Udayavni Special

ಶಿಕ್ಷಣ, ಧಾರ್ಮಿಕ ಕಾರ್ಯದಲ್ಲಿ ಮಠಗಳ ಪ್ರಮುಖ ಪಾತ್ರ


Team Udayavani, Apr 19, 2017, 4:44 PM IST

16-Z-3.jpg

ನೆಲಮಂಗಲ: ರಾಜ್ಯದಲ್ಲಿ ಶಿಕ್ಷಣ ಮತ್ತು ಇತರ ಧರ್ಮಕಾರ್ಯಗಳ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಪ್ರಮುಖವಾದದ್ದು. ಇತರೆ ಧರ್ಮಗಳ ಸಮುದಾಯಗಳ ಮಠಗಳೂ ಉತ್ತಮ ಸೇವೆ ನಡೆಸಿಕೊಂಡು ಬರುತ್ತಿವೆ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದರು. ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀಹೊನ್ನಮ್ಮ ಗವಿ ಮಠದಲ್ಲಿ ನಡೆದ ಜಾತ್ರಾ ಮಹೋತ್ಸವ, ಮಠದಲ್ಲಿ ಅನಾಥಶ್ರಮ, ವೃದ್ಧಾಶ್ರಮ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನಲ್ಲಿಯೇ ಶಿವಗಂಗೆ ಭಾಗದಲ್ಲಿ ಹೆಚ್ಚಿನ ಮಠಗಳು ಇದ್ದು, ಉತ್ತಮ ಸಮಾಜ ಸೇವೆಯನ್ನು ನಡೆಸಿಕೊಂಡು ಬರುತ್ತಿವೆ. ಇಲ್ಲಿನ ಪೀಠಾಧ್ಯಕ್ಷರು ಜನರಿಗೆ ಉತ್ತಮ ಶಿಕ್ಷಣ, ಧಾರ್ಮಿಕ ಬೋಧನೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ತಿಳಿಸುತ್ತಿದ್ದಾರೆ. ಉತ್ತಮ ಸ್ಪಂದನೆ ಹೊಂದಿದ್ದಾರೆ. ಇಲ್ಲಿಯ ಮಠದ ಪೂಜ್ಯರು ಚಿಕ್ಕ ವಯಸ್ಕರಾದರೂ ಹೆಚ್ಚಿನ ಶ್ರಮದಿಂದ ಮಠವನ್ನು ಅಭಿವೃದ್ಧಿ ಪಡಿಸಿದ್ದಾರೆ ಮತ್ತು ಇತರ ಸ್ವಾಮೀಜಿಯವರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದು ವಿವರಿಸಿದರು.

ಎರಡು ರಥೋತ್ಸವ, ದನಗಳ ಜಾತ್ರೆ: ದೊಡ್ಡಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಶಿವಗಂಗೆಯಲ್ಲಿನ ಶ್ರೀ ಸ್ವಾರ್ಣಾಂಬ ದೇವಿಯ ಶಕ್ತಿ ಅಪಾರವಾದದ್ದು, ಆದ್ದರಿಂದ ದೇವಿಯ ಶಕ್ತಿಯ ಆರಾಧಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ದೇವಿಗೆ ಪ್ರತಿವರ್ಷವು ವಿಶೇಷವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ವರ್ಷಕ್ಕೆ ಎರಡು ದನಗಳ ಜಾತ್ರೆ ಮತ್ತು ಎರಡು ರಥೋತ್ಸವಗಳು ನಡೆಯುತ್ತಿವೆ.

ಮುಖ್ಯವಾಗಿ ಸಂಕ್ರಾಂತಿಯ ಹಬ್ಬದಂದು ಗಂಗಾಧರೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವ ಮತ್ತು ಏಪ್ರಿಲ್‌ನಲ್ಲಿ ಹೊನ್ನಮ್ಮ ದೇವಿ ಜಾತ್ರೆ ಹಾಗೂ ರಥೋತ್ಸವಗಳು ನಡೆಯುತ್ತವೆ ಎಂದು ಹೇಳಿದರು. ವಿಶೇಷವೆಂದರೆ ಉತ್ಸವಗಳನ್ನು ಸರಕಾರದ ವತಿಯಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ, ಹೊನ್ನಮ್ಮಗವಿ ಮಠದ ವತಿಯಿಂದ ವಿಶೇಷವಾದ ಮಡೆ (ಆರತಿ)ಮತ್ತು ತೆಪ್ಪೋತ್ಸವ ಸೇರಿದಂತೆ ವಿವಿಧ ಪೂಜೆ ಉತ್ಸವಗಳನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ಹೊನ್ನಮ್ಮ ಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದೊಡ್ಡ ಬಳ್ಳಾಪುರ ಕ್ಷೇತ್ರದ ಶಾಸಕ ವೆಂಕಟರಮಣಪ್ಪ, ಶಿವಗಂಗೆಯ ಗಿರಿಪ್ರದಕ್ಷಿಣೆ ಸಂಘದ ಅಧ್ಯಕ್ಷ ಚಂದ್ರಪ್ಪ, ಸೇವಾಕರ್ತರಾದ ರೂಪ ಶಿವಾನಂದ ಮೂರ್ತಿ, ಹೇಮಲತ ಶುಭಾಸ್‌, ಲತಾ ಪರಮೇಶ್‌, ಗೌರಿಶಂಕರ್‌ ಅಂಚೆಮನೆ ರುದ್ರಪ್ಪ, ಪ್ರಕಾಶ್‌, ಉಮೇಶ್‌, ಚೌಡಯ್ಯ, ತಿರುಮಲ್ಲೇಶ್‌, ರವಿಕುಮಾರ್‌, ಸಿದ್ದರಾಜು ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ

ಪಂಪ್ ವೆಲ್ ಫ್ಲೈಓವರ್ ಗೆ ಇನ್ನೊಂದು ಹೆಸರು ಯಾಕೆ: ಯು ಟಿ ಖಾದರ್ ಪ್ರಶ್ನೆ

ಪಂಪ್ ವೆಲ್ ಫ್ಲೈಓವರ್ ಗೆ ಇನ್ನೊಂದು ಹೆಸರು ಯಾಕೆ? ಯು ಟಿ ಖಾದರ್ ಪ್ರಶ್ನೆ

ಸಿದ್ದರಾಮಯ್ಯ ಭೇಟಿ ಮಾಡಲು ಮುಗಿಬಿದ್ದ ಕಾರ್ಯಕರ್ತರು: ಎಲ್ಲೂ ಕಾಣದ ಸಾಮಾಜಿಕ ಅಂತರ

ಸಿದ್ದರಾಮಯ್ಯ ಭೇಟಿ ಮಾಡಲು ಮುಗಿಬಿದ್ದ ಕಾರ್ಯಕರ್ತರು: ಎಲ್ಲೂ ಕಾಣದ ಸಾಮಾಜಿಕ ಅಂತರ

ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಯಡಿಯೂರಪ್ಪ ಸೂಚನೆ

ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಯಡಿಯೂರಪ್ಪ ಸೂಚನೆ

ಮುಂಬೈನ ಅಲಿಬಾಗ್ ಪ್ರದೇಶಕ್ಕೆ ಬಡಿದಪ್ಪಳಿಸಿದ ನಿಸರ್ಗ ಚಂಡಮಾರುತ, ಹೈ ಅಲರ್ಟ್

ಮುಂಬೈನ ಅಲಿಬಾಗ್ ಪ್ರದೇಶಕ್ಕೆ ಬಡಿದಪ್ಪಳಿಸಿದ ನಿಸರ್ಗ ಚಂಡಮಾರುತ, ಹೈ ಅಲರ್ಟ್

ದೇಶದ ಜಿಡಿಪಿ ಕುಸಿದು ಹೋಗಿದೆ, ಮೋದಿ ಸರ್ಕಾರದಲ್ಲಿ ಆರ್ಥಿಕ ಶಿಸ್ತಿಲ್ಲ : ಸಿದ್ದರಾಮಯ್ಯ

ದೇಶದ ಜಿಡಿಪಿ ಕುಸಿದು ಹೋಗಿದೆ, ಮೋದಿ ಸರ್ಕಾರದಲ್ಲಿ ಆರ್ಥಿಕ ಶಿಸ್ತಿಲ್ಲ : ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sain kaata

ಜೋಳದ ಬೆಳೆಗೆ ಫಾಲ್‌ ಸೈನಿಕ ಹುಳು ಕಾಟ!

dkshi-rural

ಡಿಕೆಶಿ ಪದಗ್ರಹಣ ಕಾಂಗ್ರೆಸ್‌ ಸಂಘಟನೆಗೆ ಶಕ್ತಿ

showchala

ಗ್ರಾಮಸ್ಥರಿಗೆ ಬಯಲು ಶೌಚವೇ ಗತಿ!

mahileylli

ಮಹಿಳೆಯಲ್ಲಿ ಕೋವಿಡ್‌ 19 ಸೊಂಕು ಪತ್ತೆ

rural sonkita

ಬೆಂ.ಗ್ರಾಮಾಂತರ: 14ಕ್ಕೇರಿದ ಸೋಂಕಿತರು!

MUST WATCH

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

ಹೊಸ ಸೇರ್ಪಡೆ

03-June-14

ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯ

03-June-13

ಮಳೆ ಹಾನಿ ಪ್ರದೇಶಕ್ಕೆ ಬಸವಂತಪ್ಪ ಭೇಟಿ

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಭಾರತದಲ್ಲಿ ದಟ್ಸನ್ ನಿಂದ ಹೊಚ್ಚ ಹೊಸ ರೆಡಿ-ಗೋ ಬಿಡುಗಡೆ

ಭಾರತದಲ್ಲಿ ಡಟ್ಸನ್ ನಿಂದ ನೂತನ ರೆಡಿ-ಗೋ ಬಿಡುಗಡೆ

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ಯತ್ನಕ್ಕೆ ಸಿಪಿಐಎಂ ಖಂಡನೆ

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ಯತ್ನಕ್ಕೆ ಸಿಪಿಐಎಂ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.