ರಾಹುಲ್‌ ಟೀಕಿಸುವ ನೈತಿಕತೆ ಕಟೀಲ್‌ಗೆ ಇಲ್ಲ

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಾಗ್ಧಾಳಿ „ ಬಿಜೆಪಿ ಸರ್ಕಾರದಲ್ಲಿ ಎತ್ತಿನಹೊಳೆ ಯೋಜನೆ ಆಮೆಗತಿ

Team Udayavani, Oct 23, 2021, 12:11 PM IST

ರಾಹುಲ್‌ ಟೀಕಿಸುವ ನೈತಿಕತೆ ಕಟೀಲ್‌ಗೆ ಇಲ್ಲ

ದೇವನಹಳ್ಳಿ: ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರನ್ನು ಮಾದಕ ದ್ರವ್ಯ ವ್ಯಸನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹೇಳಿಕೆ ಖಂಡಿಸುತ್ತೇವೆ. ಒಬ್ಬ ರಾಷ್ಟ್ರೀಯ ನಾಯಕನ ಬಗ್ಗೆ ಈ ರೀತಿ ಹೇಳಿಕೆ ಸರಿಯಿಲ್ಲ. ಬಿಜೆಪಿ ಹೀನಾಯ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಕಿಡಿಕಾರಿದರು.

ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿರುವ ಕುಂಭೇಶ್ವರ ಕಾಂಫ್ಲೆಕ್ಸ್‌ನ ಹಿತೈಷಿ ಇಎಫ್ವಿ ಎಲೆಕ್ಟ್ರಿಕಲ್‌ ವಾಹನಗಳ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಅವರನ್ನು ಯಾವ ರೀತಿ ಬೇಕಾದರೂ ಟೀಕಿಸುವುದು ತರವಲ್ಲ. ಒಬ್ಬ ವ್ಯಕ್ತಿಯನ್ನು ಟೀಕಿಸುವಾಗ ನೂರು ಬಾರಿ ಯೋಚಿಸಬೇಕು. ಬಾಯಿ ಚಪಲಕ್ಕೆ ಏನೂ ಬೇಕಾದರೂ ಹೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಲೆತಗ್ಗಿಸುವ ಹೇಳಿಕೆಯಾಗಿದೆ.

ಇದನ್ನೂ ಓದಿ:- ಕನ್ನಡಕ್ಕಾಗಿ ವಿಶೇಷ ಅಭಿಯಾನ: ಜಿಲ್ಲಾಧಿಕಾರಿ

ಇದು ರಾಜಕಾರಣಿಗಳಿಗೆ ಶೋಭೆಯಲ್ಲ ಎಂದರು. ರಾಹುಲ್‌ ಗಾಂಧಿಯವರ ಬಗ್ಗೆ ಹಗುರವಾಗಿ ಮಾತ ನಾಡಿ ರುವುದನ್ನು ಹಿಂಪಡೆಯಬೇಕು. ಹತಾಶೆ ಹಾಗೂ ಪ್ರಚಾರದ ಗೀಳಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕಾಂಗ್ರೆಸ್‌ ನಾಯಕರ ವಿರುದ್ಧ ದಾಳಿಗಿಳಿದಿದ್ದಾರೆ. ಬಿಜೆಪಿಯವರು ವೈಯಕ್ತಿಕ ಟೀಕೆ ವಿಷ ಯಾಧಾರಿತ ಚರ್ಚೆ ನಡೆಸಲಿ.

ವ್ಯಕ್ತಿಯೊಬ್ಬ ಹತಾಶ ನಾದಾಗ ಏನೇನೋ ಮಾತನಾಡಲು ಶುರು ಮಾಡುತ್ತಾನೆ. ಹಾಗೂ ದಾರಿ ತಪ್ಪುವುದು ಸಹಜ. ಅವಹೇಳ ನಾಕಾರಿ ಭಾಷೆ ಬಳಸುವ ಮೂಲಕ ನಳೀನ್‌ ಕುಮಾರ್‌ ನೀಚ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಪ್ರಚಾರ ಕಾರ್ಯ: ಸಿಂಧಗಿ ಮತ್ತು ಹಾನಗಲ್‌ ವಿಧಾಸ ಭಾಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಈ ಎರಡು ಕ್ಷೇತ್ರಗಳಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ಮಾಡಲಾಗುತ್ತಿದೆ. ಈ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕಾಂಗ್ರೆಸ್ಸಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಎಂದರು.

ಎತ್ತಿನ ಹೊಳೆ ಯೋಜನೆ ನಾನು ಮಾಡಿದ್ದು, ಕಾಂಗ್ರೆಸ್‌ ಸರ್ಕಾರಿ ವಿಭಾಗ 12 ಸಾವಿರ ಕೋಟಿ ಖರ್ಚು ಮಾಡಿ, ಯೋಜ ನೆಗೆ ವೇಗ ನೀಡಿದ್ದೇವೆ. ಎಚ್‌.ಎನ್‌.ವ್ಯಾಲಿ ಯೋಜನೆ, ಕೆ.ಸಿ. ವ್ಯಾಲಿ ಯೋಜನೆ  ಜಾರಿಗೆ ತಂದಿ ದ್ದು, ಕಾಂಗ್ರೆಸ್‌ ಸರ್ಕಾರ, ಈ ಯೋಜನೆಗಳಡಿ ನೀರು ಹರಿಸಿ ದ್ದರಿಂದಲೇ ಇಂದು ಸಾಕಷ್ಟು ಕೆರೆಗಳು ಕೋಡಿ ಹರಿಯುವಂತಾಗಿದೆ ಎಂದರು.

ನೀರು ಕೊಡಬಹುದು: ಕೃಷ್ಣಾ ಮೇಲ್ದಂಡೆ ಯೋಜನೆ ಯಡಿ ಸರ್ಕಾರ, 10 ಟಿಎಂಸಿ ನೀರು ಕೊಡಲಿಕ್ಕೆ ಪ್ರತ್ಯೇಕ ಮಾಡಿ, ಆಂಧ್ರ ಸರ್ಕಾರದ ಅನುಮತಿ ಪಡೆದು ಕೊಂಡ ದರೆ, ಬಾಗೇ ಪಲ್ಲಿಯ ಮೂಲಕ ಈ ಭಾಗಕ್ಕೆ ನೀರು ಹರಿಸಲಿಕ್ಕೆ ಸಾಧ್ಯವಾಗುತ್ತದೆ. ನಾನು ಮುಖ್ಯ ಮಂತ್ರಿಯಾಗಿದ್ದಾಗ ಆಲಮಟ್ಟಿ ಡ್ಯಾಂನ್ನು 524 ಮೀಟರ್‌ ಏರಿಕೆ ಮಾಡಿದ್ದಾರೆ, ಈಗ 10 ಟಿಎಂಸಿ ನೀರು ಕೊಡು ವುದು ಕಷ್ಟವೇನಲ್ಲ, ಸರ್ಕಾರ ಮನಸ್ಸು ಮಾಡಿದರೆ ಈ ಭಾಗಕ್ಕೆ ನೀರು ಕೊಡಬಹುದು ಎಂದರು.

ಮಾಜಿ ಶಾಸಕ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌, ಜಿಪಂ ಮಾಜಿ ಸದಸ್ಯ ಲಕ್ಷಿ¾àನಾರಾಯಣ್‌, ಕೆ.ಸಿ.ಮಂಜುನಾಥ್‌, ಕೆಪಿಸಿಸಿ ಸದಸ್ಯ ಚೇತನ್‌ಗೌಡ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕೆ.ಆರ್‌. ನಾಗೇಶ್‌, ಪುರಸಭಾ ಅಧ್ಯಕ್ಷ ರೇಖಾ, ತಾಪಂ ಮಾಜಿ ಅಧ್ಯಕ್ಷ ವಿ.ನಾರಾಯಣಸ್ವಾಮಿ, ಭೂ ಮಂಜೂರಾತಿ ಮಾಜಿ ಸದಸ್ಯ ಸೋಮಶೇಖರ್‌, ಖಾದಿ ಬೋರ್ಡ್‌ ಅಧ್ಯಕ್ಷ ಎಸ್‌. ನಾಗೇಗೌಡ, ಸದಸ್ಯ ಮುನಿರಾಜು, ಭೂನ್ಯಾಯಮಂಡಲಿ ಮಾಜಿ ಸದಸ್ಯ ಮುನಿರಾಜು,ಹಿತೈಷಿ ಇಎಪ್‌ವಿ ಮಾಲೀಕ .ಜಿ. ಶಿವಮೂರ್ತಿ, ಚಂದನ್‌ ಕುಮಾರ್‌, ಕಿಶೋರ್‌ ಹಾಗೂ ಮತ್ತಿತರರು ಇದ್ದರು.

 ಭೂ-ಸ್ವಾಧೀನ ಪ್ರಕ್ರಿಯೆ ಸಮಸ್ಯ ಬಗೆಹರಿಸಿ: ಮೊಯ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಅಧಿಕಾರಕ್ಕೆ ಬಂದ ನಂತರ ಎತ್ತಿನಹೊಳೆ ಯೋಜನೆ ವೇಗ ಕುಂಠಿತವಾಗಿದೆ. ದೊಡ್ಡಬಳ್ಳಾಪುರ, ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಭಾಗದ ರೈತರಿಗೆ ಸಮಾನವಾಗಿ ಪರಿಹಾರ ಕೊಟ್ಟು, ಭೂ-ಸ್ವಾಧೀನ ಪ್ರಕ್ರಿಯೆಗೆ ಇರುವ ತೊಡುಕುಗಳನ್ನು ನಿವಾರಣೆ ಮಾಡಬೇಕು.

ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟಂತೆ ನಾವು ಸಂಸದರಾಗಿದ್ದಾಗ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಬಿಜೆಪಿ ಸರ್ಕಾರ ಇರುವುದರಿಂದ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಕೊರಟೆಗೆರೆ ತಾಲೂಕಿನ ಬೈರಗೊಂಡ್ಲು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

ಟಾಪ್ ನ್ಯೂಸ್

Arvind Kejriwal

ಒಮಿಕ್ರಾನ್ ಪೀಡಿತ ದೇಶಗಳಿಂದ ಬರುವ ವಿಮಾನಗಳನ್ನು ಕೂಡಲೇ ನಿಲ್ಲಿಸಿ: PMಗೆ ಕೇಜ್ರಿವಾಲ್ ಪತ್ರ

20film

ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಭಟ್ಟರ ಪ್ರಶಂಸೆ

sruthi hariharan

ಮೀಟೂ ಪ್ರಕರಣ: ನಟಿ ಶ್ರುತಿ ಹರಿಹರನ್ ಗೆ ನೋಟಿಸ್ ಜಾರಿ

ಒಮಿಕ್ರಾನ್ ಭೀತಿ: ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

ಒಮಿಕ್ರಾನ್ ಭೀತಿ: ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

Shreyas Iyer

ಚೊಚ್ಚಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಶ್ರೇಯಸ್ ಅಯ್ಯರ್

rape

ಚೆಕ್‌ ಬೌನ್ಸ್‌ ವಿಚಾರ: ಮಾಜಿ ಭೂಮಾಲೀಕನಿಂದ ನಿರಂತರ ಅತ್ಯಾಚಾರ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ

ಕುಷ್ಟಗಿ: ಕಳಪೆ ಉಪಹಾರ ಸೇವಿಸಿ 30 ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರ್ಸಿಂಗ್‌ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಸೋಂಕು

ನರ್ಸಿಂಗ್‌ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಸೋಂಕು

ಕುಟುಂಬಗಳ ನಡುವೆ ಮಾರಾಮಾರಿ

ಕುಟುಂಬಗಳ ನಡುವೆ ಮಾರಾಮಾರಿ

ನವಜಾತ ಶಿಶು ಪತ್ತೆ

ದೇಗುಲದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ..!

thefted meterials are returned

95 ಲಕ್ಷ ಮೌಲ್ಯದ ಕಳವು ಸ್ವತ್ತು ವಾಪಸ್‌

election analysis

ಮೇಲ್ಮನೆ: ಗ್ರಾಪಂ ಸದಸ್ಯರೇ ನಿರ್ಣಾಯಕ

MUST WATCH

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

udayavani youtube

ನೀರಿನಿಂದ ಮಲ್ಲಿಗೆ ಗಿಡವನ್ನು ಬೆಳೆಯಬಹುದೇ ?

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

ಹೊಸ ಸೇರ್ಪಡೆ

ನಂಜನಗೂಡು : ಧಾರಾಕಾರ ಮಳೆಗೆ ಕುಸಿದ ವೃದ್ಧೆಯ ಸೂರು

ನಂಜನಗೂಡು : ಧಾರಾಕಾರ ಮಳೆಗೆ ಕುಸಿದ ವೃದ್ಧೆಯ ಸೂರು

ವರ್ತೂರ್‌ ಪ್ರಕಾಶ್‌ಗೂ ಬಿಜೆಪಿ ಗಾಳ

ವರ್ತೂರ್‌ ಪ್ರಕಾಶ್‌ಗೂ ಬಿಜೆಪಿ ಗಾಳ

ಚೇಳೂರು ಮಾರುಕಟೆಯಲ್ಲಿ ತರಕಾರಿ ಬೆಲೆ ಗಗನಮುಖಿ

ಚೇಳೂರು ಮಾರುಕಟೆಯಲ್ಲಿ ತರಕಾರಿ ಬೆಲೆ ಗಗನಮುಖಿ

Arvind Kejriwal

ಒಮಿಕ್ರಾನ್ ಪೀಡಿತ ದೇಶಗಳಿಂದ ಬರುವ ವಿಮಾನಗಳನ್ನು ಕೂಡಲೇ ನಿಲ್ಲಿಸಿ: PMಗೆ ಕೇಜ್ರಿವಾಲ್ ಪತ್ರ

20film

ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಭಟ್ಟರ ಪ್ರಶಂಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.