಕರೋಕೆ, ಸಿನಿಮಾದ ಸಿದ್ಧ ಸಂಗೀತದ ಮೂಲಕ ಮೂಲ ಜಾನಪದಕ್ಕೆ ಧಕ್ಕೆ ಬಾರದಂತೆ ಪ್ರದರ್ಶನಗಳನ್ನು ನೀಡಬೇಕು. ಉಡುಪು ಸಂಹಿತೆ ಕಲಾವಿದರಿಗೆ ಮುಖ್ಯ. ಫೈಬರ್‌ ನಿಂದ ಮಾಡಿದ ವಾದ್ಯಗಳು ಬಳಸದೆ, ಆಕರ್ಷಕ ನಾದವನ್ನು ಹೊರ ಹೊಮ್ಮಿಸುವ ವಾದ್ಯಗಳನ್ನು ಬಳಸಲು ಮನವಿ ಮಾಡಿದರು.

ಮಂಗಳಮುಖೀ ಸಾಧಕರೊಬ್ಬರನ್ನು ರಾಜ್ಯ ಸರ್ಕಾರದ ಮಹತ್ವದ ಅಕಾಡೆಮಿಯೊಂದಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ದೇಶದಲ್ಲೇ ಮೊದಲು. ಇಂತಹ ಮಹತ್ವದ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಜನಪದ ಕಲಾವಿದರ ಏಳಿಗೆಗಾಗಿ ಶ್ರಮಿಸಲಾಗುವುದು ಎಂದರು.

ಸದಾ ಒಂದಲ್ಲಾ ಒಂದು ಒತ್ತಡದ ಕೆಲಸದಲ್ಲಿಯೇ ನಿರತರಾಗಿರುವ ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾನಪದ ಅಕಾಡೆಮಿಯೊಂದಿಗೆ ಸೇರಿಕೊಂಡು ಹಾಡು, ಕುಣಿತಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭವನ್ನು ಉದ್ಘಾಟಿಸಿದದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಮಕ್ಕಳಲ್ಲಿ ಜಾನಪದ ಕಲೆ ಕುರಿತು ಆಸಕ್ತಿ ಬೆಳೆಸುವ ಮೂಲಕ ಸಾಂಪ್ರದಾಯಿಕ ಜಾನಪದ ಪರಂಪರೆಯನ್ನು ಸಂರಕ್ಷಿಸಲು ಮುಂದಾಗಬೇಕು. ನಮ್ಮ ಪೂರ್ವಜರು ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವಾಗ, ಭತ್ತ ನಾಟಿ ಮಾಡುವಾಗ ಅಂದು ಆಡು ಭಾಷೆಯಲ್ಲಿ ಕಟ್ಟಿದ ಪದಗಳೆ ಇಂದು ಜಾನಪದ ಗೀತೆಗಳಾಗಿದ್ದು, ಕಲಿತಿರುವ ಜಾನಪದ ಗೀತೆಗಳನ್ನು ಹಾಡುತ್ತಾ, ಮುಂದಿನ ಪೀಳಿಗೆಗೂ ಕಲಿಸುತ್ತಾ ಜಾನಪದ ಕಲೆಯನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್‌ ,ಉಪಾಧ್ಯಕ್ಷೆ ಪದ್ಮಾವತಿಅಣ್ಣಯಪ್ಪ,ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವ ಎಸ್‌.ಗೌಡ ಇದ್ದರು. ಕಾರ್ಯಕ್ರಮದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳಿಂದ ವೀರಭದ್ರನ ನೃತ್ಯ, ತಮಟೆ ವಾದನ, ಡೊಳ್ಳು ಕುಣಿತ, ಸೀಮ ಕುಣಿತ, ಪೂಜಾ ಕುಣಿತ, ಕಂಗೀಲು ನೃತ್ಯ ಮೊದಲಾದ ನೃತ್ಯ ಪ್ರದರ್ಶನ ನಡೆಯಿತು.

ಕಾಲೇಜು ವಿದ್ಯಾರ್ಥಿನಿಯರಿಂದ ಜಾನಪದ ನೃತ್ಯ ಪ್ರದರ್ಶನ, ಖ್ಯಾತ ಗಾಯಕರಿಂದ ಜಾನಪದ ಗೀತ ಗಾಯನ, ಪೊಲೀಸ್‌ ಇಲಾಖೆಯ ಸಿಬ್ಬಂದಿಯಿಂದ ಜಾನಪದ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷರರ ಮೆಚ್ಚುಗೆ ಪಡೆದರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

world-wide-covid19

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump-jpeg

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ 19: ತಿಪ್ಪೆಗೆ ಸೇರಿದ ಕ್ಯಾಪ್ಸಿಕಂ

ಕೋವಿಡ್ 19: ತಿಪ್ಪೆಗೆ ಸೇರಿದ ಕ್ಯಾಪ್ಸಿಕಂ

ಪೊಲೀಸ್‌ಲಾಠಿ ಏಟಿಗೆ ಹೆದರಿದ ಜನತೆ

ಪೊಲೀಸ್‌ಲಾಠಿ ಏಟಿಗೆ ಹೆದರಿದ ಜನತೆ

ಸಪ್ತಪದಿಗೆ 61 ಜೋಡಿಗಳ ನೋಂದಣಿ

ಸಪ್ತಪದಿಗೆ 61 ಜೋಡಿಗಳ ನೋಂದಣಿ

ಸ್ವಚ್ಛತೆ ಕಾಪಾಡಿ: ಶಾಸಕ

ಸ್ವಚ್ಛತೆ ಕಾಪಾಡಿ: ಶಾಸಕ

ನೀರಿನ ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

ನೀರಿನ ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ