Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ


Team Udayavani, Jun 19, 2024, 12:20 PM IST

BRural

ದೇವನಹಳ್ಳಿ: ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಗ್ರಾಮ ಪಂಚಾಯಿತಿ ಯಲ್ಲಿಯೇ ಇನ್ನು ಮುಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಪಂಗಳಲ್ಲಿಯೇ ಜನನ ಮರಣ ಪತ್ರ ಡಿಜಿಟಲ್‌ ದಾಖಲೆ ಸಿಗಲಿದೆ.

ಗ್ರಾಮೀಣ ಪ್ರದೇಶದಲ್ಲಿ ಜನನ ಪತ್ರಗಳನ್ನು ಆಯ ಸರ್ಕಾರಿ ಆಸ್ಪತ್ರೆ ನಾಡಕಚೇರಿ ತಾಲೂಕು ಕಚೇರಿ ಗಳಲ್ಲಿ ಪಡೆಯಲು ಅವಕಾಶವಿತ್ತು. ಮರಣ ಪತ್ರಗಳನ್ನು ಆಯಾ ನಾಡಕಚೇರಿಗಳಲ್ಲಿ ನೀಡಲಾಗುತ್ತಿತ್ತು. ಅನ್ಯ ಉದ್ದೇಶವಾಗಿ ಇಂತಹ ಪತ್ರಗಳನ್ನು ಅಕ್ರಮವಾಗಿ ಪಡೆದುಕೊಂಡು ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಅಕ್ರಮಗಳಿಗೆ ಕಡಿವಾಣ ಹಾಕಲು ಆನ್‌ ಲೈನ್‌ ಮೂಲಕ ಇ-ಜನ್ಮ ತಂತ್ರಾಂಶವನ್ನು ಜಾರಿಗೆ ತಂದಿದೆ. ತಂತ್ರಾಂಶದಲ್ಲಿ ನೋಂದಾಯಿಸಿಕೊಂಡ ನಂತರ ಆನ್‌ ಲೈನ್‌ನಲ್ಲಿ ಜನ ರೇಟರ್‌ ನಂಬರ್‌ ಪಡೆದು ಎಲ್ಲಿ ಬೇಕಾದರೂ ಸರ್ಟಿಫಿಕೇಟ್‌ ತೆಗೆದುಕೊಳ್ಳುವ ವ್ಯವಸ್ಥೆ ಇರುವುದರಿಂದ ಜನರು ಈ ದಾಖಲೆಗಳಿಗೆ ಕಚೇರಿಗಳಿಗೆ ಅಲೆದಾಟ ತಪ್ಪುತ್ತದೆ.

4 ದಿನ ಅಧಿಕಾರಿಗಳಿಗೆ ತರಬೇತಿ:

ಜನನ ಮರಣ ಪತ್ರಗಳ ಉಪ ನೋಂದಣಾ ಅಧಿಕಾರಿಯಾಗಿ ಗ್ರಾಪಂ ಪಿಡಿಒಗಳನ್ನು ನೇಮಕ ಮಾಡಲಾಗಿತ್ತು ಅದರ ಬದಲಾಗಿ ಇನ್ನು ಮುಂದೆ ಕಾರ್ಯದರ್ಶಿಗಳು ಉಪ ನೋಂದಣಾಧಿಕಾರಿ ಗಳಾಗಿರುತ್ತಾರೆ. ಜನನ ಮಗನ ಘಟನೆಗಳು ಘಟಿಸಿದ 30 ದಿನದ ಹೊರಗಿನ ಘಟನೆಗಳನ್ನು ನೋಂದಾಯಿಸಿ ಪ್ರಮಾಣ ಪತ್ರಗಳನ್ನು ಡಿಜಿಟಲ್‌ ಸಹಿ ಮೂಲಕ ವಿತರಿಸಲಾಗುತ್ತದೆ. ಇದರ ಸಂಬಂಧ ಪಟ್ಟಂತೆ 4 ದಿನಗಳ ಕಾಲ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್‌ ನೋಂದಣಿ ಆಗುವುದರಿಂದ ಈ ದಾಖಲೆಗಳು ಜನರ ಕೈಗೆ ಸುಲಭವಾಗಿ ಸಿಗುತ್ತದೆ. ಕೆಲವರು ಆಸ್ತಿ, ಬ್ಯಾಂಕಿಂಗ್‌ ನಲ್ಲಿರುವ ಹಣ ಪಡೆಯಲು ಸುಳ್ಳು ಜನನ ಮರಣ ಪತ್ರಗಳು ಸೃಷ್ಟಿ ಹಣ ಕಬಳಿಸುವ ಘಟನೆಗಳು ನಡೆದವು. ಆದ್ದರಿಂದ ನಿಜವಾದ ಫ‌ಲಾನುಭವಿಗಳಿಗೆ ಮೋಸ ವಾಗಿ ನ್ಯಾಯಾಲಯ, ವಿಚಾರಣೆ ಅಂತೆಲ್ಲ ವರ್ಷಾನುಗಟ್ಟಲೆ ಅಲೇದಾಡುವುವಂತಾಗಿತ್ತು.

ಇ- ಜನ್ಮ ಪೋರ್ಟಲ್‌ನಲ್ಲಿ ದಾಖಲಾಗುವ ನಂಬರ್‌ ಒಮ್ಮೆ ಮತ್ತು ಜನರೇಟ್‌ ಆಗಲಿದೆ. ಮರಣ ನಂತರ ಆದ ತಿದ್ದುಪಡಿ ಸದ್ಯವಾಗುವುದಿಲ್ಲ. ಡಿಜಿಟಲ್‌ ಸಹಿ ಕೂಡ ಇದರಲ್ಲಿ ಅಪ್ರೋಡ್‌ ಆಗುತ್ತದೆ. ಇ-ಜನ್ಮ ಪೋರ್ಟಲ್‌ನಲ್ಲಿ ಆಧಾರ್‌ ಕಾರ್ಡ್‌ ಮಾದರಿಯಲ್ಲಿ ಒಬ್ಬರಿಗೆ ಒಂದು ನಂಬರ್‌ ನೀಡಲಿದ್ದು. ನಕಲಿ ಮಾಡಿ ಸರ್ಟಿಫಿಕೆಟ್‌ ಪಡೆಯಲು ಸಾಧ್ಯವಿರುವುದಿಲ್ಲ. ಮಗು ಹುಟ್ಟಿದ ತಕ್ಷಣ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು. ಗ್ರಾಪಂ ಅಧಿಕಾರಿಗಳು ಇ-ಜನ್ಮ ಪೋರ್ಟಲ್‌ನಲ್ಲಿ ತಂದೆ ತಾಯಿ ಹೆಸರು, ಆಧಾರ್‌, ಪಾನ್‌ ಕಾರ್ಡ್‌ ಸೇರಿದಂತೆ ಯಾವುದಾದರೂ ಒಂದು ದಾಖಲಾತಿ ನೀಡಿ ಅಪ್ರೋಡ್‌ ಮಾಡುತ್ತಾರೆ. ಸರ್ಟಿಫಿಕೇಟ್‌ನೊಂದಿಗೆ ನಂಬರ್‌ ಒಂದನ್ನು ಜನರೇಟ್‌ ಆಗಲಿದೆ. ನಂಬರ್‌ ಪಡೆದಲ್ಲಿ ಬೇಕಾದರೂ ಆನ್‌ಲೈನ್‌ನಲ್ಲಿ ಮಾಹಿತಿ ದಾಖಲೆ ಪಡೆದುಕೊಳ್ಳಬಹುದು.ವಿವಿಧ ಕಚೇರಿಗಳಿಗೆ ಜನನ ಮತ್ತು ವರ್ಣ ಪ್ರಮಾಣ ಪತ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈಗ ಸರ್ಕಾರ ಗ್ರಾಪಂಗಳಲ್ಲಿ ನೀಡುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವಂತೆ ಮಾಡಿರುತ್ತಾರೆ.

ಸುಲಭವಾಗಿ ಜನರ ಕೈಗೆ ಸಿಗಲಿದೆ ದಾಖಲೆಗಳು:

ಪ್ರತಿಯೊಬ್ಬರಿಗೂ ಜನನ ಮತ್ತು ಮರಣ ಪತ್ರಗಳು ಮುಖ್ಯ ದಾಖಲೆಗಳಾಗಿವೆ. ಕೆಲವು ಇವುಗಳನ್ನು ಪಡೆಯಲು ಸಾಕಷ್ಟು ಪರದಾಟ ನಡೆಸಬೇಕಾಗಿತ್ತು. ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಜನನ ಮರಣ ಪತ್ರ ಮುಖ್ಯವಾಗಿರುತ್ತದೆ.

ಹಳ್ಳಿಗಳಲ್ಲಿ ಅಗತ್ಯ ಅರಿವು ಇಲ್ಲದ ಕಾರಣ ಜನನ ಮಾಹಿತಿಯನ್ನು ಸ್ಥಳೀಯವಾಗಿ ನೋಂದಾಯಿಸದೇ ಇದ್ದಾಗ ಜನನ ದಾಖಲೆ ಸಿಗುತ್ತಿರಲಿಲ್ಲ. ಮಕ್ಕಳು ಶಾಲೆಗೆ ಸೇರಬೇಕಾದಾಗ ಕೋರ್ಟ್‌ ಮೂಲಕ ದಾಖಲೆ, ಸಾಕ್ಷಿ ನೀಡಿ ಜನನ ಪತ್ರ ಪಡೆಯಬೇಕಾಗಿತ್ತು. ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್‌ ನೋಂದಣಿ ಆಗಿರುವುದರಿಂದ ದಾಖಲೆಗಳು ಸುಲಭವಾಗಿ ಜನರ ಕೈಗೆ ಸಿಗಲಿದೆ. ಎಲ್ಲಾ ಕಚೇರಿಗಳಲ್ಲಿ ಈಗ ಆನ್‌ಲೈನ್‌ ಆಗಿರುವು ದರಿಂದ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವು ದರಿಂದ ಜನಸಾಮಾನ್ಯರಿಗೆ ಅನುಕೂಲ ವಾಗುತ್ತದೆ. ಇ- ಜನ್ಮ ದಾಖಲೆಗಳಿಗೆ ಸರ್ವರ್‌ ಸಮಸ್ಯೆ ಬಾರದಂತೆ ನೋಡಿ ಕೊಂಡರೆ ಹೆಚ್ಚು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸರ್ವರ್‌ ಸಮಸ್ಯೆ ಬಂದರೆ ಜನ ಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್‌ ಸಮಸ್ಯೆ ಸರ್ವೆ ಸಾಮಾನ್ಯವಾಗಿರುತ್ತದೆ. ಒಂದು ಬಾರಿ ಚೆನ್ನಾಗಿ ಬಂದರೆ ಮತ್ತೂಂದು ಬಾರಿ ಬರುವುದಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ನೆಟ್‌ ಸಂಪರ್ಕ ಚೆನ್ನಾಗಿರು ವಂತೆ ಅಧಿಕಾರಿಗಳು ಮಾಡಬೇಕು. ಒಂದು ಅರ್ಜಿಗೆ 10 ರಿಂದ 20 ನಿಮಿಷ ಬೇಕಾಗುತ್ತದೆ. ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ಗ್ರಾಮೀಣ ಜನರಿಗೆ ಸುಲಭವಾಗಿ ಜನರ ಕೈಗೆ ಸಿಗುವಂತೆ ಜನನ ಮತ್ತು ಮರಣ ಡಿಜಿಟಲ್‌ ಪತ್ರ ಗಳಾಗಿದೆ. ಇನ್ನು ಮುಂದೆ ಗ್ರಾಪಂಗಳಲ್ಲಿ ಮರಣ ಮತ್ತು ಜನನ ಪತ್ರಗಳು ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಳ್ಳುವುದು. ಇದರ ಸಂಬಂಧಪಟ್ಟಂತೆ ನಾಲ್ಕು ತಾಲೂಕುಗಳು ಕಾರ್ಯದರ್ಶಿ, ಎಂಎಸ್‌ ಸಂಯೋಜಕರು, ಗ್ರಾಪಂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ತರಬೇತಿ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುತ್ತಿದೆ. ಡಾ.ಕೆ.ಎನ್‌.ಅನುರಾಧಾ, ಸಿಇಒ ಜಿಪಂ ಬೆಂಗಳೂರು ಗ್ರಾಮಾಂತರ ಜಿಲ್ಲೆ

-ಎಸ್‌. ಮಹೇಶ್‌

 

ಟಾಪ್ ನ್ಯೂಸ್

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

Bellary; ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ..: ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

Bellary; ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ..: ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

4-bantwala

Bantwala: ಶಾಮಿಯಾನದ ಕೆಲಸಗಾರ ವಿದ್ಯುತ್ ಶಾಕ್ ಗೆ ಬಲಿ

emme

Heavy Rain: ಕಾಫಿನಾಡಲ್ಲಿ ಭಾರಿ ಮಳೆ… ಹಳ್ಳ ದಾಟಲು ಹೋಗಿ ಕಣ್ಣೆದುರೇ ನೀರು ಪಾಲಾದ ಎಮ್ಮೆ

3-madikeri

Madikeri: ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganja peddler: ಪೊಲೀಸರ ಮೇಲೆಯೇ  ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ

Ganja peddler: ಪೊಲೀಸರ ಮೇಲೆಯೇ  ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್‌ಗೆ ಗುಂಡೇಟು; ಸೆರೆ

R.Ashok

Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್‌

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

12

Jackfruit: ಹಲಸಿನ ಹಣ್ಣಿನ ಬೆಲೆ ದುಬಾರಿ, ರೈತರ ಸಂತಸ

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

Kalasa; ಪ್ರವಾಹದಲ್ಲಿ ಕೊಚ್ಚಿ ಹೋದ ಎಮ್ಮೆ; ವಿಡಿಯೋ ಮಾಡಿಕೊಂಡು ನಿಂತ ವ್ಯಕ್ತಿ!

Kalasa; ಪ್ರವಾಹದಲ್ಲಿ ಕೊಚ್ಚಿ ಹೋದ ಎಮ್ಮೆ; ವಿಡಿಯೋ ಮಾಡಿಕೊಂಡು ನಿಂತ ವ್ಯಕ್ತಿ!

5-tumkur

Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ

Bellary; ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ..: ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

Bellary; ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ..: ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

4-bantwala

Bantwala: ಶಾಮಿಯಾನದ ಕೆಲಸಗಾರ ವಿದ್ಯುತ್ ಶಾಕ್ ಗೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.