ದೇವನಹಳ್ಳಿ-ವಿಜಯಪುರ ಅವಳಿ ನಗರ ಮಾಡುವ ಇಂಗಿತ

Team Udayavani, Mar 23, 2021, 1:39 PM IST

ದೇವನಹಳ್ಳಿ-ವಿಜಯಪುರ ಅವಳಿ ನಗರ ಮಾಡುವ ಇಂಗಿತ

ವಿಜಯಪುರ: ಪಟ್ಟಣ ವ್ಯಾಪ್ತಿಯಲ್ಲಿ 1.20 ಕೋಟಿರೂ.ನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ ಚಾಲನೆ ನೀಡಿದರು.

ಪಟ್ಟಣದ 22ನೇ ವಾರ್ಡ್‌ನ ದೇವಣ್ಣನಕುಂಟೆ ಬಳಿ ಪಾರ್ಕ್‌, ಕಾಂಪೌಂಡ್‌ ನಿರ್ಮಾಣ, ಒಣತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ 15ನೇ ಹಣಕಾಸು ಯೋಜನೆಯಡಿ 1.20 ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ದೇವಣ್ಣನಕುಂಟೆ ಅಭಿವೃದ್ಧಿ,ಒಣ ತ್ಯಾಜ್ಯ ಘಟಕ ನಿರ್ಮಾಣಕ್ಕಾಗಿ 10.25 ಲಕ್ಷರೂ., ಕಾಂಪೌಂಡ್‌ ನಿರ್ಮಾಣ ಕಾಮಗಾರಿಗೆ 8.90ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ಪಟ್ಟಣದಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ದೇವನಹಳ್ಳಿ-ವಿಜಯಪುರ ಅವಳಿ ನಗರಗಳನ್ನಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸಲುಅಧಿವೇಶನದಲ್ಲಿ ಗಮನ ಸೆಳೆಯಲಾಗಿದೆ.ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿತಾಲೂಕಿನ ಎರಡೂ ಪುರಸಭೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.ನೀರಿನ ಸಮಸ್ಯೆಗೆ ಕ್ರಮ: ಪಟ್ಟಣದಲ್ಲಿ ಅಗತ್ಯಇರುವ ಕಡೆ ಬೋರ್‌ವೆಲ್‌ ಕೊರೆಯಲು ಕ್ರಮಕೈಗೊಳ್ಳಲಾಗಿದೆ. ವೆಂಕಟಗಿರಿಕೋಟೆ ಕೆರೆಗೆ ಹರಿದು ಬಂದಿರುವ ಎಚ್‌.ಎನ್‌. ವ್ಯಾಲಿ ನೀರನ್ನುದಂಡಿಗಾನಹಳ್ಳಿ ಕೆರೆಯ ಮೂಲಕ ವಿಜಯಪುರಅಮಾನಿಕೆರೆ, ಚಿಕ್ಕನಹಳ್ಳಿ ಕೆರೆಗೆ ಹರಿಸಲು ಯೋಜನೆರೂಪಿಸಲಾಗಿದೆ. ಮುಂದಿನ ತಿಂಗಳ ಆರಂಭದಲ್ಲಿಯೇ ಹೆಬ್ಟಾಳ-ನಾಗವಾರ ಕೆರೆ ಮೂಲಕ ವೆಂಕಟಗಿರಿಕೋಟೆ ಕೆರೆಗೆ ಹರಿಯುವ ನೀರನ್ನುಚಿಕ್ಕನಹಳ್ಳಿ ಕೆರೆಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅಂತರ್ಜಲ ಹೆಚ್ಚಿ, ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗಲಿದೆ ಎಂದು ವಿವರಿಸಿದರು.

ಅನುದಾನ ಬಿಡುಗಡೆ: ಬೇಸಿಗೆಯಲ್ಲಿ ಕುಡಿಯುವನೀರಿನ ಬವಣೆ ತಪ್ಪಿಸಲು 50 ಲಕ್ಷ ರೂ.ನತೆ 2ಕಂತುಗಳಲ್ಲಿ ಅನುದಾನ ಬಿಡುಗಡೆಯಾಗಿದ್ದು,ಶೀಘ್ರವೇ ಎಲ್ಲಿಯೂ ನೀರಿಗೆ ಅಭಾವವಾಗದಂತೆನೋಡಿಕೊಳ್ಳಲು ಯೋಜನೆ ರೂಪಿಸಲಾಗುವುದುಎಂದರು. 15ನೇ ವಾರ್ಡ್‌ನ ಸುಣ್ಣಕಲ್ಲುಗೂಡುಬಳಿ, 5ನೇ ವಾರ್ಡ್‌ನ ಧರ್ಮರಾಯ ಸ್ವಾಮಿದೇಗುಲ ಬಳಿ ಕೊಳವೆಬಾವಿ ಕೊರೆಯುವಕಾಮಗಾರಿಗೆ ಪೂಜೆ ನೆರವೇರಿಸಲಾಯಿತು. 10ನೇವಾರ್ಡ್‌ನ ಗಾಂಧಿ ಚೌಕದ ರಸ್ತೆ ಡಾಂಬರೀಕರಣ,4ನೇ ವಾರ್ಡ್‌ನ ದಂಡಿಗಾನಹಳ್ಳಿ ರಸ್ತೆಯಕೊಂಡೇನಹಳ್ಳಿ ಜಮೀನಿಗೆ ಕಾಂಪೌಂಡ್‌ ನಿರ್ಮಾಣಕಾಮಗಾರಿಗೆ ಚಾಲನೆ ನೀಡಲಾಯಿತು.

ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷ ಕಾರಹಳ್ಳಿ ಆರ್‌. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ,ಪುರಸಭಾ ಮಾಜಿ ಅಧ್ಯಕ್ಷ ಎಂ.ಚಿನ್ನಯ್ಯ, ಮಾಜಿಸದಸ್ಯ ಎನ್‌. ನಾರಾಯಣಸ್ವಾಮಿ, ಎಂ.ಕೇಶವಪ್ಪ,ಎಚ್‌.ಎಂ.ಕೃಷ್ಣಪ್ಪ, ಟೌನ್‌ ಜೆಡಿಎಸ್‌ ಅಧ್ಯಕ್ಷ ಎಸ್‌ .ಭಾಸ್ಕರ್‌, ಕಾರ್ಯದರ್ಶಿ ಭುಜೇಂದ್ರ, ಹೋಬಳಿಜೆಡಿಎಸ್‌ ಅಧ್ಯಕ್ಷ ವೀರಪ್ಪ, ಕಾರ್ಯದರ್ಶಿಕಲ್ಯಾಣಕುಮಾರ್‌ ಬಾಬು, ಯಲುವಹಳ್ಳಿಅಶೋಕ್‌, ಎಸ್‌.ವಿ.ಬಸವರಾಜ್‌ ಕೆ.ಮುನಿರಾಜು,ಪ್ರಕಾಶ್‌, ಬೀರಪ್ಪ, ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ ಕುಮಾರ್‌, ಎಂಜಿನಿಯರ್‌ ಸುಪ್ರಿಯರಾಣಿ, ಗಂಗಾಧರ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.