ಕೆರೆ ಸೇರುತ್ತಿದೆ‌ ಅಕ್ರಮ ಕಾರ್ಖಾನೆ ವಿಷಜಲ

ಕಾರ್ಖಾನೆ ಕೆಂಪು ನೀರು ಜಲಚರ, ಜಾನುವಾರುಗಳಿಗೆ ಮಾರಕ, ಅಧಿಕಾ ರಿಗಳ ನಿರ್ಲಕ್ಷ್ಯ

Team Udayavani, Jan 4, 2021, 1:56 PM IST

BR-TDY-1

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯ ಸಮೀಪವೇ ಅಕ್ರಮ ಕಾರ್ಖಾನೆಯನ್ನು ಸ್ಥಾಪಿಸಿಕೊಂಡು ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಬಟ್ಟೆ ರವಾನೆ ಮಾಡುವ ನಾಮದೇಯ ಕಾರ್ಖಾನೆ ಆರ್ಥಿಕವಾಗಿ ದುಂಡಗಾಗುವುದರೊಂದಿಗೆ ಸ್ಥಳೀಯ ಕೆರೆಗೆ ವಿಷಯುಕ್ತ ನೀರು ಬಿಟ್ಟು ಅಂತರ್ಜಲವನ್ನು ನಾಶಮಾಡುವ ಮೂಲಕ ಪರಿಸರ ನಾಶಕ್ಕೆ ಮುಂದಾಗಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ತಾಲೂಕಿನ ಕಣ್ಣೇಗೌಡಗ್ರಾಪಂನ ವೀರರಾಘವನ ಪಾಳ್ಯದ ತೋಟದಲ್ಲಿ ಬಣ್ಣ ಲೇಪನ ಮಾಡುವ ಕಾರ್ಖಾನೆಯನ್ನು ಯಾವುದೇ ಅನುಮತಿ ಯಿಲ್ಲದೇ ಅನೇಕ ವರ್ಷಗಳಿಂದ ನಡೆಸುತಿದ್ದು, ವಿಷಕಾರಿಯಾದಬಣ್ಣದ ನೀರನ್ನು ಸ್ಥಳೀಯ ಯಲಚಗೆರೆ ಕೆರೆಗೆ ಬಿಡು ತ್ತಿರುವ ಕಾರಣ ಮೀನುಗಳಿಗೆ ಹಾಗೂ ಪ್ರಾಣಿಗಳಿಗೆ ತೊಂದರೆಯಾಗುತಿದೆ.

ಅಕ್ರಮ ಕಾರ್ಖಾನೆ: ಕಾರ್ಖಾನೆಗೆ ಸ್ಥಳೀಯವಾಗಿಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಾಗಲೀ ಯಾವುದೇ ರೀತಿಯ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿಯನ್ನು ಪಡೆದಿಲ್ಲ. ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವುದರಿಂದಕಂಟೈನರ್‌ಗಳ ಮೂಲಕ ರಾತ್ರಿ ವೇಳೆಯಲ್ಲಿ ಬಟ್ಟೆಗಳನ್ನು ಸಾಗಾಟ ಮಾಡುತ್ತಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಕೆರೆಗಳಿಗೆ ಸೇರುತ್ತಿರುವ ಕೆಂಪುನೀರು: ಬಟ್ಟೆಗಳಿಗೆ ಬಣ್ಣಲೇಪನ ಮಾಡುವ ಕಾರ್ಖಾನೆಯ ನೀರು ಗ್ರಾಮದ ಪಕ್ಕದಿಂದ ಎರಡು ಕಿ.ಮೀ.ದೂರ ನಿರ್ಮಾಣವಾಗಿದೆ. ನೀರಿನಲ್ಲಿ ಬಣ್ಣಕ್ಕೆ ಬಳಸುವ ಕೆಮಿಕಲ್‌ ಮಿಶ್ರಿತವಾಗಿ ಹರಿಯುತ್ತಿರುವುದರಿಂದ ಆ ಪ್ರದೇಶದಲ್ಲಿ ಹುಲ್ಲು ಹಾಗೂ ಸಸಿಗಳು ಬೆಳೆಯದಂತಾಗಿವೆ ಎಂದು ಸ್ಥಳೀಯರಿಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಶಾಮೀಲಾಗಿರುವ ಶಂಕೆ : ನಗರದ ಸಮೀಪದ ಹೆದ್ದಾರಿ ಪಕ್ಕದ ಗ್ರಾಮದಲ್ಲಿ ಅಕ್ರಮಕಾರ್ಖಾನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಯಾವುದೇ ಹಂತದ ಸ್ಥಳೀಯ ಅಧಿಕಾರಿಗಳು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಒಂದು ನಾಮಫ‌ಲಕವಿಲ್ಲ,ಅನುಮತಿಯಿಲ್ಲದೆ ಹತ್ತಾರು ಕಾರ್ಮಿಕರು ಕೆಲಸಮಾಡುತಿದ್ದು, ಅವರಿಗೆ ರಕ್ಷಣೆ ಇಲ್ಲ ಇಷ್ಟೆಲ್ಲಾ ಅಕ್ರಮ ರಾಜಾರೋಷವಾಗಿ ನಡೆಯುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಸ್ಥಳೀಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ರಾತ್ರಿ ಕಂಟೈನರ್‌ ಓಡಾಟ :

ಕಂಟೈನರ್‌ ಲಾರಿಯ ಮೂಲಕ ಬಟ್ಟೆಗಳನ್ನು ತುಂಬಿಕೊಂಡು ರಾತ್ರಿಯ ವೇಳೆಯಲ್ಲಿ ತಮಿಳುನಾಡಿಗೆ ಸಾಗಾಟ ಮಾಡಿತಿದ್ದು, ಕಂಟೈನರ್‌ ಮೂಲಕ ತಮಿಳುನಾಡಿನಿಂದ ಬಟ್ಟೆಗಳ ನಡುವೆ ಬೇರೆ ವಸ್ತುಗಳು ಬರುವ ಅನುಮಾನವಿದೆ. ಯಾವುದೇ ಅಧಿಕಾರಿಗಳು ಪರಿಶೀಲನೆ ಮಾಡಲು ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಖಾನೆಯ ಮಾಡಿರುವ ಬಗ್ಗೆ ಮಾಹಿತಿ ಇಲ್ಲ ತಕ್ಷಣ ನಮ್ಮ ಗ್ರಾಪಂ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. -ಲಕ್ಷ್ಮೀನಾರಾಯಣಸ್ವಾಮಿ, ತಾಪಂ ಇಒ

ವೀರರಾಘವನಪಾಳ್ಯದಲ್ಲಿರುವ ಕಾರ್ಖಾನೆಯಿಂದ ಯಲಚಗೆರೆ ಕೆರೆಗೆ ವಿಷಯುಕ್ತ ಕೆಂಪು ನೀರು ಸೇರುತಿದ್ದು, ಈ ನೀರು ಹಿರಿಯುವ ಪ್ರದೇಶದಲ್ಲಿ ಹುಲ್ಲೂ ಸಹ ಬೆಳೆದಿಲ್ಲ ಇದರಿಂದ ಮೀನುಗಳು  ಸಾಯುತ್ತಿದ್ದು, ತಕ್ಷಣ ನೀರು ನಿಲ್ಲಿಸಿ ಜಾನುವಾರುಗಳು ಹಾಗೂ ಗ್ರಾಮದ ಅಂತರ್ಜಲ ಕಾಪಾಡಬೇಕಿದೆ ಗಂಗೇಗೌಡ, ಸ್ಥಳೀಯ ವ್ಯಕ್ತಿ

ಕೊಟ್ರೇಶ್‌. ಆರ್‌

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.