ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಶಿಕ್ಷಣ ಅಗತ್ಯ

Team Udayavani, Feb 4, 2019, 7:24 AM IST

ನೆಲಮಂಗಲ: ಶಾಲಾ, ಕಾಲೇಜಿನಲ್ಲಿ ಶಿಕ್ಷಣ ಪಡೆ ಯುವ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮಾತ್ರ ಓದದೇ ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗು ವಂತೆ ಶಿಕ್ಷಣ ಪಡೆಯಬೇಕೆಂದು ಜಿಲ್ಲಾ ಶಿಕ್ಷಣ ಸಂಯೋಜಕ ಹನುಮ ನಾಯಕ್‌ ಸಲಹೆ ನೀಡಿದರು. ಪಟ್ಟಣದ ಶ್ರೀನಿವಾಸ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಥಾಮಸ್‌ ಮೆಮೋ ರಿಯಲ್‌ ಆಂಗ್ಲ ಫ್ರೌಢಶಾಲೆ ವಾರ್ಷಿ ಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದ ಪರೀಕ್ಷೆಗೆ ಗಮನ ಹರಿಸಿ: ಇತ್ತೀಚಿಗೆ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಾಗಿ ಮಾತ್ರ ಶಿಕ್ಷಣ ಪಡೆಯುವ ಹಂತಕ್ಕೆ ತಲುಪಿದ್ದಾರೆ. ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕದ ಪರೀಕ್ಷೆಗಾಗಿ ಸೀಮಿತರಾಗದೆ ಜೀವನದ ಪರೀಕ್ಷೆಗೆ ಬೇಕಾಗಿರುವ ಚಟುವಟಿಕೆಗಳ ಕಡೆಗೂ ಗಮನ ವಹಿಸಬೇಕು ಎಂದರು.

ರ್‍ಯಾಂಕ್‌ ಮುಖ್ಯವಲ್ಲ: ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿ ಚಟುವಟಿಕೆ, ಪರಿಸರ ಸಂರಕ್ಷಣೆ, ವೃದ್ಧರ ಸೇವೆ ಮುಂತಾದ ಚಟುವಟಿಕೆಗಳ ಕಡೆ ಮುಖ ಮಾಡಿದರೆ ಜೀವನದ‌ ಪಾಠ ಅರಿವಾಗುತ್ತದೆ. ಕೇವಲ ಫ‌ಸ್ಟ್‌ ರ್‍ಯಾಂಕ್‌ ಪಡೆಯುವುದು ಮುಖ್ಯವಲ್ಲ. ಜೀವನ ನಡೆಸಲು ಯೋಗ್ಯವಾದ ರ್‍ಯಾಂಕ್‌ ಪಡೆಯುವುದು ಬಹಳ ಮುಖ್ಯ. ಆದ್ದರಿಂದ ಪೋಷಕರು ಕೇವಲ ಪರೀಕ್ಷೆಗಾಗಿ ಮಾತ್ರ ಮಕ್ಕಳನ್ನು ಓದಿಸದೇ ಜೀವನ ರೂಪಿಸಿಕೊಳ್ಳುವ ಕಡೆಗೂ ಗಮನ ಹರಿಸಬೇಕೆಂದು ತಿಳಿಸಿದರು.

ಥಾಮಸ್‌ ಮೆಮೋರಿಯಲ್‌ ಆಂಗ್ಲ ಪ್ರೌಢಶಾಲೆ ಸಂಸ್ಥಾಪಕ ಅಧ್ಯಕ್ಷೆ ಸಿಸ್ಟರ್‌ ಜೊಸ್ನಾ ಫ್ರಾನ್ಸೀಸ್‌ ಆಂಥೋಣಿ ಮಾತನಾಡಿ, ಮಕ್ಕಳನ್ನು ಕೇವಲ ಪಠ್ಯ ಪುಸ್ತಕ ಶಿಕ್ಷಣಕ್ಕೆ ಸೀಮಿತಗೊಳಿಸದೇ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಕಡೆ ಆಸಕ್ತಿ ಹೆಚ್ಚಿಸುವ ಮೂಲಕ ಸರ್ವತೋಮುಖ ಬೆಳೆವಣಿಗೆಗೆ ಶಾಲೆ ಸಾಕ್ಷಿಯಾಗಿದೆ. ಈ ಹಿಂದಿನ ಎಸ್‌.ಎಸ್‌.ಎಸ್‌.ಸಿ. ಪರೀಕ್ಷೆಗಳಲ್ಲಿ ನಮ್ಮ ಶಾಲೆಯ ಮಕ್ಕಳು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡು ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಪೋಷಕರ ಸಹಕಾರ ದಿಂದ ಉತ್ತಮ ಶಿಕ್ಷಣ ನೀಡಲು ಮುಂದಾಗಿದ್ದೇವೆ ಎಂದು ಹೇಳಿದರು.

ಸಾಂಸ್ಕೃತಿಕ ಚಟುವಟಿಕೆ: ಥಾಮಸ್‌ ಮೆಮೋರಿ ಯಲ್‌ ಆಂಗ್ಲ ಪ್ರೌಢಶಾಲೆ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಲ್‌.ಕೆ.ಜಿ. ಮಕ್ಕಳಿಂದ ಒಬ್ಬತ್ತನೇ ತರಗತಿ ಮಕ್ಕಳ ವರೆಗೂ ಅನೇಕ ಹಾಡುಗಳಿಗೆ ನೃತ್ಯ ನಡೆಯಿತು. ಥಾಮಸ್‌ ಮೆಮೋರಿಯಲ್‌ ಆಂಗ್ಲ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಮನುಷ್ಯನು ಬದುಕಲು ಭೂಮಿ, ಮರ, ಗಿಡ, ನೀರು ಉಳಿಸುವಂತೆ ಜನರಿಗೆ ಜಾಗೃತಿ ಮೂಡಿಸಿ, ರಕ್ಷಿಸುವಂತೆ ಸಂಕಲ್ಪ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರತಿಸಿರಿಲ್‌ಕುಮಾರ್‌, ಪುರಸಭೆ ಮಾಜಿ ಅಧ್ಯಕ್ಷ ರವಿ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಸೈಯದ್‌ ಖಲೀಮುಲ್ಲಾ, ಅಮೆರಿಕಾದ ಅತಿಥಿ ಗಳಾದ ಅಡಮ್‌, ಆಚ್ಛೆ, ಥಾಮಸ್‌ ಮೆಮೋರಿ ಯಲ್‌ ಆಂಗ್ಲ ಪ್ರೌಢಶಾಲೆ ಕಾರ್ಯದರ್ಶಿ ಲಿಲ್ಲಿ ಪ್ರಕಾಶಂ, ಮುಖ್ಯ ಶಿಕ್ಷಕಿ ಸುಜಾ ಕಿರಣ್‌ ಸೇರಿದಂತೆ ಶಾಲಾ ಮಕ್ಕಳ ಪೋಷಕರು, ಸ್ಥಳೀಯರು ಮತ್ತಿತರರು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಎಲ್ಲರ ಮನೆಯಂತೆ ನಮ್ಮ ಮನೆಯಲ್ಲಿ ಊಟ-ತಿಂಡಿ ನಡೆಯುವುದಿಲ್ಲ. ಯಾಕೆಂದರೆ, ಈ ದಿನ ತಯಾರಿಸಿದ ಅಡುಗೆ ಮತ್ತೂಮ್ಮೆ ನಮ್ಮ ಮನೆಯಲ್ಲಿ ತಯಾರಾಗೋದು ಇನ್ನು ಒಂದು ತಿಂಗಳ...

  • ಬೇಸಿಗೆಗಾಲದಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗೂ ಇಡುವ ಮನೆ ಯಾವುದು ಗೊತ್ತಾ? ಅದು ಮಣ್ಣಿನ ಗೋಡೆಯ ಹುಲ್ಲಿನ ಮನೆ. ಆದರೆ ಇಂದಿನ ದಿನಗಳಲ್ಲಿ ಕಾಂಕ್ರೀಟಿನ...

  • ತುಟಿ ಕಪ್ಪಾಗಿದೆ. ಏನು ಮಾಡಿದರೂ ಅಂದ ಗಾಣಿಸಲು ಆಗುತ್ತಿಲ್ಲ- ಇದು ಹಲವು ಹುಡುಗಿಯರ ಗೊಣಗಾಟ. ನೀನು ಸ್ಮೋಕ್‌ ಮಾಡ್ತೀಯಾ? ಕಾಫಿ, ಟೀ ಜಾಸ್ತಿ ಕುಡಿತೀಯ ಅನ್ಸುತ್ತೆ,...

  • ಬೆಂಗಳೂರು: ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಅನರ್ಹಗೊಂಡ ಶಾಸಕರು ಬಿಜೆಪಿ ಯಿಂದ ಕಣಕ್ಕಿಳಿದಿದ್ದು, ಹಲವು ಕ್ಷೇತ್ರಗಳಲ್ಲಿ...

  • "ಅಕ್ಕಾ, ಪ್ಲಾಸ್ಟಿಕ್‌ ಕೊಡ್ರಿ, ಅಣ್ಣಾ, ಪ್ಲಾಸ್ಟಿಕ್‌ ಕೊಡ್ರಿ' ಅಂತ ಮನೆ ಮನೆ ಸುತ್ತುವ ಈ ಹುಡುಗಿ, ಗುಜರಿ ಆಯುವವಳಲ್ಲ. ಇವಳು, ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿರುವ...