Udayavni Special

ಸಾದಹಳ್ಳಿಯಲ್ಲಿ ಮೊದಲ ಬಾರಿಗೆ ಎಲೆಕ್ಷನ್‌

ಅವಿರೋಧವಾಗಿಯೇ ಆಯ್ಕೆಯಾಗುತ್ತಿದ್ದ ಅಭ್ಯರ್ಥಿಗಳು , ಸ್ವಪ್ರತಿಷ್ಠೆಯಿಂದ ಹಳ್ಳಿ ಫೈಟ್‌ಗೆ ಸಿದ್ಧತೆ

Team Udayavani, Dec 21, 2020, 1:58 PM IST

ಸಾದಹಳ್ಳಿಯಲ್ಲಿ ಮೊದಲ ಬಾರಿಗೆ ಎಲೆಕ್ಷನ್‌

 

ದೇವನಹಳ್ಳಿ: ಗ್ರಾಪಂ ಪ್ರಾರಂಭವಾದಾಗಿನಿಂದಲೂ ಚುನಾವಣೆ ಇಲ್ಲದೆ ಗ್ರಾಮವೊಂದರಲ್ಲಿ ಅವಿರೋಧಆಯ್ಕೆಯಾಗುವಮೂಲಕ ಇಡೀಗ್ರಾಮವುಸತತ27ವರ್ಷಗಳಿಂದ ಚುನಾವಣೆ ರಹಿತ ಕಣವಾಗಿ ಹೆಸರು ಮಾಡಿತ್ತು.

ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಸಾದಹಳ್ಳಿ ಗ್ರಾಮದಲ್ಲಿ ಈ ಬಾರಿಗ್ರಾಪಂ ಚುನಾವಣೆ ಮೊದಲ ಬಾರಿಗೆ ನಡೆಯುತ್ತಿದೆ. ಸಾದಹಳ್ಳಿ ಕ್ಷೇತ್ರದಲ್ಲಿ 2 ಮತಕ್ಷೇತ್ರಗಳು ಬರಲಿದ್ದು, ಅದರಲ್ಲಿ 6 ಸದಸ್ಯ ಸ್ಥಾನಗಳಿದ್ದು, ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.1,700 ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಈ ಸಾದಹಳ್ಳಿ ಮತಕ್ಷೇತ್ರವು ಕಳೆದ 27 ವರ್ಷಗಳಿಂದ ಚುನಾವಣೆ ಇಲ್ಲದೆ, ಮುಖಂಡರುಗಳು, ಹಿರಿಯರ ಸಮ್ಮುಖದಲ್ಲಿ ಅರಳೀ ಕಟ್ಟೆಯ ಮೇಲೆ ಕುಳಿತು ಬಂದಿರುವ ಮೀಸಲಾತಿಯ ಪ್ರಕಾರ ಆ ಜಾತಿಗೆ,ಈ ಜಾತಿಗೆಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಜಿಪಂ, ತಾಪಂ, ಲೋಕಸಭಾ ಸದಸ್ಯರ ಚುನಾವಣೆ, ವಿಧಾನ ಸಭಾ ಚುನಾವಣೆ ಮಾತ್ರ ಈ ಗ್ರಾಮದಲ್ಲಿ ನಡೆಯುತ್ತಿತ್ತು.

ಗ್ರಾಪಂ ಪೈಟ್‌ಗೆ ಮೊದಲ ಮತದಾನ: ಈ ಬಾರಿ ಸ್ವಪ್ರತಿಷ್ಠೆಯಿಂದ ಹಾಗೂ ಗ್ರಾಮ ಹಿತಾಸಕ್ತಿಯಿಂದ ಚುನಾವಣೆ ನಡೆಯುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾದಹಳ್ಳಿ ಜನ ಡಿ.27ರಂದು ನಡೆಯುವ ಗ್ರಾಪಂ ಚುನಾವಣೆಗೆ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.

ಈ ಗ್ರಾಮವು ಶಾಸಕರನ್ನು ನೀಡಿದೆ. ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಪಂ ಉಪಾಧ್ಯಕ್ಷರು, ತಾಪಂ ಸದಸ್ಯರನ್ನು ಸಹ ಈ ಗ್ರಾಮವು ನೀಡಿದಕೀರ್ತಿಸಲ್ಲುತ್ತದೆ. ದೇಶ-ವಿದೇಶಗಳಿಗೆ ಇಲ್ಲಿನ ಬಂಡೆಯ ಕಲ್ಲುಗಳು ಕಳುಹಿಸಿಕೊಡಲಾಗುತ್ತದೆ. ಇಲ್ಲಿ ಅತೀ ಹೆಚ್ಚುಕೂಲಿ ಕಾರ್ಮಿಕರೇ ಇದ್ದಾರೆ.ಈ ಬಾರಿ ಗ್ರಾಪಂ ಚುನಾವಣೆಯಲ್ಲಿ 6 ಸ್ಥಾನಗಳಿಗೆಒಟ್ಟು 26 ಜನ ಸ್ಪರ್ಧಿಗಳು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ 10ಜನ ನಾಮಪತ್ರಗಳನ್ನು ವಾಪಸ್‌ ಪಡೆದರೆ, ಉಳಿದ16 ಜನಕಣದಲ್ಲಿದ್ದಾರೆ. ನಾಮಪತ್ರ ಸಲ್ಲಿಕೆ ಕಾರ್ಯದಿಂದ ಇಲ್ಲಿಯವರೆಗೂ ಗ್ರಾಮದ ಹಿರಿಯ ಮುಖಂಡರು, ಮಾಜಿ ಶಾಸಕರು ಸೇರಿದಂತೆ ಹಲವಾರು ಅಭ್ಯರ್ಥಿಗಳನ್ನು ಮನವೊಲಿಸಲು ಪ್ರಯತ್ನಿಸಿದ್ದು, ಪ್ರಯತ್ನ ವಿಫಲವಾಗಿ ಇತಿಹಾಸದ ಮೊದಲ ಗ್ರಾಪಂ ಚುನಾವಣೆ ಈ ಗ್ರಾಮಕ್ಕೆ ಸಲ್ಲುತ್ತದೆ.

ಚುನಾವಣೆ ನಡೆಯಲು ಕಾರಣ: ಈ ಬಾರಿಯಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಆಕಾಂಕ್ಷಿಗಳು ಗ್ರಾಮದಲ್ಲಿ ಇದ್ದಿದ್ದರಿಂದ ಚುನಾವಣೆ ನಡೆಯಲು ಕಾರಣವಾಗಿದೆ. ಎಷ್ಟೇ ಮನವೊಲಿಸಿದರೂ ಮಾತುಕತೆಗಳು ನಡೆಸಿದರೂ ನಡೆದುಕೊಂಡು ಬಂದಿರುವ ಪರಂಪರೆಉಳಿಸುವಂತೆ ಮನವೊಲಿಕೆಗೆ ಯತ್ನಿಸಿದರೂ ಆಕಾಂಕ್ಷಿಗಳು ಪಟ್ಟು ಹಿಡಿದು ಮುಂದಾಗಿರುವುದು ಬೇಸರದ ಸಂಗತಿಯಾಗಿದೆ ಎಂದುಮುಖಂಡರೊಬ್ಬರುಹೇಳಿದರು.

ಪ್ರಯತ್ನ ವಿಫಲ: 27 ವರ್ಷಗಳಿಂದ ಹಿರಿಯ ಮಾರ್ಗದರ್ಶನದಲ್ಲಿ ನಡೆದುಕೊಂಡು ಬಂದಂತಹದ್ದನ್ನು ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಆಕಾಂಕ್ಷಿಗಳು ಮಾತು ಕೇಳದೆ ಇದ್ದಿದ್ದರಿಂದ ಮನ ವೊಲಿಕೆ ಪ್ರಯತ್ನ ವಿಫಲವಾಗಿದೆ. ಕೊನೆಗಳಿಗೆಯಲ್ಲಿ ಚುನಾವಣೆಗೆ ಹೋಗಲು ಸಜ್ಜಾಗುವಂತೆ ಆಯಿತು.

ಹೆಚ್ಚು ಅಭ್ಯರ್ಥಿಗಳಿಂದ ಚುನಾವಣೆ :

ಗ್ರಾಪಂ ಚುನಾವಣೆಯಲ್ಲಿ ನಮ್ಮ ಗ್ರಾಮದಲ್ಲಿ ಯಾರೊಬ್ಬರೂ ಮತ ಹಾಕುತ್ತಿರಲಿಲ್ಲ. ನೇರವಾಗಿ ಅವಿರೋಧ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ಬಾರಿ ಕಣದಲ್ಲಿ ಹೆಚ್ಚಅಭ್ಯರ್ಥಿಗಳು ಇರುವುದರಿಂದ ಚುನಾವಣೆ  ಅನಿವಾರ್ಯವಾಗಿದೆ. ಇದು27 ವರ್ಷದ ಇತಿಹಾಸದಮೊದಲ ಗ್ರಾಪಂ ಚುನಾವಣೆ ಆಗಿದೆ. ಹಿರಿಯರು ಮಾಡಿಕೊಂಡು ಬಂದಿದ್ದ ಸಂಪ್ರದಾಯ ಈ ಬಾರಿ ಆಗದೆ ಇರುವುದು ಬೇಸರ ತಂದಿದೆ. ಅನೇಕ ಬಾರಿ ಅಭ್ಯರ್ಥಿಗಳ ಮನವೊಲಿಕೆ ಪ್ರಯತ್ನ ಮಾಡಲಾಯಿತು ಎಂದು ಮಾಜಿ ಶಾಸಕಕೆ.ವೆಂಕಟಸ್ವಾಮಿ ತಿಳಿಸಿದರು.

ಗ್ರಾಮದಲ್ಲಿ ಎಲ್ಲರೂ ಒಮ್ಮತದಿಂದ ಒಗ್ಗಟ್ಟಾಗಿ ಅಭ್ಯರ್ಥಿಗಳನ್ನು ಗ್ರಾಪಂ ಚುನಾವಣೆಯಲ್ಲಿ ಮೀಸಲಾತಿಯ ಪ್ರಕಾರ ಅವಿರೋಧ ಆಯ್ಕೆ ಮಾಡಲಾಗುತ್ತಿತ್ತು. ಗ್ರಾಮದಲ್ಲಿಕೆಲವರ ಸ್ವಪ್ರತಿಷ್ಠೆಯಿಂದಹಾಗೂ ಗ್ರಾಮದ ಹಿತಸಕ್ತಿ ಇಲ್ಲದಕಾರಣ ಚುನಾವಣೆ ಎದುರಿಸುವಂತಾಗಿದೆ.ಎಸ್‌.ಎಂ.ನಾರಾಯಣಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ

 

ಎಸ್‌.ಮಹೇಶ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತಂಡಕ್ಕೆ ಮರಳಿದ ಶಕಿಬ್‌

ತಂಡಕ್ಕೆ ಮರಳಿದ ಶಕಿಬ್‌

ಬೆಳಗಾವಿ ಕುರಿತಾದ  ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಬೆಳಗಾವಿ ಕುರಿತಾದ ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

whatsapp posts status reassuring privacy commitment after new privacy update

ಸ್ಟೇಟಸ್ ಮೂಲಕ ಬಳಕೆದಾರರಿಗೆ ‘ಪ್ರೈವೆಸಿ ಪಾಠ’ ಮಾಡಿದ ವಾಟ್ಸಾಪ್

Phone numbers of WhatsApp Web users reportedly found on Google Search

ಮುಗಿಯದ ವಾಟ್ಸಾಪ್ ಗೋಳು: ಗೂಗಲ್ ಸರ್ಚ್ ನಲ್ಲಿ ‘ಮಿಂಚಿ ಮರೆಯಾದ’ ನಿಮ್ಮ ಮೊಬೈಲ್ ನಂಬರ್ !

gulam

ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ

siddu

ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ; ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿದ್ದುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

the-role-of-earthworms-in-agriculture-is-significant

“ಕೃಷಿಯಲ್ಲಿ ಎರೆಹುಳುಗಳ ಪಾತ್ರ ಮಹತ್ವದ್ದು”

Forest fire line operation

ಅಂತರಸಂತೆ ಅರಣ್ಯದಲಿ ಬೆಂಕಿರೇಖೆ ಕಾರ್ಯಾಚರಣೆ ಬಹುತೇಕ ಪೂರ್ಣ

kadane

ಬೇಗೂರು ಬಳಿ ಮಿತಿಮೀರಿದ ಕಾಡಾನೆ ದಾಳಿ

Sankranti celebration in villages

ಗ್ರಾಮಗಳಲ್ಲಿ ಸಂಕ್ರಾಂತಿ ಸಂಭ್ರಮ

30 per cent attendance at colleges

ಕಾಲೇಜುಗಳಲ್ಲಿ  ಶೇ.30 ಹಾಜರಾತಿ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ತಂಡಕ್ಕೆ ಮರಳಿದ ಶಕಿಬ್‌

ತಂಡಕ್ಕೆ ಮರಳಿದ ಶಕಿಬ್‌

ಬೆಳಗಾವಿ ಕುರಿತಾದ  ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಬೆಳಗಾವಿ ಕುರಿತಾದ ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

whatsapp posts status reassuring privacy commitment after new privacy update

ಸ್ಟೇಟಸ್ ಮೂಲಕ ಬಳಕೆದಾರರಿಗೆ ‘ಪ್ರೈವೆಸಿ ಪಾಠ’ ಮಾಡಿದ ವಾಟ್ಸಾಪ್

Phone numbers of WhatsApp Web users reportedly found on Google Search

ಮುಗಿಯದ ವಾಟ್ಸಾಪ್ ಗೋಳು: ಗೂಗಲ್ ಸರ್ಚ್ ನಲ್ಲಿ ‘ಮಿಂಚಿ ಮರೆಯಾದ’ ನಿಮ್ಮ ಮೊಬೈಲ್ ನಂಬರ್ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.