ಅಧಿಕಾರಿಗಳ ನಿರ್ಲಕ್ಷ್ಯಕ್ಕೆ  ಮಲಿನವಾಗುತ್ತಿದೆ ಕೆರೆ ಅಂಗಳ

Team Udayavani, Nov 16, 2021, 1:45 PM IST

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ  ಮಲಿನವಾಗುತ್ತಿದೆ ಕೆರೆ ಅಂಗಳ

ವಿಜಯಪುರ: ಹೊಸಕೋಟೆ ಚಿಕ್ಕ ಅಮಾನಿಕೆರೆ ಮಲಿನವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿ ಕರು, ಪರಿಸರ ಪ್ರೇಮಿಗಳು ದೂರಿದ್ದಾರೆ.

ಹೊಸಕೋಟೆ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ನಗರಸಭೆಯಿಂದ ಹರಿದು ಬರುವ ಚರಂಡಿ ನೀರು ಚಿಕ್ಕ ಅಮಾನಿಕೆರೆಗೆ ಸೇರುತ್ತದೆ. ಅದಲ್ಲದೆ ನಗರದಲ್ಲಿನಕಸ, ಶೌಚಾಲಯ ನೀರು, ಪ್ಲಾಸ್ಟಿಕ್‌ ತ್ಯಾಜ್ಯ ಸೇರಿದಂತೆ ಇನ್ನಿತರೆ ಮನೆಯ ಕಸಗಳನ್ನು ಚರಂಡಿ ಮತ್ತು ಮೋರಿಗಳಲ್ಲಿ ಎಸೆಯ ಲಾಗುತ್ತಿದೆ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಸತತವಾಗಿ ಬಿದ್ದ ಮಳೆಯಿಂದ ಎಲ್ಲವೂ ಚಿಕ್ಕ ಅಮಾನಿಕೆರೆಗೆ ಸೇರುತ್ತಿದೆ.

ತ್ಯಾಜ್ಯದ ರಾಶಿ:ಪ್ಲಾಸ್ಟಿಕ್‌ಮತ್ತು ಶೌಚಾಲಯದಿಂದ ಬರುವ ಕೊಳಕು ನೀರಿನಿಂದ ಕೆರೆ ನೀರು ಮಲಿನ ವಾಗಿದೆ. ಹೆಸರಿಗಷ್ಟೇ ಪ್ಲಾಸ್ಟಿಕ್‌ ನಿಷೇಧ ಎಂದು ಹೇಳುವ ನಗರಸಭೆ ಅಧಿಕಾರಿಗಳು ಒಮ್ಮೆ ಚಿಕ್ಕ ಮಾನಿಕೆರೆಯತ್ತ ಕಣ್ಣು ಹಾಯಿಸಿದರೆ ಅವರಿಗೆ ಪರಿಸ್ಥಿತಿ ಅರ್ಥವಾಗುತ್ತದೆ. ದಿನ ನಿತ್ಯ ಕೆರೆಯಲ್ಲಿ ನೂರಾರು ಹಸುಗಳು ಮೇಯಲು ಬರುತ್ತವೆ. ಹುಲ್ಲಿನ ಜತೆಗೆ ಪ್ಲಾಸ್ಟಿಕ್‌ ಟೀ, ಲೋಟ ತಿಂದು ಹಸುಗಳು ರೋಗದಿಂದ ಬಳಲುತ್ತಿವೆ.

ಇದಲ್ಲದೆ ಕೆರೆ ಸುತ್ತಮುತ್ತ ರೈತರು ಕೆರೆ ಅಂಗಳದಲ್ಲಿ ಕೊಳವೆ ಬಾವಿ ಕೊರೆಸಿ ಗುಲಾಬಿ ಹೂ, ಇನ್ನಿತರೆ ತರಕಾರಿ ಬೆಳೆಯುತ್ತಿದ್ದಾರೆ. ಕನಿಷ್ಠ 25 ಭಾಗ ಕೆರೆ ಒತ್ತುವರಿಯಾಗಿದ್ದರೂ ತಾಲೂಕುಆಡಳಿತಅಥವಾ ನಗರಸಭೆ ಅಧಿಕಾರಿಗಳು ಕಂಡೂ ಕಾಣದಂತೆ ಇರುವುದು ಖಂಡನೀಯ. ಇನ್ನಾದರೂ ತಾಲೂಕು ಆಡಳಿತ ಕೆರೆ ಸಂರಕ್ಷಣೆಗೆ ಮುಂದಾಗಬೇಕು. ಇಲ್ಲವಾದರೆ ಪೂರ್ಣ ಪ್ರಮಾಣದಲ್ಲಿ ಕೆರೆಯನ್ನೇ ಒತ್ತುವರಿ ಮಾಡುವ ಕಾಲ ದೂರವಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಾವು ಚಿಕ್ಕವಯಸ್ಸಿನಿಂದ ಚಿಕ್ಕ ಅಮಾನಿಕೆರೆಯನ್ನು ನೋಡಿದ್ದೇವೆ. ಹಿಂದೆ ಈ ಕೆರೆಯಲ್ಲಿ ನೀರನ್ನುಕುಡಿಯುತ್ತಿದ್ದೆವು. ಈಗ ನಗರದಲ್ಲಿನ ಚರಂಡಿ ನೀರಿನಿಂದಕೆರೆ ಕಲುಷಿತಗೊಂಡಿದೆ. ಪ್ರಾಣಿಗಳುಕುಡಿಯಲೂ ಈ ನೀರುಯೋಗ್ಯವಾಗಿಲ್ಲ. ಇನ್ನುಕೆರೆ ಒತ್ತುವರಿ ಆಗಿದ್ದು ಈ ಕೂಡಲೇ ತಾಲೂಕು ಆಡಳಿತ ತೆರವುಗೊಳಿಸಬೇಕು. ● ಎನ್‌.ಎಂ.ಆಂಜಿನಪ್ಪ, ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷರು

ನಾನುಕಳೆದ 5 ವರ್ಷದಿಂದಕೆರೆಯಲ್ಲಿ ಬೆಳೆದಿದ್ದ ಸೀಮೆ ಜಾಲಿ ಮರಗಳನ್ನು ಜೆಸಿಬಿ ಸಹಾಯದಿಂದ ತೆಗೆದು, ಲಕ್ಷಾಂತರ ರೂ.ಖರ್ಚು ಮಾಡಿ ಸ್ವತ್ಛ ಮಾಡಿದ್ದೇನೆ. ಅದರಲ್ಲೂ ಮೀನು ಸಾಕಲು ಗುತ್ತಿಗೆ ಪಡೆದಿದ್ದೇನೆ.ಕೆರೆಯಲ್ಲಿ ವಿಷಕಾರಿ ನೀರು ಸೇರುತ್ತಿದ್ದು, ಮೀನುಗಳು ಸಾಯುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಬೇಕು. ● ಕೋಟೆ ಚಿನ್ನಣ್ಣ, ಮೀನು ಸಹಕಾರ ಸಂಘದ ಅಧ್ಯಕ್ಷರು, ಮೀನು ಸಾಗಾಣಿಕೆದಾರ

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.