ಗೌರಿ ಗಣೇಶ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

Team Udayavani, Sep 1, 2019, 3:00 AM IST

ದೇವನಹಳ್ಳಿ: ಮಳೆಯ ಅಭಾವ ಹಾಗೂ ಬೆಲೆ ಏರಿಕೆಯ ನಡುವೆಯೂ ಗೌರಿ ಗಣೇಶ ಹಬ್ಬಕ್ಕೆ ಖರೀದಿ ಬರಾಟೆ ಜೋರಾಗಿದ್ದು, ಮಾರುಕಟೆಯಲ್ಲಿ ಜನರು ಹೂ, ಹಣ್ಣು ತರಕಾರಿಗಳನ್ನು ಕೊಳ್ಳುತ್ತಿದ್ದಾರೆ. ಬರಗಾಲ ಇದ್ದರೂ ಜಿಲ್ಲೆಯಲ್ಲಿ ಮಾತ್ರ ಹಬ್ಬದ ಸಂಭ್ರಮಕ್ಕೆ ಯಾವುದೇ ಅಡ್ಡಿ ಇಲ್ಲದೆ ಖರೀದಿ ಭರಾಟೆ ಜೋರಾಗಿ ಸಾಗಿದೆ.

ಹಲವು ದಿನಗಳ ಹಿಂದೆ ಉಂಟಾದ ಮಹಾ ಮಳೆಗೆ ಇಡೀ ಉತ್ತರ ತತ್ತರಿಸಿದರೆ, ಇತ್ತ ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಕಾಣದೆ ಹನಿ ನೀರಿಗಾಗಿ ಪರದಾಡುವಂತಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಗಣೇಶ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟುತ್ತಿದೆ. ಸತತ 6-7ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆ, ಮಳೆ ಕೊರತೆಯಿಂದ ಕೃಷಿ ಉತ್ಪಾದನೆಯಲ್ಲಿಯೂ ಕುಂಠಿತವಾಗಿ ಪ್ರಸಕ್ತ ವರ್ಷವೂ ಸಹ ಜಿಲ್ಲೆಯಲ್ಲಿ ಬರಗಾಲ ಎದುರಾಗಿದೆ.

ಮಣ್ಣನ ಮೂರ್ತಿಗೆ ಬೇಡಿಕೆ: ಪ್ಲಾಸ್ಟರ್‌-ಆಫ್‌-ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿ ನಿಷೇಧ ಮಾಡಲಾಗಿದ್ದು, ಮಣ್ಣಿನ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಾಗಿದ್ದು, ಕನಿಷ್ಠ 30ರೂ. ಯಿಂದ 25 ಸಾವಿರದ ವರೆಗೆ ಮೂರ್ತಿಗಳ ಮೂರ್ತಿಗಳು ಮಾರಾಟವಾಗುತ್ತಿವೆ. ಪ್ರತಿ ಹಳ್ಳಿ ಮತ್ತು ನಗರದ ಪ್ರತಿ ಬೀದಿ ಬೀದಿಗಳಲ್ಲಿ ವ್ಯಾಪಾರ ಜೋರಾಗಿದೆ.

ಹೂ, ತರಕಾರಿ ದುಬಾರಿ: ಸುತ್ತಲಿನ ಹಳ್ಳಿ ರೈತರು ಮಾವಿನಸೊಪ್ಪು, ಬಾಳೆದಿಂಡು, ಹೂ, ಹಣ್ಣುಗಳನ್ನು ತಂದು ಹಳೇ ಬಸ್‌ ನಿಲ್ದಾಣ, ಬಜಾರ್‌ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.ವ್ಯಾಪಾರಿಗಳು ದುಬಾರಿ ಬೆಲೆಗೆ ಪೂಜಾ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು, ಜನ ಬೆಲೆ ಏರಿಕೆ ಬಗ್ಗೆ ಕಿವಿಗೊಡದೆ ಖರೀದಿಸುತ್ತಿದ್ದಾರೆ. ಮಳೆ ಕೊರತೆಯಿಂದ ಹೂ-ಹಣ್ಣುಗಳು ಬೆಲೆ ಗಗನಕ್ಕೆ ಏರಿದೆ.

ಆದರೂ ಹಬ್ಬ ಆಚರಿಸಬೇಕಾಗಿರುವುದರಿಂದ ಗ್ರಾಹಕರು ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ. ಪೂರ್ವಜರ ಕಾಲದಿಂದಲೂ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೇವೆ. ವಸ್ತುಗಳ ಬೆಲೆ ಏರಿಕೆಯಾಗಿವೆ ಎಂಬ ಕಾರಣಕ್ಕೆ ಹಬ್ಬ ಆಚರಣೆ ಮಾಡದಿರಲು ಸಾಧ್ಯವಿಲ್ಲ, ನಮ್ಮ ಆರ್ಥಿಕ ಶಕ್ತಿಯನುಗುಣವಾಗಿ ಆಚರಿಸುತ್ತಿದ್ದೇವೆಂದು ಸಾರ್ವಜನಿಕರು ಹೇಳುತ್ತಾರೆ.

ಹೂ, ಹಣ್ಣು ಗಳ ದರ (ಕೆ.ಜಿ ದರ): ಕನಕಂಬರ 1200 ರೂ, ಮಲ್ಲಿಗೆ-ಕಾಕಡ 800 ರೂ, ಕರಿಷ್ಮ ಗುಲಾಬಿ 160-200 ರೂ, ಸೇವಂತಿಗೆ 200 ರೂ, ಚೆಂಡು ಹೂ 40 ರೂ, ಸಂಪಿಗೆ 300 ರೂ, ಬಟನ್ಸ್‌ 160ರೂ, ಯಾಲಕ್ಕಿ ಬಾಳೆಹಣ್ಣು 40ರೂ, ಪಚ್ಚಬಾಳೆ 45ರೂ, ಸೀಬೆಹಣ್ಣು 80 ರೂ, ಸಪೋಟ 54 ರೂ, ಅನಾನಸ್‌ 60 ರೂ, ಕಿತ್ತಲೆ ಹಣ್ಣು 72 ರೂ, ಮೊಸಂಬಿ 69 ರೂ, ಸೇಬು 160-180ರೂ,

ಗಣೇಶ ಮೂರ್ತಿ ವ್ಯಾಪಾರ ಕಳೆದ ವರ್ಷಕ್ಕೆ ಹೊಲಿಸಿದರೆ ಕಡಿಮೆಯಾಗಿದೆ. ಪ್ಲಾಸ್ಟರ್‌ಆಫ್‌ಪ್ಯಾರೀಸ್‌ ಮೂರ್ತಿ ನಿಷೇಧ ಮಾಡಿರುವುದರಿಂದ ಜನರು ಮಣ್ಣಿನ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ.
-ಗೋಪಾಲ್‌, ಮೂರ್ತಿ ಮಾರಾಟಗಾರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆನೇಕಲ್‌: ಕೋವಿಡ್ 19 ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಘೋಷಿಸಿರುವ ಕರ್ಫ್ಯೂಗೆ ತಾಲೂಕು ಸಂಪೂರ್ಣ ಬಂದ್‌ ಆಗಿತ್ತು. ಯುಗಾದಿ ಹಿನ್ನಲೆಯಲ್ಲಿ...

  • ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ...

  • ನೆಲಮಂಗಲ: ಕೋವಿಡ್ 19 ವೈರಸ್‌ ಮನುಕುಲವನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಎಲ್ಲರೂ ಜಾಗೃತಿ ವಹಿಸಿ, ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು...

  • ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗಿದ್ದು, ಜತೆಗೆ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಸರಬರಾಜಾಗುತ್ತಿರುವ ನೀರಿನ ಸ್ಥಿತಿಗತಿ ಅರಿಯಬೇಕಿದ್ದು, ನೀರಿನ ಮಿತ...

  • ದೇವನಹಳ್ಳಿ: ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 183 ವಿದೇಶಿ ಪ್ರಯಾಣಿಕರನ್ನು ಕೋವಿಡ್ 19 ಶಂಕೆ ಹಿನ್ನೆಲೆ ತಪಾಸಣೆ ನಡೆಸಲಾಗಿದೆ...

ಹೊಸ ಸೇರ್ಪಡೆ

  • ಬೆಂಗಳೂರು: ಕೋವಿಡ್‌ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು...

  • ಕುಂದಾಪುರ: ಉಡುಪಿ ಜಿಲ್ಲೆಯ ಶಿರೂರು, ಹೊಸಂಗಡಿ, ಕುಂದಾಪುರ ನಗರ ಭಾಗದಲ್ಲಿ ಮಾತ್ರವಲ್ಲದೆ ಅಂಪಾರು ಮತ್ತಿತರ ಕೆಲವೆಡೆಗಳಲ್ಲಿಯೂ ಶನಿವಾರದಿಂದ ಚೆಕ್‌ಪೋಸ್ಟ್‌ಗಳನ್ನು...

  • ಬೆಂಗಳೂರು: ಕೋವಿಡ್‌ 19 ಭೀತಿ ಹಿನ್ನೆಲೆಯಲ್ಲಿ ಎ. 15ರ ತನಕ ದೇಶವೇ ಲಾಕ್‌ಡೌನ್‌ ಆಗಿರುವುದರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿ ಮಾಡಿಸಿಕೊಳ್ಳದಂತೆ...

  • ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಸೋಂಕು ಹೆಚ್ಚುತ್ತಿದ್ದು, ಶನಿವಾರ 18 ಮಂದಿಗೆ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 82ಕ್ಕೆ ಏರಿದೆ. ಶನಿವಾರ...

  • ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಮಾ. 27ರಂದು ಒಂದೇ ದಿನ ಎರಡು ಕೋವಿಡ್‌ 19 ಸೋಂಕು ದೃಢ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಬಂದ್‌ಗೆ ನಿರ್ಧರಿಸಿದ್ದು,...