ಆದಿವಾಸಿ ನಿರುದ್ಯೋಗಿಗಳಿಗೆ ವಾಹನ ಚಾಲನಾ ತರಬೇತಿ
Team Udayavani, Nov 29, 2021, 12:58 PM IST
ಹುಣಸೂರು: ನಗರದ ಡೀಡ್ ಸಂಸ್ಥೆ ಸೋಮು ಡ್ರೈವಿಂಗ್ ಸ್ಕೂಲ್ ಹಾಗೂ ಅಜೀಂ ಪ್ರೇಮ್ ಜೀ ಸಂಸ್ಥೆ ಸಹಯೋಗದಲ್ಲಿ 25 ಮಂದಿ ಆದಿವಾಸಿ ಯುವಕರಿಗೆ 2 ತಿಂಗಳ ಲಘು ವಾಹನ ಚಾಲನಾ ತರಬೇತಿಗೆ ಚಾಲನೆ ನೀಡಲಾಯಿತು.
ನಗರದ ಚಿಕ್ಕಹುಣಸೂರಿನ ಡೀಡ್ ಸಂಸ್ಥೆ ಆವರಣದಲ್ಲಿ ತರಬೇತಿಗೆ ಚಾಲನೆ ನೀಡಿದ ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ವಿದ್ಯಾವಂತ ಯುವ ಜನರಿಗೆ ಉದ್ಯೋಗದ ಅವಕಾಶ ಕಡಿಮೆ ಹಾಗೂ ಆದಿವಾಸಿ ಯುವ ಜನರಿಗೆ ವಾಹನ ಚಾಲನೆ ಬಗ್ಗೆ ಒಲವು ಇರುವುದರಿಂದ ಇಂತಹವರಿಗೆ 2 ತಿಂಗಳು ವಾಹನ ಚಾಲನೆ ತರಬೇತಿ ನೀಡಿ, ಬೈಕ್ ಮತ್ತು ಕಾರು ಚಾಲನೆ ಮಾಡಲು ಸಂಸ್ಥೆ ವತಿಯಿಂದ ಉಚಿತವಾಗಿ ಪರವಾನಗಿ ಕೊಡಿಸಲಾಗುವುದು.
ಮೊದಲ ತಿಂಗಳು ಸೋಮು ಡ್ರೈವಿಂಗ್ ಸ್ಕೂಲ್ ನೆರವಿನಿಂದ ಚಾಲನೆ ತರಬೇತಿ ಕೊಡಿಸಲಾಗುವುದು. ಎರಡನೇ ತಿಂಗಳು ಡೀಡ್ ಸಂಸ್ಥೆಯ ಡ್ರೈವಿಂಗ್ ಸ್ಕೂಲ್ ಲಘು ವಾಹನ ಬಳಸಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಹುಣಸೂರು ಉಪ ವಿಭಾಗದ ಹಾಡಿಗಳ ಆದಿವಾಸಿ ಯುವಕರು ಈ ಸೌಲಭ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ವಿವಿಧ ತರಬೇತಿ: ಈ ತರಬೇತಿಯಲ್ಲಿ ಉಚಿತವಾಗಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಯುವಕರು ಹಾಗೂ 18 ವರ್ಷ ಮೇಲ್ಪಟ್ಟ ಹೈಸ್ಕೂಲ್ ವ್ಯಾಸಂಗ ಮಾಡಿರುವ ಆದಿವಾಸಿ ಹೆಣ್ಣು ಮಕ್ಕಳೂ ಈ ಸೌಲಭ್ಯ ಬಳಸಿಕೊಳ್ಳಬಹುದು. ಮಾತನಾಡುವ ಕಲೆ, ವಿವಿಧ ಭಾಷೆಗಳ ಕುರಿತು ತರಬೇತಿ ನೀಡಲಾಗುವುದು ಎಂದರು. ಆಸಕ್ತರು ಡೀಡ್ ಸಂಸ್ಥೆ ಮಾಹಿತಿಗೆ 9448135256ಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ
ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ