ಮುಸುಕಿನಜೋಳಕ್ಕೆ ಸೈನಿಕ ಹುಳು ಕಾಟ

ರೈತರಿಗೆ ಬೆಳೆ ಹಾಳಾಗುವ ಆತಂಕ • ಜಿಲ್ಲಾ ಕೃಷಿ ನಿರ್ದೇಶಕಿ ವಿನುತಾ ಭೇಟಿ, ಪರಿಶೀಲನೆ

Team Udayavani, Jul 19, 2019, 11:07 AM IST

ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದ ರೈತ ಮುನಿಕುಮಾರ ಮಸುಕಿನಜೋಳದ ತೋಟಕ್ಕೆ ಜಿಲ್ಲಾ ಕೃಷಿ ನಿರ್ದೇಶಕಿ ವಿನುತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೊಡ್ಡಬಳ್ಳಾಪುರ: ಮುಸುಕಿನಜೋಳಕ್ಕೆ ಸೈನಿಕ ಹುಳುವಿನ ಬಾಧೆ ತಪ್ಪಿಸಲು ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಬಂಧಿಸಿದ ಕೀಟನಾಶಕ ದಾಸ್ತಾನು ಇದೆ. ಸೈನಿಕ ಹುಳುವಿನ ಬಾಧೆ ಇರುವ ರೈತರು, ಕೂಡಲೇ ರಿಯಾಯಿತಿ ದರದಲ್ಲಿ ಕೀಟನಾಶಕ ಸಿಂಪರಣೆ ಮಾಡಬೇಕು. ಅಲ್ಲದೆ ಬಾಧೆ ಇಲ್ಲದಿರುವ ರೈತರೂ ನಿಗದಿತ ಸಮಯದಲ್ಲಿ ಕೀಟನಾಶಕ ಸಿಂಪರಣೆ ಮಾಡಿದರೆ, ಸೈನಿಕ ಹುಳುಗಳ ಹತೋಟಿ ಸಾಧ್ಯವಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್‌.ಪಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.

ಸೈನಿಕ ಹುಳು ಕಾಟಕ್ಕೆ ರೈತರ ಆತಂಕ: ತಾಲೂಕಿನಲ್ಲಿ ಮುಸುಕಿನಜೋಳದ ಪೈರುಗಳಿಗೆ ಮುತ್ತಿಕೊಂಡಿರುವ ಸೈನಿಕ ಹುಳುಗಳ ಹಾವಳಿಯಿಂದ ರೈತರು ಕಂಗಾಲಾಗಿ ದ್ದಾರೆ. ಎಷ್ಟೇ ಔಷಧಿ ಸಿಂಪರಣೆ ಮಾಡಿದರೂ, ಹುಳು ಗಳು ನಿಯಂತ್ರಣಕ್ಕೆ ಬಾರದೇ ಇರುವುದರಿಂದ ರೈತರಿಗೆ ಜೋಳದ ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ರೈತರು ದೂರಿದರು. ದೂರಿನ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಅಧಿಕಾರಿಗಳಿಂದ ಮಾಹಿತಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿರುವ ಮುಸುಕಿನಜೋಳದ ಗದ್ದೆಗಳಿಗೆ ಭೇಟಿ ನೀಡಿದ ಜಿಲ್ಲಾ ಕೃಷಿ ನಿರ್ದೇಶಕಿ ವಿನುತಾ, ಪರಿಶೀಲನೆ ನಡೆಸಿ, ರೈತರಿಗೆ ಹುಳುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ರಾಗಿ ಮತ್ತು ಮುಸುಕಿನ ಜೋಳ ಮುಖ್ಯ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೈನಿಕ ಹುಳು ಬಾಧೆ, ರಾಗಿ ಮತ್ತು ಜೋಳ ಬೆಳೆಯಲ್ಲಿ ಕಂಡುಬಂದಿದೆ. ರೈತರು ಕೀಟನಾಶಕ ಸಿಂಪಡಿಸದೆ ಬೆಳೆಯುವ ಬೆಳೆಗೂ ಔಷಧ ಸಿಂಪಡಿಸುವ ಸಂದಿಗ್ಧ ಪರಿಸ್ಥಿತಿ ಒದಗಿದೆ. ರೈತರು ಸಾಂದರ್ಭಿಕ ಶಿಫಾರಸಿನಲ್ಲಿ ಈ ಕೆಳಗಿನ ಹತೋಟಿ ಕ್ರಮಗಳನ್ನು ಕೈಗೊಳ್ಳಬಹುದು. ಈಗಾಗಲೇ ನಿಗದಿತ ಸಮಯಕ್ಕೆ ಔಷಧ ಸಿಂಪರಣೆ ಮಾಡಿರುವ ರೈತರ ತೋಟಗಳಲ್ಲಿ ಹುಳುಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ ಎಂದರು.

ಔಷಧ ಸಿಂಪಡಿಸಿ: ಬೆಳೆಯಲ್ಲಿ ಸೈನಿಕ ಮರಿಹುಳು ಕಂಡರೆ ಶೇ.5ರಷ್ಟು ಬೇವಿನ ಅಂಶ ಹೊಂದಿರುವ ಕೀಟ ನಾಶಕವನ್ನು 5 ಮಿ.ಲೀ. ಔಷಧವನ್ನು ಒಂದು ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. 2 ಗ್ರಾಂ. ಶಿಲೀಂದ್ರವನ್ನು ಪ್ರತಿ ಲೀಟರ್‌ ನೀರಿಗೆ ಮಿಶ್ರಣ ಮಾಡಿ ಬೆಳೆಗೆ ಸಿಂಪಡಿಸಬೇಕು. ಇಮಾಮೆಕ್ಟಿನ್‌ ಬೆಂಜೋಯೇಟ್ 4 ಗ್ರಾಂ ಅಥವಾ ಸ್ಟೈನೋಸಾಡ್‌ 45 ಎಸ್‌.ಸಿ. 3 ಮಿ.ಲೀ. ಅಥವಾ ಥೈಯೋಡೈಕಾರ್ಬ್ 1 ಗ್ರಾಂ ಪ್ರತಿ ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.

ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷ ಪ್ರಾಷಣದ ಬಳಕೆಯಾಗಿ 10 ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿ ತೌಡು (ಬೂಸ) 1 ಕೆ.ಜಿ. ಬೆಲ್ಲಕ್ಕೆ ಬೇಕಾಗುವಷ್ಟು ತಕ್ಕಮಟ್ಟಿಗೆ ನೀರನ್ನು ಬೆರೆಸಿಟ್ಟು ಮಾರನೇ ದಿನ 100 ಗ್ರಾಂ ಥೈಯೋಡೈಕಾರ್ಬ್ ಪ್ರತಿ ಕೆ.ಜಿ. ಭತ್ತದ ತೌಡಿಗೆ 10 ಗ್ರಾಂ ನಂತೆ ಕೀಟನಾಶಕ ಮಿಶ್ರಣಮಾಡಿ ಬೆಳೆಯ ಸುಳಿಯಲ್ಲಿ ಉದುರಿಸಬೇಕು. ಕ್ಲೋರೋಪೈರಿಫಾಸ್‌ ಅಥವಾ ಕ್ವಿನಾಲ್ಫಾಸ್‌ 2 ಮೀ.ಲಿ. ಪ್ರತಿ ಲೀಟರ್‌ ನೀರಿಗೆ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಸಿಂಪರಣೆ ಮಾಡಬೇಕಿದೆ ಎಂದು ರೈತರಿಗೆ ಸಲಹೆ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನೆಲಮಂಗಲ: ರಾಷ್ಟ್ರದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿ, ಶತ್ರು ರಾಷ್ಟ್ರಗಳ ಪರ ಘೋಷಣೆ ಕೂಗುವ ಪ್ರತಿಯೊಬ್ಬರಿಗೂ ದೇಶದ ಅನ್ನ, ನೀರು ನೀಡದೆ ಗಡಿಪಾರು ಮಾಡಬೇಕು ಎಂದು...

  • ದೇವನಹಳ್ಳಿ: ಯಾವುದೇ ಅಗ್ನಿ ಅವಘಡಗಳು ಸಂಭವಿಸಿದಾಗ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ, ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಬಹುದೆಂದುಇಂಡಿಯನ್‌ ಆಯಿಲ್‌...

  • ನೆಲಮಂಗಲ : ರೈತರಿಗೆ ಎದುರಾಗುವ ಬೆಲೆ ಕುಸಿತ, ಬೆಳೆಹಾನಿಯ ಸಂಕಷ್ಟಗಳ ನಡುವೆ ಸರ್ವರ್‌ ಸಮಸ್ಯೆಯಿಂದಾಗಿ, ಸಾಲ ಸೌಲಭ್ಯಕ್ಕಾಗಿ ಬೆಳೆ ಆಧಾರ್‌ ಪತ್ರ ಪಡೆಯಲು ಅಲೆದಾಡುವ...

  • ನೆಲಮಂಗಲ : ತರಕಾರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು, ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯದೇ ಮಠಗಳು ಹಾಗೂ ದಾಸೋಹ ಕೇಂದ್ರಗಳಿಗೆ ರವಾನೆ ಮಾಡುವ ಮೂಲಕ ಸಂಕಷ್ಟದಲ್ಲೂ...

  • ಹೊಸಕೋಟೆ: ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ದೈರ್ಯ, ಶೌರ್ಯ ಯುವಕರಿಗೆ ಸ್ಪೂರ್ತಿಯಾಗಿದೆ ಎಂದು ತಹಶೀಲ್ದಾರ್‌ ವಿ. ಗೀತಾ ಹೇಳಿದರು. ಅವರು...

ಹೊಸ ಸೇರ್ಪಡೆ