Udayavni Special

ಬ್ಯಾಂಕ್‌ ಖಾತೆ ಹೊಂದಿದ್ದ‌ರೆ ಮಾತ್ರ ಸರ್ಕಾರದ ಸೌಲಭ್ಯ


Team Udayavani, Aug 9, 2019, 2:29 PM IST

br-tdy-2

ಹೊಸಕೋಟೆ: ಸಮಾಜದ ಎಲ್ಲಾ ವರ್ಗದ ಜನರೂ ಸಹ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದಲ್ಲಿ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗ ಲಿದೆ ಎಂದು ತಹಶೀಲ್ದಾರ್‌ ಕೆ. ರಮೇಶ್‌ ಹೇಳಿದರು.

ನಗರದ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟ, ಉಜ್ಜೀವನ್‌ ಬ್ಯಾಂಕ್‌ ವತಿಯಿಂದ ಏರ್ಪಡಿಸಿದ್ದ ಹಣಕಾಸು ವ್ಯವಹಾರದ ತಿಳಿವಳಿಕೆ ಸಭೆಯಲ್ಲಿ ಮಾತನಾಡಿದರು.

ಶೂನ್ಯ ಠೇವಣಿಯ ಜನಧನ ಖಾತೆ: ಅಡುಗೆ ಅನಿಲಕ್ಕೆ ನೀಡುವ ಸಹಾಯಧನ ಒಳಗೊಂಡಂತೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಹಣ ಸಹ ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾಯಿಸ ಬೇಕಾಗಿದೆ. ಈ ಉದ್ದೇಶ ಕ್ಕಾಗಿಯೇ ಬ್ಯಾಂಕ್‌ಗಳಲ್ಲಿ ಶೂನ್ಯ ಠೇವಣಿಯ ಜನ್‌ಧನ್‌ ಖಾತೆ ತೆರೆಯಲು ಅವಕಾಶ ಕಲ್ಪಿಸ ಲಾಗಿದೆ. ಇದರಿಂದ ದುರುಪ ಯೋಗ ತಡೆಗಟ್ಟಲು ಸಾಧ್ಯವಾಗಿ ಯೋಜನೆಗಳು ಸಹ ಸಾರ್ಥಕ ಗೊಳ್ಳಲಿವೆ. ರಾಷ್ಟ್ರದ ಆರ್ಥಿಕ ಚಟುವಟಿಕೆಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವ ದಿಶೆಯಲ್ಲಿ ಜನಜಾಗೃತಿ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ತಾಲೂಕು ಕೇಂದ್ರಗಳಲ್ಲಷ್ಟೇ ಅಲ್ಲದೆ ಹೋಬಳಿ ಹಂತದಲ್ಲೂ ಹಮ್ಮಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಯಾಗಲಿದೆ ಎಂದರು.

ಬ್ಯಾಂಕ್‌ ಖಾತೆ ಹೊಂದಿ ಸರ್ಕಾರದ ಸೌಲಭ್ಯ ಪಡೆಯಿರಿ: ಲೀಡ್‌ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಮಧು ಸೂದನ್‌ ಮಾತನಾಡಿ, ಹಣಕಾಸು ವ್ಯವಹಾರ ಮಾಡುವ ಪ್ರತಿಯೊಬ್ಬರೂ ಬ್ಯಾಂಕ್‌ನಲ್ಲಿ ಖಾತೆ ಹೊಂದುವ ಮೂಲಕ ಸರ್ಕಾರದ ಅಂಗೀಕಾರ ದೊಂದಿಗೆ ಸಾಲ ಸೌಲಭ್ಯಗಳನ್ನು ಸಹ ಪಡೆಯಲು ಸಾಧ್ಯವಾಗಲಿದೆ. ಸಣ್ಣ ವ್ಯಾಪಾರಿಗಳನ್ನು ಸ್ವಾವಲಂಬಿ ಗಳನ್ನಾಗಿಸುವ ಪ್ರಮುಖ ಉದ್ದೇಶದಿಂದ ಜಾರಿಗೊ ಳಿಸಿರುವ ಯೋಜನೆಯಡಿ ಒಕ್ಕೂಟವು ಇತರೆ ಸಂಸ್ಥೆಗಳ ಸಹಯೋಗದಲ್ಲಿ ಗ್ರಾಹಕರಿಗೆ ಸಂಸ್ಥೆಯು ಸಾಲ ಸೌಲಭ್ಯ ನೀಡಿರುವುದಲ್ಲದೆ 20 ಸಾವಿರಕ್ಕೂ ಹೆಚ್ಚು ಯುವಕರು ಉದ್ಯೋಗ ಪಡೆದಿದ್ದಾರೆೆ ಎಂದರು.

ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವಿ.ಎನ್‌.ಹೆಗ್ಡೆ, ತರಬೇತುದಾರ ನಾರಾಯಣ ಸ್ವಾಮಿ, ಭಾರತೀಯ ಸ್ಟೇಟ್ ಬ್ಯಾಂಕಿನ ವ್ಯವಸ್ಥಾಪಕ ಸುರೇಶ್‌ ಬೆಳ್ಳುಬ್ಬಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

punjab

ಪಂಜಾಬ್-ಡೆಲ್ಲಿ ಫೈಟ್: ಟಾಸ್ ಗೆದ್ದ ಶ್ರೇಯಸ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

puneeth-rajkumar

ಉದಯವಾಣಿ ವರದಿಗೆ ಸ್ಪಂದನೆ: ಅಂಧ ಸಹೋದರಿಯರನ್ನು ಕರೆಸಿ ಕುಶಲೋಪರಿ ವಿಚಾರಿಸಿದ‌ ಪವರ್ ಸ್ಟಾರ್

ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಮಾವನ ಆಸ್ತಿ ಕಬಳಿಸಲು ಹೊಂಚು ಹಾಕಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

ಮಾವನ ಆಸ್ತಿ ಕಬಳಿಸಲು ಸಂಚು ಮಾಡಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

br-tdy-2

ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ

br-tdy-1

ನಗರಸಭೆ ಮರಗಳ ಹನನ: ಆಕ್ರೋಶ

BR-TDY-2

ಅಂಬೇಡ್ಕರ್‌ ಬೌದ್ಧಧರ್ಮ ದೀಕ್ಷಾ ದಿನ ಆಚರಣೆ

br-tdy-1

ವಚನ ಸಾಹಿತ್ಯ ಉಳಿಸಲು ಶ್ರಮಿಸಿ

br-tdy-1

ಬೊಂಬೆ ಸಂಭ್ರಮಕ್ಕೆಕೋವಿಡ್ ಕಂಟಕ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

sm-tdy-1

ಭೂಮಿ ವಾಪಸ್‌ ಪಡೆಯಲು ಆಗ್ರಹ

hage

ಪ್ರವಾಹ ಪೀಡಿತ ಭುಯ್ಯಾರ ಗ್ರಾಮದಲ್ಲಿ ಹಗೆ ಕುಸಿತ- ಹಗೆಯಲ್ಲಿ ಬಿದ್ದ ಮಹಿಳೆ ಅಪಾಯದಿಂದ ಪಾರು

cd-tdy-1

ಕೋವಿಡ್ ನಿರ್ಮೂಲನೆಗೆ ಶ್ರಮಿಸಿ

cm-tdy-1

ರೋಗ ಹರಡದಂತೆ ಜಾಗೃತೆ ವಹಿಸಿ: ಸುರೇಶ್‌

BALLARY-TDY-1

ನಿಯಮ ಉಲ್ಲಂಘಿಸಿದಲ್ಲಿ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.