ಸಹಾಯವಾಣಿಗೆ ಹೈಟೆಕ್ ಸ್ಪರ್ಶ
Team Udayavani, Aug 21, 2020, 12:51 PM IST
ದೇವನಹಳ್ಳಿ: ಪ್ರಯಾಣಿಕರಿಗೆ ಮಾಹಿತಿ ನೀಡುವ ತಾಲೂಕಿನ ಕೆಂಪೇ ಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆ.ಐ.ಎ.ಬಿ./ ಬೆಂಗ ಳೂರು ವಿಮಾನ ನಿಲ್ದಾಣ)ದ ಇನ್ಫಾರ್ಮೇಷನ್ ಡೆಸ್ಕ್ ಸೌಲಭ್ಯ ಈಗ ಸಂಪರ್ಕ ಅಥವಾ ಸ್ಪರ್ಶ ರಹಿತವಾಗಿ ಪರಿವರ್ತಿತವಾಗುತ್ತಿದೆ.
ಟರ್ಮಿನಲ್ನಲ್ಲಿನ ನಾಲ್ಕು ಸ್ಥಳಗಳಲ್ಲಿ ಲಭ್ಯವಾಗಲಿರುವ ಈ ವರ್ಚುವಲ್ ಡೆಸ್ಕ್ಗಳು ಸಂಪರ್ಕ ರಹಿತ ಪ್ರಯಾಣಿಕರ ಸಂಸ್ಕರಣಾ ಪ್ರಕ್ರಿಯೆಗೆ ನೂತನ ಆಯಾಮ ನೀಡಲಿದೆ ಎಂದು ಕೆಐಎಬಿ/ ಬೆಂಗಳೂರು ವಿಮಾನ ನಿಲ್ದಾಣ)ದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಕೇವಲ ಸ್ಪರ್ಶ ರಹಿತವಾಗಿ ವಿಡಿಯೋ ಮೂಲಕ ದೂರದಲ್ಲಿರುವ ವಿಮಾನ ನಿಲ್ದಾಣ ಸಿಬ್ಬಂದಿಯೊಂದಿಗೆ ತಕ್ಷಣ ಸಂಭಾಷಣೆ ನಡೆಸಲು ಪ್ರಯಾಣಿಕರಿಗೆ ವರ್ಚುವಲ್ ಇನ್ ಫಾರ್ಮೇಷನ್ ಡೆಸ್ಕ್ ಅವಕಾಶ ಮಾಡಿಕೊಡಲಿದೆ. ಪ್ರಯಾಣಿಕರು ವರ್ಚುವಲ್ ಡೆಸ್ಕ್ ಮುಂದೆ ಹೋಗಿ ನಿಂತ ಕೂಡಲೇ ಅಲ್ಲಿನ ಸೆನ್ಸರ್ ಗಳಿಗೆ ಚಾಲನೆ ಲಭಿಸುತ್ತದೆ. ಪರಸ್ಪರ ಸಂವಾದ ಆರಂಭವಾಗುತ್ತದೆ.
ಪ್ರಯಾಣಿಕರು ಹಗಲೂ ಮತ್ತು ರಾತ್ರಿಯಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಬೆಂಗಳೂರು ವಿಮಾನ ನಿಲ್ದಾಣ, ಸೌಲಭ್ಯ ಗಳು, ವಿಮಾನ ಹಾರಾಟ, ಆಹಾರ, ಸಾರಿಗೆ ಕುರಿತ ಮಾಹಿತಿಯನ್ನು ಈ ಮೂಲಕ ಪ್ರಯಾಣಿಕರು ಪಡೆದುಕೊಳ್ಳಬಹುದು.